Kendada Seragu.News

Monday, January 23, 2023

132

ಕೆಂಡದ ಸೆರಗು ಟೀಸರ್ ಬಿಡುಗಡೆ

      ರಾಕಿ ಸೋಮ್ಲಿ ಮೊದಲ ನಿರ್ದೇಶನದ ‘ಕೆಂಡದ ಸೆರಗು’ ಚಿತ್ರದ ಟೀಸರ್ ಬಿಡುಗಡೆಗೊಂಡಿತು. ಭೂಮಿಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಮಾಲಾಶ್ರೀ ಪೋಲೀಸ್ ಆಯುಕ್ತರಾಗಿ ಕಾಣಿಸಿಕೊಂಡಿದ್ದಾರೆ. ಕಾದಂಬರಿ ಆಧಾರಿತ ಕಥೆಯಾಗಿದ್ದು, ಕುಸ್ತಿ ಸುತ್ತ ಸಾರಲಿದೆ. ಕೇವಲ ಕುಸ್ತಿ ಇರದೆ ಹೆಣ್ಣುಮಗಳ ನೋವಿನ ಸನ್ನಿವೇಶಗಳ ಜತೆಗೆ ಒಂದೊಳ್ಳೆ ಸಂದೇಶ ಇರಲಿದೆ.

      ನಾಯಕಿ ಭೂಮಿಶೆಟ್ಟಿಗೆ ಹಲವು ಶೇಡ್ಸ್‌ಗಳು ಇರಲಿದ್ದು, ಸಮಾಜದಲ್ಲಿ ವೇಶ್ಯೆ ಹಾಗೂ ಆಕೆಯ ಮಗಳನ್ನು ಬೇರೆಯದ್ದೇ ರೀತಿ ನೋಡುತ್ತಾರೆ. ಆದರೆ ಆಕೆಗೂ ಅವಕಾಶ ನೀಡಿದರೆ ಏನು ಬೇಕಾದರೂ ಸಾಧಿಸುತ್ತಾಳೆ ಎನ್ನುವ ಏಳೆಯನ್ನು ಹೊಂದಿದೆ. ದಾವಣಗೆರೆಯಲ್ಲಿ ಬೀಡಾ ಅಂಗಡಿ ಮಾಲೀಕರಾಗಿರುವ ಕೆ.ಕೋಟ್ರೇಶ್‌ಗೌಡ ಸಿನಿಮಾ ಮಾಡುವ ಹಂಬಲದಿಂದ ಇದ್ದ ಒಂದು ಸೈಟ್‌ನ್ನು ಮಾರಿ ಶ್ರೀ ಮುತ್ತು ಟಾಕೀಸ್ ಮತ್ತು ಎಸ್.ಕೆ.ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಚಿತ್ರ ಮಾಡಿದ್ದಾರೆ. ತಾರಗಣದಲ್ಲಿ ಯಶ್‌ಶೆಟ್ಟಿ, ವರ್ಧನ್‌ತೀರ್ಥಹಳ್ಳಿ, ಪ್ರತಿಮಾ, ಹರೀಶ್‌ಅರಸು, ಬಸುಹಿರೇಮಠ್, ಶೋಭಿತ, ಸಿಂಧುಲೋಕನಾಥ್ ಮುಂತಾದವರು ನಟಿಸಿದ್ದಾರೆ. ವೀರೇಶ್‌ಕಂಬ್ಲಿ ಸಂಗೀತ, ವಿಪಿನ್.ವಿ.ರಾಜ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನವಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,