Love Birds.Film News

Monday, January 16, 2023

124

ಲವ್ ಬರ್ಡ್ಸ್ ಟೀಸರ್ ಬಿಡುಗಡೆ

       ಸದಭಿರುಚಿಯ ನಿರ್ದೇಶಕ ಪಿ.ಸಿ.ಶೇಖರ್ ನಿರ್ದೇಶನದ ‘ಲವ್ ಬರ್ಡ್ಸ್’ ಚಿತ್ರದ ಟೀಸರ್ ಲೋಕಾರ್ಪಣೆ ಕಾರ್ಯಕ್ರಮವು ನಡೆಯಿತು. ರಿಯಲ್ ಜೋಡಿಗಳಾದ ಕೃಷ್ಣ, ಮಿಲನನಾಗರಾಜ್ ಜೋಡಿಗಳಾಗಿ ಕಾಣಿಸಿಕೊಂಡಿದ್ದಾರೆ. ನಾಯಕ, ನಾಯಕಿಯ ಪಾತ್ರವನ್ನು ಪರಿಚಯಿಸುವ ತುಣುಕುಗಳನ್ನು ನಟರಾದ ವಿಜಯರಾಘವೇಂದ್ರ ಮತ್ತು ಅಜಯ್‌ರಾವ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

        ನಂತರ ಮಾತನಾಡಿದ ನಿರ್ದೇಶಕರು ನಾನು ಸಾಮಾನ್ಯವಾಗಿ ಒಂದೇ ತರಹದ ಸಿನಿಮಾ ಮಾಡುವುದಿಲ್ಲ. ಬೇರೆ ಬೇರೆ ರೀತಿಯ ಚಿತ್ರಗಳನ್ನು ಮಾಡುತ್ತಾ ಬಂದಿರುತ್ತೇನೆ. ಲಾಕ್‌ಡೌನ್ ಸಮಯದಲ್ಲಿ ಬರೆದ ಕಥೆ ಇದಾಗಿದೆ. ಮದುವೆಯಾದ ನನ್ನ ಸ್ನೇಹಿತರು ಹಂಚಿಕೊಳ್ಳುತ್ತಿದ್ದ ಕೆಲವು ವಿಷಯಗಳು ಬರೆಯಲು ಸ್ಪೂರ್ತಿಯಾಯಿತು. ಕಥೆ ಬರೆಯಬೇಕಾದರೆ ಕೃಷ್ಣ,ಮಿಲನನಾಗರಾಜ್ ನಾಯಕ-ನಾಯಕಿಯಾಗಬೇಕು ಅಂತ ನಿರ್ಧರಿಸಿದ್ದೆ. 

. ನಿರ್ಮಾಪಕ ಚಂದ್ರು ಅವರಿಗೆ ಹೇಳಿದಾಗ ಮನಸ್ಸು ಮಾಡಿದರು. ತಂಡದ ಸಹಕಾರದಿಂದ ಚೆನ್ನಾಗಿ ಮೂಡಿಬಂದಿದೆ. ಮದುವೆಯಾದ ನಂತರ ಯಶಸ್ವಿ ಜೀವನವನ್ನು ನಡೆಸುತ್ತಿರುವ ದಂಪತಿಗಳ ಕುರಿತಾಗಿದೆ. ಸ್ವತಂತ್ರ ಜೀವನದಲ್ಲಿ ತುಂಬಾ ಮಹತ್ವಾಕಾಂಕ್ಷೆ ಹೊಂದಿರುವ ಒಬ್ಬ ಫ್ಯಾಷನ್ ಡಿಸೈನರ್ ರೋಲ್‌ನ್ನು ಮಿಲನ ನಿಭಾಯಿಸಿದ್ದಾರೆ.

      ನಾವಿಬ್ಬರೂ ‘ಲವ್ ಮಾಕ್ಟೇಲ್’ ಆದಮೇಲೆ ನಟಿಸಿದ ಚಿತ್ರವಿದು. ಅದರಲ್ಲಿ ಆದಿ ಹಾಗೂ ನಿಧಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇವು. ಇದರಲ್ಲಿ ದೀಪಕ್-ಪೂಜಾ ಆಗಿ ಅಭಿನಯಿಸಿದ್ದೇವೆ. ಆಕ್ಷನ್ ದೃಶ್ಯಗಳು ಅದ್ಬುತವಾಗಿ ಬಂದಿದೆ ಅಂತ ಕೃಷ್ಣ ಅನುಭವಗಳನ್ನು ಹಂಚಿಕೊಂಡರು.

      ಗಂಡ ಹೆಂಡತಿ ನಡುವಿನ ಸಣ್ಣಪುಟ್ಟ ವ್ಯತ್ಯಾಸಗಳು ಮುಂದೆ ಯಾವ ರೀತಿಯಲ್ಲಿ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂಬುದನ್ನು ತೋರಿಸಲಾಗಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,