ಸದ್ಯದಲ್ಲೆ ಪುಟ ೧೦೯ ಆ ಕರಾಳ ರಾತ್ರಿ ಯಶಸ್ವಿ ತಂಡದಿಂದ ಸಿದ್ದಗೊಂಡಿರುವ ‘ಪುಟ ೧೦೯’ ಚಿತ್ರದ ಕತೆಯು ಥ್ರಿಲ್ಲರ್ನಿಂದ ಕೂಡಿದೆ. ಸಿನಿಮಾದಲ್ಲಿ ಹಲವು ವಿಶೇಷತೆಗಳು ಇರಲಿದೆ. ಚಿತ್ರದ ಅವಧಿ ೯೦ ನಿಮಿಷ. ಒಟ್ಟು ೨೫ ಸನ್ನಿವೇಶಗಳು. ಅದರಲ್ಲಿ ೨೪ ಸನ್ನಿವೇಶವು ೨೮ ನಿಮಿಷದಲ್ಲಿ ಕಾಣಿಸಿಕೊಂಡರೆ, ೧ ಸನ್ನಿವೇಶ ೬೨ ನಿಮಿಷಗಳು ತೆಗೆದುಕೊಳ್ಳುತ್ತದೆ. ಎರಡು ಪಾತ್ರಧಾರಿಗಳು ಮಾತನಾಡುತ್ತಾರೆ. ಹಾಗಂತ ನೋಡುಗರಿಗೆ ಬೋರ್ ಆಗದಂತೆ ಹಲವು ಷಾಟ್ಗಳನ್ನು ವಿಭಾಗಿಸಲಾಗಿದೆ. ಎರಡು ಹಾಡುಗಳಿಗೆ ಸಂಗೀತ ಒದಗಿಸಿರುವ ಗಣೇಶ್ನಾರಾಯಣ್ ಹಿನ್ನಲೆ ಸಂಗೀತಕ್ಕೆ ೫೪ ದಿವಸ ....
ಹೋಗಬೇಕಾದರೆ ಇನ್ನೊಬ್ಬರ ಕವಚ ಆಗಿರಿ - ಶಿವರಾಜ್ಕುಮಾರ್ ಸಾಕಷ್ಟು ವರ್ಷಗಳ ನಂತರ ರಿಮೇಕ್ ಚಿತ್ರದಲ್ಲಿ ಅಭಿನಯಿಸಿರುವ ಶಿವರಾಜ್ಕುಮಾರ್ ಅಭಿನಯದ ‘ಕವಚ’ ಚಿತ್ರದ ಟೀಸರ್ ರಮಣ ಮಹರ್ಷಿ ಅಂದರ ಆಶ್ರಮದಲ್ಲಿ ಬಿಡುಗಡೆಗೊಂಡಿತು. ನಾಯಕ ಅಂದನಾಗಿರುವುದರಿಂದ ನಿರ್ಮಾಪಕರ ಅಪೇಕ್ಷಯಂತೆ ಅಂದಮಕ್ಕಳು ತಂಡಕ್ಕೆ ಶುಭ ಹಾರೈಸುವದರೊಂದಿಗೆ ಸಿನಿಮಾದ ಪ್ರಚಾರವನ್ನು ಶುರು ಮಾಡಲಾಯಿತು. ಸರದಿಯಂತೆ ಮೈಕ್ ತೆಗೆದುಕೊಂಡ ನಿರ್ದೇಶಕ ಜಿವಿಆರ್.ವಾಸು ಪ್ರಥಮ ಪ್ರತಿ ಸಿದ್ದಗೊಂಡಿದೆ. ಶಿವಣ್ಣ ಸರ್ ಹನ್ಮಾನ್ ಇದ್ದಂತೆ. ಎಲ್ಲಾ ಪಾತ್ರಕ್ಕೆ ಹೊಂದಿಕೊಳ್ಳುತ್ತಾರೆ. ....
ನಾಲ್ಕು ವರ್ಷದ ಟ್ಯೂಬ್ ಲೈಟ್ ಈಗ ಬೆಳಗುತ್ತಿದೆ ‘ಟ್ಯೂಬ್ ಲೈಟ್’ ಚಿತ್ರದ ಕಲಾವಿದರು, ತಂತ್ರಜ್ಘರು ತಮ್ಮದೇ ಕ್ಷೇತ್ರದಲ್ಲಿ ಬ್ಯುಸಿ ಇದ್ದಾರೆ. ಕತೆ ಬರೆದು ನಿರ್ದೇಶನ ಮಾಡಿರುವ ವೇಣುಗೋಪಾಲ್ ಹೇಳುವಂತೆ ಪ್ರಯಾಣದಲ್ಲಿ ಸಿನಿಮಾ ಸಾಗುವುದರಿಂದ ಹವಮಾನಕ್ಕೆ ಅನುಗುಣವಾಗಿ ಲಡಾಕ್, ಹಿಮಾಲಯ, ಶ್ರೀನಗರ, ಶಾರ್ದೂಲ ಸ್ಥಳಗಳಲ್ಲಿ ಎರಡು ಬಾರಿ ಚಿತ್ರೀಕರಣ ನಡೆಸಲಾದ ಕಾರಣ ತಡವಾಗಿದೆ. ನಾಲ್ಕು ಪಾತ್ರಗಳು ಕತೆಯನ್ನು ತೆಗೆದುಕೊಂಡು ಹೋಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ದಾರಿ ಇದ್ದೇ ಇರುತ್ತದೆ. ದಾರಿ ....
ಹೊಸಬರ ವಿನೂತನ ಶೀರ್ಷಿಕೆ ಸ್ಯಾಂಡಲ್ವುಡ್ನಲ್ಲಿ ನಾವು ಬಳಸುವ ಪದಗಳು ಶೀರ್ಷಿಕೆಗಳು ಆಗುತ್ತಿದೆ. ಅದರಂತೆ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರದ ಮಹೂರ್ತ ಕಂಠೀರವ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು. ಸಿಂಪಲ್ಸುನಿ, ತೆಲುಗು ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿರುವ ಅನೂಪ್ರಾಮಸ್ವಾಮಿಕಶ್ಯಪ್ ಮಾತನಾಡಿ ಪ್ರಚಲಿತ ಯುಗದಲ್ಲಿ ಎಲ್ಲರೂ ಆಸೆ ಪಡುವ ವಸ್ತುವಿನ ಆಧಾರದ ಮೇಲೆ ಕಾಮಿಡಿ ಡ್ರಾಮ ಚಿತ್ರವು ಸಾಗುತ್ತದೆ. ಕತೆಯಲ್ಲಿ ನಾಯಕ ಆಕೆಯ ಸಲುವಾಗಿ ಏನು ಬೇಕಾದರೂ ಮಾಡಬಲ್ಲವನು. ಒಂದು ಸನ್ನಿವೇಶದಲ್ಲಿ ಸಿಕ್ಕಿಹಾಕಿಕೊಂಡಾಗ ಅವಘಡಗಳು ಬರುತ್ತದೆ. ಅದರಿಂದ ತಪ್ಪಿಸಿಕೊಂಡು ಹೊರಗೆ ಬರ್ತರಾ ....
ಬಿಡುಗಡೆಯಾದ ರಾಂಧವ ಟ್ರೈಲರ್ ಐತಿಹಾಸಿಕ ಆಕ್ಷನ್ ಚಿತ್ರ ‘ರಾಂಧವ’ ಟ್ರೈಲರ್ ಇತ್ತೀಚೆಗೆ ಕಲಾವಿದರ ಸಂಘದಲ್ಲಿ ಅನಾವರಣಗೊಂಡಿತು. ಟ್ರೈಲರ್ಗೆ ಚಾಲನೆ ನೀಡಿದ ಮಾಜಿ ಗೃಹ ಮಂತ್ರಿ ಹಾಗೂ ಶಾಸಕ ಆರ್.ಆಶೋಕ್ ಮಾತನಾಡಿ ಭುವನ್ ಕಷ್ಟಪಟ್ಟು ಮೇಲೆ ಬರುತ್ತಿದ್ದಾರೆ. ಛಾಯಗ್ರಹಣ ಮತ್ತು ಆಕ್ಷನ್ ದೃಶ್ಯಗಳು ಚೆನ್ನಾಗಿ ಮೂಡಿಬಂದಿದೆ. ಪ್ರೇಕ್ಷಕರು ಚಿತ್ರಮಂದಿರ ಮುಂದೆ ದೂಡ್ಡ ಸಾಲು ನಿಲ್ಲುವುದರ ಮೂಲಕ ಯಶಸ್ವಿಗೊಳಿಸಬೇಕೆಂದು ಕೋರಿದರು. ಚಂದನವನವು ಉತ್ತಮ ರೀತಿಯಲ್ಲಿ ಬೆಳೆಯುತ್ತಿದೆ. ಅದರಲ್ಲಿ ಭುವನ್ಗೆ ಒಳ್ಳೆಯದಾಗಲೆಂದು ಶುಭಹಾರೈಸಿದ್ದು ಚೆಲುವಿನ ....
ನಾಲ್ಕು ಭಾಷೆಯ ಭೈರವಗೀತಾ
ಟಗರು ಖ್ಯಾತಿ ಧನಂಜಯ್. ನಾಯಕಿ ಇರಾ ಅಭಿನಯದ ನಾಯಕತ್ವದ ‘ಭೈರವ ಗೀತ’ ಚಿತ್ರವು ನಾಲ್ಕು ಭಾಷೆಗಳಲ್ಲಿ ನಟಿಸಿದ್ದು, ಟ್ರೈಲರ್ ಇತ್ತೀಚೆಗೆ ಜಿಟಿ ಮಾಲ್ದಲ್ಲಿ ಬಿಡುಗಡೆ ಗೊಂಡಿತು. ಟಗರುಗಿಂತ ಕ್ರೂರವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕರ ಆದೇಶದಂತೆ ಲಿಪ್ಲಾಕ್ ದೃಶ್ಯದಲ್ಲಿ ನಟನೆ ಮಾಡಲಾಗಿದೆ. ಮೊದಲಬಾರಿ ಬೇರೆ ಭಾಷೆಯಲ್ಲಿ ಗುರುತಿಸಿಕೊಳ್ಳುತ್ತಿರುವುದು ಖುಷಿ ತಂದಿದೆ ಎಂದು ಧನಂಜಯ್ ಹೇಳಿದರು.
ಹತ್ತು ನಿಮಿಷದ ಚಿತ್ರ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಕಿರುಚಿತ್ರ ಇಂದಿನ ಸಿನಿಮಾಸಕ್ತರಿಗೆ ಕಿರುಚಿತ್ರವು ವೇದಿಕೆಯಾಗಿದೆ. ಧೀರಜ್ ಎಂಬುವರು ‘ದಿ ಗಿಲ್ಟ್’ ಚಿತ್ರ ನಿರ್ದೇಶನ ಮಾಡುವುದರ ಜೊತೆಗೆ ಬೆಂದಕಾಳೂರು ಪಿಕ್ಚರ್ಸ್ ಮೂಲಕ ನಿರ್ಮಾಣ ಮಾಡಿದ್ದಾರೆ. ಪ್ರತಿಯೊಂದು ತೊಂದರೆಗೂ ಪರಿಹಾರ ಇರುತ್ತದೆ. ಆತ್ಮಹತ್ಯೆ ಒಂದೇ ಉತ್ತರವಾಗಿರುವುದಿಲ್ಲ. ಇದರದೆ ಕುರಿತ ಹತ್ತು ನಿಮಿಷದ ಕಿರುಚಿತ್ರಕ್ಕೆ ಹಿನ್ನಲೆ ಧ್ವನಿ ನೀಡಿರುವುದು ಉಗ್ರಂ ಶ್ರೀಮುರುಳಿ. ಹುಟ್ಟು ಎನ್ನುವುದಕ್ಕೆ ಅರ್ಥ ಇದೆ. ಅದರಂತೆ ಸಾವು ಕೂಡ ಕೆಲವು ಸಲ ಪ್ರತಿಷ್ಠೆಯಿಂದ ಆಕಸ್ಮಿಕವಾಗಿ ....
ನವಂಬರ್ ೨೯ಕ್ಕೆ ೨.೦೦ ರಜನಿಕಾಂತ್ ಅಭಿನಯದ ಅದ್ದೂರಿ ಚಿತ್ರ ‘೨.೦’ ಕೊನೆಗೂ ತಮಿಳು, ಹಿಂದಿ, ತೆಲುಗು ಭಾಷೆಯಲ್ಲಿ ೨ಡಿ,೩ಡಿ ಮತ್ತು ೪ಡಿ ವರ್ಷನ್ದಲ್ಲಿ ಸಿದ್ದಗೊಂಡಿದೆ. ಎರಡು ನಿಮಿಷದ ಟ್ರೈಲರ್ ಚೆನ್ನೈನ ಸತ್ಯಂ ಟಾಕೀಸಿನಲ್ಲಿ ಲೋಕಾರ್ಪಣೆಗೊಂಡಿತು. ನಿರ್ದೇಶಕ ಶಂಕರ್ ಹೇಳುವಂತೆ ಇಲ್ಲಿಯವರೆಗೂ ೩ಡಿ ಎಲ್ಲರಿಗೂ ತಿಳಿದಿದೆ. ಚಿತ್ರಮಂದಿರದಲ್ಲಿ ಎಲ್ಲಾ ಕಡೆಗಳಲ್ಲಿ ಸೌಂಡ್ ಸಿಸ್ಟಮ್ ಇರುತ್ತದೆ. ಆದರೆ ಈ ಚಿತ್ರದ ಸೌಂಡ್ ನೋಡುಗರ ಕಾಲುಗಳಿಗೆ ಶಬ್ದ ಬಂದಂತೆ ಭಾಸವಾಗುತ್ತದೆ. ಇದನ್ನೆ ೪ಡಿ ಅಂತ ಕರೆಯಲಾಗುತ್ತದೆ. ಇಡೀ ವಿಶ್ವದ ಸಿನಿಮಾ ಇತಿಹಾಸದಲ್ಲಿ ಇದೇ ಮೊದಲ ಪ್ರಯತ್ನವೆನ್ನಬಹುದಾಗಿದೆ. ರಜನಿ ಸರ್ ....
ಪೋಷಾಕು ಪ್ರಿಯರಿಗೆ ಮತ್ತೋಂದು ಎಫ್ಬಿಬಿ ಮಳಿಗೆ
ವರ್ಣಮಯ ಗೀತೆಗಳು
ಮೂರನೆ ಬಾರಿ ನಿರ್ದೇಶನ ಮಾಡಿರುವ ರವೀಂದ್ರವಂಶಿ ಅವರ ‘ವರ್ಣಮಯ’ ಸಿನಿಮಾದ ಕತೆಯಲ್ಲಿ ಅಂತರರಾಷ್ಟ್ರೀಯ ಚಿತ್ರಕಾರನ ಜೀವನದಲ್ಲಿ ನಡೆದ ಕತೆಯಾಗಿದ್ದರಿಂದ ಶೀರ್ಷಿಕೆ ಪೂರಕವಾಗಿದೆ. ಹಾರರ್ ಅಂದ ಮಾತ್ರಕ್ಕೆ ರಕ್ತದೋಕುಳಿ, ದೆವ್ವ, ಭೂತಗಳು ಕಾಣಿಸಿಕೊಳ್ಳುತ್ತವೆ. ಇದರಲ್ಲಿ ಇದೆಲ್ಲವು ಇರದೆ ಪುಟ್ಟ ಮಕ್ಕಳಿಂದ ವಯೋವೃದ್ದರು ನೋಡವಂತ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಭ್ರಮೆ, ದೆವ್ವ ಇದೆಯಾ ಎಂಬುದನ್ನು ನೋಡುಗರ ತೀರ್ಮಾನಕ್ಕೆ ನಿರ್ದೇಶಕರು ಬಿಟ್ಟಿದ್ದಾರೆ. ಮೂವರು ನಾಯಕಿಯರು ಮತ್ತು ಒಬ್ಬ ನಾಯಕ ಇರುವುದು ಸಹಜವಾಗಿ ಕುತೂಹಲ ಹುಟ್ಟಿಸಿದೆ.
ಎಂ ಎಲ್ ಎ ಮಾತುಗಳು ಮತುಗಾರ ಪ್ರಥಮ್ ಅಭಿನಯದ ‘ಎಂಎಲ್ಎ’ ಚಿತ್ರಕ್ಕೆ ಚಿತ್ರಮಂದಿರಕ್ಕೆ ಬರಲು ಕ್ಷಣಗಣನೆ ಶುರುವಾಗಿದೆ. ಅವರು ವಿಭಿನ್ನ ಇರುವಂತೆ ಹಾಗೂ ಪ್ರಚಲಿತ ಘಟನೆಗಳನ್ನು ಕ್ರೋಡಿಕರಿಸಿ ಅದೇ ರೀತಿಯಲ್ಲಿ ತೋರಿಸಲಾಗಿದೆ. ಮದರ್ ಪ್ರಾಮಿಸ್ ಲೆಕ್ಕಕ್ಕೆ ಸಿಗದ ಆಸಾಮಿ ಎಂಬುದು ಶೀರ್ಷಿಕೆಗೆ ಅರ್ಥ ಕೊಡುತ್ತದೆ. ಪ್ರಚಾರ ಕಾರ್ಯಕ್ಕಾಗಿ ದರ್ಶನ್ ಆಡಿಯೋ ಅನಾವರಣಗೊಳಿಸಿದ್ದರು. ಪುನೀತ್ರಾಜ್ಕುಮಾರ್ ಹಾಡುಗಳನ್ನು ಆಲಿಸಿ ಪಿಆರ್ಕೆ ಸಂಸ್ಥೆ ಮೂಲಕ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಗಣೇಶ್ ಟ್ರೈಲರ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ. ಸದ್ಯದಲ್ಲೆ ಯಶ್, ಧ್ರುವಸರ್ಜಾ ....
ಹೊಸಬರ ರಂಗಾದ ಹುಡುಗರು ಯುವ ಮನಸುಗಳು ಹಾಗೂ ಪ್ರಚಲಿತ ಘಟನೆಗಳನ್ನು ಹೆಕ್ಕಿಕೊಂಡು ‘ರಂಗಾದ ಹುಡುಗರು’ ಚಿತ್ರಕ್ಕೆ ಕತೆಯನ್ನು ಬರೆಯಲಾಗಿದೆ. ಮೂವರು ತುಂಟ ಹುಡುಗರು ಕಡಿಮೆ ಅವಧಿಯಲ್ಲಿ ದುಡ್ಡು ಮಾಡುವ ಸಲುವಾಗಿ ತಪ್ಪು ದಾರಿಗೆ ಹೋದಾಗ ಕಷ್ಟಗಳು ಹೆಗಲ ಮೇಲೆ ಬರುತ್ತವೆ. ಒಂದು ಹಂತದಲ್ಲಿ ದೇಶಪ್ರೇಮದ ವಿಷಯ ಬಂದಾಗ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡು ಹೇಗೆ ತೊಡಗಿಕೊಳ್ತಾರೆ. ಜೊತೆಗೆ ಹಿರಿಯ ನಿವೃತ್ತ ಐಪಿಎಸ್ ಅಧಿಕಾರಿಗಳ ಸಲಹೆಗಳನ್ನು ಪಡೆದುಕೊಂಡು ಭಯೋತ್ಪಾದನೆ ಸನ್ನಿವೇಶಗಳನ್ನು ಸೃಷ್ಟಿಸಲಾಗಿದ್ದು, ಅದು ಏನು ಎಂಬುದನ್ನು ಸಿನಿಮಾ ....
ಹೂರಬಂತು ರಾಜಣ್ಣನ ಮಗನ ಹಾಡುಗಳು ಕನ್ನಡ ದಿನದಂದು ‘ರಾಜಣ್ಣನ ಮಗ’ ಸಿನಿಮಾದ ಧ್ವನಿಸಾಂದ್ರಿಕೆ ಅನಾವರಣಗೊಂಡಿತು. ಟ್ರೈಲರ್ನಲ್ಲಿ ಡಿಫರೆಂಡ್ ಡ್ಯಾನಿ ನಿರ್ದೇಶನದ ಮೈ ಜುಂ ಅನಿಸುವ ಫೈಟ್ ತುಣುಕುಗಳನ್ನು ಪ್ರದರ್ಶಗೊಂಡಿತು. ಇವರ ಗುರು ಥ್ರಿಲ್ಲರ್ಮಂಜು ಹಾಗೂ ಇತರೆ ಫೈಟ್ ಮಾಸ್ಟರ್ಗಳಾದ ಜಾಲಿಬಾಸ್ಟನ್, ಮಾಸ್ಮಾದ, ಕುಂಗುಫುಚಂದ್ರು, ವಿನೋಧ್, ವಿಕ್ರಂ ಇವರುಗಳನ್ನು ಆಹ್ವಾನಿಸಿದ್ದರು. ಚಿತ್ರಕ್ಕೆ ಹರಸಲು ಇವರೆಲ್ಲರೂ ಬಂದಿರುವುದು ಚಿತ್ರರಂಗದಲ್ಲಿ ಇದೇ ಮೊದಲು ಎನ್ನಬಹುದು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಮಾತನಾಡಿ ಶೀರ್ಷಿಕೆ ....
ಡಾ.ರಾಜ್ ಕುಟುಂಬದಿಂದ ಹಾಡುಗಳ ಅನಾವರಣ ಕನ್ನಡ ರಾಜೋತ್ಸವ ದಿನದಂದು ಕಲಾವಿದರ ಸಂಘದಲ್ಲಿ ಶಿವರಾಜ್ಕುಮಾರ್ ಹೂರತುಪಡಿಸಿ ಡಾ.ರಾಜ್ಕುಮಾರ್ ಕುಟುಂಬವು ಆಗಮಿಸಿತ್ತು. ಅದಕ್ಕೆ ಕಾರಣ ವಿನಯ್ ರಾಜ್ಕುಮಾರ್ ಅಭಿನಯದ ‘ಅನಂತ್ ವರ್ಸಸ್ ನುಸ್ರತ್’ ಚಿತ್ರದ ಧ್ವನಿಸುರಳಿ ಅನಾವರಣ. ಧರ್ಮದ ಆಚರಣೆ, ಸಮಾಜ ಇದರ ಮಧ್ಯೆ ಪ್ರೀತಿ, ಪ್ರೇಮ, ವಿಶ್ವಾಸ ವಿಷಯಗಳ ಕುರಿತ ಕತೆಯಾಗಿದೆ ಎಂದು ಚಿತ್ರದಲ್ಲಿ ನಟನೆ ಮಾಡಿರುವ ದತ್ತಣ್ಣ ಕತೆಯ ಒಂದು ಏಳೆಯನ್ನು ತೆರೆದಿಟ್ಟರು. ಶೀರ್ಷಿಕೆಯನ್ನು ಅನಂತು ಮತ್ತು ನುಸ್ರತ್ ಇಡಬಹುದಿತ್ತು, ಈಗಿರುವ ಟೈಟಲ್ ಗೊಂದಲವಿದೆ ಎಂಬುದರ ಬಗ್ಗೆ ಆರೋಗ್ಯಕರ ....
ಇದು ಬೆಂಗಳೂರು ನಗರ ಮಾಡಬೇಡ ನಕರ ‘ಇದು ಬೆಂಗಳೂರು ನಗರ’ ಸಿನಿಮಾಕ್ಕೆ ಕೆ.ಪಿ.ಸೆಲ್ವರಾಜ್ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ಸಂಗೀತ, ನಿರ್ದೇಶನ ಮತ್ತು ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇವರ ಕುರಿತು ಹೇಳುವುದಾದರೆ ೧೯೮೭ರಿಂದ ಚಿತ್ರರಂಗದಲ್ಲಿ ಕ್ಲಾಪ್ಬಾಯ್, ಸಹಾಯಕ, ತಂತ್ರಜ್ಘನಾಗಿ ತರೆಹಿಂದೆ ಸಾಕಷ್ಟು ಕೆಲಸಗಳನ್ನು ಮಾಡಿಕೊಂಡು ಎಲ್ಲವನ್ನು ಕರಗತ ಮಾಡಿಕೊಂಡು ಅಂತಿಮವಾಗಿ ಚಿತ್ರ ಮಾಡುವಲ್ಲಿ ಸಪಲರಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಗಾರ್ಡನ್ ಸಿಟಿ ಎಂದು ಬೆಂಗಳೂರುನ್ನು ಕರೆಯುತ್ತಾರೆ. ಬೇರೆ ರಾಜ್ಯಗಳಿಂದ ಲಕ್ಷಾಂತರ ಜನರು ಬದುಕಿಗಾಗಿ ....
ಸಂಖ್ಯೆ ಹೆಸರಿನ ಸಿನಿಮಾ ‘೧-೧೧= -’ ಚಿತ್ರಕ್ಕೆ ಕತೆ,ಚಿತ್ರಕತೆ, ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿರುವ ಎಸ್.ಆನಂದ್ಕುಮಾರ್ ಹೇಳುವಂತೆ ಚಿತ್ರದಲ್ಲಿ ಆರು ಹುಡುಗರು ಮತ್ತು ಹುಡುಗಿಯರು ಇರುತ್ತಾರೆ. ಸಮಾಜದಲ್ಲಿ ಕೆಟ್ಟ ಸಹವಾಸದಿಂದ ಯುವಜನತೆಯು ಹಾಳಾಗುತ್ತಿದೆ. ಶ್ರೀಮಂತರ ಮಕ್ಕಳು ಡ್ರಗ್ಸ್ ವ್ಯಸನಿಯಾಗಿ, ಅರಿವಿಲ್ಲದೆ ತಪ್ಪು ದಾರಿಗೆ ಸಾಗುತ್ತಿದ್ದಾರೆ. ಮುಂದೆ ಆಗುವ ಪರಿಣಾಮಗಳಿಗೆ ತಾವೇ ಹೊಣೆಗಾರರಾಗುತ್ತಾರೆ. ನಿಮ್ಮಗಳ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿರಿ, ಅದನ್ನು ಹರಿಬಿಡಬೇಡಿರಿ. ಹೆಣ್ಣು ಮಕ್ಕಳಿಗೆ ಗೌರವ ಕೊಡಿ ಎಂದು ಸಂದೇಶದ ....
ವಿನೂತನ ಶೀರ್ಷಿಕೆ ಕುಷ್ಕ ಮಾಂಸಹಾರಿ ಸೇವಿಸುವವರಿಗೆ ‘ಕುಷ್ಕ’ ಚೆನ್ನಾಗಿ ತಿಳಿದಿರುತ್ತದೆ. ಇದೇ ಹೆಸರಿನಲ್ಲಿ ನಿಮಾವೊಂದು ಶೇಕಡ ೮೦ ರಷ್ಟು ಚಿತ್ರೀಕರಣ ನಡೆಸಿದೆ., ಕ್ರೈಮ್ ಕಾಮಡಿ ಕತೆಯಲ್ಲಿ ರಷ್ಯನ್ ಪ್ರಜೆ ಸೇರಿದಂತೆ ನಾಲ್ಕು ಪಾತ್ರಗಳು ಬರುತ್ತವೆ. ಇವರುಗಳು ಒಂದು ವಸ್ತುವಿನ ಹಿಂದೆ ಬಿದ್ದಾಗ ಏನೇನು ಘಟನೆಗಳು, ಅವಾಂತರಗಳು ಆಗುತ್ತವೆ ಎಂಬುದನ್ನು ಹಾಸ್ಯ ರೂಪದಲ್ಲಿ ತೋರಿಸಲಾಗುತ್ತದೆ. ಅದು ಏನು ಎಂಬುದನ್ನು ಸಿನಿಮಾ ನೋಡಬೇಕಂತೆ. ಮುಖ್ಯ ಪಾತ್ರದಲ್ಲಿ ಮಠ ಗುರುಪ್ರಸಾದ್ ತಲಹರಟೆ, ಇತಿ ಮಿತಿ ಇರೋಲ್ಲ. ಗುರಿ ಇಲ್ಲದೆ ಓಡಾಡ್ತಾ ಇರುವ ಕಾಮಿಡಿ ವಿಲನ್ ....
ಆಡಿಯೋ ಸಕ್ಸಸ್ ಮೀಟ್ ಭಾವನೆಗಳು, ಆಕ್ಷನ್ ತುಂಬಿಕೊಂಡಿರುವ ‘ತಾಯಿಗೆ ತಕ್ಕ ಮಗ’ ಚಿತ್ರವು ಬಿಡುಗಡೆ ಮುಂಚೆ ಯುಟ್ಯೂಬ್ನಲ್ಲಿ ಲಕ್ಷಾಂತರ ಜನರು ಕೇಳಿರುವುದರಿಂದ ಆಡಿಯೋ ಸಕ್ಸಸ್ ಆಗಿದೆ. ಇದರನ್ನಯ ಆಡಿಯೋ ಸಕ್ಸಸ್ ಮೀಟ್ ನೆಪ ಮಾಡಿಕೊಂಡು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ನಿರ್ದೇಶಕ ಶಶಾಂಕ್ ಮಾತನಾಡಿ ಜಾಲತಾಣದಲ್ಲಿ ಹಾಡುಗಳನ್ನು ಹೆಚ್ಚು ಜನರು ಕೇಳಿದರೆ, ಆಡಿಯೋ ಸಕ್ಸಸ್ ಅಂತ ಕರೆಯುತ್ತಾರೆ. ನಮ್ಮ ಚಿತ್ರದ ಹಾಡುಗಳು ದಾಖಲೆಯಾಗಿ ಇನ್ನೋಂದು ಮಜಲಿಗೆ ತೆಗೆದುಕೊಂಡು ಹೋಗಿದೆ. ಇಂತಹ ಕಾರ್ಯಕ್ರಮ ಮಾಡುತ್ತಿರುವುದು ನಾವೇ ಮೊದಲಿರಬಹುದು. ಸಿದ್ದಾಂತಕ್ಕೆ ಹೋರಾಡುವ ತಾಯಿ ಮಗನ ಕತೆಯಾಗಿದೆ. ಬಿಡುಗಡೆಗೆ ಮುಂಚೆ ಸೇಫ್ ಆಗಿದ್ದೇನೆ. ....