ಅಸುರರನ್ನು ಸಂಹಾರ ಮಾಡುವಕಥನ
ಎಂಟು ವರ್ಷಗಳ ಕೆಳಗೆ ವಿಬ್‌ಗಯಾರ್ ಶಾಲೆಯಲ್ಲಿಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದುಇಡೀದೇಶವೇ ತಲ್ಲಣಿಸಿತ್ತು.ಇದರಿಂದ ಸ್ಪೂರ್ತಿ ಪಡೆದುಕೊಂಡು ಶಿವಾರ್ಪಣಮಸ್ತು ಅಂತಅಡಿಬರಹದಲ್ಲಿ ಹೇಳಿಕೊಂಡಿರುವ ‘ಅಸುರ ಸಂಹಾರ’ ಎನ್ನುವಚಿತ್ರಕ್ಕೆಕತೆ,ಚಿತ್ರಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿರುವುದು ಪ್ರದೀಪ್‌ಅರಸು. ಅಪರಾಧಿಗಳು ಕೇಸ್‌ನಿಂದ ತಪ್ಪಿಸಿಕೊಳ್ಳಬಹುದು.ಆದರೆಇದರಲ್ಲಿ ನೀಡುವ ಶಿಕ್ಷೆಯು ಕಾನೂನಿನಲ್ಲಿ ಹೊಸದಾಗಿರುತ್ತದೆ.ಅದು ಏನು ಎಂಬುದನ್ನುತಂಡವುಕುತೂಹಲ ಕಾಯ್ದರಿಸಿದೆ.ಯಾವುದೇ ದುರಳ ವ್ಯಕ್ತಿಯುಇಂತಹಅಪರಾಧ ಮಾಡುವಮುನ್ನಒಮ್ಮೆ ಶಿಕ್ಷೆಯನ್ನು ನೆನಸಿಕೊಂಡರೆ,
ಹಿಂಜರಿಯುವುದುಖಚಿತವಂತೆ.ಒಂದು ಹೆಣ್ಣು ಸಮಾಜದಲ್ಲಿತಾಯಿ, ಅಕ್ಕ, ತಂಗಿ, ಮಗಳಾಗಿ ಕಾಣಿಸಿಕೊಳ್ಳುತ್ತಾರೆ.ಅಂತಹುದರಲ್ಲಿ ಒಬ್ಬಳೆ ಸಿಕ್ಕಾಗ ಭೋಗದ ವಸ್ತು ಎಂದುತೀರ್ಮಾನಿಸುವುದು ಸರಿಯಲ್ಲಎಂದು ಹೇಳಲಾಗಿದೆ.
ಹರ್ಷಅರಸು ಫೋಟೋಗ್ರಾಫರ್ ಪಾತ್ರದಲ್ಲಿಪರವಾಗಿಲ್ಲ. ಹರ್ಷಲಹನಿ ನಾಯಕಿ. ತಂಗಿಯಾಗಿ ದೀಕ್ಷಾಶೆಟ್ಟಿ,ಇಬ್ಬರು ನಟನೆಯಲ್ಲಿ ಪಳಗಬೇಕಿದೆ. ಹೆಣ್ಣುಮಗಳನ್ನು ಕಳೆದುಕೊಂಡು ನ್ಯಾಯಕ್ಕಾಗಿ ಹೋರಾಡುವಧರ್ಮ, ಖಳನಟರುಗಳಾಗಿ ಶಿವಬಾಲಾಜಿ,ವಿನಯ್ ನಗಿಸಲು ರವಿಚಂದ್ರ ಮುಂತಾದವರುನೀಡಿದ ಪಾತ್ರವನ್ನುಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಂತೋಷ್‌ನಾಯ್ಕ್ ಮತ್ತು ಸಂಗೀತ ನಿರ್ದೇಶಕಲೋಕಿ ಸಾಹಿತ್ಯದಒಟ್ಟುಎರಡು ಹಾಡುಗಳಿಗೆ ಮೆಹಬೂಬ್‌ಸಾಬ್, ಮಾನಸಹೊಳ್ಳ, ಸಂತೋಷ್‌ವೆಂಕಿಧ್ವನಿಯಾಗಿದ್ದಾರೆ. ಛಾಯಾಗ್ರಹಣ ಪ್ರವೀಣ್‌ಶೆಟ್ಟಿ, ಸಂಕಲನ ವಿನಯ್‌ಕುಮಾರ್‌ಕೂರ್ಗ್, ಸಾಹಸ ಡಿಫರೆಂಟ್‌ಡ್ಯಾನಿ ಇವೆಲ್ಲವುಕತೆಗೆ ಪೂರಕವಾಗಿದೆ. ಹರಿಪ್ರಸಾದ್ ನಿರ್ಮಾಣ ಮಾಡಿರುವಚಿತ್ರ ಪೈಸಾ ವಸೂಲ್‌ಎನ್ನಬಹುದು.
***