Matthe Udbhava.Film Review.

Friday, February 07, 2020

478

ಮತ್ತೆ  ಉದ್ಬವಿಸಿದ  ಗಣೇಶ

೯೦ರ ದಶಕದಲ್ಲಿಉದ್ಬವಚಿತ್ರದಲ್ಲಿಗಣೇಶಉದ್ಬವವಾಗುವಂತೆಕತೆ ಹಣೆಯಲಾಗಿತ್ತು.ಕಟ್ ಮಾಡಿದರೆ ೩೦ ವರ್ಷಗಳ ನಂತರಅದೇಗಣಪತಿಇಂದುಏನಾಗಿದೆಎಂಬುದನ್ನು ಮುಂದುವರೆಸಿಕೊಂಡು ಹೋಗುವಂತೆ ‘ಮತ್ತೆಉದ್ಬವ’ ಸಿನಿಮಾದಲ್ಲಿ ಹಾಸ್ಯದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ.ಇದರಜೊತೆಗೆ ಪ್ರಸ್ತುತರಾಜಕೀಯ, ಆಶ್ರಮ, ಸ್ವಾಮೀಜಿ ಲೀಲೆಗಳನ್ನು ತೋರಿಸಲಾಗಿದೆ.ದೇವರುಇದ್ದಾನಾ? ಇಲ್ಲವಾ ವಿಷಯಕುರಿತಂತೆಚರ್ಚೆ ನಡೆಸುವುದರೊಂದಿಗೆಕತೆಯು ತೆರೆದುಕೊಳ್ಳುತ್ತಾರೆ.ಅಧಿಕಾರದಲ್ಲಿದ್ದಾಗರಾಜಕೀಯ ವ್ಯಕ್ತಿಗಳು ಏನೇನು ತಪ್ಪು ಮಾಡುತ್ತಾರೆ.ಅದರಿಂದ ತಪ್ಪಿಸಿಕೊಳ್ಳಲು ಮತ್ತೋಂದುತಪ್ಪನ್ನು ಮಾಡುವುದು.ಸುರಕ್ಷಿತವಾಗಿಡಬೇಕೆಂದುಕಪ್ಪು ಹಣವನ್ನುಆಶ್ರಮದಲ್ಲಿಇಡುವುದು.ಅದನ್ನುಆಶ್ರಮದವರು ಬೇರೆಕಾರ್ಯಕ್ಕೆಉಪಯೋಗಿಸುವುದು.ಭಕ್ತೆಯಾಗಿ ಬರುವವಳನ್ನು ಸ್ವಾರ್ಥಕ್ಕಾಗಿ ಸ್ವಾಮೀಜಿ ಬಳಸಿಕೊಳ್ಳುವುದು.ಇಂತಹ ಹಲವು ಪ್ರಸ್ತುತ ವಿಷಯಗಳನ್ನು ಏಳೆಏಳೆಯಾಗಿ ಬಿಚ್ಚಿಟ್ಟಿದಾರೆ.ಇದರ ಮಧ್ಯೆಗಣೇಶಉದ್ಬವವಾಗಿರುವ ಬಗ್ಗೆ ಪರ,ವಿರೋಧ ಹುಟ್ಟಿಕೊಳ್ಳುತ್ತದೆ. ಇದಕ್ಕಾಗಿ ಸರ್ಕಾರವು ಏಳು ನಿವೃತ್ತ ಅಧಿಕಾರಿಗಳನ್ನು ಒಳಗೊಂಡಂತೆ ಸಮಿತಿ ರಚಿಸಿ ವರದಿ ನೀಡಲು ಆದೇಶಿಸುತ್ತದೆ. ಕೊನೆಗೆ ಅವರುಕೊಡುವ ವರದಿಗೆ ಫಲಿತಾಂಶಏನಾಗುತ್ತದೆಎಂಬುದನ್ನುತೆರೆ ಮೇಲೆ ನೋಡುವುದು  ಒಳಿತು.

ಅನಂತ್‌ನಾಗ್ ನಿರ್ವಹಿಸಿದ್ದ ಪಾತ್ರವನ್ನುರಂಗಾಯಣರಘು ಅಷ್ಟೇ ಚೆನ್ನಾಗಿ ನಿಭಾಯಿಸಿದ್ದಾರೆ.ಮಕ್ಕಳಾಗಿ ಹಿರಿ ಮಗನಿಗಿಂತಕಿರಿಮಗನಾಗಿ ಪ್ರಮೋದ್ ಹೊಡೆದಾಟಕ್ಕೂ ಸೈ, ಮಾತಿನಲ್ಲಿ ನಿಪುಣ, ಹೀಗೆ ಚಾಣಾಕ್ಷನಾಗಿ ಮಿಂಚಿದ್ದಾರೆ.ಚಂದನವನಕ್ಕೆ ಮತ್ತೋಬ್ಬಆರಡಿ ನಾಯಕ ಸಿಕ್ಕಿದ್ದಾನೆ ಎನ್ನಬಹುದು.ನಟಿ, ಶಾಸಕಿಯಾಗಿ ಮಿಲನನಾಗರಾಜ್ ಪರವಾಗಿಲ್ಲ. ಕಳ್ಳ ಸ್ವಾಮಿಯಾಗಿ ಮೋಹನ್ ನಟಿಸಿವ ಜೊತೆಗೆಕಾಮಿಡಿ ಡೈಲಾಗ್‌ಗಳನ್ನು ಬರೆದಿರುವುದುಅವರ ಪ್ರತಿಭೆಗೆ ಸಾಕ್ಷಿಯಾಗಿದೆ.ಇವರ ಮುಗ್ದ ಶಿಷ್ಯೆಯಾಗಿ  ಶುಭರಕ್ಷಾ,  ದುರಳ ಶಾಸಕನಾಗಿ ಅವಿನಾಶ್,  ಸುಧಾಬೆಳವಾಡಿ, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಎರಡೂ ಸಿನಿಮಾಕ್ಕೂ ನಿರ್ದೇಶನ ಮಾಡಿರುವಕೋಡ್ಲುರಾಮಕೃಷ್ಣಇದರಲ್ಲಿ ವಾಸ್ತವಕ್ಕೆ ಹೆಚ್ಚು ಒತ್ತುಕೊಟ್ಟಿರುವುದುಕಾಣಿಸುತ್ತದೆ.ವಿ.ಮನೋಹರ್ ಸಂಗೀತದಲ್ಲಿ ಹಾಡುಗಳನ್ನು ಒಮ್ಮೆ ಆಲಿಸಬಹುದಷ್ಟೇ. ನಿತ್ಯಾನಂದಭಟ್,ಸತ್ಯಾ, ಮಹೇಶ್‌ಮುದ್ಗಲ್ ಮತ್ತುರಾಜೇಶ್‌ಜಂಟಿಯಾಗಿ ಒಳ್ಳೆಯ ಚಿತ್ರದ ಹಣ ಹೂಡಿದ್ದಾರೆ.

***೧/೨

 

Copyright@2018 Chitralahari | All Rights Reserved. Photo Journalist K.S. Mokshendra,