Bheema.Lyrical Song.News

Monday, September 18, 2023

59

 

*ಬಿಡುಗಡೆ ಆಯ್ತು ಸ್ಯಾಂಡಲ್ವುಡ್ ಸಲಗನ Psych ಸಾಂಗ್,ಮೇಕಿಂಗ್ ಅಂತೂ ಅದ್ಭುತ*

 

ಸ್ಯಾಂಡಲ್ ವುಡ್ ಸಲಗ,ದುನಿಯಾ ವಿಜಯ್ ರವರ ನಿರ್ದೇಶನದ ಎರಡನೆಯ ಬಹು ನಿರೀಕ್ಷಿತ ಭೀಮ ಚಿತ್ರದ *ಸೈಕ್ ಸಾಂಗ್* ಇವತ್ತು ಬಿಡುಗಡೆಯಾಗಿದ್ದು, ಈ ಹಾಡನ್ನು ರಾಹುಲ್ ಡಿಟ್ಟೋ ಮತ್ತು ಎಂ ಸಿ ಬಿಜ್ಜು ಹಾಡಿದ್ದು  ವಿಶೇಷವಾಗಿದೆ..

ಸ್ವತಃ ರಾಹುಲ್ ಡಿಟ್ಟೋ,ಎಂ ಸಿ ಬಿಜ್ಜು ಮತ್ತು ನಾಗಾರ್ಜುನ ಶರ್ಮಾ ಈ ಮೂವರು ಸೇರಿ ಬರೆದಿರುವ ಸಾಹಿತ್ಯಕ್ಕೆ ಸಂಗೀತ ಮಾಂತ್ರಿಕ ಚಾರಣರಾಜ್ ಮ್ಯೂಸಿಕ್ ನೀಡಿ,ಭೀಮನ ಬಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದರೆ ತಪ್ಪಿಲ್ಲ..

ದುನಿಯಾ ವಿಜಯ್ ರವರ ನಿರ್ದೇಶನದ ಮೊದಲ ಸಿನಿಮಾ ಸಲಗ,ತನ್ನದೇ ಆದಂತಹ ಮೇಕಿಂಗ್ ಮತ್ತು ಖಡಕ್ ಡೈಲಾಗ್ ಗಳಿಂದ ಎಷ್ಟು ದೊಡ್ಡ ಹೆಸರು ಮಾಡಿ,ಬ್ಲಾಕ್ ಬಸ್ಟರ್ ಹವಾ ಕ್ರಿಯೇಟ್ ಮಾಡಿತ್ತೋ, ಅದೇ ನಿಟ್ಟಿನಲ್ಲಿ ಭೀಮ ಸಹ ತನ್ನ ಪಾರುಪತ್ಯವನ್ನ ಸಾಧಿಸುತ್ತೆ ಅನ್ನೋ ನಂಬಿಕೆ ಇವತ್ತು ಚಿತ್ರ ತಂಡಕ್ಕೆ ಸಿಕ್ಕಂತಾಗಿದೆ..

ಭೈರಾಗಿ ಚಿತ್ರದ ನಿರ್ಮಾಣ ಮಾಡಿ,ಅತೀ ಚಿಕ್ಕ ವಯಸ್ಸಿನಲ್ಲೇ ನಿರ್ಮಾಪಕರಾಗಿ ಹೆಸರು ಮಾಡಿ,ತಮ್ಮದೇ ಆದಂತಹ ಒಳ್ಳೆಯ ಸ್ನೇಹ ಸಂಭಂದದ ನೆಟ್ವರ್ಕ್ ಹೊಂದಿರುವ ಸದಭಿರುಚಿಯ ವ್ಯಕ್ತಿ,ನಿರ್ಮಾಪಕ ಕೃಷ್ಣ ಸಾರ್ಥಕ ಮತ್ತು ಅವರ ಜೊತೆ ಕೈ ಜೋಡಿಸಿರುವ ಮತ್ತೊಬ್ಬ ವ್ಯಕ್ತಿ ಜಗದೀಶ್,ತಮ್ಮ ಕನಸಿನ ಪ್ರಾಜ್ಜೆಕ್ಟ್ ಭೀಮ ವನ್ನು ಅತ್ಯಂತ ಪ್ರೀತಿ ಹಾಗೂ ಶ್ರದ್ದೆಯಿಂದ ಮಾಡಿ ಮುಗಿಸಿ,ಚಿತ್ರವನ್ನು ನವೆಂಬರ್ ನಲ್ಲಿ ತೆರೆಗೆ ತರುವ ಪ್ರಯತ್ನವನ್ನು ಮಾಡುತ್ತಿದ್ದಾರೆ..

ಭೀಮ ಚಿತ್ರದ ಪೋಸ್ಟರ್ ಲಾಂಚ್ ಆದ ದಿನಗಳಿಂದಲೂ ತನ್ನ ವೈಬ್ರೇಶನ್ ಹಾಗೆ ಉಳಿಸಿಕೊಂಡು ಬಂದಿದ್ದ ಚಿತ್ರ ತಂಡ ಇವತ್ತು,ಗೌರಿ ಗಣೇಶ ಹಬ್ಬದ ವಿಶೇಷವಾದ ದಿನದಂದೇ ತಮ್ಮ ಪ್ರೊಡಕ್ಷನ್ ನ ಭೀಮ ಚಿತ್ರದ ಸೈಕ್ ಹಾಡನ್ನು ಲಾಂಚ್ ಮಾಡಿ,ಮೊದಲ ಹೆಜ್ಜೆಯಲ್ಲಿ ಚೆಂಡನ್ನು ಬೌಂಡರಿಗೆ ಹಾಕಿದ್ದಾರೆ

Copyright@2018 Chitralahari | All Rights Reserved. Photo Journalist K.S. Mokshendra,