ಭರಮಣ್ಣ ವರ್ಸಸ್ ಮುದ್ದಣ್ಣ
ಐತಿಹಾಸಿಕ ಚಿತ್ರ ‘ಬಿಚ್ಚುಗತ್ತಿ’ ೧೬ನೇ ಶತಮಾನದಕತೆಯಾಗಿದೆ. ಸಿನಿಮಾಕುರಿತು ಹೇಳುವುದಾದರೆ ಆ ಕಾಲದಲ್ಲಿ೧೩ ಪಾಳೇಗಾರರು ಆಳಿದ್ದರು.ಇದರಲ್ಲಿರಾಜಬಿಚ್ಚುಗತ್ತಿ ಭರಮಣ್ಣ ನಾಯಕಕೂಡಒಬ್ಬರು. ೧೬೭೫ ರಿಂದ ೧೬೮೫ರಅವಧಿಯಲ್ಲಿ ದಳವಾಯಿ ಮುದ್ದಣ್ಣಇಡೀ ಸೇನೆಯನ್ನೆತನ್ನ ವಶದಲ್ಲಿರಿಸಿಕೊಂಡು ಹೆಸರಿಗೆ ಮಾತ್ರ ಬಲಹೀನ ಪಾಳೆಗಾರರನ್ನು ಪಟ್ಟಕ್ಕೆ ಕೂರಿಸಿ, ದೊರೆ, ಪ್ರಜೆಗಳನ್ನು ದರ್ಪದೌರ್ಜನ್ಯದಿಂದತಾನೆಅಧಿಕಾರ ನಡೆಸಲು ಶುರು ಮಾಡಿದರು. ದೊರೆಯು ಮುದ್ದಣ್ಣನನ್ನು ವಿರೋದಿಸಿದರಿಂದಾಗಿ ದಳವಾಯಿ ದಂಗೆಗೆಕಾರಣವಾಯಿತು. ಇದರ ಮಧ್ಯೆಒಗ್ಗಟ್ಟಿನಿಂದ ಮುಗ್ಗಟ್ಟನ್ನುಜಯಸಬಹುದೆಂದುಸನ್ಯಾಸಿ ಹೇಳಿದಂತೆ ಭರಮಣ್ಣಯುವಸೇನೆಕಟ್ಟಿಕೊಂಡು ದುರುಳರಅಟ್ಟಹಾಸವನ್ನು ಮಟ್ಟಹಾಕಲು ಪಣತೊಡುತ್ತಾನೆ. ಕೊನೆಗೆ ಭರಮಣ್ಣ-ಮುದ್ದಣ್ಣನಯುದ್ದದಲ್ಲಿಯಾರುಜಯಶಾಲಿಯಾಗುತ್ತಾರೆ. ಇದೇ ಸಂದರ್ಭದಲ್ಲಿ ಭರಮಣ್ಣ ಮತ್ತು ಸಿದ್ದಾಂಬೆಯ ಘೋರ ಸತ್ಯ ಹೊರಗೆ ಬರುತ್ತದೆ.ಅದು ಏನು ಎಂಬುದನ್ನುಚಿತ್ರದಲ್ಲಿ ನೋಡಬಹುದು,
ಭರಮಣ್ಣನಾಯಕನಾಗಿರಾಜವರ್ಧನ್, ದಳವಾಯಿ ಮುದ್ದಣ್ಣನಾಗಿ ಬಾಹುಬಲಿ ಖ್ಯಾತಿಯ ಪ್ರಭಾಕರ್‌ಇಬ್ಬರುಆರಡಿಗಿಂತ ಹೆಚ್ಚು ಎತ್ತರ, ದೃಡದೇಹಇರುವುದರಿಂದ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ನಾಯಕಿ ಹರಿಪ್ರಿಯಾ ಸಿದ್ದಾಂಬೆಯಾಗಿ ಮುಗ್ದೆ, ಮತ್ತೋಂದುಕಡೆಕತ್ತಿವರಸೆ, ಕುದುರೆಸವಾರಿ ಮಾಡಿದ್ದಾರೆ. ಉಳಿದಂತೆ ಒಬಣ್ಣನಾಯಕನಾಗಿ ಶರತ್‌ಲೋಹಿತಾಶ್ವ, ಸನ್ಯಾಸಿ ಪಾತ್ರದಲ್ಲಿ ಶಿವರಾಂ, ನಾಯಕನತಾಯಿಯಾಗಿ ಸ್ಪರ್ಶಾರೇಖಾ, ಮಲ್ಲವ್ವನಾಗಿಕಲ್ಯಾಣಿ, ಶ್ರೀನಿವಾಸಮೂರ್ತಿ, ಸುನೇತ್ರಪಂಡಿತ್, ಅರಸು, ಡಿಂಗ್ರಿನಾಗರಾಜ್, ರಾಜೇಂದ್ರಕಾರಂತ್ ಮುಂತಾದವರು ನೀಡಿದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ, ಆಕ್ಷನ್, ಲವ್ ಚಿತ್ರಗಳಿಗೆ ನಿರ್ದೇಶನ ಮಾಡಿರುವ ಹರಿಸಂತೋಷ್‌ಇಂತಹ ಪ್ರಯತ್ನಕ್ಕೆ ಕೈಹಾಕಿ ಸೈ ಅನಿಸಿಕೊಂಡಿದ್ದಾರೆ. ಬಹುಪಾಲು ದೃಶ್ಯಗಳು ಸೆಟ್‌ಆಗಿದ್ದರೂ ನೋಡುಗರಿಗೆ ನಿಜವೆನ್ನುವಂತೆಇರುವುದುಕಲಾನಿರ್ದೇಶಕನ ಶ್ರಮ ಪರದೆ ಮೇಲೆ ಕಾಣಿಸುತ್ತದೆ.ಗ್ರಾಫಿಕ್ಸ್‌ದಲ್ಲಿ ಬರುವ ಹುಲಿ ನೋಡುವುದೇಚೆಂದ.ಹಂಸಲೇಖಾ-ನಕುಲ್‌ಅಭ್ಯಂತರ್ ಸಂಗೀತ, ಗುರುಪ್ರಶಾಂತ್‌ರೈಛಾಯಾಗ್ರಹಣಇವೆಲ್ಲವು ಪೂರಕವಾಗಿದೆ. ಬಿ.ಎಲ್.ವೇಣುಕಾದಂಬರಿಗೆಚ್ಯುತಿ ಬಾರದಂತೆ ಸಿನಿಮಾ ಮಾಡಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.ಓಂ ಸಾಯಿ ಕೃಷ್ಣ ಪ್ರೊಡಕ್ಷನ್ ಸಂಸ್ಥೆಯು ನಿರ್ಮಾಣದಜವಬ್ದಾರಿಯನ್ನು ಹೊತ್ತುಕೊಂಡಿದೆ.
ರೇಟಿಂಗ್: ***೧/೨