ಮೂರು ಪಾತ್ರಗಳ ಬಬ್ರೂ
‘ಬಬ್ರೂ’ ಚಿತ್ರವು ಮೂರು ಪಾತ್ರಗಳ ಕತೆಯು ಸಾಗುತ್ತದೆ ಜೊತೆಗೆ ಸಂಪೂರ್ಣ ಚಿತ್ರೀಕರಣ ಯುಎಸ್‌ಎದಲ್ಲಿ ನಡೆಸಿರುವುದು ವಿಶೇಷ. ಸಿನಿಮಾ ಕುರಿತು ಹೇಳುವುದಾದರೆ ಭಾರತೀಯರಾದ ಅರ್ಜುನ್ (ಮಾಹಿಹಿರೇಮಠ್) ಪ್ರೇಯಸಿಯನ್ನು ಭೇಟಿ ಮಾಡಲು, ಹಾಗೆಯೇ ಸನಾ (ಸುಮನ್‌ನಗರ್‌ಕರ್) ಗಂಡನಿಂದ ಮುಕ್ತಿ ಪಡೆಯಲು. ಹೀಗೆ ಇಬ್ಬರು ಪರಿಚಯವಾಗಿ ಬಬ್ರೂ ಎನ್ನುವ ಕಾರನ್ನು ಮೆಕ್ಸಿಕೋದಿಂದ ಕೆನಡಾವರೆಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ರೈತ ಸೇರಿಕೊಳ್ಳುತ್ತಾನೆ. ಕಾಕತಾಳೀಯ ಎನ್ನುವಂತೆ ಕಾರು ಪೋಲೀಸ್, ದುರುಳರಿಗೂ ಬೇಕಾಗಿರುತ್ತದೆ. ಇದರಿಂದ ಇಬ್ಬರಿಗೂ ತೊಂದರೆ ಆಗುತ್ತದೆಯೇ ? ಅವರು ಗುರಿಯನ್ನು ತಲುಪುತ್ತಾರೋ ಎಂಬುದರ ಬಗ್ಗೆ ಚಿತ್ರ ಸಾಗಲಿದೆ.
ಗ್ಯಾಪ್ ನಂತರ ನಾಯಕಿಯಾಗಿ ಸುಮನ್‌ನಗರ್‌ಕರ್ ನಟಿಸಿರುವುದು ಹಿರಿಮೆಯಾಗಿದೆ. ಹೊಸ ಪ್ರತಿಭೆ ಮಾಹಿಹಿರೇಮಠ ನಟನೆಯಲ್ಲಿ ಹಿಂದೆ ಬಿದ್ದಿಲ್ಲ. ಮಾತನಾಡದೆ ಕ್ರೂರತನ ತೋರುವ ಸನ್ನಿಮೋಜ, ಪ್ರೇಯಸಿಯಾಗಿ ಪ್ರಕೃತಿಕಶ್ಯಪ್, ಮತ್ತೋಂದು ಕಡೆಯಲ್ಲಿ ಕಾಣುವ ಗಾನಭಟ್ ಎಲ್ಲರೂ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಛಾಯಗ್ರಹಣ ಸುಮುಖ-ಸುಜಯ್‌ರಾಮಯ್ಯ, ಸಂಭಾಷಣೆ ವರುಣ್‌ಶಾಸ್ತ್ರೀ, ಮತ್ತು ಪೂರ್ಣಚಂದ್ರತೇಜಸ್ವಿ ಅಕಬಲ ಸಂಗೀತ ಎಲ್ಲವೂ ಪೂರಕವಾಗಿದೆ. ಸುಜಿಯ್‌ರಾಮಯ್ಯ ನಿರ್ದೇಶಕನಾಗಿ ಭವಿಷ್ಯವಿದೆ. ವಿದೇಶಕ್ಕೆ ಹೋಗದಿದ್ದರೂ ಚಿಂತೆಯಿಲ್ಲ. ಬಬ್ರೂ ನೋಡಿದಾಗ ಅಲ್ಲಿಗೆ ಹೋಗಿ ಬಂದಂತೆ ಆಗುತ್ತದೆ. ಸುಮನ್‌ನಗರ್‌ಕರ್ ಮತ್ತು ಯುಗ ಕ್ರಿಯೆಶನ್ಸ್ ನಿರ್ಮಾಣ ಮಾಡಿದೆ.