Usire Usire.Film Event.

Sunday, October 29, 2023

335

ಉಸಿರೇ ಉಸಿರೇಗೆ ಕಿಚ್ಚ ಸಾಥ್

      ‘ಉಸಿರೇ ಉಸಿರೇ’ ಸಿನಿಮಾದ ಟ್ರೇಲರ್ ಓರಾಯನ್ ಮಾಲ್ ಲೇಕ್‌ಪಕ್ಕ ಅದ್ದೂರಿಯಾಗಿ ಬಿಡುಗಡೆಗೊಂಡಿತು. ಗೆಳಯನಿಗೆ ಒಳ್ಳೆಯದಾಗಲೆಂದು ಶುರುವಿನಿಂದಲೂ ಪ್ರೋತ್ಸಾಹ ಕೊಡುತ್ತಿರುವ ಸುದೀಪ್ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ನಂತರ ಮಾತನಾಡಿದ ಅವರು ರಾಜೀವ್ ಸಿನಿಮಾ ಗೆಲ್ಲಬೇಕು. ದೇವರಾಜ್, ತಾರಾ, ಬ್ರಹ್ಮಾನಂದಂ, ಅಲಿ ನಟಿಸಿದ್ದು, ನಾನು ಕೂಡ ಅಭಿನಯಿಸಿದ್ದೇನೆ. ತಂಡವು ಸಾಕಷ್ಟು ಶ್ರಮಪಟ್ಟು ಉತ್ತಮವಾದ ಸಿನಿಮಾ ಮಾಡಿದ್ದಾರೆ. ಸದ್ಯದಲ್ಲೆ ಬಿಡುಗಡೆಯಾಗಲಿದ್ದು, ನೀವೆಲ್ಲರು ಹರಸಬೇಕೆಂದು ಕೋರಿದರು.

ನನ್ನ ಉಸಿರು ಸುದೀಪ್. ಅವರನ್ನು ಕಂಡರೆ ನನಗೆ ಅಷ್ಟು ಪ್ರೀತಿ. ಅಣ್ಣ ನೀಡುತ್ತಿರುವ ಸಹಕಾರಕ್ಕೆ ಅಬಾರಿಯಾಗಿದ್ದೇನೆ ಎಂಬುದು ನಾಯಕ ರಾಜೀವ್ ನುಡಿ. ಸಿ.ಎಂ.ವಿಜಯ್ ನಿರ್ದೇಶನದಲ್ಲಿ, ಪ್ರದೀಪ್‌ಯಾದವ್ ನಿರ್ಮಾಣ ಮಾಡಿರುವುದು ಹೊಸ ಅನುಭವ.

      ನಾಯಕಿ ಶ್ರೀಜಿತ. ಅಲ್ಲದೆ ತೆಲುಗಿನ ಖ್ಯಾತ ಹಾಸ್ಯ ಕಲಾವಿದರುಗಳಾದ ಡಾ.ಅಲಿ ಮತ್ತು ಬ್ರಹ್ಮಾನಂದಂ ಒಟ್ಟಿಗೆ ಅಭಿನಯಿಸಿರುವುದು ವಿಶೇಷ. ಉಳಿದಂತೆ ಸಾಧುಕೋಕಿಲ, ಮಂಜುಪಾವಗಡ, ಸುಚೇಂದ್ರಪ್ರಸಾದ್, ರಾಜೇಶ್‌ನಟರಂಗ, ಶೈನಿಂಗ್ ಸೀತಾರಾಮು, ಜಗಪ್ಪ, ಸುಶ್ಮಿತಾ ಮುಂತಾದವರು ನಟಿಸಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,