ಕ್ಷುದ್ರ ರುದ್ರನಾಗಿ ಗಣೇಶ್
‘ಕೃಷ್ಣಂ ಪ್ರಣಯ ಸಖಿ’ ಯಶಸ್ಸಿನ ಖುಷಿಯಲ್ಲಿರುವ ಗಣೇಶ್ ಈಗ ‘ಪಿನಾಕ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಶೀರ್ಷಿಕೆ ಹಾಗೂ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ತೆಲುಗು, ಕನ್ನಡ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿರುವ ಟಿ.ಜಿ.ವಿಶ್ವಪ್ರಸಾದ್ ಅವರು ಪೀಪಲ್ ಮೀಡಿಯಾ ಫ್ಯಾಕ್ಟರಿಯಿಂದ ೪೯ನೇ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಹಲವು ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಧನಂಜಯ್ ನಿರ್ದೇಶಕರಾಗಿ ಬಡ್ತಿ ಹೊಂದಿದ್ದಾರೆ.
ಗಣೇಶ್ ಪ್ರಥಮ ಬಾರಿ ಕ್ಷುದ್ರ ಮತ್ತು ರುದ್ರನ ಅವತಾರದಲ್ಲಿ ಇಂದೆಂದೂ ಕಾಣಿಸದಂತ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಚಿಕ್ಕವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಬಂದವನು. ಅಸಿಸ್ಟೆಂಟ್ ಡ್ಯಾನ್ಸ್ ಮಾಸ್ಟರ್ ಆಗಿ ಹತ್ತು ಸಾವಿರಕ್ಕೂ ಹೆಚ್ಚು ಹಾಡುಗಳಲ್ಲಿ ಕೆಲಸ ಮಾಡಿದ್ದು, ಸುಮಾರು ೫೦೦ಕ್ಕೂ ಅಧಿಕ ಸಿನಿಮಾಗಳಿಗೆ ಕೋರಿಯೋಗ್ರಾಫರ್ ಆಗಿರುತ್ತೇನೆ. ಸಿನಿಮಾವು ಪಿರಿಯಾಡಿಕ್ ಡ್ರಾಮಾ ಹಿನ್ನಲೆಯಲ್ಲಿ ಮಾಟ ಮಂತ್ರದ ಎಳೆಯ ಮೂಲಕ ಹೊಸ ತರದ ಕಥೆಯನ್ನು ಹೇಳಲಿದ್ದೇವೆ. ಟೈಟಲ್‌ಗೆ ಮತ್ತೋಂದು ಪದ ತ್ರಿಶೂಲ ಎನ್ನುತ್ತಾರೆ. ಅದ್ಬುತ ವಿಎಫ್‌ಎಕ್ಸ್, ದೃಶ್ಯಗಳು ನೋಡುಗರಿಗೆ ಹೊಸತನವನ್ನು ನೀಡಲಿದೆ ಎಂದರು.
ನಿರ್ಮಾಪಕಿ ವಂದನ ಕಥೆ, ರಘುನಿಡುವಳ್ಳಿ ಸಂಭಾಷಣೆ. ಉಳಿದಂತೆ ನಾಯಕಿ ಕಲಾವಿದರ ಆಯ್ಕೆ ಪ್ರಕ್ರಿಯೆ ಶುರುವಾಗಿದೆ.