Namo Gandhi.Short Film

Saturday, October 02, 2021

210

 

*ರಂಗಭೂಮಿ ಧುರೀಣ ಎಸ್.ಎಲ್.ಎನ್‌ .ಸ್ವಾಮಿ ನೇತೃತ್ವದಲ್ಲಿ ಕೇವಲ 24 ಗಂಟೆ ಅವಧಿಯಲ್ಲಿ ನಿರ್ಮಾಣವಾದ ಕಿರುಚಿತ್ರ " ನಮೋ ಗಾಂಧಿ* ".

 

ಭಾರತ  75 ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಶುಭ ಸಂದರ್ಭದಲ್ಲಿ ಗಾಂಧೀಜಿಯವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ನಿರ್ಮಾಣವಾಗಿರುವ ಕಿರುಚಿತ್ರ "ನಮೋ ಗಾಂಧಿ".

 

ಸುಮಾರು ಮೂರು ದಶಕಗಳಿಂದ ರಂಗಭೂಮಿಯಲ್ಲಿ ಸುಮಾರು ೩೦೦೦ ಕ್ಕೂ ಹೆಚ್ಚು ಬೀದಿ ನಾಟಕಗಳನ್ನು ರಚಿಸಿ, ನಿರ್ದೇಶಿಸಿರುವ, ನಾಟಕ ಕ್ಷೇತ್ರದಲ್ಲೇ ಸುಮಾರು ಹದಿನೈದು ವಿಶ್ವದಾಖಲೆ ನಿರ್ಮಿಸಿರುವ, ಎದೆ ತುಂಬಿ ಹಾಡುವೆನು, ಆದರ್ಶ ದಂಪತಿಗಳು, ಕುಹು ಕುಹು, ಅಕ್ಷರ ಮಾಲೆ ಮುಂತಾದ ಕಾರ್ಯಕ್ರಮಗಳ ನಿರ್ಮಾಪಕರಾದ ಎಸ್ ಎಲ್ ಎನ್ ಸ್ವಾಮಿ ಅವರು ನಿರ್ದೇಶಿಸಿರುವ ಕಿರುಚಿತ್ರ " ನಮೋ ಗಾಂಧಿ".

 

ಇದು ಕೇವಲ ಇಪ್ಪತ್ತನಾಲ್ಕು ಗಂಟೆಗಳಲ್ಲಿ ನಿರ್ಮಾಣವಾಗಿರುವುದು ವಿಶೇಷ. ಗಾಂಧೀಜಿಯವರ ತತ್ವಗಳಿಂದ ಪ್ರೇರೇಪಿತಳಾದ ಬಾಲಕಿಯೊಬ್ಬಳು, ತಾನು ಕಂಡ ಅನ್ಯಾಯ, ಅಕ್ರಮಗಳನ್ನು ಗಾಂಧಿ ಪಾತ್ರದ ಪ್ರಭಾವದ ಹಿನ್ನೆಲೆಯಲ್ಲಿ ಹೇಗೆ ಬದಲಿಸುತ್ತಾಳೆ ಎಂಬುದೇ ಕಿರುಚಿತ್ರದ ಕಥಾವಸ್ತು.

ಪುಟಾಣಿ ಪ್ರತಿಭೆ ಸಾಕ್ಷಿ, ಶ್ವೇತ ಶ್ರೀನಿವಾಸ್, ಟೈಗರ್ ಗಂಗ, ಸಿಂಹಾದ್ರಿ ಮೊದಲಾದವರು ಇದರಲ್ಲಿ ನಟಿಸಿದ್ದಾರೆ.

ಟ್ರಯೋ ಅಪರೇಲ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಶೇಷಶಯನಂ ಈ ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ.

ರಮೇಶ್ಚಂದ್ರ ಹಾಗೂ ಸುರೇಖ ಹೆಗ್ಡೆ ಅವರ ಗಾಯನದಲ್ಲಿ ಗೀತೆಯೊಂದು ಮೂಡಿಬಂದಿದೆ.

 

ಗಾಂಧಿ ಜಯಂತಿ ಶುಭ ಸಂದರ್ಭದಲ್ಲಿ ಈ ಕಿರುಚಿತ್ರದ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು.

 

ಗಾಂಧಿವಾದಿ ವು.ಡೇ.ಪಿ.ಕೃಷ್ಣ, ರುದ್ರಯ್ಯ, ನಟಿ ಮೌರ್ಯಾನಿ, ಶ್ವೇತಾ ಶ್ರೀನಿವಾಸ್, ಚಂದನ್ ರಾಜ್, ಕಾರ್ತಿಕ್, ದೇವನಹಳ್ಳಿ  ಉಪವಿಭಾಗದ‌ ಸಹಾಯಕ ಪೊಲೀಸ್ ಆಯುಕ್ತರಾದ ಎಂ.ಎಸ್.ಶ್ರೀನಿವಾಸ್ ಮುಂತಾದ ಗಣ್ಯರು ಈ ಕಿರುಚಿತ್ರ ವೀಕ್ಷಿಸಿ ಮುಕ್ತಕಂಠದಿಂದ ಶ್ಲಾಘಿಸಿದರು.

 

ಗಾಂಧೀಜಿ ಅವರನ್ನು ಅರ್ಥ ಮಾಡಿಕೊಳ್ಳುವುದು ಮೇಲ್ನೋಟಕ್ಕೆ ಸುಲಭ. ಆದರೆ ಹತ್ತಿರ ಹತ್ತಿರ ಹೋಗುತ್ತಿದಂತೆ ಅವರ ಬಗ್ಗೆ ತಿಳಿಸುಕೊಳ್ಳುವುದು ಅಷ್ಟೇ ಜಟಿಲ. ಅರ್ಥ ಮಾಡಿಕೊಂಡರೆ ಸುಲಭ. ಹೀಗೆ ಗಾಂಧೀಜಿಯವರು.

 ಒಬ್ಬ ಬಾಲಕಿ ಗಾಂಧಿ ತತ್ವಗಳಿಂದ ಪ್ರೇರಿತಳಾಗಿ, ಸಮಾಜದ ಅನ್ಯಾಯಗಳನ್ನು ಸರಿ ಪಡಿಸುವ ಕಿರುಪಯತ್ನವನ್ನು ಈ ಕಿರುಚಿತ್ರದ ಮೂಲಕ ಹೇಳ ಹೊರಟಿದ್ದೇನೆ. ಕೇವಲ 24 ಗಂಟೆಗಳಲ್ಲಿ ಈ ಕಿರುಚಿತ್ರ ನಿರ್ಮಾಣವಾಗಿದೆ.  ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದರು ಎಸ್.ಎಲ್.ಎನ್. ಸ್ವಾಮಿ.

ಕಿರುಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು ಹಾಗೂ ಆಗಮಿಸಿದ ಗಣ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು. ‌

Copyright@2018 Chitralahari | All Rights Reserved. Photo Journalist K.S. Mokshendra,