Langoti Man.News

Thursday, September 12, 2024

136

 

*ಸೆಪ್ಟಂಬರ್ 20ಕ್ಕೆ ಬಿಡುಗಡೆಯಾಗಲಿದೆ ಸಂಜೋತ ಭಂಡಾರಿ ನಿರ್ದೇಶನದ  "ಲಂಗೋಟಿ ಮ್ಯಾನ್"* .

 

 ತನು ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಸಂಜೋತ ಭಂಡಾರಿ ನಿರ್ದೇಶನದ " ಲಂಗೋಟಿ ಮ್ಯಾನ್" ಚಿತ್ರದ ಟ್ರೇಲರ್ ಬಿಡುಗಡೆ,  ಹಾಡಿನ ಪ್ರದರ್ಶನ ಮತ್ತು ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ಚಿತ್ರ ಸೆಪ್ಟೆಂಬರ್ 20ರಂದು ಬಿಡುಗಡೆಯಾಗಲಿದೆ. ಈ ವೇಳೆ ಚಿತ್ರತಂಡ "ಲಂಗೋಟಿ ಮ್ಯಾನ್ " ಬಗ್ಗೆ ಮಾಹಿತಿ ಹಂಚಿಕೊಂಡಿತ್ತು.

 

ನಿರ್ದೇಶಕಿ ಸಂಜೋತ ಭಂಡಾರಿ ಮಾತನಾಡಿ, ’ಲಂಗೋಟಿ ಮ್ಯಾನ್’ ಚಿತ್ರ ಅನಗತ್ಯ ಕಾರಣಕ್ಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಚಿತ್ರ ನೋಡಿದ ಮೇಲೆ  ಶೀರ್ಷಿಕೆ ಸೂಕ್ತ ಅಂತ ಗೊತ್ತಾಗಲಿದೆ. ಯಾವ ಸಮಯದಾಯವನ್ನು ಅವಮಾನ ಮಾಡುವ ಮತ್ತು ನೋಯಿಸುವ ಇದ್ದೇಶ ಹೊಂದಿಲ್ಲ. ಸೆಪ್ಟೆಂಬರ್ 20 ರಂದು ಚಿತ್ರ ಬಿಡುಗಡೆಯಾಗಲಿದೆ. ಎಲ್ಲರಿಗೂ ಇಷ್ಟವಾಗಲಿದೆ ಎಂದು ಹೇಳಿದರು.

 

 ಲಂಗೋಟಿ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ತಾತನಿಗೆ ಸಂಪ್ರದಾಯ ಆಚಾರ ವಿಚಾರ ಪಾಲಿಸಬೇಕು ಎನ್ನುವ ನಂಬಿಕೆ. ಸಂಪ್ರದಾಯ ಹೇರಿಕೆಯಿಂದ ನಾಯಕ ರೆಬೆಲ್ ಆಗುತ್ತಾನೆ. ಕಥೆ ಆಸಕ್ತಿಕರವಾಗಿದೆ. ಇದೊಂದು ಉತ್ತಮ ಕೌಟುಂಬಿಕ ಚಿತ್ರ ಎಂದರು ನಟ ಧರ್ಮೇಂದ್ರ.

ನಟ ಆಕಾಶ್ ರಾಂಬೋ ಮಾತನಾಡಿ ,ತಾತ ಮೊಮ್ಮಗ ನ ಸುತ್ತ ಮುತ್ತ ನಡೆಯುವ ಕಥೆ. ತಾತನಿಗೆ ಮೊಮ್ಮಗ ಲಂಗೋಟಿ ಹಾಕಿಕೊಳ್ಳಬೇಕು‌ ಎಂಬ ಬಯಕೆ. ಮೊಮ್ಮಗನಿಗೆ ಅಂಡರ್ ವೇರ್ ಹಾಕಿಕೊಳ್ಳುವ ಆಸೆ.  ತಾತಾ ಇರುವವರೆಗೂ ಅಂಡರ್ ವೇರ್ ಹಾಕಲು ಬಿಡಲ್ಲ. ಅವರು ಸಾಯುತ್ತಿಲ್ಲ. ನಾನು ಅಂಡರ್ ವೇರ್ ಹಾಕಲು ಆಗುತ್ತಿಲ್ಲ‌ ಎಂಬುದು ಮೊಮ್ಮಗನ ಕೊರಗು. ಈ ರೀತಿಯ ಕಥೆಯನ್ನು ಹಾಸ್ಯ ರೂಪದಲ್ಲಿ ಚಿತ್ರದ ಮೂಲಕ ತೆರೆಗೆ ತರಲಾಗುತ್ತಿದೆ ಎಂದರು.

 

ಈ ಚಿತ್ರದಲ್ಲಿ ನನ್ನದು  ಪೊಲೀಸ್ ಅಧಿಕಾರಿಯ ಪಾತ್ರ. ಜೊತೆಗೆ ಇನ್ನೊಂದು ಪ್ರಮುಖ ಪಾತ್ರ ಚಿತ್ರದಲ್ಲಿದೆ. ಅದು ಏನು ಎನ್ನುವುದನ್ನು ಚಿತ್ರದಲ್ಲಿಯೇ ನೋಡಬೇಕು. ಚಿತ್ರ ನೋಡದೆ ಯಾರೂ ಕೂಡ ಅನಗತ್ಯವಾಗಿ ಹೇಳಿಕೆ ನೀಡುವುದು ಸರಿಯಲ್ಲ. ಚಿತ್ರ ನೋಡಿದ ಮೇಲೆ ಚಿತ್ರಕ್ಕೆ ಶೀರ್ಷಿಕೆ ಏಕೆ ಇಟ್ಟಿದ್ದೇವೆ ಎನ್ನುವುದು ತಿಳಿಯಲಿದೆ ಎಂದು ನಟಿ ಸಂಹಿತ ವಿನ್ಯಾ ತಿಳಿಸಿದರು.

 

ನಟ ಹುಲಿ ಕಾರ್ತಿಕ್ ಮಾತನಾಡಿ, ’ನೀನೇನು ಪುಟಗೋಸಿ ಮಾಡಿದ್ದೀಯಾ ಅಂತ ಯಾರು ಕೇಳುವ ಹಾಗಿಲ್ಲ. ಲಂಗೋಟಿ ಮ್ಯಾನ್ ಸಿನಿಮಾ ಮಾಡಿದ್ದೇನೆ ಎಂದು ದೈರ್ಯವಾಗಿ ಹೇಳುತ್ತೇನೆ.  ಚಿತ್ರದಲ್ಲಿ ಪ್ರಮುಖ ಪಾತ್ರ ಸಿಕ್ಕಿದೆ. ಕಾಮಿಡಿಯಾಗಿ ಹಲವು ಗಂಭೀರವಾದ ವಿಷಯ ವನ್ನು ಚಿತ್ರದ ಮೂಲಕ ಹೇಳಿದ್ದೇವೆ. ಟೀಸರ್ ನಲ್ಲಿ ನನ್ನ ದೃಶ್ಯಗಳು ಇಲ್ಲ. ಮೊದಲೇ ನಿರ್ದೇಶಕರು ಮಾತನಾಡಿ ಪಾತ್ರವನ್ನು ಜನರು ಸಿನಿಮಾದಲ್ಲಿ ಎಂಜಾಯ್ ಮಾಡಲಿ  ಎನ್ನುವುದು’ ನಮ್ಮ ಉದ್ದೇಶ ಎಂದರು .

 

ಮತ್ತೊಬ್ಬ ನಟಿ ಸ್ನೇಹ ಖುಷಿ, ಒಳ್ಳೆಯ ಪಾತ್ರ ಸಿಕ್ಕಿದೆ. ನಿರ್ದೇಶಕರು ಕಥೆ ಹೇಳಿದಾಗ ಹೇಗೆ ಸಿನಿಮಾ ಮಾಡ್ತಾರೆ ಅಂದುಕೊಂಡಿದ್ದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿದರು

 

ಕಲಾವಿದರಾದ ಪಲ್ಟಿ ಗೋವಿಂದ್, ಸಾಯಿ ಪವನ್ ಕುಮಾರ್ ಮುಂತಾದವರು ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು.

Copyright@2018 Chitralahari | All Rights Reserved. Photo Journalist K.S. Mokshendra,