Sagutha Doora Doora.Film Review.

Friday, February 14, 2020

1384

ಕಣ್ಣನ್ನುಒದ್ದೆ ಮಾಡಿಸುವ ಸಾಗುತದೂರದೂರ

ಮನಸ್ಸನ್ನುಕದಡುವ ‘ಸಾಗುತದೂರದೂರ’ ಚಿತ್ರವುಇಡೀಕತೆಯುಅಮ್ಮನ ಹುಡುಕಾಟದಲ್ಲಿ ಪರದಾಟಗಳು ಬರುತ್ತವೆ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬನಿಗೆಅಮ್ಮನನ್ನು ನೋಡುವಆಸೆ. ಮತ್ತೋಂದುಕಡೆಅರ್ಧ ಮಾನಸಿಕ ಸ್ಥಿಮಿತದಲ್ಲಿರುವ ಯುವಕನೊಬ್ಬನಿಗೂಅದೇರೀತಿಯ ಬಯಕೆ. ಇಬ್ಬರುಒಂದುಕಡೆ ಆಕಸ್ಮಿಕವಾಗಿ ಸೇರುತ್ತಾರೆ.ಯೋಚನೆ, ಯೋಜನೆಅದೇಆಗಿರುವುದರಿಂದತಾಯಿಯನ್ನು ನೋಡುವುದಕ್ಕೆಂದೆತಾಯಿನೆಲೆ ಮತ್ತುಗುಬ್ಬಿಗೂಡಿಗೆಪಯಣ ಬೆಳೆಸುತ್ತಾರೆ. ಈ ಹಾದಿಯಲ್ಲಿ ಸೋಜಿಗದಕಲ್ಲು ಮುಳ್ಳುಗಳು ಎದುರಾಗುತ್ತದೆ.ಆದರೂಅವರಿಂದ ಸಹಾಯ ಸಿಗುತ್ತದೆ.ಇವರಿಬ್ಬರಅಮ್ಮನು ಮಗನನ್ನುದೂರಇಡಲು ಬಲವಾದಕಾರಣವಿರುತ್ತದೆ.ಪ್ರಾರಂಭದಲ್ಲಿನೋಡುಗನಿಗೆಕೆಟ್ಟತಾಯಿಯೆಂದು ಭಾಸವಾಗುತ್ತದೆ,  ನಂತರಆಕೆಯ ಪರಿಸ್ಥಿತಿಯ ಸನ್ನಿವೇಶಗಳು ಬಂದಾಗ ಮನಸ್ಸುಕದಡುತ್ತದೆ, ಆ ಸಂದ್ಗಿದ ಕಷ್ಟಗಳು ಯಾವುದು? ಅಮ್ಮನಿಂದದೂರವಿರಲುಕಾರಣವೇನು?ಅಂತಿಮವಾಗಿಅಮ್ಮನು ಸಿಗುತ್ತಾಳಾ.ಇದರ ಮಧ್ಯೆಕೊಲೆಗಾರನನನ್ನು ಹುಡುಕುತ್ತಿರುವ ಪೋಲೀಸರದಂಡು.ಇವೆಲ್ಲವು  ಮೇಳೈಸಿ, ಕುತೂಹಲ ಹುಟ್ಟಿಸಿದೆ.

ಅರೆ ಹುಚ್ಚನಾಗಿ ಮಹೇಶ್‌ಸಿದ್ದು, ವಿದ್ಯಾರ್ಥಿಯಾಗಿ ಮಾಸ್ಟರ್ ಆಶಿಕ್ ನಟನೆಟಾಕೀಸ್‌ನಿಂದ ಹೊರೆಗ ಬಂದರೂಕಾಡುತ್ತಾರೆ. 

ಬೆಲವಣ್ಣುಪಾತ್ರದಲ್ಲಿಅಪೇಕ್ಷಾಪುರೋಹಿತ್,ಎನ್‌ಕೌಂಟರ್‌ಇನ್ಸ್‌ಪೆಕ್ಟರ್ ಆಗಿ ನವ ಪ್ರತಿಭೆ ಬಾಂಬೆ ರಂಗಭೂಮಿಕಲಾವಿದಕನ್ನಡಿಗಕುಮಾರ್‌ನವೀನ್, ಗೌಡರ ಮಗಳಾಗಿ ಡಾ.ಜಾನ್ವಿಜ್ಯೋತಿ, ಶಿಸ್ತಿನ ಪೋಲೀಸ್‌ಅಧಿಕಾರಿಆರತಿ, ಸಿಪಾಯಿ ಮೋಹನ್‌ಜುನೇಜ, ತಾಯಿಯಾಗಿಉಷಾಭಂಡಾರಿ, ಮುತ್ಸದ್ದಿಯಾಗಿ ಹೊನ್ನವಳ್ಳಿಕೃಷ್ಣ ಎಲ್ಲರ ಪಾತ್ರಗಳು ಮಾನವೀಯ ಗುಣಗಳನ್ನು ಬಿಂಬಿಸಿದೆ. ಹೊಸ ಪಾತ್ರಗಳು ಹಾಗೆ ಬಂದರೂಅದಕ್ಕೊಂದುಅರ್ಥಇರುವಂತೆ ಮುಕ್ತಾಯ ಮಾಡಿರುವುದು ಮತ್ತೋಂದು ಹಿರಿಮೆಯಾಗಿದೆ.ರಚಿಸಿ ನಿರ್ದೇಶನ ಮಾಡಿರುವರವಿತೇಜಭವಿಷ್ಯದತಂತ್ರಜ್ಘರಾಗಲುಅರ್ಹತೆ ಪಡೆದುಕೊಂಡಿದ್ದಾರೆ.ಸಂಗೀತ ಒದಗಿಸಿರುವ ಕದ್ರಿಮಣಿಕಾಂತ್, ಸುಂದರ ತಾಣಗಳನ್ನು ಸೆರೆಹಿಡಿದಿರುವಅಭಿಲಾಷ್‌ಕಲತ್ತಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಬಹುದು.ತಾಯಿಎಂಬುದಕ್ಕೆ ಭಾವನೆಗಳ ಪದಗಳನ್ನು ಡಾ.ನಾಗೇಂದ್ರಪ್ರಸಾದ್ ಹಿನ್ನಲೆಯಲ್ಲಿ ಹೇಳಿದ್ದಾರೆ. ನಿರ್ಮಾಪಕಅಮಿತ್.ಓ.ಪೂಜಾರಿ ಭ್ರಷ್ಟ ಶಾಸಕನ ಪಾತ್ರಕ್ಕೆ ಬಣ್ಣಹಚ್ಚಿದ್ದು ಒಳ್ಳೆಯ ಚಿತ್ರ ನೀಡಿದ್ದಾರೆಎನ್ನಬಹುದು.

****

 

Copyright@2018 Chitralahari | All Rights Reserved. Photo Journalist K.S. Mokshendra,