Monser.Film News

Saturday, April 20, 2024

154

 

ಡಬ್ಬಿಂಗ್ ಕೆಲಸದಲ್ಲಿ "ಮಾನ್ ಸ್ಟಾರ್".

 

 

ಸ್ಯಾಂಡಲ್ವುಡ್ ನಲ್ಲಿ  ವಿಭಿನ್ನ ಪ್ರಯತ್ನಕ್ಕೆ ನಾನು ಸದಾ ಸಿದ್ಧ ಎನ್ನುತ್ತಾ ಕಥೆ , ಚಿತ್ರಕಥೆ , ಸಂಗೀತ , ಸಾಹಿತ್ಯ , ಸಂಭಾಷಣೆ ಜೊತೆಗೆ ನಿರ್ದೇಶನವನ್ನು ಮಾಡುತ್ತಿರುವ ಆರೋನ್ ಕಾರ್ತಿಕ್ ಸಾರಥ್ಯದ ಸಂಪೂರ್ಣ ಆಕ್ಷನ್ , ಮಾಸ್ ಥ್ರಿಲ್ಲರ್  ಸಿನಿಮಾ "ಮಾನ್ ಸ್ಟಾರ್".  ದುಡ್ಡಿನ ದುರಾಸೆಗೆ ಹಳ್ಳಿಯ ಸುಂದರ ಕುಟುಂಬದ ಮಗುವೊಂದು ತನ್ನ ತಂದೆ ತಾಯಿಯನ್ನು ಕಳೆದುಕೊಂಡು ಪಟ್ಟಣಕ್ಕೆ ಸೇರಿ ಎದುರಿಸುವ ಸಂಕಷ್ಟಗಳ ಸುತ್ತ ಬೆಸೆದಿರುವ ಕಥೆಯಲ್ಲಿ ಹಲವು ವ್ಯಕ್ತಿಗಳ ಕೈಚಳಕದ ಸುಳಿಯಲ್ಲಿ ಸಾಗುವ  ಈ ಒಂದು ವಿಭಿನ್ನ ಕಥೆಯಲ್ಲಿ ದೊಡ್ಡ ತಾರಾ ಬಳಗವೇ ಒಳಗೊಂಡಿದೆ.

 

 

 ಈ ಒಂದು ಚಿತ್ರವನ್ನು ಪುಟ್ಟರಾಜ್ ರೆಡ್ಡಿ ನಿರ್ಮಿಸಿದ್ದು , ಸತತವಾಗಿ ನಡೆದ ಚಿತ್ರೀಕರಣದಲ್ಲಿ ನಟರಾದ ಧರ್ಮ ಕೀರ್ತಿರಾಜ್ , ಥ್ರಿಲ್ಲರ್ ಮಂಜು ಹಾಗೂ ಪವನ್. ಎಸ್. ನಾರಾಯಣ್ ಮುಖ್ಯ ಭೂಮಿಯಲ್ಲಿ ಅಭಿನಯಿಸಿದ್ದು , ವಿಶೇಷ ಪಾತ್ರದಲ್ಲಿ ರಜನಿಕಾಂತ್ ಗೆಳೆಯ ರಾಜ್ ಬಹುದೂರ್ ಅಭಿನಯಿಸಿದ್ದಾರೆ. ಹಾಗೆಯೇ ಈ ಚಿತ್ರದ ನಿರ್ಮಾಪಕರ ಸುಪುತ್ರ ಸಂತೋಷ ರೆಡ್ಡಿ ಒಂದು ಸೂಪರ್ ಪವರ್ ರೀತಿಯ ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ಕುರಿರಂಗ , ಕಾಮಿಡಿ ತುಕಾಲಿ ಸಂತು , ಬಾಲ ರಾಜವಾಡಿ ,  ಜೋಗಿ ಪುಂಗ , ಯತಿರಾಜ್ , ಸಂಗೀತ ಅನಿಲ್ , ವಿಕ್ಟರಿ ವಾಸು , ಗಣೇಶ್ ರಾವ್, ದುಬೈ ರಫೀಕ್ , ನವಾಜ್ , ಸಂದೀಪ್ ಮಲಾನಿ , ಸುನಿಲ್ ಕುಂಬಾರ್, ಲಕ್ಷ್ಮಿಕಾಂತ್ ಸೂರ್ಯ ಸೇರಿದಂತೆ ಹಲವಾರು ಪ್ರತಿಭೆಗಳು ಅಭಿನಯಿಸಿದ್ದಾರೆ.

 

ಈ ಒಂದು ಚಿತ್ರಕ್ಕೆ ವಿನಯ್ ಮೂರ್ತಿ ಹಾಗೂ ಆರೋನ್ ಕಾರ್ತಿಕ್ ಸಂಭಾಷಣೆ ನೀಡಿದ್ದು , ಡಿಫ್ರೆಂಟ್ ಡ್ಯಾನಿ ಹಾಗೂ ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ , ಸೂರ್ಯೋದಯ ರವರ ಛಾಯಾಗ್ರಹಣ , ಆಯುರ್ ಸ್ವಾಮಿ ಸಂಕಲನ , ಮ್ಯಾನೇಜರ್ ಮಂಜುನಾಥ್ ಮೇಲ್ವಿಚಾರಣೆಯಲ್ಲಿ ಸುಮಾರು 36 ದಿನಗಳ ಅಮೋಘ ಚಿತ್ರೀಕರಣ ಮಾಡಿರುವ ಆಕ್ಷನ್ , ಥ್ರಿಲ್ಲರ್ ಜೊತೆಗೆ ಡ್ರಗ್ಸ್ ವಿರುದ್ಧ ಸಿಡಿದೆಳುವ  ಚಿತ್ರ ಇದಾಗಿದ್ದು , ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು , ಈಗ ಡಬ್ಬಿಂಗ್  ಕೆಲಸದಲ್ಲಿ ತೊಡಗಿಕೊಂಡಿದೆ. ಈ ಚಿತ್ರದಲ್ಲಿ ಆನೆ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು , ಅದು ಸಿಜಿ ಕೆಲಸದಲ್ಲಿ ಅದ್ದೂರಿಯಾಗಿ ಮೂಡಿ ಬಂದಿದೆಯಂತೆ. ಸದ್ಯದಲ್ಲೇ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು , ಬಹುಮುಖ ಪ್ರತಿಭೆ ನಿರ್ದೇಶಕ ಆರೋನ್ ಕಾರ್ತಿಕ್  ಬಹುತೇಕ  ವಿಭಾಗದಲ್ಲಿ ತಮ್ಮನ್ನ ತೊಡಗಿಸಿಕೊಂಡು , ಈ ಒಂದು ಚಿತ್ರವನ್ನು ಅದ್ದೂರಿಯಾಗಿ ತೆರೆಯ ಮೇಲೆ ತರಲು ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,