ನವಿಲುಗರಿ ಸಿನಿಮಾಸ್ಸ್ ಬ್ಯಾನರ್ ನಡಿಯಲ್ಲಿ ತಯಾರಗುತ್ತಿರುವ ಹೊಸ ಸಿನಿಮಾದ ಪೋಸ್ಟರ್ ನನ್ನು ಇಂದು ಲಕ್ಷ್ಮೀ ಬಾರಮ್ಮಾ ಖ್ಯಾತಿಯ ಚಂದು ಗೌಡರವರು ಬಿಡುಗಡೆ ಮಾಡಲಾಯಿತು ಈ ಹಿಂದೆ ಅಭಯ ಹಸ್ತ ಎಂಬ ವಿಭಿನ್ನ ಸಿನಿಮಾವನ್ನು ಡೈರೆಕ್ಟ್ ಮಾಡುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಯುವ ನಿರ್ದೇಶಕ ನವಿಲುಗರಿ ನವೀನ್ ಪಿ ಬಿ ರವರು ಈಗ ಹೊಸ ಕಥೆಯೊಂದಿಗೆ ಹಳೇಯ ಹೆಸರಾಂತ ಕನ್ನಡ ಶೀರ್ಷಿಕೆಯನ್ನು ಇಟ್ಟುಕೊಂಡು ಕನ್ನಡ ಭಾಷೆಯ ಉಳಿವಿನ ಬಗ್ಗೆ ಸಿನಿಮಾ ಡೈರೆಕ್ಟ್ ಮಾಡಲು ಒರಟಿದ್ದಾರೆ. ಹಳೆಯ ಅಭಯ ಹಸ್ತ ಸಿನಿಮಾದಲ್ಲಿ ಹೆಸರಾಂತ ಮುತ್ತಪ್ಪ ರೈ, ಜೇಡರಹಳ್ಳಿ ಕೃಷ್ಣಪ್ಪ, ಡಾ. ಶಿವರಾಜ್ ಕುಮಾರ, ನವೀನ್ ಕೃಷ್ಣ, ಅನಿರುದ್ದ್ ಇನ್ನೂ ಹಲವರು ಮುಖ್ಯ ಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದರು, ಈ ಬಾರಿಸು ಕನ್ನಡ ಡಿಂಡಿಮವ ಸಿನಿಮಾದಲ್ಲಿ ಬಹುಪಾಲು ಮಕ್ಕಳನ್ನೇ ನಟನೆ ಮಾಡಿಸುವುದರ ಬಗ್ಗೆ ಮಾಹಿತಿ ನೀಡಿದ್ದಾರೆ
ಡೈರೆಕ್ಟರ್. ಈ ಸಿನಿಮಾದಲ್ಲಿ 4 ಹಾಡುಗಳಿದ್ದು ಸಂಗೀತ ಸಂಯೋಜನೆಯನ್ನು ಹೊಸ ಪ್ರತಿಭೆ ಮನುರಾಜ್ ರವರು ನಿಭಾಯಿಸುತ್ತಿದ್ದಾರೆ, ಸಾಹಿತ್ಯವನ್ನು
ನವಿಲುಗರಿ ನವೀನ್ ಪಿ ಬಿ
ರಾಜೇಶ್ವರಿ ಸುಂದರ ಮೂರ್ತಿ ಹಾಗೂ
ಡಾ. ಕಾಸರಗೋಡು ಅಶೋಕ್ ಕುಮಾರ್ ರವರು ಬರೆದಿದ್ದಾರೆ ಈ ಸಿನಿಮಾಕ್ಕೆ ಅಶ್ವಿಕ ರವರು ಬಂಡವಾಳ ಹೂಡಿಕೆ ಮಾಡುತ್ತಿದ್ದು ಪ್ರೊ. ಡಾ. ದೊಡ್ಡರಂಗೇಗೌಡರು ಮುಖ್ಯ ಭೂಮಿಕೆಯಲ್ಲಿ ಅಭಿನಯಸುತ್ತಿದ್ದಾರೆ. ಈ ಸಿನಿಮಾ ಬಹುತೇಕ ಚಿತ್ರೀಕರಣವನ್ನು ಮೈಸೂರು ಹಾಗೂ ಪಾಂಡವಪುರದ ಭಾಗಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರ ತಂಡವು ನಿರ್ಧಾರ ಮಾಡಲಾಗಿದೆ. ಈ ಸಿನಿಮಾದ ಕ್ಯಾಮೆರಾ ಸಂಕಲನ ನಿರ್ದೇಶನದ ಜವಾಬ್ದಾರಿಯನ್ನು ಸ್ವತಃ ನವಿಲುಗರಿ ನವೀನ್ ಪಿ ಬಿ ರವರು ಮಾಡುತ್ತಿದ್ದಾರೆ. ಎಲ್ಲಾ ಅಂದು ಕೊಂಡ ಹಾಗೇ ಆದರೆ ಚಿತ್ರ ತಂಡವು ಆಗಸ್ಟ್ ತಿಂಗಳಲ್ಲಿ ಮೈಸೂರುನ ಚಾಮುಂಡಿ ಬೆಟ್ಟದಲ್ಲಿ ಪೂಜೆ ಮಾಡಿ ಚಿತ್ರೀಕರಣ ಶುರು ಮಾಡುವ ಸಾಧ್ಯತೆ ಹೆಚ್ಚು