ಕಿಂಗ್ಸ್ ಕ್ಲಬ್ದಲ್ಲಿ ಲವ್ಲೀ ಚಿತ್ರೀಕರಣ
‘ಲವ್ ಲೀ’ ಸಿನಿಮಾದ ಚಿತ್ರೀಕರಣ ನಾಗರಬಾವಿ ಬಳಿ ಇರುವ ಕಿಂಗ್ಸ್ ಕ್ಲಬ್ನಲ್ಲಿ ನಡೆಯುತ್ತಿತ್ತು. ಮಾದ್ಯಮದವರು ಸೆಟ್ಗೆ ಹೋದಾಗ ವಸಿಷ್ಠಸಿಂಹ, ಉಪನಾಯಕಿ ಸಮೀಕ್ಷಾ, ಸಾಧುಕೋಕಿಲ ದೃಶ್ಯದಲ್ಲಿ ಭಾಗವಹಿಸಿದ್ದರು. ಬಿಡುವು ಮಾಡಿಕೊಂಡು ತಂಡವು ಮಾತಿಗೆ ಕುಳಿತುಕೊಂಡಿತು. ವಸಿಷ್ಠಸಿಂಹ ಮಾತನಾಡಿ ಕೊನೆ ಹಂತದ ಶೂಟಿಂಗ್ ನಡೆಯುತ್ತಿದೆ. ಇದಾದ ನಂತರ ಉಡುಪಿ, ಮಂಗಳೂರು, ಹಾಗೂ ವಿದೇಶಕ್ಕೆ ಹೋಗುವ ಇರಾದೆ ಇದೆ. ಇಂಥಾ ಜಾನರ್ ಸಿನಿಮಾ ಅಂತ ಹೇಳಲಾಗುವುದಿಲ್ಲ. ೮-೧೦ ವರ್ಷಗಳ ಹಿಂದೆ ನಡೆದಂಥ ಒಂದಷ್ಟು ನೈಜ ಘಟನೆಗಳನ್ನು ಇಟ್ಟುಕೊಂಡು ಚಿತ್ರಕಥೆ ಹೆಣೆಯಲಾಗಿದೆ. ಒಬ್ಬ ಸಾಧಾರಣ ಯುವಕನಿಗೆ ಕೋಪ ಆವೇಶ ಎಲ್ಲವು ಆತನಲ್ಲಿರುತ್ತದೆ. ಅಂಥವನ ಬದುಕಲ್ಲಿ ಲವ್ ಎಂಟ್ರಿಯಾದಾಗ ಏನಾಗುತ್ತದೆ ಎನ್ನುವುದೇ ಸಿನಿಮಾ ಎಂದು ಮಾಹಿತಿ ನೀಡಿದರು.
ಕಚೇರಿಯಲ್ಲಿ ಕೆಲಸ ಮಾಡುವ ನಾಯಕನಿಗೆ ಬಾಸ್ ಆಗಿರುತ್ತೇನೆಂದು ಪಾತ್ರದ ಪರಿಚಯವನ್ನು ಸಾಧುಕೋಕಿಲ ಮಾಡಿಕೊಂಡರು. ಕಿರುತೆರೆಯಲ್ಲಿ ಎಲ್ಲಾ ತರಹದ ಪಾತ್ರವನ್ನು ಮಾಡಿದ್ದೇನೆ. ಇದರಲ್ಲಿ ಸೆಕೆಂಡ್ ಲೀಡ್ ಆಗಿರುತ್ತನೆ ಅಂತ ಸಮೀಕ್ಷಾ ಹೇಳಿದರು. ನಿರ್ದೇಶಕ ಚೇತನಕೇಶವ್ ಹೇಳುವಂತೆ ಇದೊಂದು ವಿಭಿನ್ನ ಕಾನ್ಸೆಪ್ಟ್ ಇರುವ ಸಿನಿಮಾ. ಮಂಗಳೂರಿನಲ್ಲಿ ನಡೆಯೋ ಕಥೆಯಲ್ಲಿ, ನಾಯಕನಿಗೆ ಬೆಂಗಳೂರಿನಲ್ಲಿ ಪ್ರೀತಿ ಹುಟ್ಟಿಕೊಳ್ಳುತ್ತದೆ. ಒಂದು ಸಂದರ್ಭದಲ್ಲಿ ಅವನು ಮಂಗಳೂರಿಗೆ ಹೋಗುತ್ತಾನೆ. ಆತ ಅಲ್ಲಿಗೆ ಹೋಗಲು ಕಾರಣವೇನು ಎನ್ನುವುದೇ ಕಂಟೆಂಟ್. ಜಾರ್ಖಂಡ್ ಮೂಲದ ಸ್ಟೇಫಿಪಟೇಲ್ ನಾಯಕಿ ಎಂಬುದಾಗಿ ವಿವರ ನೀಡಿದರು.
ನಮ್ಮ ನಿರ್ಮಾಣದ ಎರಡನೇ ಚಿತ್ರ ಇದಾಗಿದೆ. ಈಗಾಗಲೇ ಜಯತೀರ್ಥ ಅವರ ‘ಕೈವ’ ಬಿಡುಗಡೆಗೆ ಸಿದ್ದವಿದೆ. ಅಲ್ಲದೆ ನಾಗತ್ತಿಹಳ್ಳಿ ಚಂದ್ರಶೇಖರ್ ಅವರ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದೇವೆ ಎನ್ನುತ್ತಾರೆ ಎಂ.ಆರ್.ರವೀಂದ್ರಕುಮಾರ್. ತಾರಗಣದಲ್ಲಿ ಅಚ್ಯುತಕುಮಾರ್, ದತ್ತಣ್ಣ, ಮಾಳವಿಕಾ, ವಂಶಿಕಾ, ಚಿತ್ಕಲಾಬಿರಾದಾರ್, ಶೋಭರಾಜ್ ಮುಂತಾದವರು ನಟಿಸುತ್ತಿದ್ದಾರೆ. ಅನೂಪ್ಸೀಳನ್ ಸಂಗೀತ, ಅಶ್ವಿನ್ಕೆನಡಿ ಛಾಯಾಗ್ರಹಣ ಚಿತ್ರಕ್ಕಿದೆ.