Maana.Film Press Meet

Monday, October 11, 2021

520

ಉಡರೂಪಾಂತರದಲ್ಲಿ ಮಾನಚಿತ್ರ

ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ವಿರಚಿತ ‘ಉಡ’ ಕತೆಯು ‘ಮಾನ’ ಚಿತ್ರವಾಗಿ ಮೂಡಿ ಬರುತ್ತಿದೆ.ರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿತು. ‘ಹುಲಿಯಾ’, ‘ಕಂಬಾಲಹಳ್ಳಿ’ ಚಿತ್ರಗಳು ಸಾಮಾಜಿಕಅಸಮಾನತೆಯಕಥಾಹಂದರ ಹೊಂದಿತ್ತು, ಅಂತಹುದೆಕತೆಯನ್ನು ಹೊಸ ಸಿನಿಮಾವು ಹೊಂದಿದೆ.ಈ ಸಂದರ್ಭದಲ್ಲಿ ಮಾತನಾಡಿದ ನಾಯಕದೇವರಾಜ್‌ಈ ಹಿಂದೆಕೂಡ ‘ಕೆಂಡದ ಮಳೆ’ ಚಿತ್ರ ಮಾಡಿದ್ದೆ. ಕುಂ.ವೀರಭದ್ರಪ್ಪ ನನ್ನ ಮೆಚ್ಚಿನ ಲೇಖಕರಲೊಬ್ಬರು.ಅವರ ಅನೇಕ ಕತೆಗಳು ನನಗೆ ಇಷ್ಟ.ಕತೆ ಕೇಳಿದ ಕೂಡಲೇಇಷ್ಟವಾಯಿತು.ಅದಕ್ಕೆಒಪ್ಪಿಕೊಂಡೆ. ಜೀತ ಮಾಡುವಕೂಲಿಯ ಪಾತ್ರ. ಮೇಲ್ನೋಟಕ್ಕೆ‘ಹುಲಿಯಾ’ ಪಾತ್ರದಂತೆಕಂಡರೂ, ಆ ಸಿನಿಮಾಕ್ಕೂಇದಕ್ಕೂತುಂಬ ವ್ಯತ್ಯಾಸ, ವಿನೂತನಇದೆ.ಅದುಉತ್ತರಕರ್ನಾಟಕದಲ್ಲಿ ನಡೆಯುವಂತಕತೆಯಾಗಿತ್ತು. 

ಇದುದಕ್ಷಿಣಕರ್ನಾಟಕದಲ್ಲಿ ನಡೆಯುವಂತದ್ದಾಗಿದೆ.ಪಾತ್ರದ ವೇಷಭೂಷಣಎಲ್ಲವು ಹಳೇ ಮೈಸೂರು ಶೈಲಿಯಲ್ಲಿರುತ್ತದೆ.ವಿಷಯವುತುಂಬ ಹ್ಯೂಮರಸ್‌ಆಗಿದೆಎಂದು ಪಾತ್ರದ ಪರಿಚಯ ಮಾಡಿಕೊಂಡರು.

ನಿರ್ದೇಶಕಡೇವಿಡ್ ಹೇಳುವಂತೆ ಇದೊಂದು ನೈಜಘಟನೆಆಧಾರಿತ ೭೦ರ ದಶಕದಲ್ಲಿ ನಡೆದಿರುವುದುಆಗಿದೆ.ಲೇಖಕರೊಂದಿಗೆ ಚರ್ಚಿಸಿ ಅದನ್ನುತೆರೆ ಮೇಲೆ ತರುತ್ತಿದ್ದೇವೆ. ಜಮೀನ್ದಾರರು, ಕೂಲಿ, ಜೀತ ಸಾಮಾಜಿಕಅಸಮಾನತೆಯ ವಿರುದ್ದದ ಹೋರಾಟದ ಸುತ್ತಇಡೀಚಿತ್ರವು ಸಾಗುತ್ತದೆಎಂದರು.ಪಾತ್ರವರ್ಗದಲ್ಲಿ ಉಮಾಶ್ರೀ ಸೇರಿದಂತೆ ಅನೇಕ ಕಲಾವಿದರು ನಟಿಸುತ್ತಿದ್ದಾರೆ.ಕಾಂತಲಕ್ಷೀರಮೇಶ್‌ಬಾಬು ಬಂಡವಾಳ ಹೂಡುತ್ತಿದ್ದಾರೆ.ಚಿತ್ರೀಕರಣ ಶುರುವಾಗಿದ್ದು, ಅಂದುಕೊಂಡಂತೆಆದರೆ ಮುಂದಿನ ವರ್ಷದ ಮಧ್ಯ ಭಾಗದಲ್ಲಿಜನರಿಗೆತೋರಿಸಲುತಂಡವುಏರ್ಪಾಟು ಮಾಡಿಕೊಂಡಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,