Sindhoora.Film Audio Rel

Tuesday, April 26, 2022

275

ಸಿಂಧೂರ ಹಾಡುಗಳ ಸಮಯ

       ‘ಸಿಂಧೂರ’ ಹಾಡುಗಳ ಬಿಡುಗಡೆ ಕಾರ್ಯಕ್ರಮವು ತಡವಾದರೂ ಅರ್ಥಪೂರ್ಣವಾಗಿ ನಡೆಯಿತು. ಕಾಳಿಮಠದ ಋಷಿಕುಮಾರ ಸ್ವಾಮೀಜಿ, ಸ್ವಸ್ತಿಕ್‌ಶಂಕರ್, ಉಮೇಶ್‌ಬಣಕಾರ್ ಮುಂತಾದವರು ಆಡಿಯೋವನ್ನು ಲೋಕಾರ್ಪಣೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಚಿತ್ರವು ತ್ರಿಕೋನ ಪ್ರೇಮಕಥೆಯಾಗಿರುತ್ತದೆ. ನಾಯಕ, ನಿರ್ಮಾಪಕ ಮತ್ತು ನಿರ್ದೇಶಕ ಸಚ್ಚಿನಪುರೋಹಿತ್ ತಂದೆ ದಿವಂಗತ ರಾಮ್‌ಪುರೋಹಿತ್ ಎಂಟು ವರ್ಷಗಳ ಹಿಂದೆ ಬರೆದ ಕಥೆಯು ಈಗ ಚಿತ್ರ ರೂಪದಲ್ಲಿ ಸಿದ್ದಗೊಂಡಿದೆ.

         ಕ್ರಿಶ್ಚಿಯನ್ ಶಾಸಕನ ಮಗಳು, ಮದ್ಯಮ ವರ್ಗದ ಪ್ರಾದ್ಯಪಕನ ಮಗನ ಮೇಲೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಎಲ್ಲಾ ಕಡೆಯಲ್ಲೂ ಸಮಾನತೆಯನ್ನು ಕಾಣುವ ಶಾಸಕ, ಮಗಳ ವಿಷಯ ಬಂದಾಗ ತಿರುಗಿ ಬೀಳುತ್ತಾನೆ. ಮುಂದೆ ಜೀವನದಲ್ಲಿ ಮೇಲೆ ಬರುತ್ತೇನೆಂದು ಛಾಲೆಂಜ್ ತೆಗೆದುಕೊಂಡು ಪಟ್ಟಣಕ್ಕೆ ಬರುತ್ತಾನೆ. ಆ ಸಮಯದಲ್ಲಿ ಮತ್ತೋಂದು ಹುಡುಗಿಯ ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ಅಲ್ಲೋಂದು ಉಪಕಥೆ ಹುಟ್ಟಿಕೊಳ್ಳುತ್ತದೆ. ಅಂತಿಮವಾಗಿ ಆತ ಯಾರಿಗೆ ಒಲಿಯುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ.

        ಶಾಸಕನ ಮಗಳಾಗಿ ನಿವೀಕ್ಷಾನಾಯ್ಡು, ಕಂಪೆನಿ ಕಾರ್ಯದರ್ಶಿಯಾಗಿ ಸುರಕ್ಷಿತಶೆಟ್ಟಿ ನಾಯಕಿಯರು. ತಾರಗಣದಲ್ಲಿ ಬ್ಯಾಂಕ್‌ಜನಾರ್ಧನ್, ರೇಖಾದಾಸ್, ರಾಂಪುರೋಹಿತ್, ಅರುಣ್‌ದೇವಸ್ಯ, ಜ್ಯೋತಿಮುರೂರು, ದಯಾನಂದ್‌ನೀನಾಸಂ, ಶ್ರೀವಿಷ್ಣು, ಉಮಾಶಂಕರ್ ಮುಂತಾದವರು ನಟಿಸಿದ್ದಾರೆ, ಗೋವಾ, ಮಡಕೇರಿ, ಸಕಲೇಶಪುರ, ಬಾಗಲಕೋಟೆ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಐದು ಹಾಡುಗಳಿಗೆ ಸಾಹಿತ್ಯ ಮತ್ತು ಸಂಗೀತವನ್ನು ಒದಗಿಸಿರುವುದು ಕಾರ್ತಿಕ್‌ವೆಂಕಟೇಶ್. ಗಣೇಶ್‌ರಾಜನ್ ಛಾಯಾಗ್ರಹಣ, ಅರವಿಂದ್.ಜೆ.ಪಿ ಸಂಕಲನ, ಅಶೋಕ್ ಸಾಹಸ, ಸೂರಿ-ಜೆ.ಪಿ.ಆರಾಧ್ಯ ನೃತ್ಯ ನಿರ್ವಹಿಸಿದ್ದಾರೆ.

        ಇದಕ್ಕೂ ಮುನ್ನ ಚಿತ್ರದ ಟೀಸರ್ ಮತ್ತು ಹಾಡುಗಳ ತುಣುಕುಗಳನ್ನು ತೋರಿಸಲಾಯಿತು. ಆನಂದ್ ಆಡಿಯೋದವರು ಹಾಡುಗಳ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಸೆನ್ಸಾರ್‌ನಿಂದ ಪ್ರಶಂಸೆಗೆ ಒಳಗಾದ ಚಿತ್ರವು ಕರೋನ ಪರಿಸ್ಥಿತಿ ನೋಡಿಕೊಂಡು ತೆರೆಗೆ ತರಲು ನಿರ್ಮಾಪಕರು ಯೋಜನೆ ರೂಪಿಸಿಕೊಂಡಿದ್ದಾರೆ. ಸಮಾರಂಭಕ್ಕೆ ಬಂದಂತ ಎಲ್ಲರಿಗೂ ಚಿತ್ರದ ಸ್ಮರಣಫಲಕ, ಮಣಿಹಾರ, ರೇಷ್ಮೆ ಶಾಲುನೊಂದಿಗೆ ಸನ್ಮಾನ ಮಾಡಿದ್ದು ವಿಶೇಷವಾಗಿತ್ತು.

 

Copyright@2018 Chitralahari | All Rights Reserved. Photo Journalist K.S. Mokshendra,