ಬಿಡುಗಡೆ ಸಮೀಪದಲ್ಲಿ ಯಾರಿಗೆ ಯಾರುಂಟು ಎಲ್ಲರ ಜೀವನದಲ್ಲಿ ಯಾರಿಗಾದರೂ ಯಾರುಂಟು ಇರುತ್ತಾರೆ. ಅದರಂತೆ ‘ಯಾರಿಗೆ ಯಾರುಂಟು’ ಸಿನಿಮಾದ ಕತೆಯು ಆರೋಗ್ಯಧಾಮದಲ್ಲಿ ನಡೆಯುತ್ತದೆ. ಕಥಾನಾಯಕನ ಜೀವನದಲ್ಲಿ ಮೂವರು ಹುಡುಗಿಯರು ಪ್ರವೇಶ ಮಾಡಿದಾಗ ಏನೆಲ್ಲಾ ತಿರುವುಗಳು ಪಡೆದುಕೊಳ್ಳುತ್ತವೆ ಎಂಬುದು ಒನ್ ಲೈನ್ ಸ್ಟೋರಿಯಾಗಿದೆ. ವಿನೂತನ ಎನ್ನುವಂತೆ ಚಿತ್ರದಲ್ಲಿ ರಂಗಣ್ಣ ಪಾತ್ರದ ಪರಿಚಯ ಮಾಡಿಕೊಡುವುದು ಅಲ್ಲದೆ, ಹದಿನೈದು ಸನ್ನಿವೇಶಗಳಲ್ಲಿ ಕಾಣಿಸಿಕೊಂಡು ಅದಕ್ಕೊಂದು ಟಾಂಗ್ ಕೊಡುತ್ತಾನೆ. ಈ ರಂಗಣ್ಣ ಬೇರೆ ಯಾರು ಅಲ್ಲ. ಇವನೊಬ್ಬ ನಿರ್ದೇಶಕರ ....
ದಾಖಲೆ ಚಿತ್ರಕ್ಕೆ ರಜನಿಕಾಂತ್ ಪ್ರಶಂಸೆ ವಿಶ್ವದಲ್ಲೆ ಮೊಟ್ಟ ಮೊದಲಬಾರಿಗೆ ಐ-ಫೋನ್ದಲ್ಲಿ ೨.೦೧ ಗಂಟೆ ಹದಿನೆಂಟು ಸೆಕಂಡ್ಗಳಲ್ಲಿ ಚಿತ್ರಿತಗೊಂಡ ಸಿಂಗಲ್ ಶಾಟ್ ಚಿತ್ರ ‘ಸಹಿಷ್ಣು’ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಹಿತೆಯಂತೆ ದಾಖಲೆಗೆ ಪಾತ್ರವಾಗಿದೆ. ಪ್ರಸ್ತುತ ಭಾರತದಲ್ಲಿ ಏನು ನಡೆಯುತ್ತಿದೆ. ಮನುಷ್ಯನನ್ನು ಪ್ರೀತಿಸಿ. ಮನುಜ ಮತ ವಿಶ್ವಪಥ ಎಂಬ ಕಲ್ಪನೆಯನ್ನು ತೆಗೆದುಕೊಳ್ಳಲಾಗಿದೆ. ಕತೆಯಲ್ಲಿ ನಕರಾತ್ಮಕ ಗುಣವುಳ್ಳವರು ಒಬ್ಬ ವಿಚಾರವಾದಿಯನ್ನು ಅಪಹರಿಸುತ್ತಾರೆ. ಅಲ್ಲಿಗೆ ಸಮಾಜಮುಖಿಯೊಬ್ಬರು ಭೇಟಿ ಮಾಡಿ ಪೆನ್ನು-ಗನ್ನು ನಡುವಿನ ವ್ಯತ್ಯಾಸ. ....
ಬೆಣ್ಣೆ ನಗರಿಯಲ್ಲಿ ಐ ಲವ್ ಯು ಕಲರವ ಹೆಬ್ಬುಲಿ ನಂತರ ‘ಐ ಲವ್ ಯು’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭಕ್ಕೆ ಮಾದ್ಯಮದವರು ದಾವಣಗೆರೆಗೆ ಭೇಟಿ ನೀಡಿದ್ದರು. ಒಂಬತ್ತು ಚಿತ್ರಗಳ ನಿರ್ದೇಶನ, ಮೂರು ನಿರ್ಮಾಣ ಮಾಡಿರುವ ಆರ್.ಚಂದ್ರು ಮಾತನಾಡಿ ಉಪ್ಪಿ ಸರ್ ಮೆದುಳು, ನನ್ನ ಕತೆ ಸೇರಿಕೊಂಡು ಚಿತ್ರವಾಗಿದೆ. ಹಿಂದಿನ ಚಿತ್ರಗಳನ್ನು ಹುಬ್ಬಳ್ಳಿ,ಬೆಂಗಳೂರು,ಮೈಸೂರು,ಚಿಕ್ಕಾಬಳ್ಳಾಪುರ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಈ ಬಾರಿ ನಿಮ್ಮಗಳ ಮುಂದೆ ಬಂದಿದ್ದೇವೆ. ಒಂದಾನೊಂದು ಕಾಲದಲ್ಲಿ ಹಾಡು ವಿಶೇಷವಾಗಿದ್ದು, ನೋಡಲು ಮರೆಯದಿರಿ ಎಂದಷ್ಟೇ ಹೇಳಿದರು. ....
ಸಾಮಾನ್ಯ ಜನರು ವಿಮಾನದಲ್ಲಿ ಪ್ರಯಾಣ ಮಾಡುವ ಅವಕಾಶ ಶ್ರೀಮಂತರು ಮಾತ್ರ ವಿಮಾನದಲ್ಲಿ ಪ್ರಯಾಣ ಮಾಡಬಹುದೆಂಬ ಪ್ರತೀತಿ ಇದೆ. ನಿಜ ಎನ್ನುವಂತೆ ಸಾಮಾನ್ಯರು ಇದರಲ್ಲಿ ಪ್ರಯಾಣಿಸಬಹುದು. ೨೦೦೭ರಲ್ಲಿ ೧೦ ಕಾರುಗಳೊಂದಿಗೆ ಪ್ರಾರಂಭವಾದ ಎಲ್.ವಿ.ಟ್ರಾವಲ್ಸ್ ಇಂದು ೪೦ ಟೆಕ್ಕಿ ಕಂಪೆನಿಗಳಿಗೆ ಕಾರುಗಳನ್ನು ಸರಬರಾಜು ಮಾಡುತ್ತಾ ೧೮೦೦ ವಾಹನಗಳನ್ನು ಹೊಂದಿದೆ. ಇದರ ಮಾಲೀಕರಾದ ಪರಮಶಿವಯ್ಯ ಒಮ್ಮೆ ವಿಮಾನ ನಿಲ್ದಾಣದಿಂದ ಮನೆಗೆ ಬರುವ ಸಂದರ್ಭದಲ್ಲಿ ಚಾಲಕನೊಂದಿಗೆ ಹಾಗೇ ಸುಮ್ಮನೆ ಚರ್ಚೆ ಮಾಡಿದ್ದಾರೆ. ಆತ ನಮ್ಮಂತವರಿಗೆ ಏರೋಪ್ಲೇನ್ನಲ್ಲಿ ಹೋಗುವುದು ಆಗದ ಕೆಲಸವೆಂದು ಖೇದ ....
ಪಡ್ಡೆಹುಲಿಯಲ್ಲಿ ಡಾ.ವಿಷ್ಣುವರ್ಧನ್ ನೆನಪುಗಳು ಹಿರಿಯ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಾಯಕನಾಗಿ ನಟಿಸಿರುವ ‘ಪಡ್ಡೆಹುಲಿ’ ಚಿತ್ರದ ಎರಡು ವಿಶೇಷ ಹಾಡುಗಳ ಲೋಕಾರ್ಪಣೆ ಕಾರ್ಯಕ್ರಮ ಕಲಾವಿದರ ಸಂಘದಲ್ಲಿ ನಡೆಯಿತು. ಡಾ.ವಿಷ್ಣುವರ್ಧನ್ಗೆ ಬಹುಕಾಲದಿಂದ ಆಪ್ತರಾಗಿದ್ದವರು ವೇದಿಕೆಯಲ್ಲಿ ಆಸೀನರಾಗಿದ್ದರು. ಚಿತ್ರದುರ್ಗದ ಕತೆಯೊಂದಿಗೆ ನಾಯಕನ ಪರಿಚಯದ ಗೀತೆ ಹಾಗೂ ಡಾ.ವಿಷ್ಣುವರ್ಧನ್ ಕುರಿತಂತೆ ಸಾಹಿತ್ಯ ವಿರುವ ಎರಡು ಹಾಡುಗಳು ದೊಡ್ಡ ಪರದೆ ಮೇಲೆ ಪ್ರದರ್ಶನಗೊಂಡ ನಂತರ ಗಣ್ಯರುಗಳು ಮಾತನಾಡಿದರು. ದ್ವಾರಕೀಶ್: ವಿಷ್ಣುವರ್ಧನ್ ಅವನನ್ನು ಪ್ರತಿ ದಿನ ....
ಸ್ಟ್ರೈಕರ್ ಅಪರಾಧಿಯ ಬೆನ್ನಟ್ಟಿ ಕ್ರೈಮ್ ಸೈಕಾಲಜಿ ಥ್ರಿಲ್ಲರ್ ಕುರಿತ ‘ಸ್ಟ್ರೈಕರ್’ ಸಿನಿಮಾವೊಂದು ತೆರೆಗೆ ಬರಲು ಸಿದ್ದಗೊಂಡಿದೆ. ಪ್ರತಿಯೊಬ್ಬ ಮನುಷ್ಯನಲ್ಲಿ ಯಾವುದಾದರೊಂದು ನ್ಯೂನತೆ ಇರುತ್ತದೆ. ಅದನ್ನು ಕೆಲವರು ದುರಪಯೋಗ ಪಡಿಸಿಕೊಳ್ಳುತ್ತಾರೆ. ಸಂದಿದ್ಗ ಸಂದರ್ಭದಲ್ಲಿ ನಾವು ತಗೆದುಕೊಳ್ಳುವ ತೀರ್ಮಾನ ಭವಿಷ್ಯದಲ್ಲಿ ಒಳ್ಳೆಯದು, ಕೆಟ್ಟದು ಆಗಬಹುದು. ಕಥಾನಾಯಕ ಅನಾಥ. ಅವನಿಗೆ ವಿನೂತನ ಕನಸುಗಳು ಬರುತ್ತಿರುವುದರಿಂದ ಮನಸ್ಸು ದುರ್ಬಲಗೊಂಡು ಮಾನಸಿಕ ಸ್ಥಿಮಿತದಲ್ಲಿರುತ್ತಾನೆ. ವಯಸ್ಸಿಗೆ ಬಂದ ನಂತರ ಸೈಕಾಲಜಿ ಸಮಸ್ಯೆಯಿಂದ ಸೂಕ್ಷ ಸಂವೇದನೆ ಕೊರತೆ ಕಳೆದುಕೊಂಡಿರುತ್ತಾನೆ. ....
ವೃತ್ರ ಅರ್ಥ ತಿಳಿಯಲು ಸಿನಿಮಾ ನೋಡಬೇಕಂತೆ ನಿಘಂಟುದಲ್ಲಿ ಹುಡುಕಿದರೂ ಸಿಗದ ‘ವೃತ್ರ’ ಪದಕ್ಕೆ ಅರ್ಥ ಏನು ಎಂಬುದನ್ನು ಚಿತ್ರ ನೋಡಿದರೆ ತಿಳಿಯುತ್ತದೆಂದು ರಚನೆ ನಿರ್ದೇಶನ ಮಾಡಿರುವ ಆರ್.ಗೌತಂಅಯ್ಯರ್ ಕುತೂಹಲಕ್ಕೆ ಬೆಣ್ಣೆ ಹಚ್ಚಿದ್ದಾರೆ. ಕ್ರೈಂ ಥ್ರಿಲ್ಲರ್ ಕತೆಯಲ್ಲಿ ಆತ್ಮಹತ್ಯೆ ಎಂದು ಹೇಳಲಾದ ಕೇಸ್ನ್ನು ಹೊಸದಾಗಿ ಸೇವೆಗೆ ಸೇರಿಕೊಂಡ ಮಹಿಳಾ ಕ್ರೈಂ ಬ್ರಾಂಚ್ ಅಧಿಕಾರಿಗೆ ಇದನ್ನು ತನಿಖೆ ಮಾಡಲು ಆದೇಶಿಸಲಾಗುತ್ತದೆ. ಅದನ್ನು ಪರಿಶೀಲನೆ ಮಾಡುವಾಗ ವಿಷಯಗಳು ಎಲ್ಲೆಲ್ಲೋ ತೆಗೆದುಕೊಂಡು ಹೋಗುತ್ತದೆ. ಇದರಿಂದ ....
ಡಿಕೆ ರವಿ ನೆನಪಿಸುವ ಚಂಬಲ್ ಜೇಕಬ್ ವರ್ಗಿಶ್ ರಚಿಸಿ ನಿರ್ದೇಶನ ಮಾಡಿರುವ ‘ಚಂಬಲ್’ ಚಿತ್ರ ಕತೆ ಏನೆಂದು ತುಣುಕುಗಳನ್ನು ನೋಡಿದಾಗ ನಾಲ್ಕು ವರ್ಷದ ಕೆಳಗೆ ಅನುಮಾಸ್ಪದವಾಗಿ ನಿಧನ ಹೊಂದಿದ ಕೋಲಾರ ಮೂಲದ ಪ್ರಾಮಾಣಿಕ ಐಎಎಸ್ ಅಧಿಕಾರಿ ಡಿಕೆ.ರವಿ ಕತೆ ಇರಬಹುದೆಂದು ತಿಳಿದು ಬಂತು. ಈ ಬಗ್ಗೆ ನಿರ್ದೇಶಕರನ್ನು ಕೇಳಿದಾಗ ಎಲ್ಲವನ್ನು ಚಿತ್ರದಲ್ಲಿ ನೋಡಿ ಎಂದು ಜಾರಿಕೊಳ್ಳುತ್ತಾರೆ. ಪ್ರಚಾರದ ಹಂತವಾಗಿ ಸಿನಿಮಾದ ಲಿರಿಕಲ್ ವಿಡಿಯೋ ಹಾಡು ಮತ್ತು ಟ್ರೈಲರ್ನ್ನು ಪುನೀತ್ರಾಜ್ಕುಮಾರ್ ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ ನಿಜ ಜೀವನದಲ್ಲಿ ಓದದೇ ಇದ್ದರೂ ....
ನಾವುಗಳು ಔಟ್ಡೇಟಡ್ ಆಗಿಲ್ಲ - ವಿ.ಮನೋಹರ್ ಇತ್ತೀಚೆಗೆ ಚಿತ್ರರಂಗಕ್ಕೆ ಹೊಸಬರು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಆದರೆ ನಮ್ಮಂತವರನ್ನು ಹಳಬರು, ಔಟ್ಡೇಟೆಡ್ ಎಂದು ಅವಕಾಶಗಳನ್ನು ನೀಡಲು ನಿರಾಕರಿಸುತ್ತಾರೆ. ಮುಂದೆ ಫಲಿತಾಂಶ ಏನೆಂದು ತಿಳಿಯುತ್ತದೆ. ಕೆಲವರು ನಮ್ಮ ಚಿತ್ರ ಈ ರೀತಿ ಬರುತ್ತದೆ. ಸೂಪರ್ ಆಗಲಿದೆ ಅಂತ ಕೆಲಸವನ್ನು ಚೆನ್ನಾಗಿ ತೆಗೆಸಿಕೊಳ್ಳುತ್ತಾರೆ. ಸಿನಿಮಾ ನೋಡದಾಗ ಇಂತಹ ಚಿತ್ರಕ್ಕೆ ಕೆಲಸ ಮಾಡಿದ್ದು ಹಾಳಾಯಿತಲ್ಲಾ ಅಂತ ಒದೆಯುವಷ್ಟು ಕೋಪ ಬರುತ್ತದೆಂದು ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್ ಬೇಸರ, ....
ಸೀತಾರಾಮ ಕಲ್ಯಾಣ ನಲಿವಿನಗಿರಿ ಶುಕ್ರವಾರ ಬಿಡುಗಡೆಯಾದ ಅದ್ದೂರಿ ಚಿತ್ರ ‘ಸೀತಾರಾಮ ಕಲ್ಯಾಣ’ ಎಲ್ಲರಿಗೂ ಇಷ್ಟವಾಗಿದೆ. ಅದರನ್ವಯ ಮಾದ್ಯಮದ ಮೂಲಕ ಜನರಿಗೆ ಧನ್ಯವಾದ ಅರ್ಪಿಸಲು ಸಣ್ಣದೊಂದು ಸಂತೋಷಕೂಟವನ್ನು ಏರ್ಪಾಟು ಮಾಡಲಾಗಿತ್ತು. ಎಂದಿನಂತೆ ಮೈಕ್ ತಗೆದುಕೊಂಡ ನಾಯಕ ನಿಖಿಲ್ಕುಮಾರ್ ಐದನೇ ದಿನಕ್ಕೆ ಕಾಲಿಟ್ಟಿದೆ. ರಶ್ ಕಡಿಮೆಯಾಗಿಲ್ಲ. ಎಲ್ಲೆ ಹೋದರೂ ಮೊದಲರ್ಧದಲ್ಲಿ ಕಾಮಿಡಿ ಇದ್ದರೆ, ವಿರಾಮದ ನಂತರ ಭಾವನೆಗಳು ತುಂಬಿಕೊಂಡಿವೆ. ಒಳ್ಳೆ ಚಿತ್ರಕೊಡಬೇಕೆಂಬ ಬಯಕೆ ಇತ್ತು. ಅದರಂತೆ ನಿರ್ದೇಶಕರು ಕತೆಯನ್ನು ಚೆನ್ನಾಗಿ ರೂಪಿಸಿ ತೆರೆ ಮೇಲೆ ತಂದಿದ್ದಾರೆ. ನಿನ್ನ ರಾಜ ಹಾಡು ಸೂಪರ್ ಆಗಿದೆ ಎಂದು ....
ಮಟಾಶ್ ಏನಿದರ ಗಮ್ಮತ್ತು ಕೇಂದ್ರ ಸರ್ಕಾರವು ೨೦೧೬ರ ಅಂತ್ಯದಲ್ಲಿ ನೋಟು ಅನಾಣ್ಯೀಕರಣ ಮಾಡಿದಾಗ ಇಡೀ ದೇಶವೆ ತಲ್ಲಣಗೊಂಡಿತ್ತು. ಇದರ ಕುರಿತಂತೆ ಕೆಲವು ಚಿತ್ರಗಳು ಬಂದಿವೆ. ಅದರಂತೆ ‘ಮಟಾಶ್’ ಅಡಿಬರಹದಲ್ಲಿ ‘ಮಾಡ್ತಾ ಇರ್ತಿವಿ ಆಗ್ತಾ ಇರುತ್ತ್ತೆ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ಕತೆಯ ಕುರಿತು ಹೇಳುವುದಾದರೆ ಮೈಸೂರು, ಬಿಜಾಪುರ ಕಡೆಯಿಂದ ಯುವಕರ ತಂಡ, ಬೆಂಗಳೂರಿನಿಂದ ಗ್ಯಾಂಗ್ಸ್ಟರ್ಸ್ ತಂಡ ಇರುತ್ತದೆ. ಮೈಸೂರಿನ ಯುವಕರು ಸಕಲೇಶಪುರದ ರೆಸಾರ್ಟ್ಗೆ ಮಸ್ತಿ ಮಾಡಲು ಹೋಗುತ್ತಾರೆ. ಅಲ್ಲಿ ಬಿಜಾಪುರ ಯುವಕರು ಸೇರಿಕೊಂಡು ಪಾರ್ಟಿ ಮಾಡುವಾಗ ಬೆಂಗಳೂರಿನ ಇಬ್ಬರು ....
ಕೊಯಮತ್ತೂರು ಘಟನೆ ಕನ್ನಡ ಚಿತ್ರ ೨೦೧೬ ಕೊಯಮತ್ತೂರಿನಲ್ಲಿ ನಡೆದ ನೈಜ ಘಟನೆಯನ್ನು ತೆಗೆದುಕೊಂಡು ‘ಅರಬ್ಬಿ ಕಡಲ ತೀರದಲ್ಲಿ’ ಎನ್ನುವ ಕುತೂಹಲ ಚಿತ್ರವೊಂದು ಬಿಡುಗಡೆ ಹಂತಕ್ಕೆ ಬಂದಿದೆ. ಕಥಾನಾಯಕ ಮಾಡಲ್ ಕ್ಷೇತ್ರದಲ್ಲಿ ಛಾಯಾಗ್ರಾಹಕನಾಗಿ ಹೆಸರು ಮಾಡಿದ್ದು, ವಯಸ್ಸು ಮೀರಿದ್ದರೂ ಮದುವೆ ಆಗಿರುವುದಿಲ್ಲ. ಕಡಲ ತೀರದಲ್ಲಿ ಅಪ್ಪನ ಭವ್ಯ ಬಂಗಲೆಯ ಅಧಿಪತಿಯಾಗಿದ್ದರೂ ಅಲ್ಲಿಗೆ ಹೋಗದೆ ವೃತ್ತಿಯಲ್ಲಿ ತೊಡಗಿಕೊಂಡಿರುತ್ತಾನೆ. ಒಮ್ಮೆ ತಾನು ಮೆಚ್ಚಿದ ಹುಡುಗಿಗೆ ತಾಳಿ ಕಟ್ಟುವ ಮುನ್ನವೆ ಕೊಲೆಯಾಗುತ್ತಾಳೆ. ಮುಂದೆ ಖಿನ್ನತೆಗೆ ಒಳಗಾಗಿ ಮಾನಸಿಕ ರೋಗಿಯೆಂದು ವ್ಯವಸ್ಥೆಯಲ್ಲಿ ....
ಒಂದು ಕಥೆಯಲ್ಲಿ ನಾಲ್ಕು ಉಪಕಥೆಗಳು ಚಿತ್ರಬ್ರಹ್ಮ ಪುಟ್ಟಣ್ಣಕಣಗಾಲ್ ೧೯೭೪ರಲ್ಲಿ ನಾಲ್ಕು ಕಥೆಗಳು ಇರುವ ‘ಕಥಾ ಸಂಗಮ’ ಚಿತ್ರವನ್ನು ಪ್ರಯೋಗಾತ್ಮಕವಾಗಿ ನಿರ್ದೇಶಿಸಿ ಯಶಸ್ಸು ಪಡೆದಿದ್ದರು. ಅದರಂತೆ ಹೊಸಬರ ‘ಒಂದು ಕಥೆ ಹೇಳ್ಲಾ’ ಹಾರರ್ ಐದು ಕಥೆಗಳ ಚಿತ್ರವೊಂದು ತೆರೆಗೆ ಬರಲು ಸನ್ನಿಹಿತವಾಗಿದೆ. ವಿಷಯವನ್ನು ತಿಳಿಸಲು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ಟ್ರೈಲರ್ಗೆ ಚಾಲನೆ ನೀಡಿದ ನಟ,ನಿರ್ದೇಶಕ ರಿಶಬ್ಶೆಟ್ಟಿ ಮಾತನಾಡಿ ನಮ್ಮ ಪ್ರೇಕ್ಷಕರು ಅನ್ನಸಾಂಬರ್ ಅಲ್ಲದೆ ಬಿರಿಯಾನಿ ಇಷ್ಟಪಡುತ್ತಾರೆ. ಅದಕ್ಕಾಗಿ ಹಲವು ಹೊಸಬಗೆಯ ....
ಹಾಡಿನ ಪದ ಚಿತ್ರದ ಶೀರ್ಷಿಕೆ ಯೋಗರಾಜ್ಭಟ್ ನಿರ್ದೇಶನ, ಜಯಂತ್ಕಾಯ್ಕಣಿ ಸಾಹಿತ್ಯ, ಮನೋಮೂರ್ತಿ ಸಂಗೀತದ ಮುಂಗಾರುಮಳೆ ಚಿತ್ರದಲ್ಲಿ ‘ಅನಿಸುತಿದೆ ಯಾಕೋ ಇಂದು’ ಹಾಡು ಈಗಲೂ ಚಾಲ್ತಿಯಲ್ಲಿದೆ. ಇದನ್ನು ಹೇಳಲು ಪೀಠಿಕೆ ಇದೆ. ಹಾಡಿನಲ್ಲಿ ಬರುವ ಒಂದು ಪದ ‘ಅನಿಸುತಿದೆ’ ಈಗ ಸಿನಿಮಾದ ಶೀರ್ಷಿಕೆಯಾಗಿದ್ದು, ಎ ಲವ್ ಸ್ಟೋರಿ ಆಫ್ ಎ ಫೈಟರ್ ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ. ಐದು ವರ್ಷಗಳ ಹಿಂದೆ ಶುರುವಾಗಿ ಪ್ರಸಕ್ತ ತರೆಗೆ ಬರುವ ಹಂತಕ್ಕೆ ಬಂದಿದೆ. ಅಂದು ಇದೇ ಹೆಸರಿನ ಮೇಲೆ ಕತೆ ಸಿದ್ದ ಮಾಡಿಕೊಂಡು ನಟ ಗಣೇಶ್ ಬಳಿ ಹೋದಾಗ ಒಂದು ಬಾರಿ ನಿರ್ದೇಶನ ಮಾಡಿರುವವರಿಗೆ ಕಾಲ್ಶೀಟ್ ಕೊಡುವುದಾಗಿ ಹೇಳಿದ್ದಾರೆ. ....
ಶಿರಡಿ ಸಾಯಿ ಗೀತೆಗಳು ಭಾನುವಾರ ಕಲಾವಿದರ ಸಂಘದಲ್ಲಿ ಮೂವತ್ತಕ್ಕೂ ಹೆಚ್ಚು ಮುತ್ತೈದೆಯರು ಸಾಯಿರಾಂ ಭಜನೆ ಮಾಡುತ್ತಿರುವುದರಿಂದ ವೇದಿಕೆಯು ದೇವಸ್ಥಾನದಂತೆ ಕಂಡು ಬರುವುದಕ್ಕೆ ‘ಪ್ರತ್ಯಕ್ಷ ದೈವ ಶಿರಡಿ ಸಾಯಿ’ ಚಿತ್ರದ ಧ್ವನಿಸಾಂದ್ರಿಕೆ ಲೋಕಾರ್ಪಣೆ ಬಿಡುಗಡೆ ಕಾರಣವಾಗಿತ್ತು. ಖಳ ಮಾಂತ್ರಿಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ತೆಲುಗು ನಟ ಭಾನುಚಂದರ್ ಆಡಿಯೋ ಬಿಡಗುಡೆ ಮಾಡಿ ಸಾಯಿ ಕುರಿತ ಯಾವುದೇ ಭಾಷೆಯಲ್ಲಿ ಚಿತ್ರ ಮಾಡಿದರೂ ಭಕ್ತರು ನೋಡುತ್ತಾರೆ ನಿರ್ಮಾಪಕರು ೧೮ ತಿಂಗಳುಗಳ ಕಾಲ ಮಾಂಸಹಾರ ಸೇವಿಸದೆ ಸಾಯಿರಾಂ ಪಾತ್ರಕ್ಕೆ ಜೀವ ತುಂಬಿದ್ದಾರೆಂದು ಮೊದಲ ಹಾಡಿನ ತುಣುಕುಗಳಿಗೆ ಚಾಲನೆ ....
ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ನಿರಂತರ ಖಾಯಿಲೆ ಇರುವ ರೋಗಿಗಳು ಅದರಲ್ಲೂ ಹಿರಿಯ ನಾಗರಿಕರಿಗೆ ಪ್ರತಿ ಸಲ ಆಸ್ಪತ್ರೆಗೆ ಹೋಗುವುದು ಕಷ್ಟಕರವಾಗಿರುತ್ತದೆ. ಇದರಿಂದ ಖಾಯಿಲೆಯು ಮತ್ತಷ್ಟು ಉಲ್ಬಣಗೊಳ್ಳುವ ಸಾದ್ಯತೆ ಇರುತ್ತದೆ. ಇವೆಲ್ಲವನ್ನು ಮನಗಂಡು ಅನುಭವಿ ವೈದ್ಯರುಗಳಾದ ಡಾ.ಸುದೀಂದ್ರ ಮತ್ತು ಡಾ.ಉಜ್ವಾಲ ‘ಮಾರಿ ಗೋಲ್ಡ್ ಹಾಸ್ಪಿಟಲ್’ನ್ನು ಮೈಕೋ ಲೇ ಔಟ್, ಬಿಟಿಎಂ ೨ನೇ ಹಂತ, ಬೆಂಗಳೂರು ಇಲ್ಲಿ ನಾಲ್ಕು ಮಹಡಿಯ ಸುಸಜ್ಜಿತ ಆಸ್ಪತ್ರೆಯನ್ನು ಪ್ರಾರಂಭ ಮಾಡಿದ್ದಾರೆ. ಇದರಲ್ಲಿ ರೋಗಿಗಳು ನೊಂದಣಿ ಮಾಡಿಸಿದಲ್ಲಿ ‘ಯೂನಿಕ್ ಐಡಂಟಿಟಿ ಕೋಡ್’ ಎನ್ನುವ ಕಾರ್ಡ್ನ್ನು ....
ಶ್ರೀ ರಾಘವೇಂದ್ರ ಚಿತ್ರವಾಣಿಗೆ ಪ್ರಶಂಸೆಗಳ ಸುರಿಮಳೆ ಶುಕ್ರವಾರ ಕಲಾವಿದರ ಸಂಘದಲ್ಲಿ ಶ್ರೀ ರಾಘವೆಂದ್ರ ಚಿತ್ರವಾಣಿ ಸಂಸ್ಥೆಯಿಂದ ಏರ್ಪಡಿಸಲಾಗಿದ್ದ ೧೮ನೇ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪುರಸ್ಕ್ರತರುಗಳು ಸಂಸ್ಥೆಯ ಕೆಲಸವನ್ನು ಗುಣಗಾನ ಮಾಡಿದರು. ವಿವಿದ ಸಾಧಕರ ಹೆಸರಿನಲ್ಲಿ ಪ್ರಶಸ್ತಿಯನ್ನು ಪಡೆದಿರುವ ಹೆಸರಾಂತ ನಿರ್ಮಾಪಕ ರಾಕ್ಲೈನ್ವೆಂಕಟೇಶ್, ಹಿರಿಯ ಚಲನಚಿತ್ರ ಪತ್ರಕರ್ತ ಡಾ.ಬನ್ನಂಜೆ ಗೋವಿಂದಚಾರ್ಯ, ನಿರ್ದೇಶಕರುಗಳಾದ ಪಿ.ವಾಸು,ರಿಷಬ್ಶೆಟ್ಟಿ, ಕಾರ್ತಿಕ್ ಸರಗೂರು, ಚಂಪಾಶೆಟ್ಟಿ, ಸಂಗೀತ ನಿರ್ದೇಶಕರುಳಾದ ಕೆ.ಕಲ್ಯಾಣ್,ವಾಸುಕಿವೈಭವ್, ಅನುಭವಿ ....
ಪ್ರೇಮಿಗಳ ದಿನದಂದು ಕಣ್ಸೆನ್ನೆ ಕಿರಿಕ್ ಮಾಡ್ತಾರೆ ಮೊಟ್ಟ ಮೊದಲಬಾರಿ ಮಲೆಯಾಳಂ ಚಿತ್ರವು ‘ಕಿರಿಕ್ ಲವ್ ಸ್ಟೋರಿ’ ಹೆಸರಿನಲ್ಲಿ ಕನ್ನಡದಲ್ಲಿ ಡಬ್ ಆಗಿದೆ. ವಿಷಯವನ್ನು ತಿಳಿಸಲು ತಂಡವು ಸಿಲಿಕಾಟ್ ಸಿಟಿಗೆ ಪ್ರಚಾರದ ಸಲುವಾಗಿ ಆಗಮಿಸಿದ್ದರು. ತೊಂಬತ್ತು ನಿಮಿಷ ಮಾದ್ಯಮದವರನ್ನು ಕಾಯಿಸಿದ್ದಕ್ಕಾಗಿ ಮಾಲಿವುಡ್ ನಿರ್ದೇಶಕ ಓಮರ್ಲೂಲು ಕ್ಷಮೆ ಕೋರಿದರು. ನಂತರ ಮಾತು ಶುರುಮಾಡಿ ತೆಲುಗು, ಹಿಂದಿ ಸೇರಿದಂತೆ ನಾಲ್ಕು ಭಾಷೆಯಲ್ಲಿ ಸಿದ್ದಗೊಂಡಿದೆ. ಕತೆಯು ಸಾರ್ವತ್ರಿಕವಾಗಿರುವುದರಿಂದ ಎಲ್ಲಾ ಭಾಷೆಗೆ ಹೊಂದಿ ಕೊಳ್ಳುತ್ತದೆ. ಹದಿಹರೆಯದ ಹುಡುಗ-ಹುಡುಗಿಯರ ಮ್ಯೂಸಿಕಲ್ ಲವ್ ....
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯಾದ್ಯಂತ ನಾಳೆ ಬಿಡುಗಡೆಯಾಗುತ್ತಿರುವ ’ಸೀತಾರಾಮ ಕಲ್ಯಾಣ’ ಚಿತ್ರದ ಪೂರ್ವ ಭಾವಿ ಪ್ರದರ್ಶನದಲ್ಲಿ ಎಲ್ಲ ಪಕ್ಷಗಳ ಶಾಸಕರೊಂದಿಗೆ ಚಿತ್ರ ವೀಕ್ಷಿಸಿದರು.
ನಾನು ನಮ್ಮುಡ್ಗಿ ಖರ್ಚ್ಗೊಂದ್ ಮಾಫಿಯಾ ಮೇಲಿನ ಸಾಲು ಚಿತ್ರದ ಶೀರ್ಷಿಕೆ ಅಂದುಕೊಂಡಲ್ಲಿ ನಿಮ್ಮ ಊಹೆ ಸರಿಯಾಗಿದೆ. ತಂತ್ರಜ್ಘಾನ ಬೆಳದಂತೆ ಇದರಿಂದ ಉಪಯೋಗ, ದುರಪಯೋಗ ಎರಡು ನಡೆಯುತ್ತಿದೆ. ಪ್ರಚಲಿತ ಯುವ ಜನಾಂಗವು ದೈನಂದಿನ ಖರ್ಚು ನಿರ್ವಹಿಸಲು ದುರಳ ಕೆಲಸವನ್ನು ಮಾಡುತ್ತಿದ್ದಾರೆ. ಅಂದರೆ ಹುಡುಗರುಗಳೇ ಸೇರಿಕೊಂಡು ಹುಡುಗಿಯನ್ನು ಅಪಹರಿಸಿ ಆಕೆಯಿಂದ ಬಲವಂತವಾಗಿ ಲೈಂಗಿಕ ಕ್ರಿಯೆ ಮಾಡಿಸಿಕೊಳ್ಳುವುದನ್ನು ಮೊಬೈಲ್ದಲ್ಲಿ ರೆಕಾರ್ಡ್ ಮಾಡಿಕೊಂಡು ಅದನ್ನು ಯುಟ್ಯೂಬ್ಗೆ ಬಿಡುತ್ತಾರೆ. ಇದನ್ನು ಇಂತಿಷ್ಟು ಜನರು ನೋಡಿದರೆ ಸಂಸ್ಥೆಯಿಂದ ದುಡ್ಡು ಸಿಗುತ್ತದಂತೆ. ಭಾರತೀಯ ಸಂವಿಧಾನದಲ್ಲಿ ....