Navaratna.Film Review.

Friday, February 14, 2020

1332

           

ಹುಡುಕಾಟದ ಹಾದಿಯಲ್ಲಿ ನವರತ್ನ

ಚಿರಿತ್ರೆ, ಇತಿಹಾಸ, ಮತ್ತುಮಾಫಿಯಾ ಈ ಮೂರು ಅಂಶಗಳನ್ನು ಒಳಗೊಂಡ ಚಿತ್ರ ‘ನವರತ್ನ’ ಕತೆಯಾಗಿದೆ. ಅದೊಂದು ಸಾಮ್ರಾಜ್ಯ ವಿಸ್ರರಣೆಯಲ್ಲಿಕಂಡ ಸೋಲು-ಗೆಲುವು, ಅವಮಾನ ಹಾಗೂ ದ್ವೇಷದಕಥನ. ಇದರಲ್ಲಿ ಬರುವಒಂದು ಮುಖ್ಯವಾದತಿರುವು ಮುಂದುವರೆದ ಭಾಗವಾಗಿ ಪರದೆ ಮೇಲೆ ಮೂಡಿದೆ.ಇಂತಹಐತಿಹಾಸಿಕ ಫ್ಲ್ಯಾಷ್‌ಬ್ಯಾಕ್ ಆಸಕ್ತಿ ಹುಟ್ಟಿಸಿದೆ. ಅಲ್ಲೊಂದುಕಾಡು.ಅಲ್ಲಿಗೆಛಾಯಾಚಿತ್ರಕ್ಕಾಗಿ ಹೋಗುವವರುಯಾರು ಮತ್ತೆ ಹಿಂದುರಿಗಿ ಬಂದಿಲ್ಲ. ಆಲ್ಲಿಗೆ ಹೋದವರ  ಮಿಸ್ಸಿಂಗ್ ಮಿಸ್ಟ್ರೀ ಪೋಲೀಸರಿಗೆದೊಡ್ಡ ಸಮಸ್ಯೆಆಗಿರುತ್ತದೆ.  ಕಥಾನಾಯಕ, ಗೆಳೆಯ ಹಾಗೂ ನಾಯಕಿಅದೇಕಾಡಿಗೆ ಹೋಗುತ್ತಾರೆ.ಅವಳಿಗೆ ಫೋಟೋಗ್ರಫಿ ಮಾಡುವ ಬಯಕೆ.ಅವನಿಗೆ ಇದನ್ನುದಾಟಿ ಬೆಂಗಳೂರಿಗೆ ಹೋಗಬೇಕು ಎನ್ನುವಉದ್ದೇಶ.ಅವಳು ಇಲ್ಲಿಯಜಾಗ ಬಿಟ್ಟು ಬರಲು ಮನಸ್ಸಿಲ್ಲ. ಅದೇಕಾಡಿನಲ್ಲಿಗುಟ್ಟಾಗಿ ನಡೆಯುತ್ತಿರುವ ಮಾಫಿಯಾದಂದೆ, ಸರಣಿ ಕೊಲೆ ಇವೆಲ್ಲಕ್ಕೂಕುತೂಹಲಕಾರಿ ಅಂಶಗಳು ಕ್ಲೈಮಾಕ್ಸ್ ಮುನ್ನಗೊತ್ತಾಗುತ್ತಾ ಹೋಗುತ್ತದೆ.

ಪ್ರತಾಪ್‌ರಾಜ್‌ನಾಯಕಹಾಗೂ ನಿರ್ದೇಶದಜವಬ್ದಾರಿಯನ್ನುಚೆನ್ನಾಗಿ ನಿಭಾಯಿಸಿದ್ದಾರೆ.ನಾಯಕಿ ಮೋಕ್ಷಕುಶಾಲ್, ಗೆಳೆಯನಾಗಿ ಅಮಿತ್, ಶರತ್‌ಲೋಹಿತಾಶ್ವ, ಬಲರಾಜವಾಡಿ, ಪವಿತ್ರಾಲೋಕೇಶ್‌ಎಲ್ಲರೂ ನೀಡಿದ ಕೆಲಸವನ್ನು ಶ್ರದ್ದೆಯಿಂದ ನಿರ್ವಹಿಸಿದ್ದಾರೆ.ಅದ್ಬುತ ಮೇಕಿಂಗ್, ದೃಶ್ಯ ವೈಭವಎಲ್ಲವೂಚಿತ್ರಕ್ಕೆ  ಪ್ಲಸ್ ಪಾಯಿಂಟ್‌ಆಗಿದೆ. ವೆಂಗಿ ಸಂಗೀತ, ಛಾಯಾಗ್ರಹಣರೋಜಿ.ಪಿ.ಜಾನ್-ಲಕ್ಷೀರಾಜ್, ಸಂಕಲನ ವಿಷ್ಣು.ಎಸ್, ಹಿನ್ನಲೆ ಶಬ್ದ ಪ್ರವೀಣ್‌ಪೌಲ್,  ಮೂರು ಸಾಹಸಗಳಿಗೆ  ರಿಯಲ್‌ಸತೀಶ್‌ಇವರೆಲ್ಲರ ಕೆಲಸವು ಪೂರಕವಾಗಿದೆ. ಮೊದಲ ಪ್ರಯತ್ನದಲ್ಲೆ ನಿರ್ಮಾಪಕ ಸಿ.ಪಿ.ಚಂದ್ರಶೇಖರ್ ಒಳ್ಳೆಯ ಚಿತ್ರ ನೀಡಿದ್ದಾರೆ.

              

 

Copyright@2018 Chitralahari | All Rights Reserved. Photo Journalist K.S. Mokshendra,