Gaana Chandana.Press Meet.

Tuesday, March 03, 2020

307

ಚಂದನದಲ್ಲಿ ಗಾನ ಚಂದನ

ಖ್ಯಾತಗಾಯಕಿ ಬಿ.ಆರ್.ಛಾಯಾ ಮತ್ತು ಸಾಹಿತಿ,ಸಂಗೀತ ನಿರ್ದೇಶಕ  ವಿ.ಮನೋಹರ್ ಸಾರಥ್ಯದಲ್ಲಿ ‘ಗಾನ ಚಂದನ’ ರಿಯಾಲಿಟಿ ಷೋ ಕಾರ್ಯಕ್ರಮದ ಮೆಗಾ ಅಡಿಷನ್ ಸುತ್ತು ಪೂರ್ಣಗೊಂಡಿದ್ದು, ಗುರುವಾರದಿಂದಗಾಯಕ,ಗಾಯಕಿಯರ ನಡುವೆ ಸ್ಪರ್ಧೆಏರ್ಪಡಲಿದೆ. ತ್ನಿಗೆ ಬೆಂಬಲವಾಗಿ ಇರುವ ಪದ್ಮಪಾಣಿ ಈಗಾಗಲೇ ಮೂವತ್ತು ಜಿಲ್ಲೆಗಳಿಗೆ ಪ್ರಯಾಣ ಬೆಳಸಿ ೧೮-೩೫ ವಯಸ್ಸಿನ,  ಪ್ರತಿಜಿಲ್ಲೆಯಿಂದ ೩೦-೪೦ ಪ್ರತಿಭೆಗಳನ್ನು ಆಯ್ಕೆ ಮಾಡಿದ್ದಾರೆ. ಸದರಿ ಸುತ್ತಿನಲ್ಲಿ ೭೯ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ.ಇದರಲ್ಲಿಎರಡುರೀತಿಯ ವ್ಯವಸ್ಥೆಯನ್ನುಕಲ್ಪಿಸಲಾಗಿದೆ.  

.  ‘ಆತ್ಮಾವಲೋಕನ’  ಹಾಗೂ ‘ಉಳಿದವರು ಕಂಡಂತೆ’ ಎಂಬ ಅಂಕ ನೀಡುವವ್ಯವಸ್ಥೆಇರುವುದು ವೈಶಿಷ.ಬೇರೆ ವಾಹಿನಿಗಳಲ್ಲಿ ನಡೆಯುವಂತೆ ಮತ ಹಾಕುವ ಅವಕಾಶ ಇರುವುದಿಲ್ಲ. ಸುಮರಾಗಿ ಹಾಡುವವರನ್ನುಚೆನ್ನಾಗಿ ಹಾಡುವಂತೆ ಮಾಡುವುದುಕಾರ್ಯಕ್ರಮದ ಮುಖ್ಯಉದ್ದೇಶವೆಂದುಛಾಯಾ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಆತ್ಮಾವಲೋಕನದಲ್ಲಿಗಾಯಕರುತಾವುತಪ್ಪಾಗಿ ಹಾಡಿದ ಸಾಲು ಅಥವಾಚರಣವನ್ನು ಸರಿಯಾದಧಾಟಿಯಲ್ಲಿ ಹಾಡಿತೋರಿಸಲು ಅವಕಾಶ ಮಾಡಿಕೊಡಲಾಗುವುದು.ಉಳಿದವರು ಕಂಡಂತೆಎನ್ನುವ ವ್ಯವಸ್ಥೆಯಲ್ಲಿಅಂಕವನ್ನು ಸಹಸ್ಪರ್ಧಿಗಳು ಕೊಡುತ್ತಾರೆ. ಪ್ರತಿ ಶನಿವಾರ ಮತ್ತು ಭಾನುವಾರದಂದುಡಿಡಿಚಂದನದಲ್ಲಿರಾತ್ರಿ ೭.೩೦ ರಿಂತ ೮.೧೫ರ ವರೆಗೆ ಪ್ರಸಾರ ವಾಗುತ್ತಿದೆ. ಸರ್ಕಾರದಕಾರ್ಯಕ್ರಮವಾಗಿದ್ದರಿಂದ ವಿಜೇತರಿಗೆಒಂದು ಲಕ್ಷ ಬಹುಮಾನ ನೀಡಲಾಗುವುದು.ಇದಲ್ಲೆದೆ ಮಹಿಳೆ, ಪುರುಷರಿಗೆ ಪ್ರತ್ಯೇಕವಾಗಿ ಪ್ರಶಸ್ತಿ ಕೊಡಬೇಕೆಂಬ ಚಿಂತನೆಇದೆಎಂದು ವಿ.ಮನೋಹರ್ ಹೇಳುತ್ತಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,