Mounam.Film Review.

Friday, February 21, 2020

818

ಭಾವನೆಗಳ ಸುತ್ತಮೌನಂ

ಸೊಸೆ ಆಗುವವಳನ್ನು ಪ್ರೀತಿಸುವುದು.ಇದಕ್ಕೆಅಡ್ಡಿ ಬರುವ ಮಗನನ್ನುದ್ವೇಷಿಸುವುದು, ಕೊನೆಗೆ ಸುಪಾರಿ ನೀಡಲುಚಿಂತನೆ ಮಾಡುವುದುಇವೆಲ್ಲವು ‘ಮೌನಂ’ ಚಿತ್ರದಲ್ಲಿ ಬರುತ್ತದೆ.ಮೂರು ಪಾತ್ರಗಳ ಸುತ್ತಕತೆಯು ಸಾಗುತ್ತದೆ.ಅವಿನಾಶ್ (ಅವಿನಾಶ್), ಪುತ್ರರಾಜು (ಬಾಲಾಜಿಶರ್ಮ) ಮತ್ತು ಮಯೂರಿ (ಮಯೂರಿಕ್ಯಾಥರಿನ್) ಇವರುಗಳ ಮಾನಸಿಕ ತುಮುಲಗಳ ಗಾಥೆಇದರಲ್ಲಿತುಂಬಿಕೊಂಡಿದೆ. ವಿಧುರನಾಗಿದ್ದ ಅವನಿಗೆ ಮಗನೆ ಎಲ್ಲಾ. ಅದರಿಂದಲೇ ಸುಖವನ್ನುಕಾಣುತ್ತಾ, ಬೇರೆ ಮದುವೆಗೆ ಆಸಕ್ತಿ ತೋರಿಸಿರುವುದಿಲ್ಲಾ.ಹೀಗಿದ್ದಾಗಆತನ ಬಾಳಿನಲ್ಲಿ ಪ್ರೀತಿ ಬಂದಾಗ ಮಗ ಎನ್ನುವುದನ್ನು ನೋಡಲಾಗದು.ಮಗ ಹುಡುಗಿಯನ್ನು ಲವ್ ಮಾಡುತ್ತಾನೆ. ಅಪ್ಪನನ್ನು ಒಪ್ಪಿಸಿದರೆ ನನ್ನದೇನುಅಡ್ಡಿಇಲ್ಲಎನ್ನುತ್ತಾನೆ. ಭಾವಿ ಮಾವನ ಮನಸ್ಸನ್ನುಗೆಲ್ಲಲುಆಕೆಯು ಮಾಡಿದತಂತ್ರ ಫಲಿಸುತ್ತದೆ.ಈಕೆಯಿಂದ ಪ್ರೀತಿ ಸಿಕ್ಕಿದ ಖುಷಿಯಲ್ಲಿ ಹೃದಯದಲ್ಲಿ ಬತ್ತಿಹೋಗಿದ್ದ ಹುಮ್ಮಸ್ಸುಚಿಗುರುತ್ತದೆ.ಅಪ್ಪನೇ ಸರ್ವಸ್ವಎಂದುಕೊಂಡಿದ್ದ, ಆತನಎರಡನೆಗುಣವನ್ನುಕಂಡಾಗ ಏನು ಮಾಡುತ್ತಾನೆ?ಮಯೂರಿ ಮೇಲಿನ ವ್ಯಾಮೋಹಏನಾಯಿತು?ಇದಕ್ಕೆಲ್ಲಾಉತ್ತರವನ್ನುಚಿತ್ರಮಂದಿರದಲ್ಲಿ ತಿಳಿಯಬೇಕು.

ಕಿರುತೆರೆಯಬಾಲಾಜಿಶರ್ಮ ಹಿರಿತೆರೆಗೆ ನಾಯಕನಾಗಿಆಕ್ಷನ್, ಡ್ಯಾನ್ಸ್‌ದಲ್ಲಿಸೈ ಅನಿಸಿಕೊಂಡಿದ್ದು, ಅಭಿನಯದಲ್ಲಿಸುಧಾರಿಸಬೇಕಿದೆ.ಲವಲವಿಕೆ ನಟನೆಯಿಂದಲೇ ಪ್ರೇಕ್ಷಕರ ಮನಸೆಳೆದಿರುವುದು ನಾಯಕಿ ಮಯೂರಿ.ಬಹುಮುಖ ಪ್ರತಿಭೆಯಅವಿನಾಶ್‌ಇಲ್ಲಿಯವರೆಗೂ ಮಾಡದೆಇರುವಅಪ್ಪನಾಗಿಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿರುವುದು ಇಡೀಚಿತ್ರಕ್ಕೆ ಕಳಸಇಟ್ಟಂತೆ ಆಗಿದೆ.ಕೆಂಪೆಗೌಡ, ಗುಣವಂತಮಂಜು, ರಿತೇಶ್, ನಯನ ಸನ್ನಿವೇಶಗಳು ನಗು ತರಿಸುತ್ತದೆ.ರಾಜ್‌ಪಂಡಿತ್ ನಿರ್ದೇಶಕರಾಗಿಭವಿಷ್ಯದಲ್ಲಿ ಬಿಜಿಯಾಗುವ ಲಕ್ಷಣಗಳು ಕಾಣಿಸುತ್ತದೆ. ಆರವ್‌ರುಷಿಕ್ ಸಂಗೀತದಲ್ಲಿಹಾಡುಗಳು ಚೆನ್ನಾಗಿದೆ.ನಿರ್ಮಾಪಕರಾಗಿ ಶ್ರೀಹರಿರೆಡ್ಡಿ ಒಳ್ಳೆ ಪ್ರಯತ್ನಕ್ಕೆ ಕೈ ಹಾಕಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಬಹುದು.

****

 

Copyright@2018 Chitralahari | All Rights Reserved. Photo Journalist K.S. Mokshendra,