ಚಿತ್ರ : ಕಮಲ್ ಶ್ರೀದೇವಿ
ನಿರ್ಮಾಣ: ಸ್ವರ್ಣಾಂಬಿಕ ಪಿಕ್ಚರ್ಸ್
ಶ್ರೀಮತಿ ಬಿ.ಕೆ ಧನಲಕ್ಷ್ಮೀ
ಸಹ ನಿರ್ಮಾಣ : Barnswallow company
ರಾಜವರ್ಧನ್
ಕ್ರಿಯೇಟಿವ್ ಹೆಡ್ : ರಾಜವರ್ಧನ್
ನಿರ್ದೇಶನ : ವಿ.ಎ ಸುನೀಲ್
ಸಂಗೀತ :ಕೀರ್ತನ್
ಸಾಹಿತ್ಯ : ಪ್ರಮೋದ್ ಮರವಂತೆ
ಛಾಯಾಗ್ರಹಣ:ನಾಗೇಶ್ ವಿ ಆಚಾರ್ಯ,
ಸಂಕಲನ:ಜ್ಞಾನೇಶ್ ಬಿ ಮಠದ್
ಕಲೆ: ಗುಣ
ತಾರಾಗಣ : ಸಚಿನ್ ಚಲುವರಾಯ ಸ್ವಾಮಿ, ಸಂಗೀತ ಭಟ್, ಕಿಶೋರ್,ರಮೇಶ್ ಇಂದಿರಾ ಮತ್ತಿತರರು
ಶ್ರೀ ಎನ್ ಚಲುವರಾಯ ಸ್ವಾಮಿ ಅರ್ಪಿಸುವ
ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ ನಡಿಯಲ್ಲಿ *ಬಿ.ಕೆ ಧನಲಕ್ಷ್ಮೀ* ನಿರ್ಮಾಣದ Barnswallow companyಯ ರಾಜವರ್ಧನ್ ಸಹ ನಿರ್ಮಾಣದ
ಸಚಿನ್ ಚಲುವರಾಯ ಸ್ವಾಮಿ ಅಭಿನಯದ ಚಿತ್ರ ಕಮಲ್ ಶ್ರೀದೇವಿ
ಕಿಶೋರ್,ರಮೇಶ್ ಇಂದಿರಾ, ಸಂಗೀತಾ ಭಟ್ ಸೇರಿ ಪ್ರತಿಭಾವಂತ ತಾರಾಬಳಗವಿರೋ ಈ ಚಿತ್ರವನ್ನ ವಿ.ಎ ಸುನೀಲ್ ಕುಮಾರ್ ನಿರ್ದೇಶಿಸಿದ್ದು, ಈ ಚಿತ್ರದ ಸಂಪೂರ್ಣ ಕ್ರಿಯೇಟಿವ್ ಜವಾಬ್ದಾರಿಯನ್ನ ಸಹ ನಿರ್ಮಾಪಕ ರಾಜವರ್ಧನ್ ಹೊತ್ತಿಕೊಂಡಿದ್ದಾರೆ.
ಕಮಲ್ ಶ್ರೀದೇವಿ ಅನ್ನೋ ಲೆಂಜಡರಿ ಜೋಡಿಯ ಹೆಸರಿಟ್ಟು , ಸಾಂಕೇತಿಕವಾಗಿ ಹಲವು ಆಯಾಮಗನ್ನ ಸೂಚಿಸೋ ವಿಭಿನ್ನ ಪೋಸ್ಟರ್ ರಿಲೀಸ್ ಮಾಡಿರೋ ಚಿತ್ರತಂಡ, ಹಲವು ಪ್ರಶ್ನೆಗಳ ಜೊತೆಗೆ ಕಾತುಕ ಹುಟ್ಟಿಸಿದೆ
ಅಲ್ಲದೆ ಟೈಟಲ್ ಕೆಳಗೆ ಅಡಿ ಬರಹವಾಗಿ ಬರೆದಿರೋ ಕೇಸ್ ನಂಬರ್, ಇದು ನೈಜ ಘಟನೆಯನ್ನಾಧರಿಸಿದ ಸಿನಿಮಾನಾ..? ಒಂದು ಹೆಣ್ಣಿನ ತಲೆಯನ್ನ ಪಾರಿವಾಳಗಳಿಂದ ಡಿಸೈನ್ ನಾಡಿ ಮೈಗೆ ಹಾವು,ಗೂಬೆ, ಕಾಗೆ, ಊಸರವಳ್ಳಿ,ನರಿ ಹೀಗೆ ಪ್ರಾಣಿಗಳು ಸುತ್ತಿಕೊಂಡಿರುವುದು
ಚರ್ಚೆಗೆ ಗ್ರಾಸವಾಗಿದೆ.
ಎಲ್ಲದಕ್ಕಿಂತ ಹೆಚ್ಚಾಗಿ ಪ್ರಸ್ತುತ ನಟ ಕಮಲ್ ಹಾಸನ್ ಹೆಸರು ಕನ್ನಡಿಗರಿಗೆ ಕೆಂಡವಾಗಿರುವ ಹೊತ್ತಲ್ಲಿ, ಈ ಟೈಟಲ್ ಯಾಕೆ ಅನ್ನೋ ಪ್ರಶ್ನೆ ಉದ್ಭವಿಸಿದೆ.
ಸದ್ದಿಲ್ಲದೇ ಸೆಟ್ಟೇರಿ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗ್ತಿರೋ ಕಮಲ್ ಶ್ರೀದೇವಿ ಪೋಸ್ಟರ್ ಕಾನ್ಸೆಪ್ಟ್ ಮತ್ತು ಕ್ವಾಲಿಟಿ ನೋಡಿ ಕನ್ನಡ ಉದ್ಯಮದ ಹಲವರು ಹುಬ್ಬೇರಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ತಾಂತ್ರಿಕವಾಗಿ ಈ ಚಿತ್ರತಂಡ ದೊಡ್ಡ ಭರವಸೆಯನ್ನ ಮೂಡಿಸಿದ್ದು, ಪೋಸ್ಟರ್ ನಷ್ಟೇ ಸಿನಿಮಾನೂ ಗುಣಮಟ್ಟದಲ್ಲಿ ಅಕ್ಕಪಕ್ಕದವರು ತಿರುಗಿ ನೋಡುವಂತಿದೆಯಂತೆ. ಕನ್ನಡ, ತೆಲುಗು,ತಮಿಳಿನಲ್ಲಿ ಬಿಡುಗಡೆ ಸಜ್ಜಾಗ್ತಿರೋ ಕಮಲ್ ಶ್ರೀದೇವಿ ಸದ್ಯ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಇಲ್ಲಿಂದ ಚಿತ್ರದ ಪ್ರಚಾರ ಕಾರ್ಯವನ್ನ ಅಧಿಕೃತವಾಗಿ ಆರಂಭಿಸಿದೆ.
--------------
*PressMeet Highlights*
ಪತ್ರಿಕಾಗೋಷ್ಠಿಯಲ್ಲಿ ನಾಯಕ ಸಚಿನ್ ಚಲುವರಾಯ ಸ್ವಾಮಿ , ಕ್ರಿಯೇಟಿವ್ ಹೆಡ್ ಹಾಗೂ ಸಹ ನಿರ್ಮಾಪಕ ರಾಜವರ್ಧನ್ ,ಹಿರಿಯ ನಟ ಉಮೇಶ್,ಮಿತ್ರ, ರಾಘು ಶಿವಮೊಗ್ಗ,ಅಕ್ಷಿತಾ ಬೋಪಯ್ಯ ನಿರ್ದೇಶಕ ಸುನೀಲ್ , ಛಾಯಾಗ್ರಹಕ ನಾಗೇಶ್ ಆಚಾರ್ಯ ,ಸಂಗೀತ ನಿರ್ದೇಶಕ ಕೀರ್ತನ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು.
ಕಮಲ್ ಶ್ರೀದೇವಿ ಚಿತ್ರಕ್ಕೂ ಕಮಲ್ ಹಾಸನ್ ಶ್ರೀದೇವಿ ಹೆಸರಿಗೂ ಹಾಗೂ ಇತ್ತೀಚಿನ ವಿಚಾದಕ್ಕೂ ಯಾವುದೇ ಸಂಬಂಧವಿಲ್ಲ. ಕಮಲ್ ಶ್ರೀದೇವಿ ಚಿತ್ರತಂಡದಿಂದ ಸ್ಪಷ್ಟನೆ.
ಕಾನ್ಸೆಪ್ಟ್ ಪೋಸ್ಟರ್ ರಿಲೀಸ್ ಮಾಡಿ, ಚಿತ್ರದ ವಿಶೇಷತೆಗಳನ್ನ ಹಂಚಿಕೊಂಡ ಚಿತ್ರತಂಡದ ಸದಸ್ಯರು ಪರಸ್ಪರ ಕೆಲಸಗಳನ್ನ ಗೌರವಿಸೋದ್ರ ಜೊತೆಗೆ ಪ್ರಶಂಸೆಯನ್ನ ವ್ಯಕ್ತಪಡಿಸಿದ್ರು..
ಮಮ್ಮಿ ಖ್ಯಾತಿಯ ಲೋಹಿತ್ ಕಥೆಯ ಎಳೆ ಕೊಟ್ರೆ ಗೊಂಬೆಗಳ ಲವ್ ಸಂತೋಷ್ ಕಮಲ್ ಶ್ರೀದೇವಿ ಟೈಟಲ್ ಕೊಟ್ಟಿದ್ದಾರೆ.. ಇದನ್ನ ತಿಳಿಸಿದ ಕ್ರಿಯೇಟಿವ್ ಹೆಡ್ ರಾಜವರ್ಧನ್ ,ಎರಡು ವರ್ಷದ ಹಿಂದೆ ಯೋಜನೆಗೊಂಡ ಈ ಚಿತ್ರ ಇದೀಗ ಕೊನೆಯ ಹಂತದ ಚಿತ್ರೀಕರಣವನ್ನ ಉಳಿಸಿಕೊಂಡಿದ್ದು, ಬೇರೆ ಎಲ್ಲಾ ಕೆಲಸಗಳನ್ನ ಮುಗಿಸಿಕೊಂಡಿದೆ. ಇದೇ ವರ್ಷ ತೆರೆಗೆ ಬರೋದಾಗಿ ಖಚಿತ ಪಡಿಸಿದ್ರು.