ಹೃದಯ ತುಂಬಿಕೊಳ್ಳುವ ದಿಯಾ
ಜೀವನಎನ್ನುವುದು ತೊಂದರೆಗಳು ಎನ್ನುತ್ತಾಳೆ.ಜೀವನದಲ್ಲಿ ಬರುವ ಕ್ಲೇಶಗಳನ್ನು ಪರಿಹರಿಸಿಕೊಳ್ಳುವುದು.ವಾಸ್ತವವನ್ನು ಸ್ವೀಕರಿಸುವುದು ಸರಿ ಅನಿಸುತ್ತೆಎಂದು ಅವನು ಹೇಳುವಾಗ ‘ದಿಯಾ’ ಚಿತ್ರವು ವಿರಾಮದವರೆವಿಗೂ ಬಂದಿರುತ್ತದೆ.ಕೇವಲ ಮೂರು ಪ್ಲಸ್‌ಒಂದು ಪಾತ್ರದಲ್ಲಿ ಸುಂದರ ಪ್ರೀತಿಗಾಥೆಯನ್ನು ತೋರಿಸಿರುವ ರೀತಿ ಪ್ರೇಕ್ಷಕನಿಗೆಎಲ್ಲೂ ಮೊಬೈಲ್ ನೋಡದಂತೆ ಮಾಡಿದೆ.ಇಬ್ಬರು ಹುಡುಗರು, ಒಬ್ಬಳು ಹುಡುಗಿಯ ಸುತ್ತ ಲವ್ ಸ್ಟೋರಿಗಳು ಬಂದಿದೆ.ಆದರೆ ವಿನೂತನವಾಗಿ ಹೇಳಿರುವ ರೀತಿ ನಿಜಕ್ಕೂ ಖುಷಿ ಕೊಡುತ್ತದೆ. ಇಂಜಿನಿಯರಿಂಗ್‌ಕಾಲೇಜಿನಲ್ಲಿಆತ ರಚಿಸಿರುವ ಚಿತ್ರಗಳು, ಸ್ಪುರದ್ರೂಪಿ ಮೈಕಟ್ಟಿಗೆ ಮನಸೋತು ಪ್ರೇಮಿಸಲು ಶುರು ಮಾಡುತ್ತಾಳೆ.ಆ ಕಡೆಯಿಂದಲೂ ಅವನು ಇದೇ ಮಾಡುತ್ತಿರುತ್ತಾನೆ. ಕೊನೆಗೆ ಇಬ್ಬರಿಗೂಗೊತ್ತಾಗಿ ಹಕ್ಕಿಗಳಂತೆ ಹಾರಾಡುವಾಗಘೋರಘಟನೆ ನಡೆಯುತ್ತದೆ, ನಂತರಆಕೆಯ ಬಾಳಿನಲ್ಲಿ ಮತ್ತೋಬ್ಬನ ಪ್ರವೇಶವಾಗುತ್ತದೆ.ಇದರ ಮಧ್ಯೆಅಮ್ಮ-ಮಗನ ಬಾಂದವ್ಯದ ದೃಶ್ಯಗಳು ನಮಗೆ ಗೊತ್ತಿಲ್ಲದಂತೆ ಕಣ್ಣುಗಳು ಒದ್ದೆಯಾಗುತ್ತದೆ.
ನಾಯಕಿ ಖುಷಿ, ನಾಯಕರುಗಳಾದ ದೀಕ್ಷಿತ್, ಪೃಥ್ವಿಅಂಬರ್‌ಛಾಲೆಂಜ್‌ಎನ್ನುವಂತೆಚೆನ್ನಾಗಿ ನಟಿಸಿದ್ದಾರೆ, ನಾಯಕಿಗೆಧ್ವನಿ ನೀಡಿರುವಕಂಠದಾನಕಲಾವಿದೆ ಹಾಗೆಯೇಕಂಚಿನಕಂಠದ ದೀಕ್ಷಿತ್‌ಧ್ವನಿ ಚಿತ್ರಕ್ಕೆ ಕಳಸವಿಟ್ಟಂತೆ ಇದೆಎಂದರೆತಪ್ಪಾಗಲಾರದು. ಅಮ್ಮನಾಗಿ ಪವಿತ್ರಾಲೋಕೇಶ್ ವೈದ್ಯೆಯಾಗಿಗಂಭೀರ ನಟನೆಇದೆ.೬-೫=೨ ಹಾರರ್‌ಚಿತ್ರ ನೀಡಿದ್ದ ನಿರ್ದೇಶಕಅಶೋಕ.ಕೆ.ಎಸ್. ಈ ಬಾರಿಅದಕ್ಕೆ ವಿರುದ್ದವಾದಕತೆಯನ್ನು ಆರಿಸಿಕೊಂಡಿರುವ ಅವರ ಪ್ರಯತ್ನ ಸಪಲವಾಗಿದೆ.ಅಜನೀಶ್‌ಲೋಕನಾಥ್ ಹಿನ್ನಲೆ ಸಂಗೀತಕ್ಕೆ ವಿಶಾಲ್‌ವಿಟ್ಠಲ್-ಸೌರಭ್‌ವಾಘ್‌ಮರೆಛಾಯಾಗ್ರಹಣಚಿತ್ರವನ್ನು ನೋಡಿಸಿಕೊಂಡು ಹೋಗುವಂತೆ ಮಾಡಿದೆ.ಅರ್ಥಪೂರ್ಣ ಸನ್ನಿವೇಶಗಳ ನಡುವೆ ಹಾಡುಗಳು ಶಾಂತಿಭಂಗ ಮಾಡತ್ತದೆಎಂದುಅರಿತಿದ್ದರಿಂದಇದಕ್ಕೆ ಅವಕಾಶ ಮಾಡಿಕೊಡದೆಇರುವುದು ಒಳ್ಳೆಯದೇ ಆಗಿದೆ.ಜೀವನ ಬೇಗನೆ ಬರುತ್ತೆ.ಇರುವಷ್ಟು ದಿನ ಇಷ್ಟಪಟ್ಟಿದ್ದನ್ನುಅನುಭವಿಸಬೇಕು.ಬದುಕು ಸೋಜಿಗಗಳಿಂದ ತುಂಬಿಕೊಂಡಿದೆ.ಇಂತಹ ಹಲವು ಸಂಭಾಷಣೆಗಳು ಮನಸ್ಸಿಗೆ ಹಿತಕೊಡುತ್ತದೆ.ಕರ್ವ ನಿರ್ಮಾಣ ಮಾಡಿರುವಕೃಷ್ಣಚೈತನ್ಯಎರಡನೇ ಪ್ರಯತ್ನದಲ್ಲಿಇಬ್ಬರುಜಯಶಾಲಿಯಾಗಿದ್ದಾರೆ.