ಫರ್ಫೆಕ್ಟ್ಜಂಟಲ್ಮನ್
‘ಜೆಂಟಲ್‌ಮನ್’ ಆಕ್ಷನ್‌ಚಿತ್ರಅಂದುಕೊಂಡು ಹೋದರೆ ಪ್ರೇಕ್ಷಕನಿಗೆ ಬೇರೆಯದೇರೀತಿಯಅನುಭವಉಂಟಾಗುತ್ರದೆ, ಹಾಗಂತ ಫೈಟ್‌ಇಲ್ಲವೆಂದು ಹೇಳಲಾಗುವುದಿಲ್ಲ.ಜಬರ್‌ದಸ್ತ್ ಮೂರು ಸಾಹಸಗಳು ಮಾಸ್‌ಜನರಿಗೆಇಷ್ಟವಾಗುತ್ತದೆ. ಪ್ರಸ್ತುತ ಸಮಾಜದಲ್ಲಿ ವುಮೆನ್‌ಎಗ್ಸ್‌ಟ್ರಾಫಿಕಿಂಗ್ ಮಾಫಿಯಾ ಮತ್ತು ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಖಾಯಿಲೆ ಬಗ್ಗೆ ಹೇಳಿದ್ದಾರೆ. ನಿಸ್ತುಂತು ದಂಪತಿಗಳಿಗೆ ಅದರಲ್ಲೂಗರ್ಭಕೋಶಬಲಹೀನವಾಗಿರುವರಿಗೆ, ಆರೋಗ್ಯವಂತ ಹುಡುಗಿಯರಿಂದಅದನ್ನುತೆಗೆದು ಮಹಿಳೆಗೆ ವರ್ಗ ಮಾಡುವುದು. ಇಂತಹದಂದೆಎಲ್ಲಾಕಡೆ ನಡೆಯುತ್ತಿದೆ.ಕಥಾನಾಯಕನಿಗೆ ದಿನದಲ್ಲಿಆರುಗಂಟೆಎಚ್ಚರವಾಗಿದ್ದು, ಉಳಿದ ಸಮಯದಲ್ಲಿ ನಿದ್ರಾವಸ್ಥೆಯಲ್ಲಿರುತ್ತಾನೆ. ಅಣ್ಣಅತ್ತಿಗೆ, ಮಗುವಿನೊಂದಿಗೆ ಖುಷಿಯಿಂದಇರುವಆತನಜೀವನದಲ್ಲಿಘೋರಘಟನೆ ನಡೆಯುತ್ತದೆ.ಇದನ್ನು ಭೇದಿಸಲು ಹೋದಾಗದಂದೆ ನಡೆಯುತ್ತಿರುವುದುಗೊತ್ತಾಗುತ್ತದೆ.ಕೊನೆಗೆ ಎದ್ದಿರುವ ಸಮಯದಲ್ಲಿಚಾಣಾಕ್ಷತನದಿಂದ ಹೇಗೆ ದುರುಳರನ್ನು ಮಟ್ಟ ಹಾಕುತ್ತಾನೆಎಂಬುದುಕತೆಯ ತಳಹದಿ.ಇದರ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ ಒಮ್ಮೆ ನೋಡಿ ಬರುವುದಾದರೆಯಾವಅಡ್ಡಿಯೂಇಲ್ಲ.
ಶೀರ್ಷಿಕೆ ಹೆಸರಿನಲ್ಲಿ ಪ್ರಜ್ವಲ್‌ದೇವರಾಜ್‌ಇಡೀಚಿತ್ರವನ್ನುತಿಂದು ಹಾಕಿದ್ದಾರೆ.ಅವರಅಭಿನಯಇನ್ನೊಂದುಎತ್ತರಕ್ಕೆತೆಗೆದುಕೊಂಡು ಹೋಗಿದೆ.ನಾಯಕಿ ನಿಶ್ವಿಕಾನಾಯ್ಡು ಮುದ್ದಾಗಿದ್ದಾರೆ. ಸಂಚಾರಿವಿಜಯ್‌ಇನ್ಸ್‌ಪೆಕ್ಟರ್ ಆಗಿ ಕ್ಲೈಮಾಕ್ಸ್‌ದಲ್ಲಿಪಾತ್ರದಗುಣವನ್ನು ತೋರಿಸಿದ್ದಾರೆ. ಶೇಕಡ ೬೦ ರಷ್ಟು ಬೇಬಿ ಆರಾಧ್ಯ ಮಿಂಚಿದ್ದಾರೆ. ದುರುಳ ವೈದ್ಯನಾಗಿಅರ್ಜುನ್, ಮಿಕ್ಕಂತೆ ಪ್ರಶಾಂತ್‌ಸಿದ್ದಿ, ತಬಲನಾಣಿ, ವಿಜಯ್‌ಚೆಂಡೂರ್, ಸಾಹಿತಿಕಿನ್ನಾಲ್‌ರಾಜ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಚನೆ, ನಿರ್ದೇಶನ ಮಾಡಿರುವಜೆಡೇಶ್‌ಕುಮಾರ್ ಶ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಬಹುದು. ಅಜನೀಶ್‌ಲೋಕನಾಥ್ ಸಂಗೀತದಲ್ಲಿಎರಡು ಹಾಡುಗಳು ಕೇಳಬಲ್. ಹಾಗೆಯೇ ಹಿನ್ನಲೆ ಶಬ್ದ ಆಸಕ್ತಿ ಹುಟ್ಟಿಸುತ್ತದೆ.ಗುರುದೇಶಪಾಂಡೆ ನಿರ್ಮಾಣ ಮಾಡಿರುವುದು ಸಾರ್ಥಕ ಅನಿಸಿದೆ.
***೧/೨