Gor Gad.Film News

Monday, December 30, 2024

32

 

ಗೋರ್ ಗಡ್ ಟೀಸರ್ ಬಿಡುಗಡೆ

 

        ಪ್ರಸ್ತುತ ಚಂದನವನದಲ್ಲಿ ಎಲ್ಲಾ ಕೆಲಸ ಮುಗಿಸಿದ ನಂತರ ಮಾಧ್ಯಮದ ಮುಂದೆ ಬರುವುದು. ಪ್ರಾರಂಭದಿಂದಲೂ ಸದಾ ಸುದ್ದಿಯಲ್ಲಿರುವುದು. ಅದೇ ರೀತಿಯಲ್ಲಿ ’ಗೋರ್ ಗಡ್’ ಎನ್ನುವ ಚಿತ್ರವು ಎರಡನೇ ಸಾಲಿಗೆ ಸೇರಿಕೊಳ್ಳುತ್ತದೆ. ಶೂಟಿಂಗ್‌ಗೆ ಹೋಗುತ್ತಿದ್ದೇವೆಂದು ಹೇಳಿಕೊಳ್ಳಲೆಂದು ಟೀಸರ್ ಬಿಡುಗಡೆ ಸಮಾರಂಭವನ್ನು ಏರ್ಪಾಟು ಮಾಡಿದ್ದರು. ದಾವಣಗೆರೆಯ ಶಶಿಕುಮಾರ್.ಜೆ.ಕೆ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಾಲ್ಕನೇ ಬಾರಿ ನಿರ್ದೇಶನ ಮಾಡುತ್ತಿದ್ದಾರೆ.

 

      ಹೊಸೂರುನಲ್ಲಿ ಅಪ್ಪ ಕಾರು ಚಾಲಕರಾಗಿದ್ದರು. ಡಿಎಸ್‌ಕೆ ಗ್ರೂಪ್ ಶುರು ಮಾಡಿ ಉದ್ಯಮದಲ್ಲಿ ಯಶಸ್ಸು ಕಂಡಿದ್ದರಿಂದ ಸಮಾಜ ಸೇವೆಯಲ್ಲಿ ನಿರತನಾಗಿದ್ದೇನೆ. ಇವರುಗಳಿಗೆ ನನ್ನ ಕಡೆಯಿಂದ ಏನಾದರೂ ಮಾಡಬೇಕೆಂಬ ಬಯಕೆಯಿಂದ ಡಿಎಸ್‌ಕೆ ಪ್ರೊಡಕ್ಷನ್ ಅಡಿಯಲ್ಲಿ ಬಂಡವಾಳ ಹೂಡುವ ಜತೆಗೆ ನಾಯಕನಾಗಿ ಅಭಿನಯಿಸುತ್ತಿದ್ದೇನೆ ಎಂಬುದು ಡಿಎಸ್‌ಕೆ.ಧನುಷ್ ನಾಯ್ಡು ಮಾತಾಗಿತ್ತು.

      ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ನಾನು ಮೂಲತ: ಗಾಯಕ. ಹಾಡು ಬರೆಯುವ ಹವ್ಯಾಸ ಇದೆ. ಕಳೆದ ವರ್ಷ ಪುನೀತ್‌ರಾಜ್‌ಕುಮಾರ್ ಆಲ್ಬಂಗೆ ಧ್ವನಿಯಾಗಿದ್ದೆ. ಗೋರ್ ಅಂದರೆ ಸಮುದಾಯ. ಅವರು ಸತ್ಯ, ನ್ಯಾಯ, ನೀತಿಗೆ ತಲೆ ಬಾಗುತ್ತಾರೆ. ಗಡ್ ಎನ್ನುವುದು ಸಾಮ್ರಾಜ್ಯ. ಬಂಜಾರ ಜನಾಂಗದ ಆಚರಣೆ, ಆಚಾರ ವಿಚಾರ, ಲಂಬಾಣಿಗಳ ಉಡುಗೆ ತೊಡುಗೆ, ಪೂಜಿಸುವ ವಿಧಾನ, ಎಲ್ಲೂ ಸಿಗದಂತ ಆಭರಣವನ್ನು ತೊಡುತ್ತಾರೆ. ಆದರೆ ಆಧುನಿಕತೆಯ ಭರಾಟೆಯಲ್ಲಿ ಇವೆಲ್ಲವೂ ನಶಿಸಿ ಹೋಗುತ್ತಿದೆ. ವಿದ್ಯಾವಂತರು ಸಿಟಿಗೆ ಬರುತ್ತಿದ್ದಾರೆ. ಕರ್ನಾಟಕದಲ್ಲಿ 45 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದರೂ ಪ್ರಯೋಜನವಾಗುತ್ತಿಲ್ಲ. ಅದರಿಂದಲೇ ನಮ್ಮ ಜಾತಿ, ಸಂಸ್ಕ್ರತಿ ಉಳಿಬೇಕು. ಇದನ್ನು ಎಲ್ಲರಿಗೂ ಅರಿವು ಮೂಡಿಸುವಂತೆ ಹೋರಾಟ ಮಾಡಬೇಕು. ಅವನತಿಗೆ ಹೋಗುತ್ತಿರುವ ಜನಾಂಗವನ್ನು ಹೇಗೆ ಮುನ್ನಲೆಗೆ ತರಬೇಕು ಎನ್ನುವ ಅಂಶಗಳನ್ನು ತೋರಿಸಲಾಗುತ್ತಿದೆ. ಹೂವಿನ ಹಡಗಲಿ, ದಾವಣಗೆರೆ, ಚಿತ್ರದುರ್ಗ, ಹೊಸದುರ್ಗ, ಹೊಸೂರು ಕಡೆಗಳಲ್ಲಿ ಜನವರಿ ಎರಡನೇ ವಾರದಿಂದ ಚಿತ್ರೀಕರಣ ಶುರು ಮಾಡಲು ಯೋಜನೆ ರೂಪಿಸಲಾಗಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಲಂಬಾಣಿ, ಮರಾಠಿ ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ನಿಮ್ಮಗಳ ಪ್ರೋತ್ಸಾಹ ಬೇಕೆಂದು ಕೋರಿದರು.

 

      ತನು ನಾಯಕಿ. ಉಳಿದಂತೆ ಗೀತಾಮಿಲನ್, ಭವ್ಯಪ್ರವೀಣ್, ವಿಜಯ್‌ಕುಮಾರ್, ಸೂಪರ್ ಕಮಲ್, ನಾರಾಯಣ್ ಮುಂತಾದವರು ನಟಿಸುತ್ತಿದ್ದಾರೆ. ಐದು ಹಾಡುಗಳಿಗೆ ಸಾಹಿತ್ಯ, ಕಥೆ ಮತ್ತು ಸಂಗೀತ ಸಂಯೋಜಿಸುತ್ತಿರುವುದು ಕುಬೇರ ನಾಯಕ್.ಎಲ್. ಛಾಯಾಗ್ರಹಣ ಧನ್‌ಪಾಲ್, ಸಂಕಲನ ರವಿರಾಥೋಡ್.ಸಿಕೆ ನಿರ್ವಹಿಸುತ್ತಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,