Bhagiratha.News

Tuesday, January 21, 2025

18

 

*ದೊಡ್ಮನೆ ಎಸ್ ಎ ಸಹೋದರರಿಂದ ಅನಾವರಣವಾಯಿತು "ಭಗೀರಥ" ಚಿತ್ರದ ಹಾಡಗಳು.* .

 

 *ಟ್ರೇಲರ್ ಮೂಲಕ ಮೋಡಿ  ಮಾಡುತ್ತಿರುವ ಈ ಚಿತ್ರ ಫೆಬ್ರವರಿ 7 ರಂದು ತೆರೆಗೆ.* .

 

 ಅಸಾಧ್ಯವಾದ್ದುದ್ದನ್ನು ಕಷ್ಟಪಟ್ಟು ಸಾಧ್ಯವಾಗಿಸಿದರೆ ಅದನ್ನು "ಭಗೀರಥ " ಪ್ರಯತ್ನ ಎನ್ನುತ್ತಾರೆ. ಇಂತಹ ಒಂದು  ವಿಭಿನ್ನ ಕಥೆಯನ್ನಿಟ್ಟಿಕೊಂಡು ಬರುತ್ತಿರುವ ಸಿನಿಮಾ "ಭಗೀರಥ". ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಬಿಡುಗಡೆಯಾಯಿತು. ಖ್ಯಾತ ನಿರ್ಮಾಪಕ ಸಹೋದರರಾದ ಎಸ್ ಎ ಚಿನ್ನೇಗೌಡ, ಎಸ್ ಎ ಗೋವಿಂದರಾಜು, ಎಸ್ ಎ ಶ್ರೀನಿವಾಸ್ ಹಾಗೂ ಡಾ||ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಅವರ ಪುತ್ರಿ ಲಕ್ಷ್ಮೀ ಗೋವಿಂದರಾಜು "ಭಗೀರಥ " ಚಿತ್ರದ ಹಾಡುಗಳನ್ನು ಹಾಗು ಡಿ ಬೀಟ್ಸ್ ಸಂಸ್ಥೆಯ ಶೈಲಜಾ ನಾಗ್ ಅವರು ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಪ್ರದೀಪ್ ವರ್ಮ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ವಿಜಯ್ ಪ್ರಕಾಶ್, ಶೃತಿ ಪ್ರಹ್ಲಾದ್ ಹಾಗೂ ಹೇಮಂತ್ ಕುಮಾರ್ ಹಾಡಿದ್ದಾರೆ.     

 

ಚಿತ್ರದ ಹಾಡುಗಳು ಹಾಗೂ ಟ್ರೇಲರ್ ನೋಡಿದಾಗ ಬಹಳ ಖುಷಿಯಾಯಿತು. "ಭಗೀರಥ" ಶೀರ್ಷಿಕೆಯೇ ಬಹಳ ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ ಎಂದು ಎಸ್  ಎ ಚಿನ್ನೇಗೌಡ ಹಾರೈಸಿದರು.

 

 ಹದಿನೈದು ವರ್ಷಗಳ ಹಿಂದೆ "ಬಾಯ್ ಫ್ರೆಂಡ್" ಚಿತ್ರದ ಮೂಲಕ ನಿರ್ದೇಶಕನಾದೆ. ಈಗ ವಿಭಿನ್ನ ಕಥೆಯುಳ್ಳ ಈ ಚಿತ್ರವನ್ನು ನಿರ್ದೇಶಿಸಿದ್ದೇನೆ. "ಭಗೀರಥ" ಹೆಸರೆ ಹೇಳುವಂತೆ ಅಸಾಧ್ಯವಾದುದ್ದನ್ನು ಸಾಧಿಸುವವನು ಎಂದು. ನಮ್ಮ ಚಿತ್ರದ ಕಥೆಯೂ ಇದೇ ಅರ್ಥದಲ್ಲಿ ಸಾಗುತ್ತದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಫೆಬ್ರವರಿ 7 ರಂದು ಚಿತ್ರ ತೆರೆಗೆ ಬರಲಿದೆ. ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ ಎಂದರು ನಿರ್ದೇಶಕ ರಾಮ್ ಜನಾರ್ದನ್.

ಸಾಯಿ ರಮೇಶ್ ಪ್ರೊಡಕ್ಷನ್ ಲಾಂಛನದಲ್ಲಿ ನಾನು, ಕೆ.ರಮೇಶ್ ಹಾಗೂ ಬಿ.ಭೈರಪ್ಪ ಅವರು ಈ ಚಿತ್ರವನ್ನು ನಿರ್ಮಿಸಿದ್ದೇವೆ ಎಂದು ತಿಳಿಸಿದ ನಿರ್ಮಾಪಕ ಚೇತನ್ ಎಸ್ ರಮೇಶ್, ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು. 

 

ಜರ್ನಿಲಿಸಂ ಮಾಡಿ ಪತ್ರಕರ್ತನಾಗಿದ್ದ ನಾನು, "ಜಮಾನ" ಚಿತ್ರದ ಮೂಲಕ ನಟನಾದೆ. "ಭಗೀರಥ" ಚಿತ್ರದಲ್ಲಿ ನನ್ನದು ಯಾವುದಕ್ಕೂ ಹೆದರದ, ವಿಲ್ ಪವರ್ ಇರುವ ಮನುಷ್ಯನ ಪಾತ್ರ. ಈ ಚಿತ್ರದಲ್ಲಿ ಸಾಹಸ ಸನ್ನಿವೇಶಗಳು ಹೈಲೆಟ್. ಥ್ರಿಲ್ಲರ್ ಮಂಜು ಅವರ ಸಾರಥ್ಯದಲ್ಲಿ ಸಾಹಸ ಸನ್ನಿವೇಶಗಳು ಚೆನ್ನಾಗಿ ಬಂದಿದೆ ಎಂದು ತಿಳಿಸಿದ ನಾಯಕ ಎಸ್ ಜಯಪ್ರಕಾಶ್(ಜೆ ಪಿ), ಇಡೀ ರಾಜ್ಯವೇ ಇಷ್ಟಪಡುವ ಡಾ||ರಾಜಕುಮಾರ್ ಕುಟುಂಬದ ಸದಸ್ಯರು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು ಖುಷಿಯಾಗಿದೆ ಎಂದರು.

 

ನಾನು ಈ ಚಿತ್ರದಲ್ಲಿ ಪತ್ರಕರ್ತೆಯಾಗಿ ಅಭಿನಯಿಸಿದ್ದೇನೆ. ಗುಡ್ ನ್ಯೂಸ್ ಗಾಯತ್ರಿ ಎಂಬುದು ನನ್ನ ಪಾತ್ರದ ಹೆಸರು ಎಂದು ನಾಯಕಿ ಚಂದನ ರಾಘವೇಂದ್ರ.

 

ನನ್ನದು ಚಿತ್ರದಲ್ಲಿ ರಾಧಾ ಎಂಬ ಪಾತ್ರ ಎಂದು ನಿಸರ್ಗ ಅಣ್ಣಪ್ಪ ತಿಳಿಸಿದರೆ, ರುಕ್ಮಿಣಿ ನನ್ನ ಪಾತ್ರದ ಹೆಸರು ಎಂದರು ಮತ್ತೊಬ್ಬ ನಾಯಕಿ ರೂಪಶ್ರೀ. ಸಂಗೀತ ನಿರ್ದೇಶಕ  ಪ್ರದೀಪ್ ವರ್ಮ ಹಾಡುಗಳ ಬಗ್ಗೆ ಹಾಗೂ ಸಾಹಸ ಸಂಯೋಜನೆಯ ಕುರಿತು ಥ್ರಿಲ್ಲರ್ ಮಂಜು ಮಾಹಿತಿ ನೀಡಿದರು. ವಿ.ಹರಿಕೃಷ್ಣ ಹಾಗೂ ಶೈಲಜಾ ನಾಗ್ ಸಾರಥ್ಯದ ಡಿ ಬೀಟ್ಸ್ ಸಂಸ್ಥೆ ಚಿತ್ರದ ಆಡಿಯೋ ಹಕ್ಕು ಪಡೆದುಕೊಂಡಿದೆ.

Copyright@2018 Chitralahari | All Rights Reserved. Photo Journalist K.S. Mokshendra,