Samruddi Shetty Model.News

Wednesday, January 18, 2023

233

ಸಮೃದ್ದಿಶೆಟ್ಟಿ ಮಿಸ್ ಕ್ವೀನ್ ಆಫ್ ಇಂಡಿಯಾ

      ಉಡುಪಿ ಮೂಲದ ಸಮೃದ್ದಿಶೆಟ್ಟಿ ಕೇರಳದ ಕೊಚ್ಚಿಯಲ್ಲಿ ನಡೆದ ಮಿಸ್ ಕ್ವೀನ್ ಆಫ್ ಇಂಡಿಯಾ ಕಿರೀಟವನ್ನು ತನ್ನದಾಗಿಸಿಕೊಂಡಿದ್ದಾರೆ. ೩೦ ರಾಜ್ಯಗಳ ಸ್ಪರ್ಧಿಗಳ ಜೊತೆ ಗುರುತಿಸಿಕೊಂಡು ಅಂತಿಮವಾಗಿ ಗೆಲುವನ್ನು ಕಂಡು ಅಂತರಾಷ್ಟ್ರೀಯ ಮಟ್ಟದ ಮಿಸ್ ಗ್ಲಾಮ್ ವರ್ಲ್ಡ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಉದ್ಯಮಿ ವಿಶ್ವನಾಥಶೆಟ್ಟಿ ಮತ್ತು ಮಮತಾಶೆಟ್ಟಿ ಪುತ್ರಿಯಾಗಿದ್ದು ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದು ಸದ್ಯ ಡೇಟಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

        ಮಿಸ್ ಇಂಡಿಯಾ ಸ್ಪರ್ಧೆಗಳನ್ನು ನೋಡಿ ಮಿಸ್ ಇಂಡಿಯಾ ಸ್ಪರ್ಧೆಯ ಭಾಗವಾಗುವ ಆಸೆ ಇತ್ತು. ಮನೆಯಲ್ಲಿ ಹೇಳಿದಾಗ ಅಪ್ಪ, ಅಮ್ಮ ನನ್ನ ಕನಸಿಗೆ ತಣ್ಣೀರು ಹಾಕದೆ ಧೈರ್ಯ, ಪ್ರೋತ್ಸಾಹ ನೀಡಿದ್ದಕ್ಕೆ ಈ ಮಟ್ಟಕ್ಕೆ ಬರಬೇಕಾಯಿತು. ಏನೇ ಕ್ರೆಡಿಟ್ ಬಂದರೂ ಅವರಿಗೆ ಸಲ್ಲುತ್ತದೆ. ಮುಂದೆ ಮಿಸ್ ಗ್ಲಾಮ್ ವರ್ಲ್ಡ್ ಸ್ಪರ್ಧೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇನೆಂದು ಸಮೃದ್ದಿಶೆಟ್ಟಿ ಸಂತಸ ಹಂಚಿಕೊಂಡರು.

 

Copyright@2018 Chitralahari | All Rights Reserved. Photo Journalist K.S. Mokshendra,