*"31 DAYS" ಚಿತ್ರದ ಗೆಲುವು. ಇದೇ ಸಂದರ್ಭದಲ್ಲಿ N- STAR ENTERPRISES ನ ಮುಂದಿನ ಚಿತ್ರಗಳ ಬಗ್ಗೆ ಮಾಹಿತಿ ನೀಡಿದ ನಿರಂಜನ್ ಶೆಟ್ಟಿ** . "ಜಾಲಿಡೇಸ್" ಚಿತ್ರದ ಖ್ಯಾತಿಯ ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸಿರುವ, ರಾಜ ರವಿಕುಮಾರ್ ನಿರ್ದೇಶಿಸಿರುವ ಹಾಗೂ ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ಸಂಗೀತ ಸಂಯೋಜಿಸಿರುವ 150ನೇ ಚಿತ್ರ "31 DAYS" ಕಳೆದವಾರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಸಕ್ಸಸ್ ಮೀಟ್ ನಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ನಮ್ಮ "31 DAYS" ಚಿತ್ರ ಸೆಪ್ಟೆಂಬರ್ 5 ರಂದು ಬಿಡುಗಡೆಯಾಯಿತು. ಇದು ನನ್ನ ಅಭಿನಯದ 8ನೇ ಚಿತ್ರ. ನಮ್ಮ ನಿರೀಕ್ಷೆಗೂ ಮೀರಿ ಜನ ನಮ್ಮ ಚಿತ್ರವನ್ನು ....
*ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ "ದೈಜಿ" ಚಿತ್ರದ ಟೀಸರ್ ಬಿಡುಗಡೆ* . *ಟೀಸರ್ ನಲ್ಲೇ ಕುತೂಹಲ ಮೂಡಿಸಿದೆ ಹಾರಾರ್ ಜಾನರ್ ಈ ಚಿತ್ರ* . ತಮ್ಮ ಅಮೋಘ ಅಭಿನಯದಿಂದ ಜನಮನಗೆದ್ದಿರುವ ನಟ ರಮೇಶ್ ಅರವಿಂದ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ರಮೇಶ್ ಅರವಿಂದ್ ಅವರು ಪ್ರಮುಖಪಾತ್ರದಲ್ಲಿ ನಟಿಸಿರುವ "ದೈಜಿ" ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಬಿಡುಗಡೆ ಮಾಡುವ ಮೂಲಕ "ದೈಜಿ" ಚಿತ್ರತಂಡ ತಮ್ಮ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಟೀಸರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಟೀಸರ್ ಬಿಡುಗಡೆ ನಂತರ "ದೈಜಿ" ಚಿತ್ರತಂಡದವರು ಮಾಧ್ಯಮದವರ ಜೊತೆಗೆ ....
*"ಮುತ್ತರಸ" ನಾದ ಮಡೆನೂರ್ ಮನು* . *ಹುಟ್ಟುಹಬ್ಬದ ದಿನದಂದೇ ಸಿನಿರಂಗದ ಗಣ್ಯರ ಸಮ್ಮುಖದಲ್ಲಿ ಶೀರ್ಷಿಕೆ ಅನಾವರಣ* . ರಿಯಾಲಿಟಿ ಶೋ ಮೂಲಕ ಜನಪ್ರಿಯರಾಗಿದ್ದ ಮಡೆನೂರು ಮನು, "ಕುಲದಲ್ಲಿ ಕೀಳ್ಯಾವುದೊ" ಚಿತ್ರದ ಮೂಲಕ ನಾಯಕನಾದರು. ಪ್ರಸ್ತುತ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮನು, ತಮ್ಮ ನೂತನ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ. ಚಿತ್ರಕ್ಕೆ "ಮುತ್ತರಸ" ಎಂದು ಹೆಸರಿಡಲಾಗಿದೆ. ಜೆ.ಕೆ.ಮೂವೀಸ್ ಲಾಂಛನದಲ್ಲಿ ಕೆ.ಎಂ.ನಟರಾಜ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಖ್ಯಾತ ನಟ ವಸಿಷ್ಠ ಸಿಂಹ, ಹಿರಿಯ ನಟರಾದ ಎಂ.ಎಸ್.ಉಮೇಶ್, ಕರಿ ಸುಬ್ಬು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಮುಂತಾದವರು ಮುಖ್ಯ ....
*ಬಿಡುಗಡೆಯಾಯಿತು ’ಸುಳಿ’ ಚಿತ್ರದ ಟ್ರೇಲರ್ ಮತ್ತು ಆಡಿಯೋ* *ತಮಿಳಿನ ಜನಪ್ರಿಯ ’ಪವಳಾಯಿ’ ಕಾದಂಬರಿಗೆ ಕನ್ನಡದಲ್ಲಿ ಚಿತ್ರರೂಪ* *80ರ ದಶಕದ ಹಿನ್ನೆಲೆಯ ಸಾಮಾಜಿಕ ಚಿತ್ರ* *ಮಹಿಳಾ ಪ್ರಧಾನ ಚಿತ್ರಕ್ಕೆ ನಿರ್ದೇಶಕಿ ರಶ್ಮಿ. ಎಸ್ (ಸಾಯಿರಶ್ಮಿ) ಆಕ್ಷನ್-ಕಟ್* 1970ರ ದಶಕದಲ್ಲಿ ಪ್ರಕಟವಾಗ ತಮಿಳಿನ ಚಿನ್ನಪ್ಪ ಭಾರತಿ ಅವರ ’ಪವಳಾಯಿ’ ಕಾದಂಬರಿ, ಕೆಲ ವರ್ಷಗಳ ಹಿಂದೆ ಕನ್ನಡ ಭಾಷೆಗೂ ಅನುವಾದವಾಗಿ ಬಿಡುಗಡೆಯಾಗಿತ್ತು. ಇದೀಗ ಈ ’ಪವಳಾಯಿ’ ಕಾದಂಬರಿ ’ಸುಳಿ’ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಸಿನಿಮಾವಾಗಿಯೂ ತೆರೆಮೇಲೆ ಬರುತ್ತಿದೆ. 2022ರಲ್ಲಿ ’ಪವಳಾಯಿ’ ಕಾದಂಬರಿಗೆ ’ಸುಳಿ’ ಎಂಬ ಹೆಸರಿನಲ್ಲಿ ಸಿನಿಮಾ ....
*ಗೆದ್ದು ಬೀಗಿದ ಏಳುಮಲೆ...ಸಿನಿಮಾ ಸಕ್ಸಸ್ ಖುಷಿಯಲ್ಲಿ ನಿರ್ಮಾಪಕ ತರುಣ್ ಸುಧೀರ್ ಹೇಳಿದ್ದೇನು?* *ಏಳುಮಲೆ ಸಿನಿಮಾಗೆ ಭರಪೂರ ಮೆಚ್ಚುಗೆ... ಸಕ್ಸಸ್ ಖುಷಿಯಲ್ಲಿ ಚಿತ್ರತಂಡ* *ಪ್ರೇಕ್ಷಕರ ಹೃದಯ ಗೆದ್ದ ಏಳುಮಲೆ...ಸಿನಿಮಾ ಸಕ್ಸಸ್ ಸಂಭ್ರಮಿಸಿದ ಚಿತ್ರತಂಡ* ಈ ವರ್ಷದ ಮತ್ತೊಂದು ಒಳ್ಳೆ ಸಿನಿಮಾಗಳ ಸಾಲಿಗೆ ಏಳುಮಲೆ ಸೇರ್ಪಡೆಗೊಂಡಿದೆ. ನಿರ್ದೇಶಕರಾಗಿ ಗೆದ್ದಿರುವ ತರುಣ್ ಸುಧೀರ್ ನಿರ್ಮಾಪಕರಾಗಿಯೂ ಸಕ್ಸಸ್ ಕಂಡಿದ್ದಾರೆ. ಅವರ ನಿರ್ಮಾಣದಲ್ಲಿ ಬಂದಿರುವ ಏಳುಮಲೆ ಚಿತ್ರಕ್ಕೆ ಪ್ರೇಕ್ಷಕರ ವಲಯದಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ನಾಯಕ ರಾಣಾ ಹಾಗೂ ನಾಯಕಿ ಪ್ರಿಯಾಂಕಾ ಆಚಾರ್ ಪ್ರೇಕ್ಷಕರ ಪ್ರೀತಿ ಪಡೆದುಕೊಂಡಿದ್ದಾರೆ. ಇನ್ನೂ ಈ ....
*ಬಿಡುಗಡೆಗೆ ರೆಡಿ ಖಾಲಿ ಡಬ್ಬ..ಇದೇ ವಾರ ಹೊಸಬರ ಸಿನಿಮಾ ತೆರೆಗೆ ಎಂಟ್ರಿ* ಹೊಸಬರ ಪ್ರಯತ್ನದ ಖಾಲಿ ಡಬ್ಬ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರ್ತಿದೆ. ಈ ಕುರಿತ ಸುದ್ದಿಗೋಷ್ಟಿಯನ್ನು ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಿನ್ನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಿನಿಮಾ ಬಿಡುಗಡೆ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನಿರ್ದೇಶಕ ಪ್ರಕಾಶ್ ಕೆ ಅಂಬ್ಳೆ ಮಾತನಾಡಿ, ಪಾತ್ರದೊಳಗಿನ ಪಾತ್ರಧಾರಿ ಅಂದರೆ ಅದು ಖಾಲಿ ಡಬ್ಬ. ಖಾಲಿ ಡಬ್ಬದಲ್ಲಿ ಒಂದಷ್ಟು ವಿಶೇಷ ಇರುತ್ತದೆ. ಅದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಈ ಸಿನಿಮಾ ರಿಲೀಸ್ ವರೆಗೂ ಬರಲು ಕಾರಣ ನಿರ್ಮಾಪಕ ಮಂಜು ಗುರಪ್ಪ. ಅವರ ಸಪೋರ್ಟ್ ನಮಗೆ ಸಿಕ್ಕಿದೆ. ಸಾಹಿತ್ಯ, ಸಂಗೀತವನ್ನು ವಿ ನಾಗೇಂದ್ರ ....
*ಹಾಡಿನಲ್ಲಿ ’ಪೀಟರ್’..ಸುಂದರಿ ಎಂದ ರಾಜೇಶ್ ಧ್ರುವ* *ಪೀಟರ್ ಸಿನಿಮಾದ ಮೊದಲ ಹಾಡು ರಿಲೀಸ್...ಸುಂದರಿ ಗೀತೆಯಲ್ಲಿ ರಾಜೇಶ್ ಧ್ರುವ ಹಾಗೂ ರವೀಕ್ಷಾ ಶೆಟ್ಟಿ ಮಿಂಚಿಂಗ್* *ಪೀಟರ್ ಸಿನಿಮಾದ ಮೆಲೋಡಿ ಗೀತೆ ಅನಾವರಣ..ಪ್ರೇಮಿಗಳಿಗೆ ಬಂತು ಸುಂದರಿ ಹಾಡು* ದೂರದರ್ಶನ ಸಿನಿಮಾ ಖ್ಯಾತಿಯ ನಿರ್ದೇಶಕ ಸುಕೇಶ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ ಪೀಟರ್ ಸಿನಿಮಾದ ಮೊದಲ ಹಾಡು ಬಿಡುಗಡೆ ಕಾರ್ಯಕ್ರಮ ನಿನ್ನೆ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. ಈ ವೇಳೆ ಇಡೀ ಚಿತ್ರತಂಡ ಉಪಸ್ಥಿತರಿದ್ದರು. ಸುಂದರಿ ಸುಂದರಿ ಎಂಬ ಮೆಲೋಡಿ ಹಾಡು ರಿಲೀಸ್ ಬಳಿಕ ಸಂಗೀತ ನಿರ್ದೇಶಕ ರಿತ್ವಿಕ್ ಮುರುಳೀಧರ್ ಮಾತನಾಡಿ, ಇದು ಮೊದಲ ಸಿನಿಮಾ ತರ ಕೆಲಸ ....
*ನಾಗಾರ್ಜುನ್ ಶರ್ಮಾ ಸಾಹಿತ್ಯದ ಶುಭಾಶಯ ಆಲ್ಬಂ ಸಾಂಗ್ ರಿಲೀಸ್* *ಹಳೆ ಗರ್ಲ್ ಫ್ರೆಂಡ್ ಗೆ ಪೃಥ್ವಿ ಅಂಬಾರ್ ಶುಭಾಶಯ.. ನಾಗಾರ್ಜುನ್ ಶರ್ಮಾ ಸಾಹಿತ್ಯದ ಆಲ್ಬಂ ಸಾಂಗ್ ಅನಾವರಣ* *ಚಿತ್ರಸಾಹಿತಿ ನಾಗಾರ್ಜುನ್ ಶರ್ಮಾ ಹೊಸ ಪ್ರಯತ್ನ... ಶುಭಾಶಯ ಆಲ್ಬಂ ಸಾಂಗ್ನಲ್ಲಿ ಮಿಂಚಿದ ಪೃಥ್ವಿ-ಅಂಜಲಿ* ಕನ್ನಡ ಚಿತ್ರರಂಗದ ಟ್ರೆಂಡಿಂಗ್ ಚಿತ್ರ ಸಾಹಿತಿ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿರುವ ಹೊಸ ಆಲ್ಬಂ ಗೀತೆ ಅನಾವರಣಗೊಂಡಿದೆ. ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ದಂಪತಿ ಶುಭಾಶಯ ಎಂಬ ಆಲ್ಬಂ ಗೀತೆಯನ್ನು ಬಿಡುಗಡೆ ಮಾಡಿ ಇಡೀ ತಂಡಕ್ಕೆ ಬೆಸ್ಟ್ ವಿಷಸ್ ತಿಳಿಸಿದರು. ಬೆಂಗಳೂರಿನ ಖಾಸಗಿ ಹೋಟೆಲ್ ....
*ಚಂದನ್ ಶೆಟ್ಟಿ ಹಾಗೂ ಆರ್ ಚಂದ್ರು ಅವರಿಂದ ಅನಾವರಣವಾಯಿತು "ಅರಸಯ್ಯನ ಪ್ರೇಮ ಪ್ರಸಂಗ" ಚಿತ್ರದ "ಪೋಸ್ಟ್ ಕಾರ್ಡ್" ಹಾಡು* . *ಟ್ರೇಲರ್ ನಲ್ಲೇ ಎಲ್ಲರ ಗಮನ ಸೆಳೆದಿರುವ ಈ ಚಿತ್ರ ಸೆಪ್ಟೆಂಬರ್ 19ರಂದು ಬಿಡುಗಡೆ* . ಮೇಘಶ್ರೀ ರಾಜೇಶ್ ನಿರ್ಮಾಣದ, ಜೆ.ವಿ.ಆರ್ ದೀಪು ನಿರ್ದೇಶನದ ಹಾಗೂ "ಫ್ರೆಂಚ್ ಬಿರಿಯಾನಿ" ಖ್ಯಾತಿಯ ಮಹಾಂತೇಶ್ ಹಿರೇಮಠ ನಾಯಕನಾಗಿ ನಟಿಸಿರುವ ಗ್ರಾಮೀಣ ಸೊಗಡಿನ ಕಾಮಿಡಿ ಕಥಾಹಂದರ ಹೊಂದಿರುವ "ಅರಸಯ್ಯನ ಪ್ರೇಮ ಪ್ರಸಂಗ" ಚಿತ್ರಕ್ಕಾಗಿ ವಿಕ್ರಮ್ ವಸಿಷ್ಠ ಅವರು ಬರೆದಿರುವ, ನಿತಿನ್ ರಾಜರಾಮ್ ಶಾಸ್ತ್ರಿ ಹಾಗೂ "ಜೋಗಿ" ಸುನಿತಾ ಅವರು ಹಾಡಿರುವ ಮತ್ತು ಪ್ರವೀಣ್ - ಪ್ರದೀಪ್ ಸಂಗೀತ ನೀಡಿರುವ "ಪೋಸ್ಟ್ ಕಾರ್ಡ್" ಹಾಡು ....
ಕಮಲ್ ಶ್ರೀದೇವಿ ಪ್ರೀ ರಿಲೀಸ್ ಇವೆಂಟ್ ಕಮಲ್ ಶ್ರೀದೇವಿ ಚಿತ್ರ ಇದೇ ವಾರ ಅಂದ್ರೆ 19ನೇ ತಾರೀಖು ರಾಜ್ಯಾದಾದ್ಯಂತ ಬಿಡುಗಡೆಯಾಗ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ನಗರದ ಮಂತ್ರಿಮಾಲ್ ನಲ್ಲಿ ಪ್ರೀ ರಿಲೀಸ್ ಇವೆಂಟ್ ಆಯೋಜಿಸಿತ್ತು. ಪ್ರೇಕ್ಷಕರ ನಡುವೆ ನಡೆದ ಈ ಕಾರ್ಯಕ್ರಮದಲ್ಲಿ ಇಡೀ ಕಮಲ್ ಶ್ರೀ ದೇವಿ ಚಿತ್ರತಂಡ ಭಾಗಿಯಾಗಿತ್ತು. ತರುಣ್ ಸುಧೀರ್ ರಿಂದ ಕಮಲ್ ಶ್ರೀದೇವಿ ಫಸ್ಟ್ ರಿವ್ಯೂ ರಾಗಿಣಿ ದ್ವಿವೇದಿಯಿಂದ ಭರವಸೆಯ ನುಡಿ ಈ ಚಿತ್ರಕ್ಕೆ ಶುಭ ಕೋರಲು ಮುಖ್ಯ ಅತಿಥಿಗಳಾಗಿ ನಿರ್ದೇಶಕ ನಿರ್ಮಾಪಕ ತರುಣ್ ಸುಧೀರ್ ಹಾಗೂ ರಾಗಿಣಿ ದ್ವಿವೇದಿ ಆಗಮಿಸಿದ್ದರು. ಹಾಗೇ ಚಿತ್ರವನ್ನ ಈಗಾಗ್ಲೇ ನೋಡಿರುವಾಗಿ, ಇದು ಅದ್ಭುತ ಕಥೆಯ ಎಳೆಯಾಗಿದ್ದು, ಸಿನಿಮಾ ಎಷ್ಟೇ ....
*ಬಿಡುಗಡೆಯಾಯಿತು ಶಶಾಂಕ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ "ಬ್ರ್ಯಾಟ್"(BRAT) ಚಿತ್ರದ "ಗಂಗಿ ಗಂಗಿ" ಹಾಡು.* . *ಬಾಳು ಬೆಳಗುಂದಿ ಸಾಹಿತ್ಯ ಹಾಗೂ ಗಾಯನಕ್ಕೆ ಅಭಿಮಾನಿಗಳು ಫಿದಾ* . ಖ್ಯಾತ ನಿರ್ದೇಶಕ ಶಶಾಂಕ್ ನಿರ್ದೇಶನದ, ಜನಪ್ರಿಯ ನಟ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಹಾಗೂ ಮಂಜುನಾಥ್ ಕಂದಕೂರ್ ನಿರ್ಮಾಣದ "ಬ್ರ್ಯಾಟ್" ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರ ಈಗಾಗಲೇ ಟೀಸರ್ ಹಾಗೂ ಹಾಡಿನ ಮೂಲಕ ಎಲ್ಲರ ಗಮನ ಸೆಳೆದಿದೆ. ಪ್ರಸ್ತುತ ಈ ಚಿತ್ರದ ಮತ್ತೊಂದು ....
ಕಮಲ್ ಶ್ರೀದೇವಿ ಟ್ರೈಲರ್ ಬಿಡುಗಡೆ ಸೆಪ್ಟೆಂಬರ್ 19ರಿಂದ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ... ಒಂದು ವಿಭಿನ್ನ ಪೋಸ್ಟರ್ ಹಾಗೂ ಟೀಸರ್ ನಿಂದ ವಿಶಿಷ್ಟವಾಗಿ ಗಮನ ಸೆಳೆದಿದ್ದ ಕಮಲ್ ಶ್ರೀದೇವಿ ಚಿತ್ರತಂಡ ಇದೀಗ ಟ್ರೈಲರ್ ಬಿಡುಗಡೆ ಮಾಡಿದೆ. ಕಮಲ್ ಶ್ರೀದೇವಿ ಚಿತ್ರದ ಟ್ರೈಲರ್ ಪೋಸ್ಟರ್, ಟೀಸರ್ ಹಾಗೂ ಹಾಡು ಎಷ್ಟು ನಿರೀಕ್ಷೆ ಹುಟ್ಟಿಸಿದ್ವೋ ಅದಕ್ಕೆ ಹತ್ತಪಟ್ಟು ಹೆಚ್ಚು ಚಿತ್ರದ ಮೇಲೆ ಭರವಸೆ ಹುಟ್ಟಿಸಿದೆ.. ತಾಂತ್ರಿಕ ಗುಣಮಟ್ಟ, ಪಾತ್ರಗಳ ವಿಶೇಷ ಕಮಲ್ ಶ್ರೀದೇವಿ ಚಿತ್ರ ಉದ್ಯಮದಲ್ಲಿ ಸಂಚಲನ ಸೃಷ್ಟಿಸೋ ಸೂಚನೆ ಕೊಡ್ತಿದೆ. ಈಗಾಗ್ಲೇ ನಿಮಗೆಲ್ಲಾ ಗೊತ್ತಿರೋ ಕಮಲ್ ಶ್ರೀದೇವಿ ಶ್ರೀ ಎನ್ ಚಲುವರಾಯ ಸ್ವಾಮಿ ಅರ್ಪಿಸಿ, ಸ್ವರ್ಣಾಂಬಿಕ ....
ಚಾಮಯ್ಯ ಸನ್ ಆಫ್ ರಾಮಾಚಾರಿ ಟ್ರೇಲರ್ ಬಿಡುಗಡೆ ‘ಚಾಮಯ್ಯ ಸನ್ ಆಫ್ ರಾಮಾಚಾರಿ’ ಚಿತ್ರದ ಎರಡನೇ ಪ್ರಚಾರ ಸಲುವಾಗಿ ಟ್ರೇಲರ್ ಬಿಡುಗಡೆ ಸಮಾರಂಭವು ಎಸ್ಆರ್ವಿ ಚಿತ್ರಮಂದಿರ ಕಿಕ್ಕಿರಿದ ಜನಸಂದಣಿಯಲ್ಲಿ ಎರಡು ನಿಮಿಷದ ಟ್ರೇಲರ್ ಅನಾವರಣಗೊಂಡಿತು. ಜೋಳಿಗೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಪಲ್ಲಕ್ಕಿ ಬರವಣಿಗೆ, ನಿರ್ದೇಶನ ಮತ್ತು ಒಂದು ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಾಧಾಕೃಷ ಪಲ್ಲಕ್ಕಿ ಬಂಡವಾಳ ಹೂಡಿದ್ದು, ಗೌತಮ್ ಪಲ್ಲಕ್ಕಿ ಮತ್ತು ವಿ.ಗೋವಿಂದರಾಜು ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ‘ಕೋಟೆ ನಾಡಿನ ನಾಗರ ಹಾವು’ ಎಂಬ ಅಡಿಬರಹವಿದೆ. ಈ ....
*SWCL ಮೊದಲ ಆವೃತ್ತಿಯ ಚಾಂಪಿಯನ್ಸ್ ಮೋನಿಕಾ ಕಲ್ಲೂರಿ ಆರ್ಟ್ಸ್ ಒಡೆತನದ "ಟೀಮ್ ಮಂಜುಳ" ತಂಡದಿಂದ ವಿಜಯೋತ್ಸವ* . *ತಂಡದ ಸದಸ್ಯರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಿದ ಮೋನಿಕಾ ಕಲ್ಲೂರಿ* . ಇತ್ತೀಚೆಗಷ್ಟೇ ದುಬೈನಲ್ಲಿ SWCL ಸ್ಯಾಂಡಲ್ ವುಡ್ ವುಮೆನ್ಸ್ ಕ್ರಿಕೆಟ್ ಲೀಗ್ ನ ಮೊದಲ ಆವೃತ್ತಿ ನಡೆದಿತ್ತು. ಮೋನಿಕಾ ಕಲ್ಲೂರಿ ಆರ್ಟ್ಸ್ ಒಡೆತನದ "ಟೀಮ್ ಮಂಜುಳಾ" ತಂಡ ಈ ಲೀಗ್ ನ ಚಾಂಪಿಯನ್ಸ್ ಆಗಿದ್ದರು. ವಿಜೇತ ತಂಡದ ಸದಸ್ಯರನ್ನು "ಟೀಮ್ ಮಂಜುಳಾ" ತಂಡದ ಒಡತಿ ಮೋನಿಕಾ ಕಲ್ಲೂರಿ ಅವರು ಇತ್ತೀಚೆಗೆ ಆತ್ಮಿಯವಾಗಿ ಸನ್ಮಾನಿಸಿ, ತಂಡದ ಸದಸ್ಯರ ಜೊತೆಗೆ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ತಂಡದ ರಾಯಭಾರಿ ನಟಿ ಅನು ಪ್ರಭಾಕರ್, ಕ್ಯಾಪ್ಟನ್ ಸಂಗೀತ ....
*ಟ್ರೇಲರ್ನಲ್ಲಿ ರೂಮ್ ಬಾಯ್..ಇದೇ 12ರಂದು ಲಿಖಿತ್ ಸೂರ್ಯ ಹೊಸ ಪ್ರಯತ್ನ ತೆರೆಗೆ ಎಂಟ್ರಿ* *ಲಿಖಿತ್ ಸೂರ್ಯ ನಟನೆಯ ರೂಮ್ ಬಾಯ್ ಟ್ರೇಲರ್ ಅನಾವರಣ..ಇದೇ 12ಕ್ಕೆ ಸಿನಿಮಾ ರಿಲೀಸ್* ಒಂದಷ್ಟು ಪ್ರತಿಭಾನ್ವಿತರ ಪರಿಶ್ರಮದಿಂದ ತಯಾರಾಗಿರುವ ’ರೂಮ್ ಬಾಯ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಕನ್ನಡದ ಖ್ಯಾತ ನಿರ್ದೇಶಕ ದಯಾಳ್ ಪದ್ಮನಾಭನ್ ಟ್ರೇಲರ್ ಅನಾವರಣ ಮಾಡಿದರು. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಿರ್ದೇಶಕ ದಯಾಳ್ ಪದ್ಮನಾಭನ್ ಸೇರಿದಂತೆ ಇಡೀ ಚಿತ್ರತಂಡ ಉಪಸ್ಥಿತರಿದ್ದರು. ನಿರ್ದೇಶಕ ದಯಾಳ್ ಪದ್ಮನಾಭನ್ ಮಾತನಾಡಿ, ನಾನು ಈಗಾಗಲೇ ಸಿನಿಮಾ ನೋಡಿದ್ದೇನೆ. ....
ರಾಮಾ ಅಂಡ್ ರಾಮು
ಟೀಸರ್ ಬಿಡುಗಡೆ;
ಪೌರಕಾರ್ಮಿಕರ ಸಮಸ್ಯೆ ಕುರಿತಾದ ಚಂದ್ರು ಓಬಯ್ಯ ನಟನೆ,
ನಿರ್ದೇಶನದ ಚಿತ್ರ
ಯೂ ಟರ್ನ್-2, ಕರಿಮಣಿ ಮಾಲೀಕ ಚಿತ್ರಗಳ ಖ್ಯಾತಿಯ ನಿರ್ದೇಶಕ ಚಂದ್ರು ಓಬಯ್ಯ ಇದೀಗ ಸಾಮಾಜಿಕ ಕಳಕಳಿ ಇರುವ ರಾಮಾ ಅಂಡ್ ರಾಮು ಚಿತ್ರವನ್ನು ನಿರ್ದೇಶನ ಮಾಡುವ ಜತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಜತೆಗೆ ಚಿತ್ರದಲ್ಲಿ ಪೌರಕಾರ್ಮಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದ ಟೀಸರ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಟಿ ಇತ್ತೀಚೆಗೆ ನಡೆಯಿತು.
ಪೌರ ಕಾರ್ಮಿಕರ ದಿನ ನಿತ್ಯ ಎದುರಿಸುತ್ತಿರುವ ಸಮಸ್ಯೆಗಳು, ಈ ಹಂತದಲ್ಲಿ ನಾಗರೀಕರ ಪಾತ್ರದ ಬಗ್ಗೆ ಈ ಚಿತ್ರದಲ್ಲಿ ಹೇಳಲಾಗಿದೆ.
'ಸೆಪ್ಟೆಂಬರ್ 10' ಸೆ. 12ರಂದು ಬಿಡುಗದೆ ಆತ್ಮಹತ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ, ಸಾಯೋಕೆ ಮಾಡೋ ಧೈರ್ಯವನ್ನು ಬದುಕುವುದಕ್ಕೆ ಮಾಡಿ ಎಂಬ ಸಾಮಾಜಿಕ ಸಂದೇಶ ಇಟ್ಟುಕೊಂಡು ಶತ ಚಿತ್ರಗಳ ಸರದಾರ ಓಂ ಸಾಯಿಪ್ರಕಾಶ್ ಅವರು ಆಕ್ಷನ್ ಕಟ್ ಹೇಳಿರುವ ಚಿತ್ರ ’ಸೆಪ್ಟೆಂಬರ್ 10' ವಿಶ್ವ ಆತ್ಮಹತ್ಯೆ ತಡೆ ದಿನದ ಸಂದರ್ಭದಲ್ಲೇ ಬಿಡುಗಡೆಯಾಗಲಿದೆ. ಸೆ.12 ರಂದು ಈ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಸೆಪ್ಟೆಂಬರ್ 10 ಚಿತ್ರಕ್ಕೆ ಹಿಂದಿನಿಂದಲೂ ಬೆಂಬಲವಾಗಿ ನಿಂತಿರುವ ವೈದ್ಯ ಡಾ.ರಾಜು ಅವರು ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದರು. ನಟ, ನಿರ್ಮಾಪಕ ಕಮಲ್ ಅವರು ಸೆಪ್ಟೆಂಬರ್ 10 ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವ ಜವಾಬ್ದಾರಿ ....
ಶಾರ್ಟ್ ಫಿಲಂ ಅಮೃತಾಂಜನ್, ಈಗ ಸಿನಿಮಾ ಆಗಿ ಪ್ರೇಕ್ಷಕರ ಮುಂದೆ.. ’ಅಮೃತ ಅಂಜನ’ ತಂದೆ ಮಗನ ಭಾಂಧವ್ಯದ ಕಥೆ.. ನಾಲ್ಕು ವರ್ಷಗಳ ಹಿಂದೆ ರಿಲೀಸಾಗಿ ಅತಿ ಹೆಚ್ಚು ವೀಕ್ಷಣೆಯಾಗಿ ಹೆಸರು ಮಾಡಿದ್ದ ಕಿರುಚಿತ್ರ ಅಮೃತಾಂಜನ್. ಜಯರಾಮ್ ಮೋಹಿತ್ (ಜೆ.ಆರ್.ಎಂ.) ಅವರ ನಿರ್ದೇಶನದ ಈ ಶಾರ್ಟ್ ಫಿಲಂ ಸೋಷಿಯಲ್ ಮೀಡಿಯಾದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಇದೀಗ ಅದೇ ಕಾನ್ಸೆಪ್ಟ್ ಇಟ್ಟುಕೊಂಡು ನಿರ್ದೇಶಕ ಜಯರಾಮ್ ಅವರು ’ಅಮೃತ- ಅಂಜನ’ ಎಂಬ ಚಲನಚಿತ್ರ ನಿರ್ದೇಶನ ಮಾಡಿದ್ದಾರೆ. ಆ ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದ್ದು ರಿಲೀಸ್ ಅನೌನ್ಸ್ ಮೆಂಟ್ ಗಾಗೇ ವಿಶೇಷ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಸುಧಾಕರ ಗೌಡ, ಗೌರವ್ ಶೆಟ್ಡಿ, ಕಾರ್ತೀಕ್ ರುವರಿ, ....
ಗ್ಯಾಂಗ್ಸ್ ಆಫ್ ಯುಕೆ ಟ್ರೈಲರ್ ಉಪೇಂದ್ರ ಬಿಡುಗಡೆ ಸೆನ್ಸಾರ್ ಮಂಡಳಿ ನಿರ್ಲಕ್ಷ್ಯ ರವಿ ಶ್ರೀವತ್ಸ ಬೇಸರ ಡೆಡ್ಲಿ ಸೋಮ, ಮಾದೇಶ ಖ್ಯಾತಿಯ ರವಿ ಶ್ರೀವತ್ಸ ಅವರ ನಿರ್ಮಾಣ ಹಾಗೂ ನಿರ್ದೇಶನದ ’ಗ್ಯಾಂಗ್ಸ್ ಆಫ್ ಯುಕೆ’ ಚಿತ್ರದ ಹಾಡು ಹಾಗೂ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ರಿಯಲ್ ಸ್ಟಾರ್ ಉಪೇಂದ್ರ ಅವರು ಟ್ರೈಲರ್ ಗೆ ಚಾಲನೆ ನೀಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ನಿರ್ಮಾಪಕ ಕೆ.ಮಂಜು, ಉಮೇಶ್ ಬಣಕಾರ್, ನ್ಯಾಯವಾದಿ ಟಿ.ಪ್ರಸನ್ನಕುಮಾರ್, ರಾಧಾಕೃಷ್ಣ ಅಡಿಗ, ಪ್ರವೀಣ್, ಉದಯ್, ಸೇತು ಮುಕುಂದನ್, ಥ್ರಿಲ್ಲರ್ ಮಂಜು ಹಾಗೂ ರವಿ ಶ್ರೀವತ್ಸ ಅವರ ಹಿತೈಶಿಗಳು ಹಾಗೂ ಸ್ನೇಹಿತರನೇಕರು ಹಾಜರಿದ್ದರು. ....
*'ಸೀಟ್ ಎಡ್ಜ್’ನಲ್ಲಿ ಕಂಡಿತು ಸಸ್ಪೆನ್ಸ್-ಥ್ರಿಲ್ಲರ್ ಝಲಕ್* *ಹೊರಬಂತು ’ವ್ಲಾಗ್-1 ದಿ ಲೂಪ್’ ಕಂಟೆಂಟ್ ವಿಡಿಯೋ* *ತೆರೆಗೆ ಬರಲು ತಯಾರಾಗುತ್ತಿದೆ ’ಸೀಟ್ ಎಡ್ಜ್’ ಚಿತ್ರ* ಯುವನಟ ಸಿದ್ಧು ಮೂಲಿಮನಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸಚಿತ್ರ ’ಸೀಟ್ ಎಡ್ಜ್’ ತೆರೆಗೆ ಬರಲು ತಯಾರಾಗುತ್ತಿದೆ. ಡಾರ್ಕ್ ಕಾಮಿಡಿಯ ಜೊತೆಗೆ ಹಾರರ್-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರುತ್ತಿರುವ ’ಸೀಟ್ ಎಡ್ಜ್’ ಸಿನಿಮಾದಲ್ಲಿ ನಾಯಕ ಸಿದ್ಧು ಮೂಲಿಮನಿ ಅವರಿಗೆ ರವೀಕ್ಷಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ರಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಲಕ್ಷ್ಮಿ ....