ಅಕ್ಷಿ ಹಾಡುಗಳ ಸಮಯ
ನೇತ್ರದಾನಕುರಿತಂತೆ ‘ಅಕ್ಷಿ’ ಸಿನಿಮಾವುಅತ್ಯುತ್ತಮಚಿತ್ರವೆಂದು ೬೭ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.ಪ್ರಚಾರದಎರಡನೇ ಹಂತವಾಗಿಚಿತ್ರದಆಡಿಯೋ ಬಿಡುಗಡೆ ಸಮಾರಂಭವುರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು.ಸ್ಪರ್ಶಾರೇಖಾ ಮತ್ತು ವಿಜಯ್‌ಸೂರ್ಯ ಅತಿಥಿಗಳಾಗಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.ಕತೆ,ಚಿತ್ರಕತೆ,ಸಂಭಾಷಣೆ,ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಮನೋಜ್‌ಕುಮಾರ್ ನುಡಿಗಳ ಪರಿ ಹೀಗಿತ್ತು. ೨೦೧೯ರಲ್ಲಿ ಶುರು ಮಾಡಿ, ೫೫ ದಿನಗಳ ಕಾಲ ಚಿಕ್ಕಮಗಳೂರಿನ ಸಣ್ಣ ಹಳ್ಳಿಯಲ್ಲಿ ಚಿತ್ರೀಕರಣ ನಡೆಸಲಾಗಿತ್ತು.ಡಾ.ರಾಜ್‌ಕುಮಾರ್‌ತೀರಿಕೊಂಡಾಗ, ಕಣ್ಣನ್ನುದಾನ ಮಾಡಿದ ಬಗ್ಗೆ ಸುದ್ದಿಯಾಗಿತ್ತು.ಅಂದೇ ಸದರಿ ವಿಷಯದ ಬಗ್ಗೆ ಯಾಕೆಚಿತ್ರ ಮಾಡಬಾರದೆಂದುಚಿಂತನೆ ಬಂತು.ನನ್ನಕಲ್ಪನೆಗೆ ನೀರು ಹಾಕಿ ಪೋಷಿಸಿದವರು ಮೂವರು ನಿರ್ಮಾಪಕರುಗಳು.ಗಂಡ ಹೆಂಡತಿ, ಪುಟ್ಟ ಮಗ, ಮಗಳ ಹೋರಾಟವನ್ನುತೋರಿಸಲಾಗಿದೆ.ಎಲ್ಲರ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ.ಮುಖ್ಯವಾಗಿಡಾ.ಎಸ್‌ಪಿಬಿ ಅವರಧ್ವನಿಯಲ್ಲಿ ‘ಬಣ್ಣ ಬಣ್ಣ’ ಗೀತೆ ಸೊಗಸಾಗಿ ಬಂದಿದೆ. ಹಾಡಿದ ನಂತರತಂಡಕ್ಕೆ ಹರಿಸಿದರು ಎಂದು ನೆನಪು ಮಾಡಿಕೊಂಡರು.
ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನನಗೆ ಗಂಭೀರ ಪಾತ್ರ ಮಾಡಿಸಿದ ಕೀರ್ತಿ ನಿರ್ದೇಶಕರಿಗೆ ಸಲ್ಲಬೇಕು. ಪ್ರಶಸ್ತಿಯಲ್ಲಿ ನಮಗೂ ಪಾಲು ಸಿಕ್ಕಿರುವುದು ಖುಷಿ ಆಗಿದೆಎಂಬುದುಕಾಮಿಡಿ ಕಿಲಾಡಿಗಳು ಖ್ಯಾತಿಯಗೋವಿಂದೇಗೌಡ ಮಾತು. ಇಷ್ಟು ವರ್ಷ ಹಿರಿತೆರೆ,ಕಿರುತೆರೆಯಲ್ಲಿ ಖಳನಟಿಯಾಗಿ ಅಭಿನಯಿಸಿದ್ದೆ. ಇಳಾವಿಟ್ಲಾ,ಚಿಣ್ಣರುಗಳಾದ ಮಿಥುನ್-ಸೌಮ್ಯ, ಸಾಹಿತ್ಯ ಮತ್ತು ಸಂಗೀತ ಒದಗಿಸಿರುವ ಕಲಾದೇಗುಲ ಶ್ರೀನಿವಾಸ್, ಛಾಯಾಗ್ರಾಹಕ-ಸಂಕಲನಕಾರ ಮುಕುಲ್‌ಗೌಡ ಅನುಭವಗಳನ್ನು ಹಂಚಿಕೊಂಡರು.ನಿಮಪಕರುಗಳಾದ ಶ್ರೀನಿವಾಸ್.ವಿ, ರಮೇಶ್.ಎನ್ ಮತ್ತುರವಿ.ಹೆಚ್.ಎಸ್‌ವೇದಿಕೆಯಲ್ಲಿ ಉಪಸ್ತಿತರಿದ್ದರು. ಚಿತ್ರವುಅಕ್ಟೋಬರ್‌ಗೆತೆರೆಗೆ ಬರುವ ಸಾದ್ಯತೆಇದೆಎಂದು ವಿತರಕ ಗುಪ್ತಾ ಮಾಹಿತಿ ನೀಡಿದರು. ಇದಕ್ಕೂ ಮುನ್ನಎರಡು ಹಾಡುಗಳನ್ನು ತೋರಿಸಲಾಯಿತು.