Nata Bhayankara.News

Tuesday, January 24, 2023

123

ನಟ ಭಯಂಕರ ಟ್ರೇಲರ್ ಬಿಡುಗಡೆ

        ಬಿಗ್ ಬಾಸ್ ವಿಜೇತ ಪ್ರಥಮ್ ನಾಯಕನಾಗಿ ನಟಿಸಿ ನಿರ್ದೇಶಿಸಿರುವ ‘ನಟ ಭಯಂಕರ’ ಚಿತ್ರದ ಟ್ರೇಲರ್‌ನ್ನು ಧ್ರುವಸರ್ಜಾ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಸ್ವಾರಸ್ಯ ಸಿನಿ ಕ್ರಿಯೇಶನ್ಸ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಉದಯ್.ಕೆ.ಮಹ್ತಾ ಕಥೆ ಇರಲಿದೆ. ಡಾ.ವಿ.ನಾಗೇಂದ್ರಪ್ರಸಾದ್, ನಾಗತ್ತಿಹಳ್ಳಿ ಚಂದ್ರಶೇಖರ್,ಬಹದ್ದೂರ್‌ಚೇತನ್, ಅರಸುಅಂತಾರೆ ಸಾಹಿತ್ಯಕ್ಕೆ ಪ್ರದ್ಯೋತನ್ ಸಂಗೀತ ಒದಗಿಸಿದ್ದಾರೆ. ತಾರಗಣದಲ್ಲಿ ಸಾಯಿಕುಮಾರ್, ಓಂಪ್ರಕಾಶ್‌ರಾವ್, ನಿಹಾರಿಕಾಶಣೈ, ಸುಷ್ಮತಾಜೋಷಿ, ಶೋಭರಾಜ್, ಕುರಿಪ್ರತಾಪ್, ಚಂದನಾರಾಘವೇಂದ್ರ, ಶಂಕರ್‌ಅಶ್ವಥ್, ಮೋಹನ್‌ಜುನೇಜಾ, ರಮಾ,ಬಿರಾದಾರ್,ಎಂ.ಎಸ್.ಉಮೇಶ್ ಮುಂತಾದವರು ನಟಿಸಿದ್ದಾರೆ.

        ‘ಜಾತಸ್ಯಂ ಮರಣಂ ಧೃವಂ’ ಎಂದು ಅಡಿಬರಹದಲ್ಲಿರುವ ಚಿತ್ರವು ಒಂದು ಕುರುಡು ದೆವ್ವ ಮತ್ತು ಒಬ್ಬ ಸೂಪರ್ ಸ್ಟಾರ್ ನಟನ ನಡುವೆ ನಡೆಯುವ ಕಥೆ ಇದರಲ್ಲಿದೆ. ದೊಡ್ಡ ಕಲಾವಿದರ ತಾರಾಗಣ ಇರಲಿದ್ದು, ಸ್ವಲ್ಪ ತಡವಾದರೂ ಎಲ್ಲೂ ರಾಜಿಯಾಗದೆ ಗುಣಮಟ್ಟದಲ್ಲಿ ಮಾಡಲಾಗಿದೆಯತೆ. ಫೆಬ್ರವರಿ ೩ರಂದು ೧೫೦ಕ್ಕೂ ಹೆಚ್ಚಿನ ಚಿತ್ರಮಂದಿರದಲ್ಲಿ ಸಿನಿಮಾವು ತೆರೆಕಾಣಲಿದೆ. 

 

Copyright@2018 Chitralahari | All Rights Reserved. Photo Journalist K.S. Mokshendra,