ಮಹಿಳಾ ಪ್ರಧಾನಚಿತ್ರ
ಮಹಿಳೆ ಕುರಿತಾದ‘ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’ ಚಿತ್ರದಕತೆಯಲ್ಲಿ ನಾಯಕಿ ವಿಧುವೆ. ನಾಯಕ ಪತ್ರಕರ್ತನಾಗಿದ್ದು ಪುರಾತನದಇತಿಹಾಸದ ವರದಿ ಸಿದ್ದಪಡಿಸಲು ಊರಿಗೆ ಹೋಗುತ್ತಾನೆ. ಅಲ್ಲಿ ಪ್ರೀತಿಸುತ್ತಿದ್ದ, ಗೆಳಯನ ಹೆಂಡತಿ ವಿಧುವೆಯಾಗಿರುತ್ತಳೆ. ಮುಂದೆ ಆಕೆಗೆ ಹೊಸಬಾಳು ಕೊಡುತ್ತಾನಾಎಂಬುದು ಸಿನಿಮಾದ ತಿರುಳು. ವೃತ್ತಿಯಲ್ಲಿ ವಕೀಲರಾಗಿರುವ ನಂದೀಶ್ ನಾಯಕ, ಸಂಹಿತಾ ನಾಯಕಿಯಾಗಿನಾಲ್ಕನೇ ಚಿತ್ರದಲ್ಲಿ ಸುಧಾರಿಸಿದ್ದಾರೆ, ವಿಧುವೆಯ ವಿಧ ವಿಧವಾದ ವೇದನೆಕುರಿತಂತೆಮೂರುಹಾಡುಗಳಿಗೆ ಸಾಹಿತ್ಯ ರಚಿಸಿ ಸಂಗೀತ ಒದಗಿಸಿರುವುದು ಕಾರ್ತಿಕ್‌ವೆಂಕಟೇಶ್.
ಕಳೆದ ಸಾರಿ ಬಂಜೆಕುರಿತಾದಚಿತ್ರವನ್ನು ನೀಡಿದ್ದಅಶೋಕ್.ಕೆ.ಕಡಬ ಈ ಬಾರಿ ಮಹಿಳಾ ಪ್ರಧಾನ ಸಿನಿಮಾಕ್ಕೆ ೯೦ರ ಕಾಲಘಟ್ಟದಕತೆ,ಚಿತ್ರಕತೆ ಬರೆದುಆಕ್ಷನ್‌ಕಟ್ ಹೇಳಿರುವುದು ಚೆನ್ನಾಗಿ ಮೂಡಿಬಂದಿದೆ. ಉಡುಪಿಯರಂಗಭೂಮಿಕಲಾವಿದರ ನಟನೆಯುಅವರಿಗೆಉಜ್ವಲ ಭವಿಷ್ಯವಿದೆ.ಹನುಮಂತರಾಜು.ಬಿ. ನಿರ್ಮಾಣ ಮಾಡಿರುವ ಸಿನಿಮಾವನ್ನುಒಮ್ಮೆ ನೋಡಲುಅಡ್ಡಿಯೇನಿಲ್ಲ.
***