Maana.Film Teaser Launch.

Monday, January 31, 2022

284

ಕಾದಂಬರಿಆಧಾರಿತಚಿತ್ರ ಮಾನ

ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ವಿರಚಿತಕಾದಂಬರಿಯು ‘ಮಾನ’ ಚಿತ್ರವಾಗಿದೆ.ಅನಿಷ್ಟ ಪದ್ದತಿಯಾಗಿದ್ದಜೀತಪದ್ದತಿಯ ಬಗ್ಗೆ ಸಿನಿಮಾವು ಬೆಳಕು ಚೆಲ್ಲುತ್ತದೆ.ಪ್ರಚಾರದ ಸಲುವಾಗಿ ಇತ್ತೀಚೆಗೆ ಸುದ್ದಿಗೋಷ್ಟಿ ನಡೆಯಿತು.ದೇವರಾಜ್ ಮಾತನಾಡಿ ಹಳ್ಳಿಯ ಮುಗ್ದ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದೇನೆ. ನನ್ನ ನಟನಾಜೀವನದ ಪ್ರಾರಂಭದಲ್ಲಿಗ್ರಾಮೀಣ ಸೊಗಡಿನಕಥೆಯ ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಇದರಲ್ಲಿ ವಿಭಿನ್ನವಾಗಿ ಮಾಡಿದ್ದೇನೆ. ತನ್ನ ವಿರುದ್ದ ಸಂಚು ಹೊಡುವವರಿಗೆ ನಗುತ್ತಲೇಉತ್ತರಕೊಡುತ್ತೇನೆ. ಸಂಭಾಷಣೆಗಳು ಹಾಸ್ಯಮಯವಾಗಿ ಮೂಡಿಬಂದಿರುವುದೇ ಹೈಲೈಟ್ಸ್. ಪತ್ನಿಯಾಗಿ ಉಮಾಶ್ರೀ ನಟಿಸಿದ್ದಾರೆ.ಹಿಂದೆ ನಾಟಕಗಳಲ್ಲಿ ನಾವಿಬ್ಬರೂಒಟ್ಟಿಗೆ ನಟಿಸುತ್ತಿದ್ದೇವು. ಈಗ ಇಬ್ಬರು ನಾಯಕ,ನಾಯಕಿಯಾಗಿ ಕಾಣಿಸಿಕೊಂಡಿದ್ದೇವೆ ಎಂದರು.

ನಾವೆಲ್ಲಾಆಧುನಿಕಕಾಲಘಟ್ಟದಲ್ಲಿದ್ದರೂಗ್ರಾಮೀಣ ಭಾಗದಲ್ಲಿ ಬಡವರನ್ನುದಟ್ಟದಾರಿದ್ರ್ಯಕ್ಕೆ ತಳ್ಳುವ ಘಟನೆಗಳು ಇಂದಿಗೂ ನಡೆಯುತ್ತಿವೆ. ಅದನ್ನು ಈ ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದಾರೆಂದು ಉಮಾಶ್ರೀ ಹೇಳಿದರು.ಕಾದಂಬರಿಓದುವಾಗಇದನ್ನುಚಿತ್ರರೂಪದಲ್ಲಿತರಬೇಕೆಂದು ನಿರ್ಧಾರ ಮಾಡಿದೆ.ಅದರಂತೆ ನಿರ್ಮಾಪಕರಿಗೆಕಥೆಯನ್ನು ಹೇಳಿದಾಗ ಅವರು ಬಂಡವಾಳ ಹೂಡಲು ಮನಸ್ಸು ಮಾಡಿದರೆಂದುಚಿತ್ರ ಹುಟ್ಟಿದ್ದನ್ನು ನಿರ್ದೇಶಕ ಸೆಬಾಸ್ಟಿಯನ್ ನೆನಪು ಮಾಡಿಕೊಂಡರು.ಟ್ರೇಲರ್ ಬಿಡುಗಡೆ ಮಾಡಿದ ಪ್ರಜ್ವಲ್‌ದೇವರಾಜ್‌ಅಪ್ಪನ ಸಿನಿಮಾವನ್ನು ನೋಡಲುಕಾತುರನಾಗಿದ್ದೇನೆಂದುತಂಡಕ್ಕೆ ಶುಭ ಹಾರೈಸಿದರು. ಕಾಂತಲಕ್ಷೀರಮೇಶ್‌ಬಾಬು ನಿರ್ಮಾಣದಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.ಸೋಜೋ.ಕೆ.ಜೋಸ್‌ಛಾಯಾಗ್ರಹಣ, ಶಿವಪ್ರಸಾದ್‌ಯಾದವ್ ಸಂಕಲನವಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,