Mislay.News

Thursday, February 27, 2025

23

 

*ಅಪರೂಪದ ಶಸ್ತ್ರ ಚಿಕಿತ್ಸೆ ಕುರಿತ ಸಾಕ್ಷ ಚಿತ್ರ "ಮಿಸ್ಲೆ"*

 

 *ಮಾನವೀಯತೆಯೇ ಮುಖ್ಯ ಎಂದು ಸಾರುವ ಈ ಸಾಕ್ಷ್ಯಚಿತ್ರಕ್ಕೆ ಸಂಸದ ಡಾ||ಸಿ.ಎನ್ ಮಂಜುನಾಥ್, ನಟಿ ಪ್ರಿಯಾಂಕ ಉಪೇಂದ್ರ ಮತ್ತು S .ರವಿ. ಐಪಿಎಸ್ ರವರ ಸಾಥ್*

 

ವೈದ್ಯಕೀಯ ಲೋಕದಲ್ಲಿ ಆಗಾಗ ಅಚ್ಚರಿಗಳು ನಡೆಯುತ್ತವೆ ಇಂತಹ ಘಟನೆಗಳನ್ನು ಮುಂದಿಟ್ಟುಕೊಂಡು ನಿರ್ದೇಶಕ ಎ. ಪರಮೇಶ್ " ಮಿಸ್ಲೆ" ಸಾಕ್ಷ್ಯಚಿತ್ರ ನಿರ್ದೇಶನ ಮಾಡಿದ್ದು ಮನಮುಟ್ಡುವ ರೀತಿ ಕಟ್ಟಿಕೊಟ್ಟಿದ್ದಾರೆ.

ವೈದ್ಯಕೀಯ ಕ್ಷೇತ್ರಕ್ಕೆ ಸಾವಲಾಗಿದ್ದ ಕಾಯಿಲೆಯಿಂದ ಡಾಕ್ಟರ್ ಹೇಗೆ ರೋಗಿಯನ್ನು ಪಾರುಮಾಡಿದರು ಎಂಬುದನ್ನು ಆಂಧ್ರಪ್ರದೇಶದ ಅನಂತಪುರದ  ರೋಗಿಯೊಬ್ಬರು ಕೋವಿಡ್ ಸೋಂಕು ತಗುಲಿ ಅದರಿಂದ ಪಾರಾಗುವುದರೊಳಗೆ ಇನ್ನೊಂದು ಕಾಯಿಲೆಗೆ ತುತ್ತಾಗಿದ್ದ ಘಟನೆಯು ಜೀವನ್ಮರಣದ ಹೋರಾಟ ಮಾಡುವಂತೆ ಮಾಡಿತ್ತು. 

 ಈ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಕುಟುಂಬವು ಎದುರಿಸಿದ ಸಮಸ್ಯೆಗಳು ರೋಗಿಯ ಪತ್ನಿ ಮತ್ತು ಸಹೋದರ ಬೆನ್ನಿಗೆ ನಿಂತ ಮನ ಮಿಡಿಯುವ ನೈಜ ಘಟನೆಯನ್ನು 48 ನಿಮಿಷಗಳ ಅವಧಿಯಲ್ಲಿ ಚಿತ್ರೀಕರಿಸಿ ತೋರಿಸಲಾಗೆದೆ.

ಮೂಳೆ ರೋಗ ತಜ್ಞರಾದ ಡಾ. ಗೋಪಾಲ ಕೃಷ್ಣ ಅವರು ವೃತ್ತಿಯಲ್ಲಿ ರಿಸ್ಕ್ ತೆಗೆದುಕೊಂಡು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಆಂಧ್ರಪ್ರದೇಶದ ರೋಗಿಗೆ ಪುನರ್ ಜನ್ಮ ನೀಡಿದ ಕಥೆಯನ್ನು "ಮಿಸ್ಲೆ " ಎಂಬ ಸಾಕ್ಷ್ಯಚಿತ್ರದ ಮೂಲಕ ಚಿತ್ರೀಕರಿಸಿದೆ.

 ಸ್ವತಃ ಡಾಕ್ಟರ್ ಆಗಿರುವ ಸುಜಾತ ಎಂಬುವರು

ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಪತಿಯ ಸಾಧನೆಯನ್ನು  ಸಮಾಜಕ್ಕೆ ಸಾಮಾಜಿಕ ಜಾಗೃತಿಯನ್ನು ಮುಡಿಸಲು, ಡಾ.ಸುಜಾತಕೃಷ್ಣ ಪ್ರೊಡಕ್ಷನ್ ಹೌಸ್ ಎಂಬ ನಿರ್ಮಾಣದಲ್ಲಿ ಬಂದಿರುವ ಸಾಕ್ಷ್ಯಚಿತ್ರಕ್ಕೆ ಎ.ಪರಮೇಶ್ ನಿರ್ದೇಶನ ಮಾಡಿದ್ದಾರೆ.

ಸಂಸದ ಡಾ.ಸಿ ಎನ್ ಮಂಜುನಾಥ್ ಮತ್ತು ಹಿರಿಯ ಐಪಿಎಸ್ ಅಧಿಕಾರಿ ರವಿ. C ಮತ್ತು ನಟಿ ಪ್ರಿಯಾಂಕ ಉಪೇಂದ್ರ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿ ಶುಭ ಹಾರೈಸಿದರು.

 

ಈ ವೇಳೆ ಚಿಕಿತ್ಸೆಗೆ ಒಳಗಾಗಿ ಪುನರ್ ಜನ್ಮ ಪಡೆದ ರೋಗಿ, ಅವರ ಪತ್ನಿ ಮತ್ತು ಸಹೋದರ ಕೂಡ ಆಗಮಿಸಿದ್ದು ವಿಶೇಷವಾಗಿತ್ತು. ಸಾಕ್ಷ್ಯಚಿತ್ರ ನೈಜವಾಗಿ ಬರಲಿ ಎನ್ನುವ ಉದ್ದೇಶದಿಂದ ರೋಗಿಯ ಮಾತೃ ಭಾಷೆ ತೆಲುಗು ಮತ್ತು ವೈಜ್ಞಾನಿಕ ವಿವರಣೆಗಳಿಗೆ ಇಂಗ್ಲಿಷ್ ಭಾಷೆಯ ಉಪಯೋಗ ಮಾಡಲಾಗಿದೆ.

 

ಡಾಕ್ಯುಮೆಂಟರಿ ಚಿತ್ರದಲ್ಲಿ ನಿಜ ಪಾತ್ರಕ್ಕೆ ಜೀವ ತುಂಬಲು, ನಟ ಮಹೇಶ್ ರಾಜ್, ಶ್ರೀಪರಿಣಿತಿ ಮತ್ತು ನಾಗರಾಜ್ ಶೆಟ್ಟಿ ಅಭಿನಯಿಸಿದ್ದಾರೆ.

 

 ಡಾ.ಮಂಜುನಾಥ್ ಮಾತನಾಡಿ ಹಣ ಮುಖ್ಯ. ಹಾಗಂತ ಮಾನವೀಯತೆ ಮರೆಯಬಾರದು. ಚಿಕಿತ್ಸೆ ಮೊದಲು ಎನ್ನುವ ನೀತಿಯನ್ನು ವೈದ್ಯರು ಅಳವಡಿಸಿಕೊಳ್ಳಬೇಕು. ಡಾ. ಗೋಪಾಲಕೃಷ್ಣ ಮತ್ತು ಅವರ ತಂಡ  ಪ್ರಪಂಚದ ಅಪರೂಪದ ಒಂದು ಕಾಯಿಲೆಯಾದ (Heterotopic ossification in covid victims) ಭಾರತದಲ್ಲಿ ಮೊದಲು ಯಶಸ್ವಿಯಾಗಿದ್ದು ಈ ಕಾಯಿಲೆಗೆ ತುತ್ತಾದ ವ್ಯಕ್ತಿಗೆ 8 ಗಂಟೆಗಳ ಧೀರ್ಘವಾದಿಯಲ್ಲಿ ಒಂದೇ ಬಾರಿ ಮೂರು 3 

ಶಸ್ತ್ರಚಿಕಿತ್ಸೆ ಮಾಡಿ ರೋಗಿಗೆ ಪುನರ್ ಜನ್ಮ ನೀಡಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಈ ಅಪರೂಪದ ಸಾಧನೆ ಭಾರತೀಯರು ಅದರಲ್ಲೂ ಕನ್ನಡ ನಾಡೆ ಹೆಮ್ಮೆ ಪಡುವಂತೆ ಮಾಡಿದೆ.

ಈ ಸಾಧನೆಗೈದ ಇಂತಹ ವೈದ್ಯರ ಸಂಖ್ಯೆ ಇಂದು ಹೆಚ್ಚಾಗಬೇಕಾಗಿದೆ ಮತ್ತು ಈ ರೀತಿಯಾದ ಮಾನವೀಯತೆ ಇರುವ ವೈದ್ಯಕೀಯ ಸಾದನೆಗಳ ಕುರಿತು ಯುವ ವೈದ್ಯರುಗಳಿಗೆ ಮಾದರಿಯಾಗಲಿ ಅಮೂಲ್ಯ ಜೀವಗಳು ಉಳಿಯಲಿ ಎಂಬ ಕುರಿತಾದ ಈ ಸಾಕ್ಷ್ಯಚಿತ್ರಕ್ಕೆ ಹೆಚ್ಚಿನ ಪ್ರಶಸ್ತಿ ಬರಲಿ ಎಂದು ಹಾರೈಸಿದರು.

 

ಡಾ. ರವಿ IPS ಮಾತನಾಡಿ ಜನ ಸಾಮನ್ಯರ ಮೇಲೆ ಮಾಡಿರುವ ಈ ಸಾಕ್ಷ್ಯಚಿತ್ರ  ಹೆಚ್ಚು ಮನಸ್ಸಿಗೆ ನಾಟುತ್ತಿದೆ  ಮತ್ತು ಇಂತಹ ಪ್ರಯತ್ನಗಳು ಹೆಚ್ಚಾಗಬೇಕು ಎಂದರು.

 

ಡಾ.ಗೋಪಾಲಕೃಷ್ಣ ಮಾತನಾಡಿ , ವೈದ್ಯಕೀಯ ಕ್ಷೇತ್ರಕ್ಕೆ ಸಾವಲಗಿದ್ದ ಈ ಕಠಿಣ ಕೇಸನ್ನು ತೆಗೆದುಕೊಂಡು ರೋಗಿಯನ್ನು ತನ್ನ ಕುಟುಂಬಕ್ಕೆ ಮರಳಿ ನೀಡಿದ್ದಾರೆ. ನನ್ನೊಂದಿಗೆ ವೈದ್ಯರ ತಂಡ ಶ್ರಮಿಸಿತ್ತು. ಶಾಸ್ತ್ರಚಿಕಿಸ್ತೆಯ ನಂತರ ಒಂದೂವರೆ ವರ್ಷ ರೋಗಿಯ ಬಗ್ಗೆ ಗಮನ ಹರಸಲಾಗಿತ್ತು. ಈಗ ರೋಗಿಗೆ ಯಾವುದೇ ಕಾಯಿಲೆಗೆ ಸಂಬಂದಿಸಿದ ಸಮಸ್ಯೆಗಳಿಲ್ಲ ಇದು ಖುಷಿಯ ವಿಚಾರ ಎಂದು ಹೇಳಿದರು.

 

"ವೈದ್ಯೋ ನಾರಾಯಣೊ ಹರಿ" ಎಂಬ ಮಾತು ಸಾವಿರ ಪಟ್ಟು ನಿಜ. ಏಕೆಂದರೆ ನಾವು ಯಾವುದಾದರೂ ಆರೋಗ್ಯದ ಸಮಸ್ಯೆಗೆ ಸಿಲುಕಿದಾಗ ನಮ್ಮನ್ನು ಆಪದ್ಭಾಂದವನಂತೆ ಕಾಪಾಡುವುದು ವೈದ್ಯರು ಮಾತ್ರ. ನಮ್ಮನೇ ನಂಬಿಕೊಂಡಿರುವ ಅನೇಕ ಜೀವಗಳೊಂದಿಗೆ ನಾವು ಸುಖವಾಗಿರಲು ಇವರೆ ಪ್ರಮುಖರು. ಇಂತಹ ವೈದ್ಯರ ಕುರಿತು ಎಷ್ಟು ಹೇಳಿದರು ಕಡಿಮೆ. ನಮ್ಮ ಕರ್ನಾಟಕದ ವೈದ್ಯರಾದ ಡಾ|ಗೋಪಾಲಕೃಷ್ಣ ಅವರು ಈವರೆಗೂ  ಯಾರು ಮಾಡದ ಸಾಧನೆ ಮಾಡಿ ಇಡೀ ವೈದ್ಯಕೀಯ ರಂಗಕ್ಕೆ ಮಾದರಿಯಾಗಿದ್ದಾರೆ.

 ಅನಂತಪುರದ ವ್ಯಕ್ತಿಯೊಬ್ಬರಿಗೆ ಕೋವಿಡ್ ನಂತರ ಮೂರು ಜಾಯಿಂಟ್ ಗಳಲ್ಲಿ ಸಮಸ್ಯೆ ಕಾಣಿಸಿಕೊಂಡು ನಡೆಯದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅವರು ಡಾ ಗೋಪಾಲಕೃಷ್ಣ ಅವರನ್ನು ಸಂಪರ್ಕಿಸಿದಾಗ ಮೂರು ಜಾಯಿಂಟ್ ಗಳನ್ನು ಆಪರೇಷನ್ ಮಾಡಿಯೇ ಸರಿ ಮಾಡಬೇಕಿತ್ತು. ಯಾರು ತೆಗೆದುಕೊಳ್ಳದ ರಿಸ್ಕ್ ತೆಗೆದುಕೊಂಡ ಗೋಪಾಲಕೃಷ್ಣ ಅವರು ಒಂದೇ ದಿನ ಸತತ ಎಂಟು ಗಂಟೆಗಳ ಕಾಲ ನುರಿತ ತಂಡದ ಸಹಕಾರದೊಂದಿಗೆ ಮೂರು ಆಪರೇಷನ್ ಗಳನ್ನು ಮಾಡಿದರು. ರೋಗಿ ಈಗ ಕುಟುಂಬದವರ ಜೊತೆಗೆ ಆರೋಗ್ಯವಾಗಿದ್ದಾರೆ. ಈ ವಿಷಯವನ್ನು ಡಾಕ್ಟರ್ ಅವರು ನನ್ನ ಬಳಿ ಹೇಳಿದಾಗ ಇದನ್ನು ಡಾಕ್ಯುಮೆಂಟರಿ ಮಾಡೋಣ ಎಂದು ಹೇಳಿದೆ. ಡಾ|| ಗೋಪಾಲಕೃಷ್ಣ ಅವರ ಸಾಧನೆ ಮುಂದಿನ ಪೀಳಿಗೆಗೂ ಮಾದರಿಯಾಗಲಿ ಎಂಬ ಉದ್ದೇಶದಿಂದ ಈ ಸಾಕ್ಷ್ಯಚಿತ್ರ ಡಾ||ಸುಜಾತಕೃಷ್ಣ ನಿರ್ಮಾಣ ಮಾಡಿದ್ದಾರೆ.

 ನಮ್ಮ "ಕಮರೊ2" ಚಿತ್ರತಂಡ ಯಾವುದೇ ಸಂಭಾವನೆ ಪಡೆಯದೆ ನನಗೆ ನೆರವಾಗಿದಿದ್ದಾರೆ. ಅವರಿಗೆ ಹಾಗೂ ಡಾ|ಸಿ.ಎನ್.ಮಂಜುನಾಥ್, ಪ್ರಿಯಾಂಕ ಉಪೇಂದ್ರ ಹಾಗೂ ರವಿ IPS ಅವರಿಗೆ ಧನ್ಯವಾದ ಎಂದರು ನಿರ್ದೇಶಕ ಎ.ಪರಮೇಶ್.

Copyright@2018 Chitralahari | All Rights Reserved. Photo Journalist K.S. Mokshendra,