ಕಲಿವೀರನಿಗೆ ಪೈರಸಿಯ ಕಾಟ
ಹೊಸಬರ ನೈಜಆಕ್ಷನ್ಕುರಿತಾದ ‘ಕಲಿವೀರ’ ಚಿತ್ರವು ಬಿಡುಗಡೆಯಾಗಿ ಯಶಸ್ವಿ೨೫ ದಿನಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಸಂತೋಷಕೂಟದಲ್ಲಿತಂಡವು ಹಾಜರಿದ್ದು ಗಳಿಕೆ, ಇತರೆಕುರಿತಾದ ವಿಷಯಗಳನ್ನು ಹಂಚಿಕೊಂಡಿತು.ನಿರ್ಮಾಪಕ ಶ್ರೀನಿವಾಸ್ ಮಾತನಾಡಿಕೊನೆಯ ೨೦ ನಿಮಿಷದ ಸಾಹಸವನ್ನುಜನರು ಮೆಚ್ಚಿಕೊಂಡಿದ್ದಾರೆ.ಒಟಿಟಿರವರಲ್ಲಿಒಂದು ಸುತ್ತಿನ ಮಾತುಕತೆ ಫಲಪ್ರದವಾಗಿದೆ.ಇದರಿಂದ ಹೆಚ್ಚಿನ ಲಾಭ ಬರುವ ನಿರೀಕ್ಷೆಇದೆ.ಆದರೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ರೂ.೧೦ಕ್ಕೆ ನಮ್ಮಚಿತ್ರದ ಸಿಡಿ ಸಿಗುತ್ತಿದೆ.ಇದರಿಂದ ಗಳಿಕೆ ಕೊಂಚ ಕಡಿಮೆಯಾಗಿದೆಎಂದು ಬೇಸರ ವ್ಯಕ್ತಪಡಿಸಿದರು.
ಶೇಕಡ ೫೦ ರಷ್ಟುಆಸನವನ್ನು ನೂರಕ್ಕೆ ಹೆಚ್ಚಿಸಿದರೆ ಚಿತ್ರರಂಗಕ್ಕೆ ಅನುಕೂಲವಾಗುತ್ತದೆ.ಒಳ್ಳೆಯ ವಿಮರ್ಶೆಯಿಂದಕಲೆಕ್ಷನ್ ಸುಧಾರಣೆಯಾಗುತ್ತಿದೆ.ಉತ್ತರಕರ್ನಾಟಕದ ಮಂದಿಯನ್ನುಗಮನದಲ್ಲಿಟ್ಟುಕೊಂಡುಚಿತ್ರಮಾಡಿದ್ದು ಸಾರ್ಥಕವಾಗಿದೆ.ಎಲ್ಲಿಯೂ ನಕರಾತ್ಮಕ ಟೀಕೆಗಳು ಬಂದಿಲ್ಲ ಎಂಬುದು ನಿರ್ದೇಶಕಅವಿರಾಮ್ಅವರಖುಷಿಯ ನುಡಿ.ಚಿತ್ರವನ್ನು ಮತ್ತೆ ನವೆಂಬರ್ದಲ್ಲಿರಿಲೀಸ್ ಮಾಡಲು ನಿರ್ಮಾಪಕರುಒಪ್ಪಿಕೊಂಡಿದ್ದಾರೆಂದು ವಿತರಕ ವಿಜಯ್ ತಿಳಿಸಿದರು.ಸಂಭ್ರಮದ ವಾತವರಣದಲ್ಲಿ ನಾಯಕ ಏಕಲವ್ಯ ಮತ್ತು ನಾಯಕಿ ಚಿರಶ್ರೀಅಂಚನ್ ಇತರರು ಹಾಜರಿದ್ದು ಸಂತೋಷವನ್ನು ಹೇಳಿಕೊಂಡರು.