ಡಾ.ವಿಷ್ಣುವರ್ಧನ್ ನೆನಪಿಸುವ ಸಿಂಹದಹಾದಿ ಟೆಲಿಚಿತ್ರ
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ನಮ್ಮನ್ನು ಅಗಲಿ ಹದಿನೈದು ವರ್ಷ ಆಗಿದೆ. ಆದರೂ ಅಭಿಮಾನಿಗಳು ಸೆಪ್ಟಂಬರ್ ೧೮ ಹುಟ್ಟುಹಬ್ಬ, ಡಿಸೆಂಬರ್ ೩೦ ಪುಣ್ಯದಿನದಂದು ಏನಾದರೂಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತಾರೆ. ಈ ನಿಟ್ಟಿನಲ್ಲಿ ಜಿ.ಕೆ.ಶಶಿರಾಜ್ ದೊರೆ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಸಿಂಹದ ಹಾದಿ’ ಟೆಲಿಚಿತ್ರವು ಮೂವತ್ತು ನಿಮಿಷ ಅವಧಿ ಇರುತ್ತದೆ. ‘ಹೆಜ್ಜೆಜ್ಜೆಲಿ ಅಚ್ಚೊತ್ತಿದೆ ಅಭಿಮಾನದ ಧರ್ಮ’ ಎಂಬ ಅಡಿಬರಹವಿದೆ.
ಮೊನ್ನೆಯಷ್ಟೇ ಚಿತ್ರದ ಪ್ರದರ್ಶನ ನಡೆಯಿತು. ಹಿರಿಯ ನಿರ್ದೇಶಕರುಗಳಾದ ಎಸ್.ವಿ.ರಾಜೇಂದ್ರಸಿಂಗ್ ಬಾಬು, ಜೊಸೈಮನ್, ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಹಿರಿಯ ಪತ್ರಕರ್ತ ಗಣೇಶ್‌ಕಾಸರಗೂಡು, ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಬಾ.ಮ.ಹರೀಶ್, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಮುಂತಾದವರು ಹಾಜರಿದ್ದು, ಡಾ.ವಿಷ್ಣುವರ್ಧನ್ ಅವರೊಂದಿಗಿನ ಅನುಭವಗಳನ್ನು ಹಂಚಿಕೊಂಡರು. ಜಿ.ಕೆ.ನಿಸಿಫೈಲ್ಸ್ ಬ್ಯಾನರ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ.