Made in Bengaluru.News

Monday, December 26, 2022

176

 

*ಡಿಸೆಂಬರ್ 30 ರಂದು ತೆರೆಗೆ ಬರಲಿದೆ "ಮೇಡ್ ಇನ್ ಬೆಂಗಳೂರು".*

 

ಕೋಟ್ಯಾಂತರ ಜನರಿಗೆ ಆಶ್ರಯ ನೀಡಿರುವ ಬೆಂಗಳೂರಿನ ಕುರಿತಾದ ಚಿತ್ರ " ಮೇಡ್ ಇನ್ ಬೆಂಗಳೂರು "  ಇದೇ ಡಿಸೆಂಬರ್ 30 ರಂದು ಬಿಡುಗಡೆಯಾಗುತ್ತಿದೆ. ಬಿಡುಗಡೆಗೂ ಪೂರ್ವದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಯುವ ಉದ್ಯಮಿ ಸುಹಾಸ್ ಗೋಪಿನಾಥ್ ಸೇರಿದಂತೆ  ಅನ್ನು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಭಾಗಿಯಾಗಿದ್ದರು‌.

 

ನಾವು ಮೂರು ಜನ ಸ್ನೇಹಿತರು ಸೇರಿ ಇಪ್ಪತ್ತೈದು ವರ್ಷಗಳ ಹಿಂದೆ ಒಂದು ಕಂಪನಿ ಆರಂಭಿಸಿದ್ದೆವು.

ನಿರ್ದೇಶಕ ಪ್ರದೀಪ್ ಶಾಸ್ತ್ರಿ ಸ್ಟಾರ್ಟ್ ಅಪ್ ಹಾಗೂ ಬೆಂಗಳೂರಿನ ಮೇಲಿರುವ ಎಮೋಷನ್ ಕುರಿತಾದ ಈ ಚಿತ್ರದ ಕಥೆ ಹೇಳಿದರು. ನನಗೆ ನಾವು ಕಂಪನಿ ಆರಂಭಿಸಿದ ದಿನಗಳು ನೆನಪಾದವು. ಕಥೆ ಇಷ್ಟವಾಗಿ ಸಿನಿಮಾ ಆರಂಭ ಮಾಡಿದ್ದೆವು. ಅನಂತನಾಗ್, ಸಾಯಿಕುಮಾರ್, ಪ್ರಕಾಶ್ ಬೆಳವಾಡಿ ಅವರಂತಹ ಹಿರಿಯ ಕಲಾವಿದರು ಹಾಗೂ ಹೊಸ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ‌. ಚಿತ್ರ ಡಿಸೆಂಬರ್ 30ರಂದು ತೆರೆಗೆ ಬರುತ್ತಿದೆ. ನೋಡಿ ಹಾರೈಸಿ ಎಂದರು ನಿರ್ಮಾಪಕರು ಬಾಲಕೃಷ್ಣ ಬಿ.ಎಸ್.

ಈ ಚಿತ್ರದ ನಿರ್ಮಾಪಕರಿಗೆ ಕಥೆ ಹೇಳಲು ಮೇಲಿಂದ ಮೇಲೆ ಫೋನ್ ಮಾಡುತ್ತಿದ್ದೆ. ಕೊನೆಗೂ ಕಥೆ ಕೇಳಿದ್ದ ಬಾಲಕೃಷ್ಣ ಅವರು ಚಿತ್ರ ನಿರ್ಮಾಣಕ್ಕೆ ಮುಂದಾದರು. ಬೆಂಗಳೂರು ಎಂದರೆ ಎಮೋಷನ್. ಈ ಊರು ಅನೇಕರಿಗೆ ಜೀವನ ನೀಡಿದೆ. ಬೆಂಗಳೂರು ಹಾಗೂ ಸ್ಟಾರ್ಟ್ ಅಪ್ ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ಅನಂತನಾಗ್, ಸಾಯಿಕುಮಾರ್, ಪ್ರಕಾಶ್ ಬೆಳವಾಡಿ ಮುಂತಾದ ಹಿರಿಯ ಕಲಾವಿದರು ಹಾಗೂ ಮಧುಸೂದನ್, ಪುನೀತ್ ಮಾಂಜಾ, ವಂಶೀಧರ್, ಹಿಮಾಂಶಿ ಅವರಂತಹ ಕಿರಿಯ ಕಲಾವಿದರ ತಾರಾಬಳಗ ಈ ಚಿತ್ರದಲ್ಲಿದೆ. ಉತ್ತಮ ತಂತ್ರಜ್ಞರು ಈ ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಹಾಡುಗಳು ಹಾಗೂ ಟ್ರೇಲರ್ ಮೂಲಕ ಈಗಾಗಲೇ ಜನರ ಮನ ಗೆದ್ದಿರುವ ನಮ್ಮ ಚಿತ್ರ ಡಿಸೆಂಬರ್ 30 ರಂದು ತೆರೆಗೆ ಬರಲಿದೆ. ಎಲ್ಲರೂ ನೋಡಿ ಎಂದರು ನಿರ್ದೇಶಕ ಪ್ರದೀಪ್ ಕೆ ಶಾಸ್ತ್ರಿ.

 

ಬೆಂಗಳೂರಿನ ಬಗ್ಗೆ ತಮ್ಮದೇ ಶೈಲಿಯಲ್ಲಿ ಪ್ರೀತಿಯ ಮಾತುಗಳಾಡಿದ ನಟ ಪ್ರಕಾಶ್ ಬೆಳವಾಡಿ, ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು.

 

ನಾನು ಕೂಡ "ಮೇಡ್ ಇನ್ ಬೆಂಗಳೂರು". ಆಂದ್ರದಲ್ಲಿ ನಾನು ಹುಟ್ಟಿದ್ದು, ಆದರೆ ಜೀವನ ನೀಡಿದ್ದು ಬೆಂಗಳೂರು ಎಂದ ನಟ ಸಾಯಿಕುಮಾರ್, ಈ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ತಿಳಿಸಿದರು.

 

ಯುವ ಕಲಾವಿದರಾದ ಮಧುಸೂದನ್ ಗೋವಿಂದ್, ಪುನೀತ್ ಮಾಂಜಾ, ವಂಶೀಧರ್, ಹಿಮಾಂಶಿ ಮುಂತಾದವರು ತಮ್ಮ ಪಾತ್ರದ ಕುರಿತು ಮಾತನಾಡಿದರು.  ಹಾಡುಗಳ ಬಗ್ಗೆ ಅಶ್ವಿನ್ ಪಿ ಕುಮಾರ್ ಮಾಹಿತಿ ನೀಡಿದರು.

 

ಯುವ ಉದ್ಯಮಿ, ಗ್ಲೋಬಲ್ಸ್ ಇಂಕ್ ನ ಸ್ಥಾಪಕ ಹಾಗೂ ಅತೀ ಕಿರಿಯ ವಯಸ್ಸಿನಲ್ಲೇ ಸಿ ಇ ಓ ಪಟ್ಟ ಅಲಂಕರಿಸಿದ ಬೆಂಗಳೂರಿನವರೇ ಆದ ಸುಹಾಸ್ ಗೋಪಿನಾಥ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ, ತಾವು ಬೆಳೆದು ಬಂದ ದಾರಿಯನ್ನು ವಿವರಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.

Copyright@2018 Chitralahari | All Rights Reserved. Photo Journalist K.S. Mokshendra,