ಬರುತ್ತಿದ್ದೀಯಾ ದಿಯಾ
‘೬-೫=೨’ ನಿರ್ದೇಶಕಕೆ.ಎಸ್. ಅಶೋಕ್ ಮತ್ತು ‘ಕರ್ವ’ ನಿರ್ಮಾಪಕಕೃಷ್ಣಚೈತನ್ಯಜುಗಲ್ಬಂದಿಯಲ್ಲಿ ‘ದಿಯಾ’ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದೆ.ಮೂವತ್ತಾರು ತಿಂಗಳ ಶ್ರಮ ಹಾಗೂ ಗೆಳಯ ಆಕ್ಷನ್ಕಟ್ ಹೇಳುತ್ತಿರುವುದರಿಂದ ನಂಬಿಕೆ ಮೇಲೆ ಬಂಡವಾಳ ಹೂಡಿದ್ದಾರಂತೆ.ಯುರೋಪಿಯನ್ ಸ್ಟೈಲ್ದಲ್ಲಿ ನಿರೂಪಣೆಇರುವುದು ವಿಶೇಷ.ಜೀವನಪೂರ್ತಿ ಸೋಜಿಗಗಳು ಎಂಬ ಇಂಗ್ಲೀಷ್ಅಡಿಬರಹಇರಲಿದೆ.ಬದುಕಿನ ನೆನಪುಗಳ ಹೆಜ್ಜೆಗಳಂತೆ ಸಾಗುತ್ತಾಮೂರು ಪಾತ್ರಗಳ ಸುತ್ತನವಿರಾದ ಪ್ರೀತಿಕತೆಯುತೆಗೆದುಕೊಂಡು ಹೋಗುತ್ತದೆ.ಎರಡು ಸಂರ್ಕೀಣ ಪ್ರೇಮಕತೆ ವ್ಯತ್ಯಾಸಗಳಿಗೆ ವಿವರಣೆ ನೀಡಿ, ಕೊನೆಯಲ್ಲಿಮಿಶ್ರಣ ಮಾಡಿರುವುದುವಿಶೇಷ.ಶೂನ್ಯದಿಂದ ಹತ್ತರವರೆಗಿನಪಯಣದಲ್ಲಿರೋಮಾಂಟಿಕ್ಚಿತ್ರವುಸಾಗುತ್ತದೆ.
ಕತೆಯಲ್ಲಿಅರ್ಥಪೂರ್ಣಸನ್ನಿವೇಶಗಳು ಇರುವುದರಿಂದ ಸಾಹಸ,ಹಾಡುಗಳಿಗೆ ಅವಕಾಶ ಮಾಡಿಕೊಂಡಿಲ್ಲ. ಅಂತರ್ಮುಖ ಹುಡುಗನಾಗಿ,ಕಾಲೇಜಿನಿಂದ ಕೆಲಸದತನಕ ಸಾಗುವ ಪಾತ್ರದಲ್ಲಿ ದೀಕ್ಷಿತ್, ತುಳು ಭಾಷೆಯ ಪೃಥಿಅಂಬರ್ ನಾಯಕರುಗಳು.
ಸೋಡಾಬುಡ್ಡಿಯಲ್ಲಿ ನಾಯಕಿಯಾಗಿದ್ದ ಖುಷಿ ಅಂತರ್ಮುಖಿ,ಯಾರಜೊತೆಗೂ ಸೇರದೆ, ಲವ್ಲ್ಲಿಬಿದ್ದಾಗಅದನ್ನು ನಿಭಾಯಿಸುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಮತ್ತೋಂದು ಮುಖ್ಯ ಪಾತ್ರಕ್ಕೆಪವಿತ್ರಾಲೋಕೇಶ್ ನಟನೆಇದೆ. ಹಿನ್ನಲೆ ಸಂಗೀತಅಜನೀಶ್ಲೋಕನಾಥ್, ಛಾಯಾಗ್ರಹಣ ವಿಶಾಲ್ವಿಟ್ಟಲ್-ಸೌರಭ್ವಾಘ್ಮಗೆ, ಸಂಕಲನ ನವೀನ್ರಾಜ್, ವರ್ಣಾಂಲಕಾರಖುರ್ಷದಾಬಾನುಅವರದಾಗಿದೆ. ಬೆಂಗಳೂರು, ಉಡುಪಿ,ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಶ್ರೀ ಸ್ವರ್ಣಲತಾ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣಗೊಂಡಿರುವಚಿತ್ರವನ್ನುಕೆಆರ್ಜಿಯಕಾರ್ತಿಕ್ಗೌಡ ಮುಖಾಂತರ ಶುಕ್ರವಾರದಂದು ಸುಮಾರು ೧೦೦ ಕೇಂದ್ರಗಳಲ್ಲಿ ತೆರೆಕಾಣುತ್ತಿದೆ