ಭಾವನೆಗಳನ್ನು ಕೆಣಕುವ ಬೈರಾಗಿ - ಶಿವರಾಜ್ಕುಮಾರ್
‘ಬೈರಾಗಿ’ ಒಂದು ಭಾವನಾತ್ಮಕ ಚಿತ್ರವೆಂದು ಶಿವರಾಜ್‌ಕುಮಾರ್ ಒಂದೇ ಮಾತಿನಲ್ಲಿ ಹೇಳಿದರು. ಜುಲೈ ೧ರಂದು ಸಿನಿಮಾವು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿರುವುದರಿಂದ ಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲು ಮಾದ್ಯಮದವರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದರು. ನಂತರ ಮುಂಬರುವ ಯೋಜನೆಗಳು, ಶಕ್ತಿಧಾಮ ಕುರಿತಂತೆ ಹಲವು ವಿಷಯUಳು ಹೇಳಿದ್ದನ್ನು ಅಕ್ಷರ ರೂಪದಲ್ಲಿ ಓದುಗರಿಗೆ ಸಾದರಪಡಿಸಲಾಗುತ್ತಿದೆ.
ಬೈರಾಗಿಗಾಗಿ ರೋಡ್ ಶೋ: ಶಿವಣ್ಣನ ವರ್ಷದ ಮೊದಲ ಚಿತ್ರವಾಗಿದ್ದರಿಂದ ಜೂನ್ ೨೫ರಂದು ಚಾಮರಾಜನಗರದಲ್ಲಿ ಪ್ರೀ ಇವೆಂಟ್ ಕಾರ್ಯಕ್ರಮ ಆಯೋಜನೆಯಾಗಿದ್ದು, ಜೂನ್ ೨೪ರಂದು ರಾಮನಗರದಿಂದ ಮೈಸೂರುವರೆಗೆ ರೋಡ್ ಶೋ ನಡೆಯಲಿದೆ. ಅವರ ಹುಟ್ಟುಹಬ್ಬ ಹತ್ತು ದಿನ ಮೊದಲೇ ಸಿನಿಮಾ ರಿಲೀಸ್ ಆಗುತ್ತಿದ್ದು, ಅಭಿಮಾನಿಗಳು ಬೈರಾಗಿ ಗುಂಗಲೇ ಇರಬೇಕು.
ಜನ್ಮದಿನ ಆಚರಣೆಗೆ ಬ್ರೇಕ್: ಅಭಿಮಾನಿಗಳು ಈ ಬಾರಿ ಶಿವಣ್ಣನ ಹುಟ್ಟಹಬ್ಬವನ್ನು ಅದ್ದೂರಿ ಮತ್ತು ಸಡಗರದಿಂದ ಆಚರಿಸಲು ಸಿದ್ದತೆ ಮಾಡಿಕೊಂಡಿದ್ದರು. ಆದರೆ ಪುನೀತ್‌ರಾಜ್‌ಕುಮಾರ್ ಅಗಲಿಕೆಯ ಹಿನ್ನಲೆಯಲ್ಲಿ ೬೦ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸದಿರಲು ನಿರ್ಣಯಿಸಿದ್ದಾರೆ. ಆದರೂ ಸರಳವಾಗಿ ಬರ್ತ್‌ಡೇ ಪಾರ್ಟಿ ಮಾಡುತ್ತಾರೆ.
ಜೂನ್ ೧೭ಕ್ಕೆ ರಾಕ್ಲೈನ್ ಜತೆ ಹೊಸ ಚಿತ್ರ: ಶಿವಣ್ಣರೊಂದಿಗೆ ಪ್ರಭುದೇವ ನಟಿಸುತ್ತಿರುವ ಹೊಸ ಸಿನಿಮಾಕ್ಕೆ ಯೋಗರಾಜ್‌ಭಟ್ ನಿರ್ದೇಶನ ಮಾಡಲಿದ್ದು, ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಮಹೂರ್ತ ಸಮಾರಂಭವು ಜೂನ್ ೧೭ರಂದು ನಡೆಯಲಿದೆ.
ಶಕ್ತಿಧಾಮಕ್ಕೆ ಸಹಾಯ ಮಾಡುವವರ ಸಂಖ್ಯೆ ಜಾಸ್ತಿ ಆಗುತ್ತಿದೆ: ಶಕ್ತಿಧಾಮಕ್ಕೆ ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ. ಒಬ್ಬ ಮಹಿಳೆ ತನ್ನ ಆಸ್ತಿಯನ್ನು ದಾನ ಮಾಡಲಿಕ್ಕೆ ಬಂದಿದ್ದರು. ಸರಿಯಾಗಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿರುವೆ. ಸದ್ಯ ಶಾಲೆ ಶುರು ಮಾಡಿದ್ದೇವೆ. ತಮಿಳು ನಟ ವಿಶಾಲ್ ಸಹಾಯಹಸ್ತ ಮಾಡುವುದಾಗಿ ತಿಳಿಸಿದ್ದಾರೆ. ಮೊದಲು ಏನೇನು ಮಾಡಬೇಕು ಎಂದು ತೀರ್ಮಾನಿಸಬೇಕು. ಅವರಿಗೆ ಒಂದು ಕ್ಲಾರಿಟಿ ಇರಬೇಕು. ಅವರು ಕೊಡುತ್ತಾರೆಂದು ಬಳಸಿಕೊಳ್ಳುವುದಿಲ್ಲ.
ಅರ್ಜುನ್ ಜನ್ಯಾ ನಿರ್ದೇಶನದಲ್ಲಿ ನಟಿಸು: ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ್‌ಜನ್ಯಾ ಹೊಸ ಚಿತ್ರಕ್ಕೆ ಮ್ಯೂಸಿಕ್ ಒದಗಿಸುವ ಜತೆಗೆ ಆಕ್ಷನ್ ಕಟ್ ಹೇಳುವ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅವರು ಹೇಳಿದ ಕಥೆಯು ಥ್ರಿಲ್ ಆಗಿದ್ದು ಅಭಿನಯಿಸಲು ಹಸಿರು ನಿಶಾನೆ ಕೊಟ್ಟಿದ್ದಾರೆ.