5 Adi 7 Angula.Film Review.

Friday, March 13, 2020

1264

ಅಪರಾಧಿಗಳ ಬೆನ್ನಟ್ಟಿ

ವಿನೂತನ‘೫ ಅಡಿ ೭ ಅಂಗುಲ’ ಚಿತ್ರದಲ್ಲಿಕುಚೇಷ್ಟೇ, ಕುತಂತ್ರ ಮತ್ತುಕುಯುಕ್ತಿಮೂರು ಸೇರಿದರೆಕತೆಯು ಸಾಗುತ್ತದೆ. ಇಡೀಚಿತ್ರವು ಮೂರು ಪಾತ್ರಗಳ ಸುತ್ತ ಸಾಗಲಿದ್ದು, ಮಧ್ಯದಲ್ಲಿ ಕೆಲವೊಂದು ಪಾತ್ರಧಾರಿಗಳು ಬಂದು ಹೋಗುತ್ತಾರೆ.ಬೇರೆ ಚಿತ್ರಗಳಲ್ಲಿ ರಹಸ್ಯವುಕ್ಲೈಮಾಕ್ಸ್‌ದಲ್ಲಿ ತಿಳಿಯುತ್ತದೆ.ಸೋಜಿಗಎನ್ನುವಂತೆಇದರಲ್ಲಿ ವಿರಾಮದ ಮುನ್ನ ಅಪರಾಧಿಗಳು ಯಾರೆಂದು ತಿಳಿದರೂ, ಅವರ ಹಿಂದಿನ ಮರ್ಮವುಒಂದೊಂದಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ.ಪ್ರೀತಿ, ಹಣ ಹಾಗೂ ಸೇಡು ಇವುಗಳಿಗೆ ಪಣತೊಟ್ಟರೆಏನಾಗುತ್ತದೆಎಂಬುದನ್ನು ಹೇಳಲಾಗಿದೆ.ಪಾರ್ಟಿ ಮಾಡಲು ಹೋಗುವ ಐವರು ಗೆಳಯರು ಬರುವಾಗ ನಾಲ್ವರುಅಪಘಾತದಲ್ಲಿ ಮರಣ ಹೊಂದುತ್ತಾರೆ.ಮತ್ತೋಬ್ಬ ವ್ಯಕ್ತಿಎಲ್ಲಿಗೆ ಹೋದ, ಏನಾದ.ಆತಇವರಲ್ಲಿಗೆ ಸೇರದೆಇರಲುಕಾರಣವೇನು?ಮುಂದಿನದನ್ನುಚಿತ್ರಮಂದಿರದಲ್ಲಿ ನೋಡಬೇಕು.

ಮುಖ್ಯ ಪಾತ್ರದಲ್ಲಿರಾಸಿಕ್‌ಕುಮಾರ್, ಭುವನ್‌ನಾರಾಯಣ್, ಅದಿತಿಆಚಾರ್ಯನಟಿಸಿದ್ದಾರೆ.ಇವರೊಂದಿಗೆಸತ್ಯನಾಥ್, ವೀಣಾಸುಂದರ್, ಪ್ರಣವಮೂರ್ತಿ, ಚಕ್ರವರ್ತಿದಾವಣಗೆರೆ, ಮಹದೇವ, ಮಾ.ಮಹೇಂದ್ರಪ್ರಸಾದ್, ಕೃಷ್ಣಮೂರ್ತಿ.ವಿ, ನರೇಂದ್ರ್ರ, ವಿನಯ್‌ಕುಮಾರ್‌ಬಂದು ಹೋಗುತ್ತಾರೆ. ಸಂಕಲನದಅನುಭವಇರುವ ನಂದಳಿಕೆ ನಿತ್ಯಾನಂದ ಪ್ರಭುಅದ್ಬುತಕತೆ ಬರೆದುನಿರ್ದೇಶನ ಮತ್ತು ನಿರ್ಮಾಣ ಮಾಡುವಜೊತೆಗೆಒಂದು ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ರಾಘವೇಂದ್ರಥಾನೆ ಸಂಗೀತಕ್ಕಿಂತಆರ್.ಎಸ್.ಗಣೇಶ್ ಹಿನ್ನಲೆ ಶಬ್ದ ಸೀಟಿನ ತುದಿಯಲ್ಲಿಕೂರುವಂತೆ ಮಾಡಿದೆ.ಅನಾವಶ್ಯಕ ಸಂಭಾಷಣೆಗಳು, ದೃಶ್ಯಗಳು ಇಲ್ಲದೆಇರುವುದುಆಸಕ್ತಿ ತರಿಸಲುಕಾರಣವಾಗಿದೆ.ಒಟ್ಟಾರೆ ಸೆಸ್ಪನ್ಸ್ ಪ್ರಿಯರಿಗೆ ಹೇಳಿ ಮಾಡಿಸಿದ ಚಿತ್ರವಾಗಿದೆ.

***

 

Copyright@2018 Chitralahari | All Rights Reserved. Photo Journalist K.S. Mokshendra,