Chalanachitra Patrakartara Sangha

Monday, January 16, 2023

194

ಚಾಲನೆಗೊಂಡಿತು ಚಲನಚಿತ್ರ ಪತ್ರಕರ್ತರ ಸಂಘ

        ರಾಷ್ಟ್ರ ಪ್ರಶಸ್ತಿ ವಿಜೇತ, ಪದ್ಮಶ್ರೀ ಡಾ.ಗಿರೀಶ್‌ಕಾಸರವಳ್ಳಿ ‘ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ’ವನ್ನು ಉದ್ಗಾಟಿಸಿ, ಲಾಂಛನ ಬಿಡುಗಡೆ ಮಾಡಿ ಶುಭಹಾರೈಸಿದರು.

      ನಂತರ ಮಾತನಾಡುತ್ತಾ ಅಂದು ಎರಡು ಪತ್ರಕರ್ತರ ಸಂಘಗಳು ಇದ್ದವು. ಆದರೆ ಕಾರಣಾಂತದಿಂದ ನಿಂತುಹೋಯಿತು. ಮಾಧ್ಯಮದವರು ಉದ್ಯಮವನ್ನು ಬೆಳಸುವ ಸಲುವಾಗಿ ಸಂವಾದ ನಡೆಸುತ್ತಿದ್ದರು. ‘ಸಂಸ್ಕಾರ’ ‘ಸ್ಕೂಲ್ ಮಾಸ್ಟರ್’ ರೀತಿಯ ಸಿನಿಮಾಗಳನ್ನು ಸರಿಯಾಗಿ ಬಿಂಬಿಸುವ ಕೆಲಸ ಆಗಿಲ್ಲ. ರೌಡಿಸಂ ಮಾದರಿಯ ಚಿತ್ರಗಳನ್ನು ಜಾಸ್ತಿ ಬಿಂಬಿಸಿ ರಾಜ್ಯದ ಹೊರಗೂ ನಮ್ಮ ಚಿತ್ರಗಳ ಕುರಿತಂತೆ ನಾವೇ ತಪ್ಪು ಕಲ್ಪನೆ ಮೂಡಿಸಿದ್ದೇವೆ. ಅದನ್ನು ಹೋಗಲಾಡಿಸುವ ಅಗತ್ಯವಿದೆ. ‘ಕಾಂತಾರ’ ತನ್ನ ಅಸ್ಮಿತೆಯಿಂದ ವಿದೇಶಗಳಲ್ಲಿ ಯಶಸ್ಸನ್ನು ಕಂಡಿತು. ‘ಕೆಜಿಎಫ್’ ಗೆಲುವಿಗೆ ಬೇರಯದೆ ಕಾರಣವಿದೆ. ‘ಬಳೆ ಕೆಂಪ’, ‘ಪಿಂಕಿ ಎಲ್ಲಿ’, ‘ನಾನು ಕುಸುಮ’, ‘ಪೆದ್ರೋ’, ‘ಶಿವಮ್ಮ’ ಮುಂತಾದ ಚಿತ್ರಗಳು ಬೇರೆ ಕಡೆಗಳಲ್ಲಿ ಸದ್ದು ಮಾಡಿತ್ತಿದೆಯಾದರೂ ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ‘ಸಂಸ್ಕಾರ’ ೮೦೦೦೦ ದಲ್ಲಿ ನಿರ್ಮಾಣಗೊಂಡು, ೫೦೦೦೦ ಸಹಾಯಧನ ಸಿಕ್ಕಿತು. ಕೃತಿಕಾರ ಇಲ್ಲದಿದ್ದರೆ ವಿಮರ್ಶಕನ ಅಗತ್ಯವಿಲ್ಲವೆಂದು ಅಭಿಪ್ರಾಯಪಟ್ಟರು.

ಹಿರಿಯ ಪತ್ರಕರ್ತೆ ಡಾ.ವಿಜಯಾ ಪ್ರಕಾರ ನಮ್ಮ ಕಾಲದಲ್ಲಿ ಪತ್ರಕರ್ತರು ಉದ್ಯಮವನ್ನು ಬೆಳೆಸಲು ಸಹಕಾರಿಯಾದರು. ನೀವುಗಳು ಉದ್ಯಮದ ಜತೆಗೆ ವೈಯಕ್ತಿಕವಾಗಿ ಪತ್ರಕರ್ತರಿಗೆ ಅನುಕೂಲವಾಗುವಂತೆ ಬೈಲಾದಲ್ಲಿ ವಿಷಯ ಸೇರಿಸಿರುವುದು ಸ್ವಾಗತಾರ್ಹವಾಗಿದೆ. ಯಾವುದೇ ಸಿನಿಮಾ ಬಿಡುಗಡೆಯಾದರೆ ಪತ್ರಕರ್ತರು, ಚಿತ್ರತಂಡದೊಂದಿಗೆ ಸಂವಾದಗಳು ನಡೆಯುತ್ತಿತ್ತು. ಇದರಿಂದ ತಪ್ಪು ಒಪ್ಪುಗಳು ಅರಿತುಕೊಂಡು ಮುಂದೆ ಹಾಗಾಗದಂತೆ ನಿರ್ದೇಶಕರು ನೋಡಿಕೊಳ್ಳುತ್ತಿದ್ದರು, ಅಂತಹ ಕೆಲಸಗಳು ಈಗ ಆಗಬೇಕಾಗಿದೆ. ಕನ್ನಡ  ಚಿತ್ರರಂಗದ ಬೆಳವಣಿಗೆಯಲ್ಲಿ ಪತ್ರಕರ್ತರ ಕೊಡುಗೆ ಅಪಾರವಾದುದು ಎಂದು ಹೇಳಿದರು.

       ಸಂಘದಲ್ಲಿ ಹಿರಿಯ ಪತ್ರಕರ್ತ ಬಿ.ಎನ್.ಸುಬ್ರಮಣ್ಯ ಅಧ್ಯಕ್ಷರು, ಸುನಯನಾಸುರೇಶ್ ಉಪಾಧ್ಯಕ್ಷರು, ನಾಡಿಗೇರ್‌ಚೇತನ್ ಕಾರ್ಯಾಧ್ಯಕ್ಷರು, ಜಿ.ಅರುಣ್‌ಕುಮಾರ್ ಪ್ರಧಾನಕಾರ್ಯದರ್ಶಿ, ಎಸ್.ಜಗದೀಶ್‌ಕುಮಾರ್ ಕಾರ್ಯದರ್ಶಿ, ಹರೀಶ್‌ಸೀನಪ್ಪ ಸಹ ಕಾಯದರ್ಶಿ, ಕೆ.ಎಸ್.ವಾಸು ಖಜಾಂಚಿ. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆರ್.ಮನೋಹರ್, ಎನ್.ಮಂಜುನಾಥ್, ಹೆಚ್.ದೇಶಾದ್ರಿ, ಲಕ್ಷೀನಾರಾಯಣ, ಸಿ.ಜಿ.ರಮೇಶ್, ಆರ್.ವಿಜಯ್, ಜಿ.ಆರ್.ಅವಿನಾಶ್, ಎಸ್.ಆರ್.ಹರ್ಷವರ್ಧನ್, ಹೆಚ್.ಮಾಲತೇಶಜಗ್ಗೇನ್, ಶಶಿಧರ ಚಿತ್ರದುರ್ಗ ಇವರುಗಳು ಇರುತ್ತಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,