ಉಸಿರು ಟ್ರೈಲರ್ ಬಿಡುಗಡೆ ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜ ತಿಳಿಯುವುದು ಎಂಬ ಕಾನ್ಸೆಪ್ಟ್ ಮೇಲೆ ತಯಾರಾದ ಚಿತ್ರ ಉಸಿರು. ಆರ್.ಎಸ್.ಪಿ. ಪ್ರೊಡಕ್ಷನ್ ಮೂಲಕ ಶ್ರೀಮತಿ ಲಕ್ಷ್ಮಿ ಹರೀಶ್ ಅವರು ನಿರ್ಮಿಸಿರುವ, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರ ಇದೇ ತಿಂಗಳ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ, ಉಸಿರು ಚಿತ್ರದ ಟ್ರೈಲರ್ನ್ನು ಉದ್ಯಮಿಗಳಾದ ಸುಧೀರ್ ಆನಂದ್ ಹಾಗೂ ರಾಮ್ ಸಂತಾನಿ ಅವರು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು, ನಟ ತಿಲಕ್ ಶೇಖರ್, ಪ್ರಿಯಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಪನೇಮ್ ಪ್ರಭಾಕರ್ ....
*ಕಾಡಿನ ಧರ್ಮ.. ನಾಡಿನ ಧರ್ಮದ ನಡುವೆ ಹರಿದ ನೆತ್ತರು..!* *ರಿಪ್ಪನ್ ಸ್ವಾಮಿ ಟ್ರೇಲರ್ ನಲ್ಲಿ ಭಯಂಕರವಾಗಿ ಕಂಡ ವಿಜಯ್ ರಾಘವೇಂದ್ರ* ವಿಜಯ್ ರಾಘವೇಂದ್ರ ಅಭಿನಯದ, ಕಿಶೋರ್ ಮೂಡಬಿದ್ರೆ ನಿರ್ದೇಶನದ ರಿಪ್ಪನ್ ಸ್ವಾಮಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಇಷ್ಟು ದಿನ ಲವ್ವರ್ ಬಾಯ್, ಇನ್ವೆಸ್ಟಿಗೇಷನ್ ಆಫೀಸರ್ ಆಗಿ ಕಂಡ ವಿಜಯ್ ರಾಘವೇಂದ್ರ ಅವರು ಇಲ್ಲಿ ಬೇರೆಯದ್ದೇ ಲುಕ್ ನಲ್ಲಿ ಕಾಣಿಸುತ್ತಿದ್ದಾರೆ. ಕೈಗೆ ಕೂಡುಗೋಲು ಸಿಕ್ಕಿದ್ರೆ ಅಲ್ಲಿ ನೆತ್ತರು ಅರಿಯುತ್ತೆ. ಸ್ವಾಮಿ ಹರಿಸುವ ನೆತ್ತರು ಯಾರದ್ದು..? ಕಾಡಿನ ಜನರ ಜೀವನ ಹೇಗಿರುತ್ತೆ..? ಇದೆಲ್ಲಾ ಟ್ರೇಲರ್ ನಲ್ಲಿ ಕುತೂಹಲ ಮೂಡಿಸಿದ್ದು, ಸಿನಿಮಾದಲ್ಲಿ ಉತ್ತರ ಸಿಗಲಿದೆ. ಆಗಸ್ಟ್ 29ಕ್ಕೆ ಸಿನಿಮಾ ತೆರೆಗೆ ....
*ಹೊಸ ಚಿತ್ರ ನಿರ್ಮಾಣ ಹಾಗೂ ನಿರ್ದೇಶನಕ್ಕೆ ಮುಂದಾದ ನಮ್ ಋಷಿ* .. *ಹಾಡಿನೊಂದಿಗೆ ಬಂದ "ಫ್ರಾಡ್ ಋಷಿ"* ಈವರೆಗೂ ಮೂವತ್ತು ಕೋಟಿ ಜನರು ವೀಕ್ಷಣೆ ಮಾಡಿ, ಇಂದಿಗೂ ಟ್ರೆಂಡಿಂಗ್ ನಲ್ಲಿರುವ "ಒಳಿತು ಮಾಡು ಮನುಸ. ನೀ ಇರೋದು ಮೂರು ದಿವಸ" ಹಾಡನ್ನು ಬರೆದಿರುವ ನಮ್ ಋಷಿ, ಈಗ ನೂತನ ಚಿತ್ರದ ನಿರ್ಮಾಣ ಹಾಗೂ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಕಾಮಿಡಿ ಜಾನರ್ ನ ಈ ಚಿತ್ರಕ್ಕೆ "ಫ್ರಾಡ್ ಋಷಿ" ಎಂದು ಹೆಸರಿಟ್ಟಿದ್ದಾರೆ. ಸಮಾನ್ಯವಾಗಿ ಚಿತ್ರೀಕರಣ ಪೂರ್ಣವಾದ ಮೇಲೆ ಹಾಡು ಬಿಡುಗಡೆ ಮಾಡುವುದು ವಾಡಿಕೆ. ಆದರೆ ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿ ಆನಂತರ ಚಿತ್ರೀಕರಣ ....
*zee5ನಲ್ಲಿ ಇದೇ 29ರಿಂದ ಶೋಧ ವೆಬ್ ಸಿರೀಸ್ ಸ್ಟ್ರೀಮಿಂಗ್* *ಆಗಸ್ಟ್ 29ರಿಂದ ಸಸ್ಪೆನ್ಸ್ ಕಥೆಯ ’ಶೋಧ’ ವೆಬ್ ಸಿರೀಸ್ ಸ್ಟ್ರೀಮಿಂಗ್* ಜೀ5 ವೆಬ್ ಸರಣಿಗಳಿಗೆ ವೇದಿಕೆ ಸೃಷ್ಟಿಸಿದೆ. ಈ ಮೊದಲು ‘ಅಯ್ಯನ ಮನೆ’ ಹೆಸರಿನ ಮಿನಿ ವೆಬ್ ಸರಣಿಯನ್ನು ಪ್ರಸಾರ ಮಾಡಿ ಯಶಸ್ಸು ಕಂಡಿದೆ. ಈಗ ‘ಶೋಧ’ ಹೆಸರಿನ ವೆಬ್ ಸೀರಿಸ್ ರಿಲೀಸ್ ಮಾಡಲು ರೆಡಿ ಆಗಿದೆ. ಈ ಸರಣಿಯ ಟ್ರೇಲರ್ ಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ತಿಂಗಳ 29ರಿಂದ ಶೋಧ zee5ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ಕುರಿತು ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿ ಗೋಷ್ಟಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಜೀ5 ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮಲು ಮಾತನಾಡಿ, zee5 ಈ ಮೊದಲು ಒಂದೇ ....
*ನಮ್ಮ ಮಣ್ಣಿನ ಐತಿಹಾಸಿಕ ಕಥೆ ಹಲಗಲಿ ಚಿತ್ರದ ಫಸ್ಟ್ ರೋರ್ ರಿಲೀಸ್* ಕನ್ನಡದ ಐತಿಹಾಸಿಕ ಸಿನಿಮಾ ಹಲಗಲಿ ಚಿತ್ರಕ್ಕೆ ಡಾಲಿ ಧನಂಜಯ ಹೈಲೆಟ್ . ಅವರಿಗೆ ನಾಯಕಿಯಾಗಿ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಸುಕೇಶ್ ನಾಯಕ್ ನಿರ್ದೇಶನದ ಯುವ ಉದ್ಯಮಿ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ನಿರ್ಮಾಣದ ಬಹು ತಾರಾಗಣದ ಅದ್ಧೂರಿ ಬಜೆಟ್ ಚಿತ್ರ ’ಹಲಗಲಿ’ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಇದು ಸ್ವಾತಂತ್ರ್ಯ ವೀರರ ಕಥೆ. ಎರಡು ಭಾಗಗಳಲ್ಲಿ, ಮೂಡಿ ಬರಲಿರುವ ಈ ಸಿನಿಮಾ ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ ಎಂಬುದು ವಿಶೇಷ. ಐದು ಭಾಷೆಯಲ್ಲಿ ಅದ್ದೂರಿಯಾಗಿ ಚಿತ್ರೀಕರಣವಾಗುತ್ತಿರುವ ಕನ್ನಡದ ಐತಿಹಾಸಿಕ ಸಿನಿಮಾದ ಫಸ್ಟ್ ರೋರ್ ಸಖತ್ ಆಗಿದೆ. ....
*ಮಾರುತಿರಾಯನಿಗೆ ಮತ್ತೋಂದು ಹೆಸರು ಪಿಂಗಾಕ್ಷ* ಆಂಜನೆಯನಿಗೆ ಭಜರಂಗಿ, ಹನುಮಾನ್ ಇನ್ನು ಮುಂತಾದ ಹೆಸರುಗಳು ಇರಲಿದೆ. ಆ ಸಾಲಿಗೆ *ಪಿಂಗಾಕ್ಷ* ಎಂಬುದು ಸೇರ್ಪಡೆಯಾಗಿದೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ನಂದಿನಿ ಲೇ ಔಟ್ದಲ್ಲಿರುವ ಶ್ರೀ ಬಲಮುರಿ ವರಸಿದ್ದಿ ವಿನಾಯಕನ ಸನ್ನಿದಿಯಲ್ಲಿ ಮುಹೂರ್ತ ಸಮಾರಂಭ ನಡೆಯಿತು. ಸಗಿಟ್ಟರಿಯನ್ ಫಿಲಂಸ್ ಬ್ಯಾನರ್ ಅಡಿಯಲ್ಲಿ *ಬಿ.ವಾಸುದೇವರಾವ್ ನಿರ್ಮಾಣ* ಮಾಡುತ್ತಿರುವುದು ಹೊಸ ಅನುಭವ. ಟೆಕ್ಕಿಯಾಗಿರುವ *ಬಿ.ಭರತ್ವಾಸುದೇವ್ ಸಿನಿಮಾಕ್ಕೆ ಕಥೆ,ಚಿತ್ರಕತೆ ಬರೆದು ಆಕ್ಷನ್ ಕಟ್* ಹೇಳುತ್ತಿದ್ದಾರೆ. ಸತ್ತವರ ಧ್ವನಿಗಳು ಎಂಬ ಕ್ಯಾಚಿ ಅಡಿಬರಹ ಇಂಗ್ಲೀಷ್ದಲ್ಲಿ ಹೇಳಲಾಗಿದೆ. ನಂತರ ....
*"ಜಸ್ಟ್ ಮ್ಯಾರೀಡ್" ಟ್ರೇಲರ್ ಬಿಡುಗಡೆಯಲ್ಲಿ ಮದುವೆಮನೆ ಸಡಗರ.* . *ಆನ್ ಲೈನ್ ಮೂಲಕ ಟ್ರೇಲರ್ ಬಿಡುಗಡೆ ಮಾಡಿ ಶುಭಕೋರಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ* . *ಅಜನೀಶ್ ಲೋಕನಾಥ್ ನಿರ್ಮಾಣದ, ಸಿ.ಆರ್.ಬಾಬಿ ನಿರ್ದೇಶನ ಹಾಗೂ ಶೈನ್ ಶೆಟ್ಟಿ - ಅಂಕಿತ ಅಮರ್ ಅಭಿನಯದ ಈ ಚಿತ್ರ ಆಗಸ್ಟ್ 22 ರಂದು ತೆರೆಗೆ** . abbs studios ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ಅವರು ....
*ಮೊದಲ ಹಾಡಿನಲ್ಲಿ "ನೋಡಿದ್ದು ಸುಳ್ಳಾಗಬಹುದು"* . *ಹಾಡು ಬಿಡುಗಡೆ ಮಾಡಿ ಹಾರೈಸಿದ ಸಿನಿರಂಗದ ಗಣ್ಯರು* . ಅನಿಲ್ ಕುಮಾರ್ ಕೆ.ಆರ್ ನಿರ್ಮಾಣ ಮಾಡುವುದರೊಂದಿಗೆ ನಾಯಕನಾಗೂ ನಟಿಸಿರುವ, ವಿಜಯ್ ಚಲಪತಿ ನಿರ್ದೇಶನದ ಹಾಗೂ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ "ನೋಡಿದ್ದು ಸುಳ್ಳಾಗಬಹುದು" ಚಿತ್ರದ "ಕನಸುಗಳ ಮೆರವಣಿಗೆ" ಎಂಬ ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಯಿತು. ಅನಿರುದ್ಧ್ ಶಾಸ್ತ್ರಿ ಬರೆದಿರುವ, ಗುಮ್ಮಿನೆನಿ ವಿಜಯ್ ಸಂಗೀತ ಸಂಯೋಜಿಸಿರುವ ಹಾಗೂ ಅನಿರುದ್ಧ್ ಶಾಸ್ತ್ರಿ ಮತ್ತು ಪೃಥ್ವಿ ಭಟ್ ಹಾಡಿರುವ ಈ ಹಾಡನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ....
*ಕರಳೆ ಸಿನಿಮಾ ತಂಡದಿಂದ ಐ ಫೋನ್ ಉಡುಗೊರೆ* ಕರಳೆ ಚಿತ್ರದ ಹೆಸರಿನ ಅರ್ಥ ತಿಳಿಸಿದ ಅದೃಷ್ಟಶಾಲಿಗಳ ಹೆಸರು ಪ್ರಕಟಿಸಿದ ವಸಿಷ್ಟ ಸಿಂಹ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಮೂಲಕ ಸುದ್ದಿಯಾಗಿದ್ದ ಕರಳೆ ಸಿನಿಮಾದಿಂದ ಐ ಫೋನ್ ಗಿಫ್ಟ್ ಕೊಡಲಾಗಿದೆ. ಚಿತ್ರದ ಹೆಸರಿನ ಅರ್ಥ ತಿಳಿಸಿದ ಅದೃಷ್ಟಶಾಲಿಗಳಿಗೆ ಐ ಫೋನ್ ಉಡುಗೊರೆ ಸಿಕ್ಕಿದೆ. ಕನ್ನಡದ ಕಂಚಿನ ಕಂಠ ನಟ ವಸಿಷ್ಟ ಸಿಂಹ ಲಕ್ಕಿಡಿಪ್ ಎತ್ತುವ ಮೂಲಕ ಅದೃಷ್ಟಶಾಲಿಗಳ ಆಯ್ಕೆ ಮಾಡಿದ್ದಾರೆ. ‘ಕಲಿವೀರ’, ‘ಕನ್ನಡ ದೇಶದೊಳ್’ ಚಿತ್ರ ಮಾಡಿದ್ದ ನಿರ್ದೇಶಕ ಅವಿರಾಮ್ ಕಂಠೀರವ ಅವರ ನಿರ್ದೇಶನದಲ್ಲಿ ‘ಕರಳೆ’ ಮೂಡಿ ಬರುತ್ತಿದ್ದು, ಇದು ನೈಜ ಘಟನೆ ಆಧಾರಿತ ಚಿತ್ರವಾಗಿದೆ. ಇದಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು ....
*’ಸರ್ಕಾರಿ ನ್ಯಾಯಬೆಲೆ ಅಂಗಡಿ’ಯಲ್ಲಿ ಕೊನೆ ಹಂತದ ಚಿತ್ರೀಕರಣ ಬಾಕಿ* *ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡ ಚಿತ್ರತಂಡ* *ಪಡಿತರ ವ್ಯವಸ್ಥೆಯ ಮೇಲೊಂದು ಚಿತ್ರ* *ಹಳ್ಳಿ ಹುಡುಗಿಯ ಗೆಟಪ್ ನಲ್ಲಿ ರಾಗಿಣಿ ಮಿಂಚು* ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಎಂಬ ಹೆಸರಿನಲ್ಲಿ ಹೊಸ ಚಿತ್ರವೊಂದು ಸೆಟ್ಟೇರಿದ್ದು ಅನೇಕರಿಗೆ ಗೊತ್ತಿರಬಹುದು. ಈಗಾಗಲೇ ಸದ್ದಿಲ್ಲದೆ ಈ ಚಿತ್ರದ ಮುಕ್ಕಾಲು ಭಾಗ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಅಂತಿಮ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ. ಇದೇ ವೇಳೆ ಪತ್ರಕರ್ತರು ಮತ್ತು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಮೇಕಿಂಗ್ ....
*ಆಗಸ್ಟ್ 31ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ನಡೆಯಲಿದೆ ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ಅವರ 80ನೇ ಹುಟ್ಟುಹಬ್ಬ* ಯಶಸ್ವಿ ನಿರ್ಮಾಪಕ, ಮಾಜಿ ಎಂ.ಎಲ್.ಸಿ ಸಂದೇಶ್ ನಾಗರಾಜ್ ಈಗ 80ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹೌದು. ಆಗಸ್ಟ್ 16, ಸಂದೇಶ ನಾಗರಾಜ್ ಅವರು 79 ಪೂರೈಸುತ್ತಿದ್ದು, 80ನೇ ವಸಂತಕ್ಕೆ ಕಾಲಿಡಲಿದ್ದಾರೆ. ಸಂದೇಶ್ ನಾಗರಾಜ್ ಅವರ 80ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅವರ ಕುಟುಂಬ ಮುಂದಾಗಿದೆ. ಆಗಸ್ಟ್ 31ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ನಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂದೇಶ ನಾಗರಾಜ್ ಅವರ ಮಕ್ಕಳಾದ ಸಂದೇಶ್, ಬೃಂದಾ, ಮಂಜೇಶ್ ಮಾಹಿತಿ ....
*ವಿಭಿನ್ನ ಕಥಾಹಂದರ ಹೊಂದಿರುವ "ಸಾರಂಗಿ" ಚಿತ್ರದಲ್ಲಿ ಎರಡೇ ಪಾತ್ರಗಳು* . *ಇದು ಹೊಸತಂಡದ ಹೊಸಪ್ರಯತ್ನ* . ಹೊಸತಂಡದ ಹೊಸಪ್ರಯತ್ನಗಳು ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುತ್ತದೆ. ಅಂತಹ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ "ಸಾರಂಗಿ". ಈ ಚಿತ್ರದಲ್ಲಿ ಕೇವಲ ಎರಡೇ ಪಾತ್ರಗಳಿರುವುದು ವಿಶೇಷ. ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ನೀಡಿದರು. . ಮನುಷ್ಯ ದಿನ ಬೆಳಗ್ಗಾದರೆ ಎಲ್ಲರ ಮುಂದೆ ಒಂದೊಂದು ತರಹದ ಮುಖವಾಡ ಧರಿಸಿ ....
*ತರುಣ್ ಸುಧೀರ್ ನಿರ್ಮಾಣದ ಏಳುಮಲೆ ಸಿನಿಮಾದ ಕಾಪಾಡೋ ದ್ಯಾವ್ರೇ ಸಾಂಗ್ ರಿಲೀಸ್* ತರುಣ್ ಸುಧೀರ್ ನಿರ್ಮಾಣದ ಏಳುಮಲೆ ಸಿನಿಮಾ ತನ್ನ ಕಂಟೆಂಟ್ ಮೂಲಕ ಸದ್ದು ಮಾಡುತ್ತಿದೆ. ಈಗಾಗಲೇ ಟೈಟಲ್ ಟೀಸರ್ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚು ಮಾಡಿರುವ ಈ ಚಿತ್ರದಿಂದ ಇದೀಗ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಏಳುಮಲೆ ಚಿತ್ರದ ಕಾಪಾಡೋ ದ್ಯಾವ್ರೇ ಎಂಬ ಗೀತೆ ಅನಾವರಣ ಮಾಡಲಾಯಿತು. ಚಿತ್ರರಂಗದ ಹಿರಿಯ ನಟಿಯರಾದ ಶೃತಿ, ಸುಧಾರಾಣಿ, ಹಾಗೂ ತಾರಾ ಅನುರಾಧ ಹಾಡನ್ನು ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಿರ್ಮಾಪಕ ತರುಣ್ ಸುಧೀರ್, ನಿರ್ದೇಶಕ ಪುನೀತ್ ರಂಗಸ್ವಾಮಿ, ನಾಯಕ ರಾಣಾ, ನಾಯಕಿ ....
ಸೋಲ್ ಮೇಟ್ಸ್ - ಆಡಿಯೋ ಲಾಂಚ್ ನಾದ ಬ್ರಹ್ಮ ಹಂಸಲೇಖ ಸಂಗೀತ ಸಂಯೋಜನೆಯ, ಡಾ. ವಿಷ್ಣುವರ್ಧನ್ ರ ಅಪ್ಪಟ ಅಭಿಮಾನಿ ಪಿ.ವಿ ಶಂಕರ್ ನಿರ್ದೇಶನದ ಚೊಚ್ಚಲ ಸಿನಿಮಾ ಸೋಲ್ ಮೇಟ್ಸ್ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಹಾಡು ಬಿಡುಗಡೆಯಾಗಿದೆ. ಹಂಸಲೇಖ ಸಾಹಿತ್ಯವಿರೋ ಕಿಲಕಿಲ ಹಾಡಿಗೆ ಅನಿರುದ್ಧ್ ಶಾಸ್ತ್ರಿ, ಅಂಕಿತಾ ಕುಂಡು ಧನಿಯಾಗಿದ್ದಾರೆ. ಸೋಲ್ ಮೇಟ್ಸ್ ಪರಿಸರ ಪ್ರೇಮಿ ಅನ್ನೋ ಟ್ಯಾಗ್ ಲೈನ್ ಇರೋ ಈ ಚಿತ್ರದಲ್ಲಿ ಇಬ್ಬರು ನಾಯಕ ನಟರು ಇಬ್ಬರು ನಾಯಕಿಯರು ಅಭಿನಯಿಸಿದ್ದಾರೆ. ರಂಗ್ ಬಿ ರಂಗ್ ಖ್ಯಾತಿಯ ಶ್ರೀಜಿತ್ ಸೂರ್ಯ, ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಚಿತ್ರದ ಇನಾಯತ್ ಖ್ಯಾತಿಯ ಪ್ರಸನ್ನ ಶೆಟ್ಟಿ, ಯಶ್ವಿಕಾ ನಿಷ್ಕಲ, ರಜನಿ, ಅಲ್ಮಾಸ್, ಯಶ್ ಶೆಟ್ಟಿ, ಶರತ್ ಲೋಹಿತಾಶ್ವ, ....
ಯುವ ಪ್ರತಿಭೆಗಳ "ಆಸ್ಟಿನ್ ನ ಮಹನ್ಮೌನ" ಚಿತ್ರದ ಹಾಡುಗಳ ಬಿಡುಗಡೆ. ಲವ್, ಥ್ರಿಲ್ಲಿಂಗ್ ಹಾಗೂ ಭಾವನಾತ್ಮಕ ಕಥಾನಕ ಚಿತ್ರ ಸೆಪ್ಟಂಬರ್ 5 ಕ್ಕೆ ರಿಲೀಸ್. ಬೆಳ್ಳಿ ಪರದೆ ಮೇಲೆ ಮತ್ತೊಂದು ಯುವ ಪಡೆಗಳ ತಂದ ವಿಭಿನ್ನ ಶೀಷಿಕೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯಲು ಸಿದ್ಧರಾಗಿದ್ದಾರೆ. ಯುವ ಪ್ರತಿಭೆ ವಿನಯ್ ಕುಮಾರ್ ವೈದ್ಯನಾಥನ್ ನಟಿಸಿ , ನಿರ್ಮಿಸುವುದರ ಜೊತೆಗೆ ನಿರ್ದೇಶನ ಮಾಡಿರುವಂತಹ " ಆಸ್ಟಿನ್ ನ ಮಹನ್ಮೌನ " ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಮಲ್ಲೇಶ್ವರಂ ನ ಎಸ್. ಆರ್. ವಿ ಪ್ರೀವ್ಯೂ ಥಿಯೇಟರ್ ನಲ್ಲಿ ಯೋಜನೆ ಮಾಡಿತ್ತು. ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕ , ನಿರ್ದೇಶಕ ಹಾಗೂ ನಿರ್ಮಾಪಕ ವಿನಯ್ ....
ಹೊಸಬರ ಕನಸಿಗೆ ಧ್ರುವ ಸರ್ಜಾ ಸಾಥ್ ‘ಮಗ್ನೇ’ ಮಾಸ್ ಆಲ್ಬಂ ಸಾಂಗ್ ರಿಲೀಸ್ ಸಿನಿಮಾ ರಂಗದ ಕನಸು ಹೊತ್ತು ಚಿತ್ರರಂಗದಲ್ಲಿ ಸಾಧಿಸಬೇಕು ಎಂದು ಬರೋರು ಲಕ್ಷಾಂತರ ಮಂದಿ. ಆ ಲಕ್ಷಾಂತರ ಮಂದಿಗಳಲ್ಲಿ ಕೆಲವರನ್ನ ಮಾತ್ರ ಜನರು ಲಕ್ಷವಿಟ್ಟು ನೋಡ್ತಾರೆ. ಕಾರಣ ಅವರಲ್ಲಿ ಅಡಗಿರುವ ಪ್ರತಿಭೆ. ಇಲ್ಲೊಬ್ಬ ಪ್ರತಿಭಾವಂತನನ್ನು ಸ್ಯಾಂಡಲ್ವುಡ್ನ ‘ಕೆ.ಡಿ’ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಗುರುತಿಸಿದ್ದಾರೆ , ಆತನ ಪ್ರಯತ್ನವನ್ನ ಬೆನ್ತಟ್ಟಿ ಭೇಷ್ ಎಂದಿದ್ದಾರೆ. ಹಾಗಾದ್ರೆ ಆ ಪ್ರತಿಭೆ ಯಾರು ಅನ್ನೋ ಪ್ರಶ್ನೆ ಗೆ ಉತ್ತರ ವಾಲೀಸ್ ಸಂತೋಷ್.ಎನ್. ವಾಲೀಸ್ ಸಂತೋಷ್ ಪ್ರತಿಭವಂತ ನೃತ್ಯ ಪಟು , ಡ್ಯಾನ್ಸ್ ಕೊರಿಯೋಗ್ರಫರ್. ಮಾಗಡಿಯ ರೈತಾಪಿ ಕುಟುಂಬದಲ್ಲಿ ....
*ಟೀಸರ್ ನಲ್ಲೇ ಕುತೂಹಲ ಮೂಡಿಸಿದೆ "ಸೂರಿ ಅಣ್ಣ" ಚಿತ್ರ* . *ಹಲವು ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಟೀಸರ್ ಅನಾವರಣ* . ಕನ್ನಡ ಚಿತ್ರರಂಗದ ಸೂಪರ್ ಹಿಟ್ "ಸಲಗ" ಚಿತ್ರದ ತಮ್ಮ ಪಾತ್ರದ ಮೂಲಕ ಪರಿಚಿತರಾಗಿರುವ ಸೂರಿ ಅವರು ಸಲಗ ಸೂರಿ ಅಣ್ಣ ಎಂದೆ ಖ್ಯಾತರಾಗಿದ್ದಾರೆ. ಪ್ರಸ್ತುತ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನದೊಂದಿಗೆ ನಿರ್ಮಾಣವನ್ನೂ ಮಾಡಿರುವ ಚಿತ್ರ "ಸೂರಿ ಅಣ್ಣ". ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ನಿವೃತ್ತ ಪೊಲೀಸ್ ಅಧಿಕಾರಿ ಎಸ್ ಕೆ ಉಮೇಶ್, ಲಹರಿ ವೇಲು, ಎಚ್ ಎಂ ಕೃಷ್ಣಮೂರ್ತಿ(ಜೇಡ್ರಳ್ಳಿ ಕೃಷ್ಣಪ್ಪ), ಪಿ.ಮೂರ್ತಿ, ಗಡ್ಡ ನಾಗಣ್ಣ, ಜೀಬ್ರಾ, ಲಕ್ಕಿ ಅಣ್ಣ, ....
*N1ಕ್ರಿಕೆಟ್ ಅಕಾಡೆಮಿಯ IPT 12 ಸೀಸನ್-2 ಕ್ರಿಕೆಟ್ ಟ್ರೋಫಿ ಅನಾವರಣ* *ಆಗಸ್ಟ್ 9ರಿಂದ 15ರವರೆಗೆ ನಡೆಯಲಿದೆ IPT 12 ಸೀಸನ್-2* *ಮತ್ತೆ ಶುರು IPT 12 ..ಆಗಸ್ಟ್ 9ರಿಂದ 15ರವರೆಗೆ ನಡೆಯಲಿದೆ ಸೀಸನ್-2 ಕ್ರಿಕೆಟ್ ಟೂರ್ನಮೆಂಟ್* ಸುನಿಲ್ ಕುಮಾರ್ ಬಿ. ಆರ್ ನೇತೃತ್ವದ ಎನ್ 1 ಕ್ರಿಕೆಟ್ ಅಕಾಡೆಮಿ ಕ್ರಿಕೆಟ್ ಪ್ರೇಮಿಗಳಿಗಾಗಿ ಹಲವಾರು ಟೂರ್ನಮೆಂಟ್ ಆಯೋಜಿಸಿ ಯಶಸ್ವಿ ಕಂಡಿದೆ. ಇದೀಗ ಮತ್ತೊಮ್ಮೆ IPT12 ಏರ್ಪಡಿಸಿದೆ. ಕಳೆದ ವರ್ಷ IPT12 ಯಶಸ್ವಿಯಾಗಿ ಜರುಗಿದ್ದು, ಇದೀಗ IPT12 ಸೀಸನ್ 2 ಚಾಲನೆ ದೊರೆತಿದೆ. ಡಾಕ್ಟರ್ಸ್, ಲಾಯರ್ಸ್, ಸಿನಿಮಾ ನಟರು, ಕಿರುತೆರೆ ಕಲಾವಿದರು, ಮಾಧ್ಯಮದವರು, ಸಿವಿಲ್ ಕಾಂಟ್ರಾಕ್ಟರ್ಸ್,ಎಕ್ಸ್ಜಿ ಡಿಪಾರ್ಟ್ಮೆನ್ ಕರ್ನಾಟಕ ಪೊಲೀಸ್,ಪ್ರೈವೇಟ್ ಲಿಮಿಟೆಡ್ ಕಂಪನಿ ....
*'ತಾಯವ್ವ’ ನಟಿ ಗೀತಪ್ರಿಯ ಈಗ ’ಅಪರಿಚಿತೆ’* *ಶೀರ್ಷಿಕೆ ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಸಾಥ್ ನೀಡಿದ ಶಾಸಕ ಸಿ.ಎನ್. ಅಶ್ವಥ್ ನಾರಾಯಣ* ಈ ಮೊದಲು ’ತಾಯವ್ವ’ ಎಂಬ ಸಿನಿಮಾದಲ್ಲಿ ನಟಿಸಿದ್ದ, ಗೀತಪ್ರಿಯ ಸುರೇಶ್ ಕುಮಾರ್ ಇದೀಗ ಮತ್ತೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆ ಚಿತ್ರದ ಹೆಸರು ’ಅಪರಿಚಿತೆ’. ಹೌದು ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ, ಶಾಸಕ ಸಿ.ಎನ್. ಅಶ್ವಥ್ ನಾರಾಯಣ ’ಅಪರಿಚಿತ’ ಶೀರ್ಷಿಕೆ ಪೋಸ್ಟರ್ ಬಿಡುಗಡೆ ಮಾಡಿ, ’ಸಿನಿಮಾ ಪವರ್ ಫುಲ್ ಮೀಡಿಯಾ. ಸಾಮಾಜಿಕ ಸಂದೇಶ ಇರುವ ಇಂತ ಸಿನಿಮಾ ಹೆಚ್ಚಾಗಿ ಬರಬೇಕು. ಆಗ ಜನ ಹಾಗೂ ಇಂಡಸ್ಟ್ರಿ ಚನ್ನಾಗಿ ಇರುತ್ತದೆ’ ಎಂದು ಶುಭ ....
ಕಮಲ್ರಾಜ್ ನಿರ್ಮಾಣದ 3 ಚಿತ್ರಗಳ ಪೋಸ್ಟರ್ ಬಿಡುಗಡೆ ಚಿತ್ರರಂಗದಲ್ಲಿ ನಟ, ಸಹನಿರ್ಮಾಪಕನಾಗಿದ್ದ, ಇತ್ತೀಚೆಗೆ ದ ಸೂಟ್ ಎಂಬ ಚಿತ್ರದಲ್ಲಿ ನಟಿಸಿದ್ದ ಕಮಲ್ರಾಜ್ ಅವರು ಇದೀಗ ಒಟ್ಟಿಗೇ ಮೂರು ಚಿತ್ರಗಳನ್ನು ಆರಂಭಿಸಿದ್ದಾರೆ, ಮೊಹಬ್ಬತ್ ಜಿಂದಾಬಾದ್, ಟಾಸ್ಕ್ ಹಾಗೂ ನಾಳೆ ನಮ್ಮ ಭರವಸೆ, ಈ ಮೂರೂ ಚಿತ್ರಗಳಲ್ಲಿ ಅಭಿನಯಿಸುವ ಜೊತೆಗೆ ಕಮಲ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಅವರೇ ಚಿತ್ರ ನಿರ್ಮಾಣ ಸಹ ಮಾಡುತ್ತಿದ್ದಾರೆ. ಮೊಹಬ್ಬತ್ ಜಿಂದಾಬಾದ್ ಹಿಂದಿ ಚಿತ್ರ. ಅಲ್ಲದೆ ನಾಳೆ ನಮ್ಮ ಭರವಸೆ ಚಿತ್ರವನ್ನು 10 ಜನ ನಿರ್ದೇಶನ ಮಾಡಲಿದ್ದು, ಇದರಲ್ಲಿ ನಾಯಕ ಕಮಲ್ರಾಜ್ 50 ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿಗೆ ಈ ಮೂರೂ ಚಿತ್ರಗಳ ಶೀರ್ಷಿಕೆ ....