ದರೋಡೆ ಹಿಂದಿನ ರೋಚಕ ಕಥನ
‘ಮದಗಜ’ ಸಿನಿಮಾಕ್ಕೆ ಸಹಾಯಕ ನಿರ್ದೇಶನ ಮಾಡಿರುವ ಮೋಹನ್.ಎನ್.ಮುನಿನಾರಾಯಣಪ್ಪ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಪೆಂಟ್ರಿಕ್ಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ನಡಿ ಪೂಜಾ.ಟಿ.ವೈ ನಿರ್ಮಾಣ ಮಾಡಿರುವುದು ಹೊಸ ಅನುಭವ. ಪ್ರಚಾರದ ಸಲುವಾಗಿ ರೇಣುಕಾಂಬ ಸ್ಟುಡಿಯೋದಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಇದೊಂದು ಸತ್ಯ ಘಟನೆಯಾಗಿದೆ. ತಮಿಳುನಾಡಿನ ಬ್ಯಾಂಕ್ ಒಂದರಲ್ಲಿ ಶಾಖಾ ವ್ಯವಸ್ಥಾಪಕರಿಂದ ೧೩ ಕೋಟಿ ಹಣ ೧೦೦ ಜನಕ್ಕೆ ಮಿಸ್ ಆಗಿ ಡಿಪಾಸಿಟ್ ಆಗುತ್ತದೆ. ಅದು ಹೇಗೆ? ಏನು ಅನ್ನೋದರ ಸುತ್ತ ಸಿನಿಮಾವು ಸಾಗುತ್ತದೆ. ಒಂದು ಪಾತ್ರದ ಸುತ್ತ ಹೋಗದೆ, ಹೈಪರ್ ಲಿಂಕ್ ಹಾಗೂ ಡಾರ್ಕ್ ಕಾಮಿಡಿ ಥ್ರಿಲ್ಲರ್ ಶೈಲಿಯಲ್ಲಿ ಸಾಗುತ್ತದೆ. ನಾಲ್ಕು, ಐದು ಪಾತ್ರಗಳು ಒಂದು ಜಾಗದಲ್ಲಿ ಕ್ರಾಸ್ ಓವರ್ ಆಗುತ್ತದೆ. ಶೇಕಡ ೫೦ರಷ್ಟು ಸನ್ನಿವೇಶಗಳು ಬ್ಯಾಂಕ್‌ನಲ್ಲಿ ನಡೆಯುವುದು ವಿಶೇಷ.
ತಾರಗಣದಲ್ಲಿ ವೆಂಕಟ್‌ರಾಜು, ಲೂಸಿಯಾ ಪವನ್‌ಕುಮಾರ್ ಪತ್ನಿ ಸೌಮ್ಯಜಗನ್‌ಮೂರ್ತಿ, ಮೆಟ್ರೋಸಾಗಾ ಖ್ಯಾತಿಯ ಆಕರ್ಷ್‌ಕಮಲ, ವೆಂಕಟ್‌ರಾಜ್ ಅಲ್ಲದೆ ಪೃಥ್ವಿಅಂಬರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ದತ್ತುಬಣಕರ್, ಕೌಶಿಲ್, ರಾಘವೇಂದ್ರಹೊನ್ನವಳ್ಳಿ, ಡ್ರಾಮಾ ಜ್ಯೂನಿಯರ‍್ಸ್‌ನ ಮಹೇಂದ್ರ ಮುಂತಾದವರು ನಟಿಸಿದ್ದಾರೆ. ಸೂರಜ್‌ಜೋಯಿಸ್ ಸಂಗೀತ, ಆನಂದ್‌ಸುಂದರೇಶ ಛಾಯಾಗ್ರಹಣ, ಮಹೇಶ್‌ತೂಗಟ್ಟ ಸಂಕಲನ, ಅರ್ಜುನ್‌ರಾಜ್-ನರಸಿಂಹ ಸಾಹಸ, ರಮೇಶ್.ಎಸ್.ಮನೋಹರ ಬರವಣಿಗೆ ಇದೆ.