ಬರ್ಗೆಟ್ ಬಸ್ಯಾನಿಗೆ ಮನಸೋತ ಪ್ರೇಮಾ
‘ಬರ್ಗೆಟ್ ಬಸ್ಯಾ’ ಟೀಸರ್ ನೋಡಿ ಬಿದ್ದು ಬಿದ್ದು ನಕ್ಕರು ‘ಓಂ’ ಪ್ರೇಮಾ
ಹೊಸ ಕಾಶಿನಾಥ್ ಹುಟ್ಟಿಕೊಂಡರು ಅಂತಾರೆ ‘ಯಜಮಾನ’ ಪ್ರೇಮಾ
ಖಂಡಿತವಾಗಿಯೂ ಚಿತ್ರಮಂದಿರದಲ್ಲಿ ಸಿನಿಮಾ ನೋಡುವೆ ಎಂದರು ‘ಕನಸುಗಾರ’ ಪ್ರೇಮ
ಮೊನ್ನೆಯಷ್ಟೇ ಹೊಸಬರ ‘ಬರ್ಗೆಟ್ ಬಸ್ಯಾ’ ಚಿತ್ರದ ಟೀಸರ್ ಮತ್ತು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಟಿ ಪ್ರೇಮಾ ಮುಖ್ಯ ಅತಿಥಿಯಾಗಿ ಆಗಮಿಸಿ ನಗುತ್ತಲೇ ಎಲ್ಲರ ಗಮನ ಸೆಳೆದರು. ಅವರು ತುಣುಕುಗಳು ಬರುವ ಮುಂಚೆ, ನೋಡಿದ ನಂತರವೂ ಹಿರಿಯ ಪ್ರಸ್ ಫೋಟೋಗ್ರಾಫರ್ ಹೇಳಿದ ಮಾತಿಗೆ ಒಂದೇ ಸಮನೆ ನಕ್ಕರು. ವೇದಿಕೆ ಮೇಲೆ ಬಂದರೂ ನಗು ತಡೆಯಲಾಗದೆ ಸುಸ್ತಾದರು.
ಮೈಕ್ ತೆಗೆದುಕೊಂಡ ಪ್ರೇಮ ಮೊದಲು ಪ್ರಶ್ನೆ ಮಾಡಿದ್ದು ನಿರ್ದೇಶಕ ಮತ್ತು ನಾಯಕ ರಿಶ್ ಹಿರೇಮಠ್ ಅವರನ್ನು. ಈ ತರಹದ ಆಲೋಚನೆ ಹೇಗೆ ಬಂತು. ಈಗಾಗಲೇ ಉಪೇಂದ್ರ ತೋರಿಸಿದ್ದಾರೆ. ಈ ಕಾಲದಲ್ಲಿ ಒಂದು ಹುಡುಗಿರನ್ನು ನೋಡಿ ಖಿನ್ನತೆಗೆ ಹೋಗುತ್ತಾರೆ. ಅಂತಹುದರಲ್ಲಿ ೫೫ ಹುಡುಗೀರನ್ನು ಸಂಭಾಳಿಸಿದ್ದೀರಾ ಅಂದರೆ ನಿಜಕ್ಕೂ ಮೆಚ್ಚುವಂತದ್ದು. ನಾನು ಎಷ್ಟೋ ಇಂತಹ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಆದರೆ ಇದು ವಿಭಿನ್ನವಾಗಿದೆ. ಕೂತಿದ್ದಾಗಲೇ ಕಾಶಿನಾಥ್ ಪ್ರತಿರೂಪ ಅಂತ ಹೇಳಿದೆ.
ಬಾ.ಮ.ಹರೀಶ್ ಸಹ ಅದನ್ನೆ ಧ್ವನಿಗೂಡಿಸಿದರು. ಒಂದು ಕಾಮಿಡಿ ಮಾಡಿ ನಗಿಸುವುದು ಅಂದರೆ ಅಷ್ಟು ಸುಲಭವಲ್ಲ. ಅದು ಸ್ವಾಭಾವಿಕವಾಗಿಬೇಕು. ನಾನು ನೋಡಿ ಅಷ್ಟು ನಕ್ಕಿದ್ದೀನಿ ಅಂದರೆ, ಸಿನಿಮಾ ಹೇಗಿರಬಹುದು ಎಂಬ ಕುತೂಹಲ ಬಂದಿದೆ. ನಾನಂತೂ ಸಿನಿಮಾ ನೋಡುತ್ತೇನೆ. ಇಂತಹ ಪ್ರತಿಭೆಗಳು ಹೊರಬರಬೇಕು. ಕೆಲವರಿಗೆ ನಿರ್ದೇಶನ, ನಟನೆ ಮಾಡುವಾಗ ಭಯ ಇರುತ್ತದೆ. ನಿಮಗೆ ಅದೆಲ್ಲವು ತೆರೆ ಮೇಲೆ ಕಾಣಿಸಿಲ್ಲ. ನಿಮ್ಮ ಪರಿಕಲ್ಪನೆ ಚೆನ್ನಾಗಿದೆ. ಒಳ್ಳೆಯದಾಗಲಿ ಎಂದರು.
ಯರ್ರಂರೆಡ್ಡಿ ಪಿಕ್ಚರ‍್ಸ್ ಸಂಸ್ಥೆ ಅಡಿಯಲ್ಲಿ ಬಳ್ಳಾರಿಯ ವೈ.ನಾಗಾರ್ಜುನರೆಡ್ಡಿ ಬಂಡವಾಳ ಹೂಡಿದ್ದಾರೆ. ಮಲ್ಲಿಕಾರ್ಜುನ್.ಕೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ‘ಕಂಡ್ ಕಂಡ್ ಹುಡ್ಗ ಹುಡ್ಗೀರ್ಗೆಲ್ಲ ...?’ ಎಂಬ ಅಡಿಬರಹವಿದೆ.
ರಿಶ್‌ಹಿರೇಮಠ್ ನಿರ್ದೇಶನ ಮಾಡುವ ಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ಇವರು ಹೇಳುವಂತೆ ನೀವುಗಳು ನೋಡಿದಂತ ಸೀನ್‌ಗಳು ನಿಜ ಜೀವನದಲ್ಲಿ ನಡೆಯುತ್ತಿದೆ. ನಿಮ್ಮೋಳಗಡೆ ಇನ್ನೋಬ್ಬ ಪಾತ್ರಧಾರಿ ಇರುತ್ತಾನೆ. ಹುಡುಗಿರನ್ನು ನೋಡಿದಾಗ ಪಾತ್ರದಿಂದ ಹೊರಗೆ ಬರುತ್ತಾನೆ. ಯಾರೂ ಹೇಳಕೊಳ್ಳದೆ ಇರುವುದನ್ನು ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ೫೫ ಹುಡುಗಿರು ಕೆಲವೇ ನಿಮಷದಲ್ಲಿ ಬಂದರೂ ನಾಯಕಿಯರಂತೆ ಬಿಂಬಿಸಲಾಗಿದೆ. ಹೀರೋ, ಡೈರಕ್ಟರ್ ಆಗಬೇಕೆಂದು ಕನಸಿನಲ್ಲೂ ಆಸೆ ಪಟ್ಟಿರಲಿಲ್ಲ. ೧೩ ವರ್ಷದ ಹಿಂದೆ ಪ್ರೀತಿ ಮಾಡುತ್ತಿರುವಾಗ ಅವಳು ಜೀವನದಲ್ಲಿ ದೊಡ್ಡ ವ್ಯಕ್ತಿ ಅಗುವುದನ್ನು ನೋಡಬೇಕು ಅಂತ ಆಸೆ ಪಟ್ಟಳು. ಕಾರಣಾಂತರದಿಂದ ಮುಂದಿನ ವರ್ಷವೇ ಬೇರೆಯವರ ಜತೆ ಮದುವೆ ಆದಳು. ಪ್ರೀತಿ ದಕ್ಕಲಿಲ್ಲವೆಂದು ಸಾಯಲು ಹೋದಾಗ ಅವಳ ಸಂದೇಶಗಳು ಧೈರ್ಯ ತಂದು ಕೊಟ್ಟಿತ್ತು. ಆಕೆಯ ಸ್ಪೂರ್ತಿಯೇ, ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಇದು ಆರಂಭ ಅಷ್ಟೇ. ಅಂತ್ಯ ನೀವೇ ನೋಡುತ್ತಿರಾ. ಮುಂದೆ ಬರ್ಗೆಟ್ ಬಸ್ಯಾ ಪಾರ್ಟ್-೨ ಬರುತ್ತೆ ಎಂದು ಹೇಳುವಾಗ ಪ್ರೇಮ ಅವರನ್ನೇ ನೋಡುತ್ತಾ ನಗುತ್ತಲೇ ಇದ್ದರು.
ಸುಂದರ ವಾತಾವರಣದಲ್ಲಿ ಬಾ.ಮ.ಹರೀಶ್, ಬಾ.ಮ.ಗಿರೀಶ್, ಗಿಲ್ಲಿನಟ ಮುಂತಾದವರು ಉಪಸ್ತಿತರಿದ್ದರು.
ಚಿತ್ರೀಕರಣವು ಬೆಂಗಳೂರು, ತೀರ್ಥಹಳ್ಳಿ, ಕೊಪ್ಪ ನಡೆಸಿ, ಬೆನಗನಹಳ್ಳಿಯ ಸುಂದರ ತಾಣದಲ್ಲಿ ನಡೆದಿದೆ. ಪ್ರಕಾಶ್.ಜಿ ಸಾಹಿತ್ಯಕ್ಕೆ ಸಿದ್ದಾರ್ಥ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಶಾಮ್‌ಸಾಲ್ವಿನ್, ಸಂಕಲನ ಸಿದ್ದು ದಳವಾಯಿ ಅವರದಾಗಿದೆ. ಚಿತ್ರವನ್ನು ಸದ್ಯದಲ್ಲೇ ತೆರೆಗೆ ತರಲು ತಂಡವು ಯೋಜನೆ ರೂಪಿಸಿಕೊಂಡಿದೆ.