*ಟ್ರೈಲರ್‌ನಲ್ಲಿ ಮನ್ಮಥನ ಲೀಲಾವಿನೋದ*
ಅಂದು ಹಾಸ್ಯನಟ ಕಾಶೀನಾಥ್ ಅವರು ಮನ್ಮಥನ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದರು, ಈಗ ಮಿ.ಅಂಡ್ ಮಿಸಸ್ ಮನ್ಮಥ ಹೆಸರಿನಲ್ಲಿ ಚಿತ್ರವೊಂದು ತಯಾರಾಗಿದ್ದು, ಅದರಲ್ಲಿ ಸುಬ್ರಮಣಿ ಅವರು ಮನ್ಮಥನಾಗಿ ಕಾಣಿಸಿಕೊಂಡಿದ್ದಾರೆ. ಸುಬ್ರಮಣಿ ಅವರೇ ನಿರ್ದೇಶನ ಮಾಡಿರುವ "ಮಿಸ್ಟರ್ ಅಂಡ್ ಮಿಸ್ ಮನ್ಮಥ" ಚಿತ್ರದ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು, ಇದೊಂದು ಕಾಮಿಡಿ ಹಾಗೂ ಫ್ಯಾಮಿಲಿ ಎಂಟರ್‌ಟೈನರ್ ಕಥಾಹಂದರ ಇರುವ ಚಿತ್ರವಾಗಿದ್ದು, ಮೂರು ದಶಕಗಳಿಂದ ಸೀರಿಯಲ್, ಸಿನಿಮಾ, ನಾಟಕ ಅಂತ ಅಭಿನಯದಲ್ಲಿ ತೊಡಗಿಕೊಂಡಿರುವ ಎ.ಸುಬ್ರಮಣಿ ರಾಮಗೊಂಡನಹಳ್ಳಿ ಅವರು ಈ ಚಿತ್ರದ ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತು ನಿಭಾಯಿಸಿದ್ದಾರೆ. ಜೊತೆಗೆ ಚಿತ್ರದ ನಾಯಕನಾಗೂ ಸಹ ಅಭಿನಯಿಸಿದ್ದಾರೆ, ರೈತ ಕುಟುಂಬದಿಂದ ಬಂದ ಸುಬ್ರಮಣಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ಪಳಗಿ ಈಗ ಚಿತ್ರ ನಿರ್ಮಾಪಕನಾಗಿದ್ದಾರೆ, ಓರ್ವ ಶ್ರೀಮಂತ ಹಾಗೂ ಆಧುನಿಕ ಮನ್ಮಥನ ಕಥೆಯಿದಾಗಿದ್ದು, ಚಿತ್ರದಲ್ಲಿ ಶಕುಂತಲಾ, ಚಂದನಾ ಹಾಗೂ ವೈಶಾಲಿ(ಮಂಗಳಮುಖಿ) ಎಂಬ ಮೂವರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ, ನಾಯಕ ಸುಬ್ರಮಣಿ ಕಳೆದ 94ರಿಂದಲೂ ಒಬ್ಬ ಹೀರೋ ಆಗಬೇಕೆಂದು ಪ್ರಯತ್ನಿಸಿದೆ, ಐದಾರು ಸೀರಿಯಲ್ ಹಾಗೂ ಅರಬ್ಬೀ ಕಡಲತೀರದಲ್ಲಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆರಂಭದಲ್ಲಿ ಮನ್ಮಥ ಒಬ್ಬ ಮೂಗನಾಗಿದ್ದು, ಶ್ರೀಮಂತನಾದ ಆತನಲ್ಲಿರುವ ಹಣವನ್ನು ಲಪಟಾಯಿಸಲು ಜಾಕ್ ಅಂಡ್ ಜಿಲ್ ಎಂಬ ಇಬ್ಬರು ವ್ಯಕ್ತಿಗಳು ಆತನ ಹಿಂದೆ ಮೂವರು ಹುಡುಗಿಯರನ್ನು ಛೂ ಬಿಡುತ್ತಾರೆ, ಆದರೆ ಆತ ಯಾವುದೇ ಅಮಿಶಕ್ಕೂ ಬಗ್ಗಲ್ಲ, ಹೀಗೆ ಮನರಂಜನಾತ್ಮಕವಾಗಿ ಕಥೆಯನ್ನು ಹೇಳಿಕೊಂಡು ಹೋಗಿದ್ದೇವೆ. ಚಿತ್ರಕ್ಕೆ ಬೆಂಗಳೂರು, ಅರಸೀಕೆರೆ, ಮಂಗಳೂರು ಮತ್ತು ಉಡುಪಿ ಸುತ್ತಮತ್ತ ಚಿತ್ರೀಕರಣ ನಡೆಸಲಾಗಿದೆ. ಅಲ್ಲದೆ ಚಿತ್ರವನ್ನು ಅ.೬ಕ್ಕೆ ರಿಲೀಸ್ ಮಾಡುವ ಯೋಜನೆಯಿದೆ ಎಂದರು,
ನಂತರ ನಾಯಕಿ ವೈಶಾಲಿ ಮಾತನಾಡಿ ಸಿನಿಮಾದಲ್ಲಿ ಅಭಿನಯಿಸಬೇಕೆಂದು ತುಂಬಾ ಆಸೆಯಿತ್ತು, ನಮಗಾರೂ ಅವಕಾಶ ನೀಡಿರಲಿಲ್ಲ, ಸುಬ್ರಮಣಿ ಅವರು ಅವಕಾಶ ನೀಡಿದ್ದಾರೆ, ಚಿತ್ರದಲ್ಲಿ ರಮ್ಯ ಎಂಬ ಯುವತಿಯ ಪಾತ್ರವನ್ನು ಮಾಡಿದ್ದೇನೆ ಎಂದರು, ಮತ್ತೊಬ್ಬ ನಟಿ ಚಂದನಾ ಮಾತನಾಡಿ ನನ್ನದು ಒಬ್ಬ ಲವರ್ ಪಾತ್ರ, ನಾನು ಸಕಲೇಶಪುರದವಳು ಎಂದು ಹೇಳಿದರು, ಸಂಗೀತ ನಿರ್ದೇಶಕ ಕೆವಿನ್ ಎಂ. ಮಾತನಾಡಿ ಇದು ನನ್ನ ಸಂಗೀತ ನಿರ್ದೇಶನದ 8ನೇ ಚಿತ್ರ, ಚಿತ್ರದಲ್ಲಿ 4 ಹಾಡುಗಳಿದ್ದು, ಎಲ್ಲವೂ ವಿಭಿನ್ನವಾಗಿವೆ ಎಂದರು. ಮಜಾಭಾರತದಲ್ಲಿ ಅಭಿನಯಿಸಿದ ಬಸವರಾಜ ನಾಯಕನ ಸ್ನೇಹಿತನಾಗಿ ಕಾಣಿಸಿಕೊಂಡಿದ್ದಾರೆ, ಮತ್ತೊಬ್ಬ ಸ್ನೇಹಿತನಾಗಿ ರವಿ ಕುಂದಾಪುರ ನಟಿಸಿದ್ದಾರೆ, ಮಾನ್ಯ ಶ್ರೇಯಶ್ರೀ ಕ್ರಿಯೇಶನ್ಸ್ ನಿರ್ಮಾಣದ ಈ ಚಿತ್ರಕ್ಕೆ ವಿಜಯರಾಜ್ ಅವರ ಕಥೆ-ಸಂಕಲನ, ರವಿಶ್ರೀ ಮಾರುತಿ ಅವರ ಸಹನಿರ್ದೇಶನ ಮತ್ತು ಸಂಭಾಷಣೆ, ರವಿ ಅವರ ಛಾಯಾಗ್ರಹಣ, ಜೈಪ್ರಕಾಶ್ ಅವರ ನೃತ್ಯ ನಿರ್ದೇಶನ, ಶಿವು ಅವರ ಸಾಹಸ ನಿರ್ದೇಶನವಿದೆ.