Mr Natwarlal.Film News

Wednesday, January 18, 2023

118

ಕನ್ನಡದ ಮಿ.ನಟ್ವರ್ಲಾಲ್

       ೭೦ ದಶಕದಲ್ಲಿ ಅಮಿತಾಬ್‌ಬಚ್ಚನ್ ಅಭಿನಯದ ‘ಮಿ.ನಟ್ವರ್‌ಲಾಲ್’ ಚಿತ್ರ ಬಿಡುಗಡೆಗೊಂಡು ಹಿಟ್ ಆಗಿತ್ತು. ಬರೋಬ್ಬರಿ ನಾಲ್ಕು ದಶಕದ ನಂತರ ಇದೇ ಹೆಸರಿನಲ್ಲಿ ಕನ್ನಡ ಸಿನಿಮಾವೊಂದು ತೆರೆಗೆ ಬರಲು ತಯಾರಿ ಮಾಡಿಕೊಂಡಿದೆ. ಪ್ರಚಾರದ ಮೊದಲ ಹಂತವಾಗಿ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಆಗಮಿಸಿ ತಂಡಕ್ಕೆ ಶುಭಹಾರೈಸಿದರು.

ನಿರ್ದೇಶಕ ವಿ.ಲವ ಮಾತನಾಡಿ ಇದೊಂದು ಕ್ರೈಂ ಥ್ರಿಲ್ಲರ್ ಕಥೆಯನ್ನು ಹೊಂದಿದ್ದು, ಇಂದಿನ ಡಿಜಿಟಲ್ ಯುಗದಲ್ಲಿ ಟೆಕ್ನಾಲಜಿಯನ್ನು ಬಳಸಿಕೊಂಡು ಜನರನ್ನು ಹೇಗೆಲ್ಲ ಯಾಮಾರಿಸಿ ಹಣವನ್ನು ದೋಚುತ್ತಾರೆ ಎಂಬದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಭಾರತದಲ್ಲಿ ಕಿಂಗ್‌ಖಾನ್ ಎಂದೇ ಕರೆಸಿಕೊಳ್ಳುತ್ತಿದ್ದ ವಂಚಕ ನಟ್ವರ್‌ಲಾಲ್ ಪಾತ್ರದಿಂದ ಪ್ರೇರಣೆ ಪಡೆದುಕೊಳ್ಳಲಾಗಿದೆ. ಹಲವು ಆಸಕ್ತಿಕರ ಸಂಗತಿಗಳು ಇರಲಿದೆ ಎಂಬುದಾಗಿ ಮಾಹಿತಿ ಬಿಚ್ಚಿಟ್ಟರು.

       ತನುಶ್ ಸಿನಿಮಾಸ್ ಬ್ಯಾನರಿನಲ್ಲಿ ತನುಶ್‌ಶಿವಣ್ಣ ನಿರ್ಮಿಸುವುದರ ಜತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ನಂದಿನಿ ಹೆಸರಿನಲ್ಲಿ ಸೋಷಿಯಲ್ ವರ್ಕರ್ ಆಗಿ ಸೋನಾಲ್‌ಮಾಂತೇರೋ ನಾಯಕಿ. ಇಲ್ಲಿನ ಭಾಷೆ ಅಲ್ಲದೆ ತಮಿಳು, ಹಿಂದಿ, ತೆಲುಗು ಹಾಗೂ ಮಲೆಯಾಳಂದಲ್ಲಿಯೂ ಮುಂದಿನ ತಿಂಗಳು ರಿಲೀಸ್ ಆಗಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,