Ronny.Film News

Sunday, September 08, 2024

25

 

*ಟೈಟಲ್ ಸಾಂಗ್ ನಲ್ಲೇ ಮೋಡಿ ಮಾಡಿದ  ‘ರಾನಿ* ’* . 

 

 *ಕಿರಣ್ ರಾಜ್ ಅಭಿನಯದ ಈ ಚಿತ್ರ ಸೆಪ್ಟೆಂಬರ್ 12 ರಂದು ತೆರೆಗೆ* .

 

ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಕಿರಣ್ ರಾಜ್ ನಾಯಕನಾಗಿ ನಟಿಸಿರುವ "ರಾನಿ" ಚಿತ್ರದ ಟೈಟಲ್ ಸಾಂಗ್ ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ಚಿತ್ರಲೇಖಕ ಜೆ.ಕೆ.ಭಾರವಿ ಪ್ರಮೋದ್ ಮರವಂತೆ ಬರೆದು, ಸಚಿನ್ ಬಸ್ರೂರ್ ಸಂಗೀತ ನೀಡಿರುವ "ರಾನಿ" ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಗುರುತೇಜ್ ಶೆಟ್ಟಿ ನಿರ್ದೇಶನದ ಹಾಗೂ ಸ್ಟಾರ್ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರ ಸೆಪ್ಟೆಂಬರ್ 12 ಗುರುವಾರ ಬಿಡುಗಡೆಯಾಗಲಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

 

"ರಾನಿ" ಚಿತ್ರ ಸಾಗಿ ಬಂದ ಬಗ್ಗೆ ಮಾತನಾಡಿದ ನಿರ್ದೇಶಕ ಗುರುತೇಜ್ ಶೆಟ್ಟಿ, ಇದೊಂದು ಕುಟುಂಬ ಸಮೇತ ನೋಡಬಹುದಾದ ಚಿತ್ರ. ಆಕ್ಷನ್, ಸೆಂಟಿಮೆಂಟ್, ಥ್ರಿಲ್ಲರ್ ಎಲ್ಲದರ ಸಂಗಮವೇ "ರಾನಿ". ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳಿರುವ " ರಾನಿ" ಚಿತ್ರ, ಟೀಸರ್, ಹಾಡುಗಳು ಹಾಗೂ ಟ್ರೇಲರ್ ಮೂಲಕ ಈಗಾಗಲೇ ಜನರ ಮನ ಗೆದ್ದಿದೆ. ಯಾವುದೇ ಕೊರತೆ ಇಲ್ಲದೆ ನಿರ್ಮಾಪಕರು ಅದ್ದೂರಿಯಾಗಿ ನಿರ್ಮಾಣ‌ ಮಾಡಿದ್ದಾರೆ.  ಅಷ್ಟೇ ಅದ್ದೂರಿಯಾಗಿ ಸೆಪ್ಟೆಂಬರ್ 12 ರಂದು 200 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ "ರಾನಿ" ಬಿಡುಗಡೆಯಾಗಲಿದೆ ಎಂದರು.

ಇದು ಬರೀ ಚಿತ್ರವಲ್ಲ. ನನ್ನ ಕನಸು. ನನ್ನ ಕನಸಿಗೆ ಆಸರೆಯಾದವರು ನಮ್ಮ ನಿರ್ಮಾಪಕರು.‌ ನನ್ನ ಮೇಲೆ ಭರವಸೆಯಿಟ್ಟು ಅಪಾರವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಾಪಕರಾದ ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗಡೆ ನಿರ್ಮಿಸಿದ್ದಾರೆ. ಗುರುತೇಜ್ ಶೆಟ್ಟಿ ನಿರ್ದೇಶನ, ಪ್ರಮೋದ್ ಮರವಂತೆ ಸಾಹಿತ್ಯ, ರಾಘವೇಂದ್ರ ಬಿ ಕೋಲಾರ ಛಾಯಾಗ್ರಹಣ ಹಾಗೂ ಮಣಿಕಾಂತ್ ಕದ್ರಿ ಅವರ ಸಂಗೀತ ಎಲ್ಲವೂ ಉತ್ತಮವಾಗಿದೆ. ಆಕ್ಷನ್ ಸನ್ನಿವೇಶಗಳು ಈ ಚಿತ್ರದ ಹೈಲೆಟ್ ಎನ್ನಬಹುದು. ನಾನು "ರಾನಿ" ಹಾಗೂ "ರಾಘವ" ಎರಡು ಲುಕ್ ಗಳಲ್ಲಿ ಕಾಣಿಸಿಕೊಂಡಿದ್ದೇನೆ‌ ಎಂದು ನಾಯಕ ಕಿರಣ್ ರಾಜ್ ತಿಳಿಸಿದರು.

 

ನಿರ್ಮಾಪಕರಾದ ಚಂದ್ರಕಾಂತ್ ಪೂಜಾರಿ, ಉಮೇಶ್ ಹೆಗಡೆ ಹಾಗೂ ಗಿರೀಶ್ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎಂದರು.

 

ನಾಯಕಿಯರಾದ ರಾಧ್ಯ ಹಾಗೂ ಸಮೀಕ್ಷ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಚಿತ್ರದಲ್ಲಿ ನಟಿಸಿರುವ ಯಶ್ ಶೆಟ್ಟಿ, ಕರಿಸುಬ್ಬು, ಧರ್ಮಣ್ಣ ಮುಂತಾದ ಕಲಾವಿದರು ಹಾಗೂ ಛಾಯಾಗ್ರಾಹಕ ರಾಘವೇಂದ್ರ ಬಿ ಕೋಲಾರ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಮುಂತಾದವರು "ರಾನಿ" ಕುರಿತು ಮಾತನಾಡಿದರು.

Copyright@2018 Chitralahari | All Rights Reserved. Photo Journalist K.S. Mokshendra,