ಜ್ಯೂನಿಯರ್, ಸೀನಿಯರ್ ಆತ್ಮಗಳ ಕಥನ
‘ದಮಯಂತಿ’ ಚಿತ್ರದ ಹೆಸರು ಕೇಳಿದರೆ ಅದರಲ್ಲಿ ಗತ್ತು ತಾಕತ್ತು ಎಲ್ಲವು ಇರಲಿದೆ. ಸಿನಿಮಾ ಕುರಿತು ಹೇಳುವುದಾದರೆ ದಮಯಂತಿ ವಾಸವಾಗಿರುವ ಮನೆಯನ್ನು ಕಂಡುಕೊಳ್ಳುವ ಕಂಟ್ರಾಕ್ಟರ್ ಅದು ಮಾರಾಟವಾಗದೆ ಖೇದದಿಂದ ಸಾವಿಗೆ ಶರಣಾಗಿರುತ್ತಾನೆ. ಇದನ್ನು ತಿಳಿದ ಮಗ ಅದನ್ನು ಹೇಗಾದರೂ ಸೇಲ್ ಮಾಡಬೇಕೆಂದು ಪ್ರಯತ್ನಪಟ್ಟಾಗ, ಒಂದು ವಾರ ಮನೆಯೊಳಗೆ ಇದ್ದು ತೋರಿಸಿದರೆ ಮನೆಯಲ್ಲಿ ದೆವ್ವ ಇಲ್ಲವೆಂದು ಖಚಿತವಾಗುತ್ತದೆ. ಆಗ ತೆಗೆದುಕೊಳ್ಳುವುದಾಗಿ ತಿಳಿಸುತ್ತಾರೆ. ಅದರಂತೆ ಆತನು ಬಿಗ್‌ಬಾಸ್ ರೀತಿಯಂತೆ ಆ ಮನೆಗೆ ಏಳು ಮಂದಿಯನ್ನು ಕಳುಹಿಸುತ್ತಾರೆ. ಅಲ್ಲಿ ನಡೆಯುವ ಅವಾಂತರಗಳು, ನಂತರ ಅರಮನೆ ಹಿಂದಿನ ಕತೆಯು ತರೆದುಕೊಳ್ಳುತ್ತದೆ. ಇವಿಷ್ಟು ಕಹಾನಿಯಾಗಿದ್ದು, ನೋಡುವುದಕ್ಕೆ ಖುಷಿ ಕೊಡುತ್ತದೆ. ಅಷ್ಟಕ್ಕೂ ದಮಯಂತಿ ಯಾರು, ಅಲ್ಲಿಗೆ ಏಕೆ ಬಂದಳು ಎಂಬುದಕ್ಕೆ ಉತ್ತರ ಟಾಕೀಸ್‌ದಲ್ಲಿ ಸಿಗುತ್ತದೆ.
ಮುಖ್ಯ ಪಾತ್ರಧಾರಿ ರಾಧಿಕಾಕುಮಾರಸ್ವಾಮಿ ಪಾತ್ರವು ನೋಡುಗರಿಗೆ ನೆನಪಿನಲ್ಲಿ ಉಳಿಯುತ್ತದೆಯಾದರೂ, ಅವರು ಕಾಣಿಸಿಕೊಳ್ಳುವುದು ವಿರಾಮದ ನಂತರ. ಕಣ್ಣು ಬಿಡುತ್ತಾ ಅಭಿನಯದಲ್ಲಿ ಮಿಂಚಿದ್ದಾರೆ. ಮನೆಯ ಸದಸ್ಯರುಗಳಾಗಿ ತಮಲನಾಣಿ, ಪವನ್‌ಕುಮಾರ್, ಮಿತ್ರ, ಗಿರಿ, ಅನುಷಾರೈ, ಸಾಧುಕೋಕಿಲ ನಗಿಸುತ್ತಾರೆ. ಅದರಲ್ಲೂ ತಬಲನಾಣಿ, ಪವನ್‌ಕುಮಾರ್ ಕಾಂಬಿನೇಷನ್ ಜಾಸ್ತಿ ಕಚಗುಳಿ ನೀಡುತ್ತದೆ. ಖಳನಾಗಿ ಭಜರಂಗಿಲೋಕಿ ಭವಿಷ್ಯದಲ್ಲಿ ಒಳ್ಳೆಯ ಅವಕಾಶಗಳು ಸಿಗುವ ಲಕ್ಷಣವಿದೆ. ಗಣೇಶ್‌ನಾರಾಯಣ್ ಹಿನ್ನಲೆ ಸಂಗೀತ ರೋಚಕವಾಗಿದೆ. ಹಾರರ್ ಮತ್ತು ಗ್ರಾಫಿಕ್ಸ್ ಚಿತ್ರದ ತಾಂತ್ರಿಕತೆಯ ವಿಭಾಗವನ್ನು ಶ್ರೀಮಂತಗೊಳಿಸಿದೆ. ನವರಸನ್ ಕತೆ, ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ. ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣ ದೃಶ್ಯಗಳಿಗೆ ಮರೆಗು ತಂದುಕೊಟ್ಟಿರುವುದರಿಂದ ಎರಡು ಗಂಟೆ ನಲವತ್ತು ನಿಮಿಷವಾದರೂ ಬೋರ್ ಅನಿಸುವುದಿಲ್ಲ.