ವಾರ್ಡ್ ನಂ.೧೧ರಲ್ಲಿ ನಡೆಯುವ ಗಾಥೆ ವಾರ್ಡ್ ಅಂತ ಆಸ್ಪತ್ರೆ, ಪಟ್ಟಣಗಳಲ್ಲಿ ಬಳಸುವ ಪದವಾಗಿದೆ. ಈಗ ‘ವಾರ್ಡ್ ನಂ.೧೧’ ಎನ್ನುವ ಪೊಲಟಿಕಲ್ ಥ್ರಿಲ್ಲರ್ ಚಿತ್ರವೊಂದು ಸೆಟ್ಟೇರಿದೆ. ಪಾಂಡವಪುರದ ಶ್ರೀಕಾಂತ್ ಇಂಜನಿಯರಿಂಗ್ ಓದುವಾಗಲೇ ಕತೆಗಳನ್ನು ಬರೆಯುವ ಹವ್ಯಾಸ ರೂಡಿಸಿಕೊಂಡಿದ್ದರು. ಅದರಲ್ಲಿ ಇದು ಒಂದಾಗಿದೆ. ಹಲವು ನಿರ್ದೇಶಕ ಬಳಿ ಸಹಾಯಕರಾಗಿ ಕೆಲಸ, ಕಿರುಚಿತ್ರ ಸಿದ್ದಪಡಿಸಿದ್ದು, ಈಗ ಅನುಭೂತಿಯಿಂದ ಚಿತ್ರಕ್ಕೆ ರಚನೆ, ನಿರ್ದೇಶನ ಮಾಡುತ್ತಿದ್ದಾರೆ. ಕಾಲ್ಪನಿಕ ವಾರ್ಡ್‌ನಲ್ಲಿ ನಾಲ್ಕು ಗೆಳಯರು ಇರುತ್ತಾರೆ. ಅದರಲ್ಲಿ ಒಬ್ಬನ ಕೊಲೆಯಾಗುತ್ತದೆ. ಇದನ್ನು ತನಿಖೆ ....
ಸಂಪ್ರದಾಯ ಮತ್ತು ಸ್ವಾದಕ್ಕೆ ಮತ್ತೋಂದು ಹೆಸರು ಓಗರ ಓಗರ ಅಂದರೆ ಕರ್ನಾಟಕದಲ್ಲಿ ಅನ್ನ ಎಂದರ್ಥ ಕೊಡುತ್ತದೆ. ಸ್ವಾದಿಷ್ಟ ಆರೋಗ್ಯಕರ ಅಡುಗೆಯನ್ನು ದಿಢೀರ್ ತಯಾರಿಸಲು ಸಾಂಪ್ರದಾಯಿಕ ಮಸಾಲಾ ಮಿಶ್ರಣಗಳ ಶ್ರೀಮಂತ ಪರಂಪರೆಯನ್ನು ಇದು ಮನೆ ಮನೆಗೆ ತರುತ್ತದೆ. ಇದರಲ್ಲಿ ತಯಾರಾಗುವ ಸಿದ್ದ ತಿನಿಸುಗಳು ಗ್ರಾಹಕರ ನಾಲಿಗೆಗೆ ರುಚಿಕರವಾಗಿ ಧೀರ್ಘಕಾಲದವರೆಗೂ ಉಳಿಸುತ್ತದೆ. ಶ್ರೀಚಕ್ರ ಫುಡ್ಸ್ ಅಂಡ್ ಬಿವರೇಜಸ್ (ಪ್ರೈ) ಲಿ. ಸಂಸ್ಥೆಯ ‘ಓಗರ’ ಮಾಲೀಕ ರಘುನಾಥ್ ರಾಷ್ಟದಲ್ಲಿ ಅಂದಾಜು ೫೦ ಸಾವಿರ ಓಗರ ಮಳಿಗೆ ಸ್ಥಾಪಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ೮ ಸಾವಿರ ಮಳಿಗೆಗಳು, ....
ಪ್ರಚಲಿತ ಶೋಷಿತ ಮಹಿಳೆಯ ಪ್ರತಿನಿಧಿ ರಂಗನಾಯಕಿ ಅನುಗಾಲದಿಂದಲೂ ಹೆಣ್ಣು ಮಕ್ಕಳಿಗೆ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿ ಅತ್ಯಾಚಾರವಾಗುತ್ತಿದೆ. ಈ ಪದವೇ ಹೆಣ್ಣಿಗೆ ಶಿಕ್ಷೆಯಾಗಿದೆ ಎಂದು ಖಾರವಾಗಿ ತಾರ ಮಾತನಾಡಲು ‘ರಂಗನಾಯಕಿ’ ಚಿತದ ಟ್ರೈಲರ್ ಬಿಡುಗಡೆ ಕಾಯಕ್ರಮವು ವೇದಿಕೆಯಾಗಿತ್ತು. ಒಂಬತ್ತು ತಿಂಗಳು ಗರ್ಭದಲ್ಲಿ ಭಾರವನ್ನು ಹೊತ್ತುಕೊಂಡು, ನಂತರವು ಅದರ ನೊಗವನ್ನು ಹೊರುತ್ತಲೆ ಇರುತ್ತಾಳೆ. ಎಲ್ಲಿಯವರೆಗೂ ಇಂತಹ ದೌರ್ಜನ್ಯ ನಿಲ್ಲವುದಿಲ್ಲವೋ ಅಲ್ಲಿಯವರೆಗೂ ಸ್ರೀಯರ ನಂಜು ಕಡಿಮೆಯಾಗುವುದಿಲ್ಲ್ಲವೆಂದು ಅಭಿಪ್ರಾಯ ಪಟ್ಟರು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ....
ಹಲವು ವಿಶೇಷತೆಗಳ ವಿಷ್ಣು ಪ್ರಿಯ ನೂತನ ಚಿತ್ರ ‘ವಿಷ್ಣು ಪ್ರಿಯ’ದಲ್ಲಿ ಒಂಬತ್ತು ಔನ್ನತ್ಯಗಳು ಇರುವುದರಿಂದ ಸುದ್ದಿಯಾಗಲು ಕಾರಣವಾಗಿದೆ. ಮೊದಲನೆಯದಾಗಿ ಹಿರಿಯ ನಿರ್ಮಾಪಕ ಕೆ.ಮಂಜು ಬ್ಯಾನರ್‌ದಲ್ಲಿ ೪೫ನೇ ಚಿತ್ರವಾಗಿದ್ದು, ಅವರ ಹೃದಯದಿಂದ ಬಂದಂತ ಶೀರ್ಷಿಕೆ, ಹಾಗೂ ಮೂರು ಭಾಷೆಯಲ್ಲಿ ಬರುವ ಸಾದ್ಯತೆ ಇದೆ. ಎರಡನೆಯದಾಗಿ ಪ್ರೀತಿ ಎಂದರೆ ಏನು ಎಂಬುದನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಪೋಷಕರಿಗೆ ಮಕ್ಕಳು ಯಾವ ರೀತಿ ಗೌರವ ಕೊಡಬೇಕು, ಹಿರಿಯರಾದವರು ಯುವ ಪ್ರೇಮಿಗಳಿಗೆ ಪ್ರೋತ್ಸಾಹ ನೀಡಬೇಕು. ಕೃತಕವಲ್ಲದ ೯೦ರ ದಶಕದ ಪ್ರೀತಿ ಕತೆ, ಸಂಬಂದಗಳ ಮೌಲ್ಯಗಳು ....
ಚಿತ್ರಮಂದಿರದಲ್ಲಿ ವಿಷ್ಣು ಸರ್ಕಲ್ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಹೆಸರನ್ನು ಬಳಸಿಕೊಂಡು ಬಂದಿರುವ ಬಹುತೇಕ ಚಿತ್ರಗಳು ಯಶಸ್ಸನ್ನು ಕಂಡಿದೆ. ಅದರ ಪಸೆಯಿಂದಲೇ ‘ವಿಷ್ಣು ಸರ್ಕಲ್’ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಹಾಫ್ ಮೆಂಟಲ್ ನಿರ್ದೇಶನ ಮಾಡಿರುವ ಲಕ್ಷೀದಿನೇಶ್ ಕತೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ ಅಂತ ಉಪಶೀರ್ಷಿಕೆಯಲ್ಲಿ ಹೇಳಿರುವಂತೆ ಪ್ರತಿಯೊಬ್ಬರ ಜೀವನಾಂಶ ಸಾರುವ ಸಾರಾಂಶವಾಗಿದೆ. ಒಳ್ಳೆ ಕತೆಯನ್ನು ಬ್ಲೆಂಡ್ ಮಾಡಿ ಅದಕ್ಕೆ ಪ್ರಯೋಗಾತ್ಮಕ ಚಿತ್ರವಾಗುವಂತೆ ಸ್ಪರ್ಶ ನೀಡಲಾಗಿದೆ. ಹಿಂದಿನ ಸಿನಿಮಾದಲ್ಲಿ ಪ್ರೀತಿಯ ಹುಡುಕಾಟ ಏನೆಂಬುದನ್ನು ....
ತೆಲುಗು, ತಮಿಳು, ಹಿಂದಿ ಭಾಷೆಗೆ ನನ್ನ ಪ್ರಕಾರ ಬಾಲಿವುಡ್, ಕಾಲಿವುಡ್, ಟಾಲಿವುಡ್ ಮತ್ತು ಮಾಲಿವುಡ್ ಉದ್ಯಮವು ಸ್ಯಾಂಡಲ್‌ವುಡ್ ಕಡೆ ಗಮನ ಹರಿಸುತ್ತಿರುವುದು ಇಲ್ಲಿನ ಚಿತ್ರಗಳು ಅಲ್ಲಿಗೆ ಹೋಗುತ್ತಿರುವುದು ಹೆಮ್ಮೆಯ ಬೆಳವಣಿಗೆಯಾಗಿದೆ. ಆ ಸಾಲಿಗೆ ಎರಡು ವಾರದ ಹಿಂದೆ ಬಿಡುಗಡೆಯಾದ ‘’ನನ್ನ ಪ್ರಕಾರ’ ಸಿನಿಮಾವು ಸೇರ್ಪಡೆಯಾಗಿದೆ. ಸೆಸ್ಪನ್ಸ್, ಥ್ರಿಲ್ಲರ್ ಕತೆಯಾಗಿದ್ದು, ನೋಡಿದವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಚನೆ, ನಿರ್ದೇಶನ ಮಾಡಿರುವ ವಿನಯ್‌ಬಾಲಾಜಿ ಹೇಳುವಂತೆ ತಮಿಳು, ತೆಲುಗು ಡಬ್ಬಿಂಗ್ ಹಕ್ಕುಗಳು ಮಾರಾಟವಾಗಿದೆ. ....
ಪ್ರಪಂಚ ದಾಖಲೆಗೆ ಅರ್ಹಗೊಂಡ ಚಿತ್ರ ಬಿಂಬ ಒಂದೇ ಸ್ಥಳ, ಕಲಾವಿದ, ದೃಶ್ಯ ಹಾಗೂ ಸಂಗೀತ ಇರಲಿರುವ ‘ಬಿಂಬ’ ಚಿತ್ರವು ಈಗ ಗಿನ್ನಿಸ್ ದಾಖಲೆಗೆ ಸರಿಸಮನಾದ ಕೊಲ್ಕತ್ತಾದಲ್ಲಿರುವ ‘ಯುಆರ್‌ಎಫ್’ ಸಂಸ್ಥೆಯು ಗುರುತಿಸಿದೆ. ಇದರನ್ವಯ ಪ್ರಮಾಣಪತ್ರ ವಿತರಣೆ ಮಾಡಲು ಸಂಸ್ಥೆಯ ಮುಖ್ಯ ಸಂಪಾದಕ ಸುನಿಲ್‌ಜೋಸಫ್ ಆಗಮಿಸಿದ್ದರು. ಅವರು ಮಾತನಾಡಿ ಮಲೆಯಾಳಂದಲ್ಲಿ ಒಂದೇ ಸ್ಥಳದಲ್ಲಿ ೨.೧೦ ಗಂಟೆಯ ಸಿನಿಮಾವೊಂದು ಬಂದಿದ್ದು, ಅದರಲ್ಲಿ ಹಲವು ಕಲಾವಿದರು ಕಾಣಿಸಿಕೊಂಡಿದ್ದರು. ಆದರೆ ಇದರಲ್ಲಿ ಒಬ್ಬರೆ ಇರುವುದರಿಂದ ದಾಖಲೆಗೆ ಅರ್ಹಗೊಂಡಿರುವುದಾಗಿ ಸಭೆಯು ನಿರ್ಣಯ ತೆಗೆದುಕೊಂಡಿದೆ. ಬಿಂಬ ಆ ತೊಂಬತ್ತು ನಿಮಿಷಗಳಲ್ಲಿ ಒಬ್ಬರೆ ಸಂಭಾಷಣೆ ....
ಸ್ಮೈಫಾ ೨೦೧೯ ಕಿರುಚಿತ್ರಗಳ ಉತ್ಸವ ಕಿರುಚಿತ್ರಗಳು ಪ್ರತಿಭಾವಂತರಿಗೆ ವೇದಿಕೆ ಯಾಗುತ್ತದೆ. ಅದರಂತೆ ಉತ್ತಮ ಚಿತ್ರಗಳನ್ನು ಸಿದ್ದಪಡಿಸಿದ ತಂತ್ರಜ್ಘರು, ಕಲಾವಿದರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡುವ ಕಾರ್ಯಕ್ರಮ ‘ಸ್ಮೈಫಾ ೨೦೧೯ ಅವಾರ್ಡ್ಸ್” ಇತ್ತೀಚೆಗೆ ಪಂಚತಾರ ಹೋಟೆಲ್‌ದಲ್ಲಿ ಅದ್ದೂರಿಯಾಗಿ ನಡೆಯಿತು. ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ ಶಾರ್ಟ್ ಫಿಲ್ಮ್‌ಗಳ ಒಟ್ಟು ಸಂಖ್ಯೆ ೨೬೦. ಹಿರಿಯ ಸಾಹಿತಿ, ವಿಮರ್ಶಕ ಜೋಗಿ, ಬರಹಗಾರ, ನಿರ್ದೇಶಕ ತರುಣ್‌ಸುಧೀರ್, ಕೆಜಿಎಫ್ ಖ್ಯಾತಿಯ ಛಾಯಾಗ್ರಾಹಕ ಭುವನ್‌ಗೌಡ, ದೇವಕಿ ನಿರ್ದೇಶಕ ಲೋಹಿತ್ ತೀರ್ಪುಗಾರರಾಗಿ ಎಲ್ಲಾ ಭಾಷೆಯ ....
ಕಿರು ಚಿತ್ರದ ಕತೆ ಸಿನಿಮಾ ಆಗುತ್ತಿದೆ ಚಂದನವನದಲ್ಲಿ ಚಿತ್ರ ಶುರು ಮಾಡುವ ಮುನ್ನ ಸದ್ದು ಮಾಡುವುದು, ಅರ್ಧ ಕೆಲಸ ಮುಗಿಸಿದ ನಂತರ ಸುದ್ದಿ ನೀಡುವುದು. ಬಿಡುಗಡೆ ಪೂರ್ವ ಸಂದರ್ಭದಲ್ಲಿ ಅದ್ದೂರಿ ಕಾರ್ಯಕ್ರಮ ಏರ್ಪಡಿಸುವುದು. ಮೇಲಿನ ಮೂರು ವರ್ಗಗಳಲ್ಲಿ ‘ಜಗ್ಗಿ ಜೊತೆ ಜಾನು’ ಚಿತ್ರವು ಮೊದಲನೇ ವರ್ಗಕ್ಕೆ ಸೇರುತ್ತದೆ. ವರ್ಷದ ಕೊನೆ ತಿಂಗಳಲ್ಲಿ ಆರಂಭಿಸಲು ಯೋಜನೆ ರೂಪಿಸಿದ್ದು, ಪ್ರಚಾರದ ಮೊದಲ ಹಂತವಾಗಿ ಶರಣ್ ಅವರಿಂದ ಪೋಸ್ಟರ್‌ನ್ನು ಅನಾವರಣಗೊಳಿಸಿದ್ದಾರೆ. ಶೀರ್ಷಿಕೆ ಹೇಳುವಂತೆ ಪ್ರೀತಿ, ಭಾವನೆಗಳು, ಸಾಹಸ, ಹಾಸ್ಯ ಜೊತೆಗೆ ಸಾಮಾಜಿಕ ಅಂಶಗಳು ಬರಲಿದೆ. ಪಯಣದಲ್ಲಿ ಕತೆಯು ಬರುವುದು ....
ಮಾಸ್ಟರ್ ಆನಂದ್‌ಗೆ ಹಗಲು ಕನಸು ಬಾಲ ನಟ, ಪೋಷಕ ಪಾತ್ರಗಳು, ಕಿರುತೆರೆ ಸ್ಟಾರ್ ನಿರೂಪಕ ಮಾಸ್ಟರ್ ಆನಂದ್ ‘ಹಗಲು ಕನಸು’ ಚಿತ್ರದಲ್ಲಿ ಮೊದಲಬಾರಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಶೀರ್ಷಿಕೆ ಹೇಳುವಂತೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಕೆಂಡ್‌ನಲ್ಲಿ ನಡೆಯುವ ಕತೆ ಇರುವುದು ವಿಶೇಷ. ಕಥಾನಾಯಕ ವಿಕ್ರಮಾದಿತ್ಯ ಆಲಿಯಾಸ್ ವಿಕ್ರಂಗೆ ಪ್ರತಿ ಬಾರಿ ಕುತ್ತಿಗೆ ಮೇಲೆ ಮಚ್ಚೆ ಇರುವ ಮುಖ ಕಾಣಿಸದ ಹುಡುಗಿಯೊಬ್ಬಳು ಸಿಕ್ಕಂತೆ ಕನಸು ಕಾಣುತ್ತಿರುತ್ತಾನೆ. ಸೋಜಿಗ ಎನ್ನುವಂತೆ ಒಮ್ಮೆ ಅದೇ ತರಹದ ಹುಡುಗಿಯೊಬ್ಬಳು ಮನೆ ಪ್ರವೇಶಿಸಿದಾಗ ಮನೆಯಲ್ಲಿರುವ ಇಬ್ಬರು ಅಳಿಯಂದಿರು, ಅಮ್ಮನಿಗೆ ....
ಲುಂಗಿ ಟ್ರೈಲರ್ ಬಿಡುಗಡೆ ಮಾಡಿದ ರಕ್ಷಿತ್‌ಶೆಟ್ಟಿ ಮಂಗಳೂರು ಸೊಗಡಿನ ‘ಲುಂಗಿ’ ಚಿತ್ರಕ್ಕೆ ಅದೇ ಭಾಗದವರಾದ ರಕ್ಷಿತ್‌ಶೆಟ್ಟಿ ಟ್ರೈಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ನಂತರ ಮಾತನಾಡುತ್ತಾ ತುಣುಕುಗಳನ್ನು ನೋಡಿದ್ದೇನೆ. ಅದ್ಬುತವಾಗಿ ಮೂಡಿಬಂದಿದೆ. ಬಹಳ ವರ್ಷಗಳ ಹಿಂದೆ ನಿರ್ದೇಶಕರು ಆಯಾ ಜಿಲ್ಲೆಯ ಭಾಷೆಯನ್ನು ಟಚ್ ಮಾಡುತ್ತಿರಲಿಲ್ಲ. ಕಾಲ ಬದಲಾದಂತೆ ಈಗಿನ ತಂತ್ರಜ್ಘರು ಹೆಚ್ಚಾಗಿ ಕಡಲತೀರದ ಭಾಷೆಯ ಕುರಿತಂತೆ ಚಿತ್ರಗಳನ್ನು ಮಾಡುತ್ತಿದ್ದಾರೆ. ಒಳ್ಳೆ ಸಿನಿಮಾ ಮಾಡಿದಾಗ ವಿತರಕರ ಕಚೇರಿ ತಾನಾಗೆ ತೋರಿಸುತ್ತದೆ. ಕರ್ನಾಟಕದ ಒಂದೊಂದು ಭಾಗದಿಂದ ತಂಡವು ಬಂದು ಅಲ್ಲಿನ ಕತೆ ಆರಿಸಿಕೊಂಡು ಚಿತ್ರ ಮಾಡಿದಾಗ ....
ಪರಿಮಳ ಲಾಡ್ಜ್ ನಿರ್ದೇಶಕರಿಗೆ ದರ್ಶನ್ ಪ್ರಶಂಸೆ ೭೦ರ ದಶಕದಲ್ಲಿ ಶ್ರೀನಾಥ್, ಮಂಜುಳಾ ಅಭಿನಯದ ‘ಪಾಯಿಂಟ್ ಪರಿಮಳ’ ಚಿತ್ರವೊಂದು ತೆರೆಕಂಡಿತ್ತು. ಈಗ ‘ಪರಿಮಳ ಲಾಡ್ಡ್’ ವಿಡಂಭನೆ, ಮನರಂಜನೆ ಕುರಿತಾದ ಚಿತ್ರವು ನಿರ್ಮಾಪಕರ ಹುಟ್ಟುಹಬ್ಬದಂದು ಮಹೂರ್ತ ನೆರೆವೇರಿತು. ಸಂಜೆ ಟೀಸರ್‌ಗೆ ಚಾಲನೆ ನೀಡಿದ ದರ್ಶನ್ ನಿರ್ದೇಶಕರ ಬುದ್ದಿವಂತಿಕೆಯನ್ನು ಕೊಂಡಾಡಿ ತಂಡಕ್ಕೆ ಶುಭ ಹಾರೈಸಿದರು. ಒಬ್ಬ ಮಹಿಳೆ, ಪೀಪಿ ಊದುವವ, ಲೇಡಿ ಟ್ರಾಫಿಕ್‌ಇನ್ಸ್‌ಪೆಕ್ಟರ್, ಇಬ್ಬರು ಯುವಕರು ಸೇರಿದಂತೆ ಎಲ್ಲರದು ಸೊಂಟದ ಕೆಳಗಿನ ಭಾಷೆ ಬಳಸಿದಕ್ಕಾಗಿ ಹಿರಿಯ ಪೋಲೀಸ್ ಅಧಿಕಾರಿಗೆ ದೂರು ಕೊಡಲು ಬರುವುದು. ....
ಹೊಸ ತನಿಖೆ ಎರಡೂವರೆ ದಶಕಗಳ ಹಿಂದೆ ಗುಲ್ಜಾರ್‌ಖಾನ್ ನಟನೆ,ನಿರ್ಮಾಣ,ನಿರ್ದೇಶನದ ‘ತನಿಖೆ’ ಸಿನಿಮಾ ಬಿಡುಗಡೆಗೊಂಡಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಹಾಗಂತ ಅದಕ್ಕೂ ಇದಕ್ಕೂ ಸಂಬಂದವಿಲ್ಲ. ಕನಕಪುರದಲ್ಲಿ ಎಂಬತ್ತು ವರ್ಷಗಳ ಹಿಂದೆ ನಡೆದಂತ ಸತ್ಯ ಘಟನೆಯ ಒಂದು ಏಳೆಯನ್ನು ತೆಗೆದುಕೊಳ್ಳಲಾಗಿದೆ. ಪ್ರಪಂಚದಲ್ಲಿ ಇರುವವರೆಲ್ಲಾ ದುರುಳರು ಅಂತ ತಿಳಿದಿದ್ದ ಕೆಟ್ಟವ್ಯಕ್ತಿಯೊಬ್ಬ ಎಲ್ಲರನ್ನು ಸಾಯಿಸುತ್ತಾ, ಕೊನೆಗೆ ಮನಸ್ಸನ್ನು ಸನ್ಮಾರ್ಗಕ್ಕೆ ತಂದುಕೊಂಡು ಕಾಡಿಗೆ ಹೋಗುತ್ತಾನೆ. ಕೇಸ್‌ನ್ನು ಗಂಭೀರವಾಗಿ ತೆಗೆದುಕೊಂಡ ಪೋಲೀಸರು ಆತ ಇರುವಲ್ಲಿಗೆ ತೆರಳಿ ಅಪರಾಧಿಯನ್ನು ....
ವಾಹಿನಿ ಪತ್ರಕರ್ತರ ಗೋರಿ ಪ್ರತಿಭೆ ಎನ್ನುವುದು ಎಲ್ಲಿ ಬೇಕಾದರೂ ಅಡಗಿರುತ್ತದೆ ಎಂಬುದಕ್ಕೆ ಸಾಕ್ಷಿ ‘ಗೋರಿ’ ಚಿತ್ರ . ಪ್ರೀತಿಯ ಸಮಾಧಿ ಅಂತ ಉಪಶೀರ್ಷಿಕೆಯಲ್ಲಿ ಹೇಳಿಕೊಂಡಿರುವ ಬಹುತೇಕ ತಂಡವು ಉತ್ತರ ಕರ್ನಾಟಕದವರೇ ಆಗಿರುವುದು ವಿಶೇಷ. ವಾಹಿನಿಯ ಸಿನಿಮಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಕಿರಣ್‌ಹಾವೇರಿ ನಾಯಕ, ಹಾಗೂ ಎಂ.ಹೆಚ್.ಜಗ್ಗೀನ್ ಒಂದು ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಪ್ರೀತಿ ಮತ್ತು ಸ್ನೇಹದ ಕುರಿತಾದ ಕತೆಯಲ್ಲಿ ಜಾತಿ ಮತ್ತು ಧರ್ಮಕ್ಕಿಂತ ಮಿಗಿಲಾದುದು ಸ್ನೇಹ,ಪ್ರೀತಿ. ಇವರೆಡಕ್ಕಿಂತಲೂ ಮಿಗಿಲಾದುದು ಮಾನವಿಯತೆ. ಮೂರು ವ್ಯಕ್ತಿಗಳು ಒಂದೇ ಕತೆಯನ್ನು ಹೇಳುತ್ತಾರೆ. ಪ್ರತಿಯೊಂದು ....
ದಾರಿ ಬಿಡಿ ಪುಣ್ಯಾತ್‌ಗಿತ್ತೀರು ಬರುತ್ತಿದ್ದಾರೆ ಹೆಣ್ ಮಕ್ಕಳೇ ಸ್ಟ್ರಾಂಗ್ ಗುರು ಎನ್ನುವಂತೆ ‘ಪುಣ್ಯಾತ್‌ಗಿತ್ತೀರು’ ಸಿನಿಮಾದಲ್ಲಿ ನಾಯಕರಹಿತ, ನಾಲ್ವರು ಹುಡುಗಿಯರು ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನೆಲ ಡೊಂಕಿದ್ರು ಕುಣಿತೀವಿ ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ. ರಚನೆ, ನಿರ್ದೇಶನ ಮಾಡಿರುವುದು ರಾಜ್.ಬಿ.ಎನ್. ಕತೆಯ ಕುರಿತು ಹೇಳುವುದಾದರೆ ಪಿಜಿದಲ್ಲಿ ಉಳಿದುಕೊಂಡಿದ್ದ ನಾಲ್ವರು ಅನಾಥ ಹುಡುಗಿಯರು ಮೋಸ ಮಾಡುತ್ತಾ ಜೀವನ ಸಾಗಿಸುತ್ತಿರುತ್ತಾರೆ. ಒಂದು ಘಟನೆ ನಡೆದಾಗ, ಅವರ ಗುಣಗಳು ಬದಲಾಗಿ ಸಮಾಜಕ್ಕೆ ಒಳ್ಳೆ ಕೆಲಸ ....
ಅಂದು ತಮಸ್ಸು ಇಂದು ತಮಸ್ ಶಿವರಾಜ್‌ಕುಮಾರ್ ಅಭಿನಯದಲ್ಲಿ ‘ತಮಸ್ಸು’ ಚಿತ್ರವೊಂದು ತೆರೆಕಂಡು ಹಿಟ್ ಆಗಿತ್ತು. ದಶಕಗಳ ನಂತರ ಈಗ ‘ತಮಸ್’ ಎನ್ನುವ ಸಿನಿಮಾ ಸೆಟ್ಟೇರಿದೆ. ಎರಡು ಶೀರ್ಷಿಕೆಗೂ ಕತ್ತಲು ಅರ್ಥ ಕೊಡಲಿದ್ದು, ಹೊಸ ಚಿತ್ರದ ಪದ ಸಂಸ್ಕ್ರತದಲ್ಲಿ ಇದೆಯಂತೆ. ವಿಜಯಲಕ್ಷೀ ಮಂಜುನಾಥರೆಡ್ಡಿ ಕಾದಂಬರಿ ಆಧಾರಿತದಲ್ಲಿ ತ್ರಿಕೋನ ಪ್ರೇಮಕತೆ ಇರುವುದು ವಿಶೇಷ. ಕುರುಡನೊಬ್ಬ ಅಂದರ ಆಶ್ರಮದಿಂದ ಸ್ವಾಬಲಂಬಿಯಾಗಿ ಬದುಕಲು ಹೊರಬರುತ್ತಾನೆ. ಸರ್ಕಾರವು ನೀಡುವ ಮಾಶಾಸನ ಜೊತೆಗೆ ತನ್ನಲ್ಲಿರುವ ಸಾಹಿತ್ಯದ ಪ್ರತಿಭೆಯಿಂದ ಜೀವನ ನಡೆಸುತ್ತಾನೆ. ಚಿಕ್ಕಂದಿನಿಂದಲೂ ಇವನೊಂದಿಗೆ ಇರುವ ....
ಫ್ಯಾನ್‌ಗೆ ಜನರು ಅಭಿಮಾನಿಗಳಾದರು ಅಭಿಮಾನಿಯ ಅಭಿಮಾನದ ಕತೆ ಅಂತ ಹೇಳಿಕೊಂಡಿರುವ ‘ಫ್ಯಾನ್’ ಚಿತ್ರಕ್ಕೆ ಎಲ್ಲಾ ಕಡೆಗಳಿಂದ ಪ್ರಶಂಸೆ ವ್ಯಕ್ತವಾಗಿದೆ. ಇದರ ಖುಷಿಯಲ್ಲೆ ತಂಡವು ನಾಲ್ಕು ದಿನಗಳ ನಂತರ ಚಿತ್ರದ ಬೆಳವಣಿಗೆಗಳ ಕುರಿತಂತೆ ಮಾತನಾಡಿಕೊಂಡಿತು. ನಿರ್ಮಾಪಕರ ಪರವಾಗಿ ಆಗಮಿಸಿದ್ದ ಕಾರ್ಯಕಾರಿ ನಿರ್ಮಾಪಕ ರಾಜಮುಡಿದತ್ತ ಮಾತನಾಡಿ ಪ್ರಾರಂಭದಿಂದಲೇ ಒಳ್ಳೆ ಒಪನಿಂಗ್ ತೆಗೆದುಕೊಂಡಿದೆ. ಮಾದ್ಯಮದವರು ಉತ್ತಮ ವಿಮರ್ಶೆ ಬರೆದಿರುವುದರಿಂದ ಇದಕ್ಕೆಲ್ಲಾ ಕಾರಣವಾಗಿದೆ. ನೆರೆಹಾವಳಿಗೆ ಸಹಾಯ ಮಾಡಲು ತಂಡವು ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆ. ಕಷ್ಟದಲ್ಲಿರುವ ಜನರಿಗೆ ....
ತಾಯಂದಿರುಗಳಿಂದ ಹಾಡುಗಳ ಅನಾವರಣ ಹುಟ್ಟಿದ ತಕ್ಷಣ ಕಂದನ ಅಳು ಸಂಗೀತವಾಗಿರುತ್ತದೆ. ಇದಕ್ಕೆ ಕಾರಣರಾಗಿರುವುದು ತಂದೆ-ತಾಯಿ. ಅದಕ್ಕಾಗಿ ಕಲಾವಿದರು, ತಂತ್ರಜ್ಘರ ಅಮ್ಮಂದಿರು ನಮ್ಮ ಚಿತ್ರದ ಲಿರಿಕಲ್ ಹಾಡುಗಳನ್ನು ಬಿಡುಗಡೆ ಮಾಡುವ ವಿನೂತನ ಪರಿಕಲ್ಪನೆ ಅಂತ ನಟ,ನಿರ್ಮಾಪಕ ಸೃಜನ್‌ಲೋಕೇಶ್ ತಮ್ಮದೆ ಲೋಕೇಶ್ ಪ್ರೊಡಕ್ಷನ್ಸ್ ಮೊದಲ ಕಾಣಿಕೆ ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದ ಕಾರ್ಯಕ್ರಮದಲ್ಲಿ ಹೇಳುತ್ತಾ ಮೈಕನ್ನು ಎಲ್ಲರಿಗೂ ಹಸ್ತಾಂತರಿಸಿದರು. ಹೊರಗಡೆ ಟಾಕಿಂಗ್ ಸ್ಟಾರ್ ಅಂತ ಕರೆಸಿಕೊಂಡಿರುವ ಸೃಜನ್ ಮನೆಯಲ್ಲಿ ಮಿತಭಾಷಿ. ಅವನು ಎತ್ತರಕ್ಕೆ ಬೆಳೆಯಬೇಕೆಂದು ಯಜಮಾನರ ಆಸೆ ಇತ್ತು. ....
ಸುಗಂಧಮಯ ಗೀತೆಗಳು
ಪ್ರಶಸ್ತಿ ವಿಜೇತ ನಿರ್ದೇಶಕ ಜಿ.ಮೂರ್ತಿಕತೆ,ಚಿತ್ರಕತೆ ಬರೆದುಆಕ್ಷನ್‌ಕಟ್ ಹೇಳಿರುವ ‘ಸುಗಂಧಿ’ ಹಾಡುಗಳು ಭಾನುವಾರದಂದು ನಿರ್ದೇಶಕರ ಶಾಲೆಯಆವರಣದಲ್ಲಿ ಬಿಡುಗಡೆಗೊಂಡಿತು. ತಾಯಿ ಪಾತ್ರ ನಿರ್ವಹಿಸಿರುವ ವಿನಯಾಪ್ರಸಾದ್ ಮಾತನಾಡಿಅಭಿರುಚಿಇರುವಚಿತ್ರವಾಗಿದೆ.ಮಗಳನ್ನು ಸಮಾಧಾನ ಪಡಿಸುವಒಂದುಗೀತೆ ನನಗಂತಲೇ ಬರೆಸಲಾಗಿದೆ. ಬಿಕ್ಕವಳಿದ್ದಾಗ ಶಿವರಾಮಕಾರಂತ ಅವರನ್ನು ನೋಡಿದ ನೆನಪು. ಇಂದುಅವರುಜೀವನದಗಾಥೆಯಲ್ಲಿ ನಟಿಸಿರುವುದು ಸಂತಸತಂದಿದೆಎಂದರು.
ಭಟ್ಟರ ಶಿಷ್ಯನ ಗಿರ್ಕಿ ವಿಕಟಕವಿ, ನಿರ್ದೇಶಕ ಯೋಗರಾಜಭಟ್ಟರ ಕ್ಯಾಂಪಿನಿಂದ ಮತ್ತೋಬ್ಬ ಪ್ರತಿಭಾವಂತ ಹುಡುಗ ವೀರೇಶ್.ಪಿ.ಎಂ. ‘ಗಿರ್ಕಿ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕತೆಯು ಲವ್, ಕಾಮಿಡಿ, ಸೆಸ್ಪೆನ್ಸ್, ಥ್ರಿಲ್ಲರ್ ಇರಲಿದ್ದು, ಇದರ ಮಧ್ಯೆ ಸುತ್ತುವುದರಿಂದ ಶೀರ್ಷಿಕೆ ಇದೇ ಸೂಕ್ತವಾಗಿದೆ ಅಂತ ಇದನ್ನೆ ಇಡಲಾಗಿದೆ. ಜೊತೆಗೊಂದು ಅರ್ಥಪೂರ್ಣ ಸಂದೇಶ ಹೇಳಿದ್ದು ಅದನ್ನು ಚಿತ್ರಮಂದಿರದಲ್ಲಿ ನೋಡಬೇಕು ಅಂತ ನಿರ್ದೆಶಕರು ಹೇಳುತ್ತಾರೆ. ಹಾಸ್ಯ, ಪೋಷಕ ಪಾತ್ರಗಳಲ್ಲಿ ಹೆಸರು ಮಾಡಿರುವ ತರಂಗವಿಶ್ವ ದಪ್ಪೆದಾರನಾಗಿ ವಜ್ರಮುನಿ ಹೆಸರಿನಲ್ಲಿ ಪ್ರಥಮ ಬಾರಿ ನಾಯಕನಾಗಿ ಬಡ್ತಿ ಪಡೆಯುತ್ತಿದ್ದಾರೆ. ....