ಪಾಪ್ಕಾರ್ನ್ಕ್ಲಾಸ್, ಮಾಸ್ ಸಮ್ಮಿಲನ
ಟಗರು ಸೂರಿ ನಿರ್ದೇಶನದ ‘ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲಿಅಂಡರ್‌ವರ್ಲ್ಡ್, ಅವರದಂದೆ, ವೈಯಕ್ತಿಕಜೀವನ ಶೈಲಿ ಹೇಗಿರುತ್ತದೆಎನ್ನುವುದನ್ನು ನೈಜಎನ್ನುವಂತೆ ತೋರಿಸಿರುವುದು ಹೆಚ್ಚುಗಾರಿಕೆಯಾಗಿದೆ. ರೌಡಿಸಂ, ಸುಪಾರಿ ಕೊಲೆ, ಪ್ರೀತಿಎಲ್ಲವು ಹೊಸತನದಿಂದಕೂಡಿದೆ.ನಿರ್ದೇಶಕರು ಊಹಿಸಿಕೊಂಡ ಪಾತ್ರಗಳು, ಲೋಕೇಷನ್, ಮೇಕಿಂಗ್, ಸನ್ನಿವೇಶಗಳು ನೋಡುಗನಿಗೆರಿಜಿಸ್ಟರ್‌ಆಗುವಂತೆ ಚಿತ್ರೀಕರಿಸಿರುವುದು ಕಂಡುಬರುತ್ತದೆ.ಕತೆಕುರಿತು ಹೇಳುವುದಾದರೆ ಟೈಗರ್ ಸೀನ ಮೆಕ್ಯಾನಿಕ್‌ನ್ನು ಅಕ್ಕ ಬೆಳೆಸಿರುತ್ತಾಳೆ.ಪಾಪ್‌ಕಾರ್ನ್ ಸಾಮಾನ್ಯ ಹುಡುಗಿ.ಟೈಗರ್‌ನಂತಯೇಇರಬೇಕೆಂಬಯ ಸೀನನಿಗೆ ರೌಡಿಯೊಬ್ಬನಿಂದ ಮಂಕಿ ಹೆಸರು ಬಿರುದು ಸಿಗುತ್ತದೆ. ಈತನ ಬದುಕು, ಪ್ರೀತಿಸಿದ ಹುಡುಗಿ, ಹೆಂಡತಿ, ಸ್ನೇಹಿತರ ಮದ್ಯೆ ಹೇಗೆ ಒದ್ದಾಟಗಳು ಬರುತ್ತವೆಎನ್ನುವುದನ್ನುಅರ್ಥಪೂರ್ಣವಾಗಿ ಹೇಳಿದೆ.
ಸೀನನಾಗಿ ಧನಂಜಯ್ ನಟನೆಚೆನ್ನಾಗಿದೆ. ನಿವೇದಿತ ಹಲವು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೆಂಡತಿಯಾಗಿ ಸಪ್ತಮಿ ಅಭಿನಯ ಪರವಾಗಿಲ್ಲ. ಕಾಕ್ರೋಚ್‌ಸುದಿ, ಅಮೃತಾಅಯ್ಯಂಗಾರ್, ಪ್ರಶಾಂತ್‌ಸಿದ್ದಿ, ಎಲ್ಲರೂ ನಿರ್ದೇಶಕರಕಲ್ಪನೆಗೆತಕ್ಕಂತೆ ಕೆಲಸ ಮಾಡಿರುವುದು ಪ್ಲಸ್ ಪಾಯಿಂಟ್. ಚರಣ್‌ರಾಜ್ ಸಂಗೀತ, ಶೇಖರ್‌ಛಾಯಾಗ್ರಹಣಎಲ್ಲವುಇದಕ್ಕೆ ಪೂರಕವಾಗಿದೆ.ಎಲ್ಲವನ್ನುಅದ್ಬುತವಾಗಿಕಟ್ಟಿಕೊಟ್ಟುಅಂತಿಮವಾಗಿ ಪ್ರಶ್ನೆಇಟ್ಟು ಬೇರೊಂದುಕುತೂಹಲಕ್ಕೂ ನಾಂದಿ ಆಗುತ್ತಾರೆ.ಅದು ಏನು ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು.ಸುಧೀರ್.ಕೆ.ಎಂ.ನಿರ್ಮಾಪಕರು.
***೧/೨